ಚೂ ಕ್ರಿಕೆಟ್ ಕ್ಲಬ್ ಹೊಸಕೋಟೆ ಇವರ ಆಶ್ರಯದಲ್ಲಿ ಹೊಸಕೋಟೆ ಟೌನ್ ನ ಸೂಲಿಬೆಲೆ ರಸ್ತೆಯ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಹಗಲಿನ ರಾಜ್ಯ ಮಟ್ಟದ ಪಂದ್ಯಾಕೂಟ ನ್ಯಾಶ್ ಬೆಂಗಳೂರಿನ ಆಟಗಾರರನ್ನೊಳಗೊಂಡ ಸಿ.ಸಿ.ಸಿ ಹೊಸಕೋಟೆ ತಂಡ ಜಯಿಸಿದೆ.
ರಾಜ್ಯದ ಪ್ರತಿಷ್ಟಿತ 15 ತಂಡಗಳು ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣಸಾಡಿದ್ದವು.ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ ಸೆಮಿಫೈನಲ್ ನಲ್ಲಿ ಸಿ.ಸಿ.ಸಿ ಅಗ್ರಹಾರ, ಕೆ.ವೈ.ಸಿ.ಸಿ ಹೊಸಕೋಟೆ ತಂಡವನ್ನು ಹಾಗು ಸಿ.ಸಿ.ಸಿ ನ್ಯಾಶ್ ಹಾಸನಾಂಬಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಸಿ.ಸಿ.ಸಿ ನ್ಯಾಶ್,ಸಿ.ಸಿ.ಸಿ ಅಗ್ರಹಾರ ತಂಡವನ್ನು ಸೋಲಿಸಿ ಪ್ರಥಮ ಬಹುಮಾನವಾಗಿ 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ಸಿ.ಸಿ.ಸಿ ಅಗ್ರಹಾರ 50,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿಗಳಾದ ಬೆಸ್ಟ್ ಬ್ಯಾಟ್ಸ್‌ಮನ್ ಅಕ್ಷಯ್ ನ್ಯಾಶ್, ಬೆಸ್ಟ್ ಬೌಲರ್ ಪುರುಷಿ, ಮೌಲ್ಯಯುತ ಆಟಗಾರ ಕಿರಣ್ ಸಿ.ಸಿ.ಸಿ ಹಾಗು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನವೀನ್ ಚೂ ಪಡೆದುಕೊಂಡರು.
2 ದಿನಗಳ ಕ್ರಿಕೆಟ್ ಪಂದ್ಯಾಕೂಟವನ್ನು ಶನಿವಾರ ಬೆಳಗ್ಗೆ ಉದ್ಘಾಟಿಸಿದ್ದ ಹೊಸಕೋಟೆಯ ಯುವ ಮುಖಂಡ ಶರತ್ ಬಚ್ಚೇ ಗೌಡ, ಹೊಸಕೋಟೆ ತಾಲ್ಲೂಕಿನ ರಾಜಕೀಯ ಧುರೀಣರೊಂದಿಗೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ವೀಕ್ಷಕ ವಿವರಣೆಕಾರರಾಗಿ ಶಿವನಾರಾಯಣ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ ಭಾಗವಹಿಸಿದ್ದು, M.Sports ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಿತ್ತು.
-ಆರ್.ಕೆ.ಆಚಾರ್ಯ ಕೋಟ