Categories
ಅಥ್ಲೆಟಿಕ್ಸ್

ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಯೋಗಪಟು ಅವನಿ.ಎಂ.ಎಸ್ ಸುಳ್ಯ

ವರ್ಷಿಣಿ ಯೋಗ ಎಜ್ಯುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಯೂತ್ ಸರ್ವಿಸ್ ಇವರು ಏಪ್ರಿಲ್ 15 ರಂದು ಗೋವಾದಲ್ಲಿ ಆಯೋಜಿಸಿದ 8 ನೇ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 10 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸುಳ್ಯದ ಅವನಿ.ಎಂ.ಎಸ್ ಪ್ರಥಮ ಸ್ಥಾನ ಗಳಿಸುವ ಮೂಲಕ ಜೂನ್ ನಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರು ರೇಶ್ಮಾ ಕೆ.ಎಸ್ ಮತ್ತು ಶಶಿಧರ್ ಎಂ.ಜೆ ಇವರ ಸುಪುತ್ರಿಯಾಗಿದ್ದು,ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿ‌.ಅವನಿ ಪ್ರಾರಂಭದ ದಿನಗಳಲ್ಲಿ ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆಯವರ ಮಾರ್ಗದರ್ಶನ ಪಡೆದಿದ್ದು,ಪ್ರಸ್ತುತ
ಯೋಗ ಶಿಕ್ಷಕರಾದ ಆನಂದ್ ಮತ್ತು ಶರತ್ ಮರ್ಗಿಲಡ್ಕ ಇವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಪಡೆಯುತ್ತಿದ್ದಾರೆ.
Categories
ಅಥ್ಲೆಟಿಕ್ಸ್

ಸುಳ್ಯ-ಬಹುಮುಖ ಪ್ರತಿಭೆ,ಯೋಗ ಪಟು ಅವನಿ.ಎಂ.ಎಸ್ ಇವರಿಗೆ ಸ್ಟಾರ್ ಪ್ಲೇಯರ್ ಅವಾರ್ಡ್

ಸುಳ್ಯದ ಬಹುಮುಖ ಪ್ರತಿಭೆ ಅವನಿ‌.ಎಂ.ಎಸ್ ರವರು ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಇಂಡಿಯಾ ಏರ್ಪಡಿಸಿದ್ದ ಆನ್ಲೈನ್ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ಶಿಪ್ ವರ್ಕ್  ಶಾಪ್ ನಲ್ಲಿ ಸ್ಟಾರ್ ಪ್ಲೇಯರ್ ಅವಾರ್ಡ್ ಪುರಸ್ಕಾರ ಪಡೆದಿದ್ದಾರೆ.
ಜನವರಿ 26 ರಂದು ನಡೆದ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಯೋಗಪಟು ಅವನಿ.ಎಂ.ಎಸ್.ಸುಳ್ಯ ಇವರು ದ್ವಿತೀಯ ಸ್ಥಾನ ಪಡೆದು ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್ ಪುರಸ್ಕಾರ ಪಡೆದಿದ್ದಾರೆ‌‌.ಅವನಿ.ಎಂ.ಎಸ್ ಸುಳ್ಯದ ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ರೇಶ್ಮಾ ಕೆ.ಎಸ್ ಮತ್ತು ಶಶಿಧರ.ಎಂ.ಜೆ ಇವರ ಪುತ್ರಿ.
Categories
ಅಥ್ಲೆಟಿಕ್ಸ್

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ 4 ಪದಕಗಳ ದಾಖಲೆ ಬರೆದ ಗೋಪಾಲ್ ಖಾರ್ವಿ ವರ್ಲ್ಡ್ ಚಾಂಪಿಯನ್ಶಿಪ್ ಗೆ ಆಯ್ಕೆ

ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ ಖಾರ್ವಿ ಕೋಡಿಕನ್ಯಾಣ ನಾಲ್ಕು ಪದಕ ಪಡೆದು ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

 

ಇವರು 100 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ (ಸಮಯ 1.11.18), 400 ಮೀ. ಫ್ರೀ ಸ್ಟೈಲ್ ಬೆಳ್ಳಿ ಪದಕ(ಸಮಯ 5.55.82), 200 ಮೀ. ಫ್ರೀ ಸ್ಟೈಲ್ ಕಂಚಿನ ಪದಕ (ಸಮಯ 2.48.38), 4×50 ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ (ಸಮಯ 2.29.62) ಪಡೆದಿರುತ್ತಾರೆ. ಇವರು ಉಡುಪಿಯ ಅಜ್ಜರಕಾಡು ಈಜುಕೊಳದ ತರಬೇತುದಾರರಾಗಿದ್ದಾರೆ. 2013ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನೀಸ್ ವಿಶ್ವ ದಾಖಲೆ ಮಾಡಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಸಂದೇಶ ಪ್ರಶಸ್ತಿಗಳು ಲಭಿಸಿದೆ. ಒಂಬತ್ತನೆಯ ತರಗತಿಯ ಕೊಂಕಣಿ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆಯ ಕುರಿತಾದ ಪಾಠವೊಂದಿದೆ.

Categories
ಅಥ್ಲೆಟಿಕ್ಸ್

ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ನೀರಜ್ ಕೊರಳಿಗೆ ಬಂಗಾರದ ಪದಕ. ನೀರಜ್ ರ ಸಾಧನೆಗಳು

2020 ಯ  ಟೋಕಿಯೋ ಒಲಿಂಪಿಕ್ಸ್ ನಲ್ಲಿ  ಭಾರತದ ರಾಷ್ಟ್ರಗೀತೆ ಹೊರಹೊಮ್ಮುವುದರ ಜೋತೆಗೆ ನೂರಾರು ಕೋಟಿ ಭಾರತೀಯರ ಹರ್ಷೋತ್ಸವ ಮುಗಿಲು ಮುಟ್ಟಿದೆ. ಹೌದು ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ಗೆದ್ದ ಮೊದಲ ಬಂಗಾರದ ಪದಕ ಭಾರತೀಯರ ವಿಜಯೊತ್ಸವಕ್ಕೆ ಕಾರಣವಾಗಿದೆ.
ಈ ಹಿಂದೆ ಕಡೇಯಸಾರಿ ಒಲಿಂಪಿಕ್ಸ್ ನಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ  ಅಂದು ಭಾರತದ ಶೂಟರ್ ಅಭಿನವ್ ಬಿಂದ್ರಾ  ಬಂಗಾರ ಗೆದ್ದು ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗುವಂತೆ ಮಾಡಿ ಇಡೀ ದೇಶಿಗರು ಅಂದು ಹೆಮ್ಮೆ ಪಡುವಂತೆ ಮಾಡಿದ್ದರು  ಈ ಸಂತಸದ ಕ್ಷಣಕ್ಕೆ ಸರಿ ಸುಮಾರು 13 ವರ್ಷಗಳೆ ಕಳೆದಿದ್ದು ಅ  ನಂತರದಲ್ಲಿ ಈಗ ಮತ್ತೆ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರಗೀತೆ ಟೋಕಿಯೋ ಒಲಿಂಪಿಕ್ ನ ಅಂಗಳದಲ್ಲಿ ಪ್ರತಿಧ್ವನಿಸಿದೆ. ಭಾರತೀಯರು ನೀರಜ್ ಚಿನ್ನ ಗೆದ್ದ ಕ್ಷಣವನ್ನು ಎದ್ದು ನಿಂತು ಟಿವಿ ಪರದೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ನ ಅಂಗಳವನ್ನು ನೊಡುವಂತೆ ಮಾಡಿತ್ತು.
ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
 ಆಗಸ್ಟ್ 7  ಶನಿವಾರ ಸಂಜೆ 4:30 ರಿಂದ 5:30 ರ ಅವಧಿಯಲ್ಲಿ ನೆಡೆದ  ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತೀಯ ಆಟಗಾರ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್ ಹಂತಕ್ಕೆ ಏರುವ ಅರ್ಹತ ಸ್ಫರ್ದೆಯ ಮೊದಲ ಎಸತೆದಲ್ಲೆ ಭರ್ಜರಿಯಾಗಿ ಎಸೆದು ಮೊದಲಿಗರಾಗಿ ಫೈನಲ್ ಗೆ ತಲುಪಿದ್ದರು. ಫೈನಲ್ ಹಂತದಲ್ಲು ಮೊದಲ ಎಸೆತದಲ್ಲೆ ಭರ್ಜರಿಯಾಗಿ ಎಸೆದು  ಚಿನ್ನದ ಪದಕ ಖಚಿತ ಮಾಡಿಕೊಂಡಿದ್ದರು. ಇನ್ನೂಳಿದ ಪ್ರತಿ ಸ್ಪರ್ಧಿಗಳಲ್ಲಿ   ಯಾರು ನೀರಜ್ ಎಸೆದ ಗಡಿಯನ್ನು ದಾಟಲಾಗಲಿಲ್ಲ ಕೊನೆಗೂ  ಭಾರತಕ್ಕೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್  ವಿಭಾಗದಲ್ಲಿ  ಚೊಚ್ಚಲ ಬಂಗಾರದ ಪದಕ ನೀರಜ್ ಕೊರಳಿನಲ್ಲಿ ರಾರಾಜಿಸಿತು ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಮೊದಲನೇ ಚಿನ್ನದ ಪದಕದ ಜೋತೆಗೆ ಭಾರತೀಯ ರಾಷ್ಟ್ರಗೀತೆ ಟೋಕಿಯೋದ ಕ್ರೀಡಾ ಗ್ರಾಮದಲ್ಲಿ ಮೊಳಗುವಂತೆ ಮಾಡಿದ ಕೀರ್ತಿ ನೂರಾರು ಕೋಟಿ ಭಾರತೀಯರ ಪ್ರತಿನಿಧಿ ಚಿನ್ನದ ಹುಡುಗ ನೀರಜ್ ಚೋಪ್ರಾ ಗೆ ಸಲ್ಲುತ್ತದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದು ನೀರಜ್  ಒಲಿಂಪಿಕ್ಸ್‌ನಲ್ಲಿ  ಅಪರೂಪದ ದಾಖಲೆಗಳಿಗೆ ಕಾರಣರಾಗಿದ್ದಾರೆ. ಅದೇನೆಂದರೆ ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7ನೇ ಪದಕ, ಮೊದಲನೇ ಚಿನ್ನದ ಪದಕ ಮತ್ತು ಟೋಕಿಯೋ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಚಿನ್ನದ ಪದಕವೆಂಬ ದಾಖಲೆ ನಿರ್ಮಿಸಿದ್ದಾರೆ. ಅದೂ ಪಾಲ್ಗೊಂಡ ಮೊದಲ ಒಲಿಂಪಿಕ್ಸ್‌ನಲ್ಲೇ ಬಂಗಾರಗೆದ್ದು ಇತಿಹಾಸ ನಿರ್ಮಿಸಿದ್ದಾರೆ  23ರ ಹರೆಯದ ಚೋಪ್ರಾ. ಮೂರು ಪ್ರಯತ್ನಗಳಲ್ಲಿ ತನ್ನ ಪ್ರಥಮ ಎಸೆತದಲ್ಲೆ  ದೇಶಕ್ಕೆ ಚಿನ್ನದ ಪದಕದ  ಸಾಧನೆ ತೋರಿದ್ದಾರೆ. ಆರಂಭದಲ್ಲಿ 87.03 ಮೀಟರ್, ಎರಡನೇ ಯತ್ನದಲ್ಲಿ 87.58 ಮೀಟರ್ ಮತ್ತು ಮೂರನೇ ಯತ್ನದಲ್ಲಿ 76.79 ಮೀಟರ್ ಸಾಧನೆ ತೋರಿದ್ದರು. ಇದರಲ್ಲಿ ಮೊದಲ ಎಸೆತವೆ ಚಿನ್ನದ ಪದಕದ ತಂದಿದೆ ಎರಡನೇ ಎಸೆತವು ಮೊದಲನೇ ಎಸೆತಕ್ಕಿಂತ ತುಸು ದೂರವೆ ಹೊಗಿದೆ ಅದರೆ ನೀರಜ್ ಮೊದಲ ಎಸೆತದ ಗಡಿಯನ್ನೆ ಸ್ಫರ್ದಿಗಳಲ್ಲಿ ಯಾರು ದಾಟಲಾಗಿಲ್ಲ.
ಅಗ್ರ ಐದು ಸ್ಥಾನ ಪಡೆದುಕೊಂಡವರ ಪಟ್ಟಿಯಲ್ಲಿ
ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಎರಡನೇ ಸ್ಥಾನಕ್ಕೆರಿ  ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನೂ ಕಂಚಿನ ಪದಕ ಕೂಡ ಝೆಕ್ ರಿಪಬ್ಲಿಕ್‌ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಐದನೇ ಸ್ಥಾನ ಪಾಕಿಸ್ತಾನದ ಅರ್ಷದ್ ನದೀಮ್ ಪಡೆದುಕೊಂಡಿದ್ದಾರೆ. ಆದರೆ ನೀರಜ್ ಚೋಪ್ರಾರ ವೈಯಕ್ತಿಕ ಬೆಸ್ಟ್ ಸಾಧನೆ 88.07 ಮೀಟರ್. ಈ ಸಾಧನೆಯ ಮೂಲಕ ನೀರಜ್ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.
*ನೀರಜ್ ಚೋಪ್ರಾ ಅವರ ಪ್ರಮುಖ  ಮಾಹಿತಿ ಮತ್ತು ಸಾಧನೆ…*
* ಹೆಸರು: ನೀರಜ್ ಚೋಪ್ರಾ
* ಹುಟ್ಟಿದ ದಿನಾಂಕ: ಡಿಸೆಂಬರ್ 24, 1997
* ವಯಸ್ಸು: 23
* ಹುಟ್ಟಿದ ಸ್ಥಳ: ಪಾಣಿಪತ್, ಹರಿಯಾಣ
* ಕ್ರೀಡೆ/ಈವೆಂಟ್ (ಗಳು): ಜಾವೆಲಿನ್ ಥ್ರೋ
* ವೈಯಕ್ತಿಕ ಅತ್ಯುತ್ತಮ: 88.07 ಮೀ (ರಾಷ್ಟ್ರೀಯ ದಾಖಲೆ)
ಚೋಪ್ರಾ ಅವರಿಂದಾದ ಪ್ರಮುಖ ಸಾಧನೆಗಳು
* ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
* 2018 ಏಷ್ಯನ್ ಗೇಮ್ಸ್ ಚಿನ್ನದ ಪದಕ
* 2018 ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ
* 2016 ವಿಶ್ವ ಜೂನಿಯರ್ ಚಾಂಪಿಯನ್
* ಕಿರಿಯ ವಿಶ್ವ ದಾಖಲೆ ಹೊಂದಿರುವವರು
ಭಾರತಕ್ಕೆ ಚಿನ್ನಗೆದ್ದುಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ನೂರಾರು ಕೋಟಿ ಭಾರತೀಯರ ಪರವಾಗಿ ಕೋಟಿ ಕೋಟಿ ನಮನಗಳು…..🥇ನಿಂತು  *ಜೈ ಹಿಂದ್* 🥇🇮🇳
Categories
ಅಥ್ಲೆಟಿಕ್ಸ್

ಟೋಕಿಯೋ ಒಲಿಂಪಿಕ್ಸ್‌; ಚಿನ್ನ ಗೆದ್ದರು ಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ ಬಾರ್ಶಿಮ್ ನ ಕ್ರೀಡಾ ಮನೋಭಾವಕ್ಕೆ ದೊಡ್ಡದೊಂದು ಸಲಾಮ್ …..!!!

ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಇತಿಹಾಸದ ಪುಟ ಸೇರುವಂತಹ ಅಪರೂಪದ ಘಟನೆಯೊಂದು ನೆಡೆದಿದೆ ಇದು ನಿಜವಾದ ಕ್ರೀಡಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಟೋಕಿಯೋ ಕ್ರೀಡಾಕೂಟದ ಹೈ ಜಂಪ್ ನ ಅಂಗಣದಲ್ಲಿ ಚಿನ್ನದ ಪದಕಕ್ಕಾಗಿ ನೆಡೆದ ಅಂತಿಮ ಸುತ್ತಿನಲ್ಲಿ ಈ ಒಂದು ಇತಿಹಾಸ ನಿರ್ಮಾಣವಾಗಿದೆ.
ಒಲಿಂಪಿಕ್ಸ್ ನ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು…ಯಾವ ಪದಕ ಗೆದ್ದರೂ ಸಾಧನೆಯೇ ಹೌದು ಅದು ಸಾಧಿಸಬೇಕೆನ್ನುವ ಛಲ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಯಾ ಕನಸಾಗಿರುತ್ತದೆ. ತನ್ನ ದೇಶಕ್ಕಾಗಿ ಸ್ಫರ್ಧಿಸುವ ಪ್ರತಿಯೊಬ್ಬ ಸ್ಪರ್ಧಿಯು ತನ್ನ ದೇಶಕ್ಕಾಗಿ ಯಾವುದಾದರೂ ಒಂದು ಪದಕವನ್ನು ಗೆಲ್ಲುವುದಕ್ಕಾಗಿ ವರ್ಷಾನುಗಟ್ಟಲೆ ಬೆವರು ಸುರಿಸಿರುತ್ತಾರೆ ಅದು ಅವರ ಕನಸಾಗಿರುತ್ತದೆ.
ಆದರೆ ಕತಾರ್‌ನ ಹೈಜಂಪ್ ಪಟು ತನಗಾಗಿ ತನ್ನ ದೇಶಕ್ಕಾಗಿ ಗೆದ್ದಂತಹ ಚಿನ್ನದ ಪದಕವನ್ನು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಘಟನೆ ನಡೆದಿತ್ತು. ಇಷ್ಟೇ ಅಲ್ಲ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
ಹೈಜಂಪ್‌ ಫೈನಲ್‌ನಲ್ಲಿ ಖತಾರ್‌ನ ಮುತಾಝ್ ಎಸ್ಸಾ ಬಾರ್ಶಿಮ್ ಹಾಗೂ ಇಟಲಿಯ ಗಿಯಾನಮಾರ್ಕೋ ತಂಬೇರಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅದರಲ್ಲೂ ಬಾರ್ಶಿಮ್ ಕೂದಳೆಲೆ ಅಂತರದಲ್ಲಿ ಒಂದು ಕೈಮೇಲಾಗಿದ್ದರು. ಪದಕ ಸುತ್ತಿನ ಹೋರಾಟದಲ್ಲಿ ಬಾರ್ಶಿಮ್ ಹಾಗೂ ತಂಬೇರಿ 2.37 ಮೀಟರ್ ಜಿಗಿದು ಸಮಬಲ ಸಾಧಿಸಿದರು.
ಫಲಿತಾಂಶ ನಿರ್ಧರಿಸಲು 2.39 ಮೀಟರ್ ಎತ್ತರ ಹಾರಿಸಲು ರೆಫ್ರಿಗಳು  ನಿರ್ಧರಿಸಿದರು. ಮೂರು ಪ್ರಯತ್ನಗಳಲ್ಲಿ ಇಬ್ಬರೂ ವಿಫಲರಾದರು. ಇಲ್ಲೂ ಕೂಡ ಸಮಬಲ ಸಾಧಿಸಿದರು.
ಹೀಗಾಗಿ ಆಯೋಜಕರು 2.39 ಮೀಟರ್ ಹಾರಿದವರನ್ನು ಜಯಶಾಲಿ ಎಂದು ಘೋಷಿಸುವುದಾಗಿ ಹೇಳಿತು. ಮತ್ತೆ ಪ್ರಯತ್ನ ಮಾಡಿದರೆ ಬಾರ್ಶಿಮ್ ಗೆಲುವು ಬಹುತೇಕ ನಿಶ್ಛಿತವಾಗಿತ್ತು. ಕಾರಣ ತಂಬೇರಿ 2016ರ ರಿಯೋ ಒಲಿಂಪಿಕ್ಸ್‌ಗೂ ಮೊದಲು ಆಗಿದ್ದ ಗಾಯ ಮತ್ತೆ ಉಲ್ಬಣಗೊಂಡಿತ್ತು.
ಬಾರ್ಶಿಮ್ ಹಾಗೂ ತಂಬೇರಿ ನಡುವಿನ ಗೆಲುವು ನಿರ್ಧರಿಸಲು ಆಯೋಜಕರು ಮತ್ತೊಂದು ಪ್ರಯತ್ನಕ್ಕೆ ಮುಂದಾದಾಗ, ಇತ್ತ ಬಾರ್ಶಿಮ್ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಳ್ಳಬಹುದೇ? ಎಂದು ಆಯೋಜಕರನ್ನು ಪ್ರಶ್ನಿಸಿದ್ದರು. ನನ್ನ ಪ್ರತಿಸ್ಪರ್ಧಿ ನನ್ನ ಉತ್ತಮ ಸ್ನೇಹಿತ ನಮ್ಮಿಬ್ಬರ ಗುರಿ ಒಂದೇ ಅಗಿದೆ ನಮ್ಮ ದೇಶಕ್ಕಾಗಿ ಪದಕ ಗೆಲ್ಲುವುದು. ಅತನು ನನ್ನಷ್ಟೆ ಸಮಬಲನು. ನಾವು ಈ ಹಿಂದೆ ಹಲವು ಕ್ರೀಡಾಕೂಟದಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದೇವೆ.
ಈ ಬಾರಿ ನನ್ನ ಪ್ರತಿಸ್ಪರ್ಧಿಗೂ ಚಿನ್ನದ ಪದಕ ಸಿಗಲಿ ಎಂದು ಬಾರ್ಶಿಮ್ ಆಯೋಜಕರನ್ನು ಮನವಿ ಮಾಡಿದ್ದಾರೆ.
ಬಾರ್ಶಿಮ್ ಮನವಿಗೆ ಒಪ್ಪಿದ ಆಯೋಕರು ಹೈಜಂಪ ಗೋಲ್ಡ್ ಹಂಚಿಕೆ ಮಾಡಿದ್ದಾರೆ. ಇಬ್ಬರನ್ನು ಜಯಶಾಲಿಗಳೆಂದು ಘೋಷಿಸಿದ್ದಾರೆ.  ಲಂಡನ್ ಒಲಿಂಪಿಕ್ಸ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಬಾರ್ಶಿಮ್‌ಗೆ ಟೋಕಿಯೋದಲ್ಲಿ ಚಿನ್ನದ ಪದಕ ಒಲಿದಿದೆ. ಇತ್ತ ಇಟಲಿಯ ತಂಬೇರಿ ಟೋಕಿಯೋ ಒಲಿಂಪಿಕ್ಸ್‌ಗೂ ಮೊದಲು ಕಾಲಿನ ಗಾಯದಿಂದ ಕ್ರೀಡಾಕೂಟದಿಂದ ಹೊರಗುಳಿದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಗಾಯದಿಂದ ಚೇತರಿಸಿಕೊಂಡ ತಂಬೇರಿ ಇದೀಗ ಚಿನ್ನದ ಪದಕದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.
ಇಲ್ಲಿ ಪ್ರತಿಯೊಬ್ಬರು ಅರಿಯಬೇಕಿದೆ ನಾನು ನನ್ನದು ಎನ್ನುವುದರಲ್ಲಿ ಅರ್ಥವಿಲ್ಲ.ನಾನು ನಮ್ಮವರು ಎಂದು ಬದುಕಿದಾಗಲೆ ಜೀವನಕ್ಕೆ ಅರ್ಥ ಸಿಗುತ್ತದೆ……..
Categories
ಅಥ್ಲೆಟಿಕ್ಸ್

ಮೀರಾಬಾಯ್ ಚಾನುಗೆ ಪೊಲೀಸ್ ಕೆಲಸ ಘೋಷಿಸಿದ ಮಣಿಪುರ ಸಿಎಂ

ಇಂಫಾಲ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರ ಎತ್ತುವ ಸ್ಫರ್ದೆಯಲ್ಲಿ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಸಾಯ್‌ಕೋಮ್ ಮೀರಾಬಾಯ್ ಚಾನುಗೆ ಮಣಿಪುರ ಸರ್ಕಾರ ಒಂದುಕೋಟಿ ರೂಪಾಯಿ ಬಹುಮಾನದ ಜೋತೆಗೆ ಪೊಲೀಸ್ ಇಲಾಖೆಯಲ್ಲಿ  ಕೆಲಸ ಘೋಷಿಸಿದೆ
ಮಣಿಪುರ ಮುಖ್ಯಮಂತ್ರಿ
ಎನ್ ಬಿರೆನ್ ಸಿಂಗ್ ಅವರು ಮೀರಾಬಾಯಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಅಡಿಶನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆ ನೀಡುವುದಾಗಿ ಘೋಷಿಸಿದ್ದಾರೆ.
ಇಂಪಾಲದಲ್ಲಿರುವ ಮುಖ್ಯಮಂತ್ರಿಗಳ ಕಾರ್ಯಾಲಯ  ಈ ವಿಷಯವನ್ನು   ಜುಲೈ 26 ರಂದು ಘೋಷಿಸಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಪದಕದ ಪಟ್ಟಿಯಲ್ಲಿ ಭಾರತದ ಹೆಸರು ದಾಖಲಾಗುವಂತೆ ಮಾಡಿದ್ದರು.
 ಜುಲೈ 25 ರಂದು ವೀಡಿಯೋ ಸಂವಾದದಲ್ಲಿ ಮೀರಬಾಯಿ ಅವರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು  ನೀನಿನ್ನು ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಚೆಕಿಂಗ್ ಇನ್‌ಸ್ಪೆಕ್ಟರ್ ಆಗಿರಬೇಕಾಗಿಲ್ಲ. ನಿನಗಾಗಿ ಒಳ್ಳೆಯ ಹುದ್ದೆ ನಮ್ಮ ಸರ್ಕಾರ ನೀಡಲಿದ್ದೇವೆ. ಇದಲ್ಲದೆ ನೀನು ಇಂಪಾಲಗೆ ಬರುತ್ತಲೇ ನಿನಗೆ ಒಂದು ಕೋಟಿ ರೂ. ನಗದು ಪುರಸ್ಕಾರ ಸಿಗಲಿದೆ,” ಎಂದು ಹೇಳಿ ಶುಭಾಶಯಗಳನ್ನು ತಿಳಿಸುವುದರ ಜೋತೆಗೆ ಸಂತೋಷ ಹಂಚಿಕೊಂಡಿದ್ಸರು.
ಮಣಿಪುರದವರೇ ಆದ ಖ್ಯಾತ ಬಾಕ್ಸರ್ ಮೇರಿ ಕೋಮ್ ಕೂಡ ದೇಶಕ್ಕೆ ಪದಕ ಗೆಲ್ಲಲಿದ್ದಾರೆ ಎಂದು ಬಿರೆನ್ ತಿಳಿಸಿದ್ದರು ಅದು ಕೈಗೂಡಲಿಲ್ಲ ಕ್ವಾರ್ಟರ್ ಫೈನಲ್ಸ್ ನಲ್ಲಿ ಮೇರಿ ಎಡವಿದರು.
ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಚಾನು ಬೆಳ್ಳಿ ಗೆದ್ದರೆ ಚೀನಾದ ಹೌ ಝಿಹುಯ್ ಬಂಗಾರ ಜಯಿಸಿದ್ದರು. ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದೇ ಮೀರಬಾಯಿ ಚಾನು.
ನುಡಿದಂತೆ ನೆಡೆದ ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್
ಟೋಕಿಯೋ ಓಲಂಪಿಕ್ ನ ಭಾರ ಎತ್ತುವ ಸ್ಫರ್ದೆಯ  ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ  *ಮೀರಾ ಬಾಯಿ* ಅವರಿಗೆ ಹೆಚ್ಚುವರಿ ಎಸ್‌ಪಿ ಹುದ್ದೆಗೆ ಹೊಸದಾಗಿ ನೇಮಕ ಮಾಡಿ  ಮೀರಾಬಾಯಿ ಅವರನ್ನು ಮಣಿಪುರದ ಸಿಎಂ ಸ್ವತಃ ಹೆಚ್ಚುವರಿ ಎಸ್ಪಿಯವರ ಹೊಸ ಕಚೇರಿಗೆ ಕರೆದೊಯ್ಯುತ್ತಾರೆ. ಅಲ್ಲಿ ಮೀರಬಾಯಿ ಅವರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿ ಅಭಿನಂದಿಸುತ್ತಾರೆ ನಿಜಕ್ಕೂ ಇದು ಭಾರತದ ಹೆಮ್ಮೆಯ ಪುತ್ರಿಗೆ ಸಲ್ಲಬೇಕಾದ ಗೌರವವೆ.  ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಚಕ್ಕಿಂಗ್ ಇನ್ಸ್ಪೆಕ್ಟರ್ ಅಗಿ ಕರ್ತವ್ಯದಲ್ಲಿದ್ದರು ಮೀರಾಬಾಯಿ.
ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ಅಗತ್ಯವಾದ ಪ್ರೋತ್ಸಾಹ ಇದೆ ಎನ್ನುವುದನ್ನು ಯಾರು ಮರೆಯದಿರಲಿ ಕ್ರಿಕೆಟ್ ನಲ್ಲಿ  ಶತಕಗಳನ್ನು ಹೊಡೆಯಬಹುದು ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ
Categories
ಅಥ್ಲೆಟಿಕ್ಸ್

ಒಲಿಂಪಿಕ್ಸ್​ನಲ್ಲಿ ಮೊದಲ ಬೆಳ್ಳಿಪದಕ ಗೆದ್ದ ಭಾರತದ ಮೀರಾಬಾಯಿ ಚಾನು

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಏಕೈಕ ವೇಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನರಾದ ಮೀರಾಬಾಯಿ ಚಾನು, ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್‌ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ಸ್ಯಾಚ್‌ ಹಾಗೂ ಕ್ಲೀನ್ ಅಂಡರ್ ಜರ್ಕ್ ವಿಭಾಗದಲ್ಲಿ ಒಟ್ಟು 202 ಕೆಜಿ ಬಾರ ಎತ್ತಿ ಚಾನು ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಇಂಪಾಲ್ ಮೂಲದ ಆಟಗಾರ್ತಿ ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಮೀರಾಬಾಯಿ ಚಾನು ಅನಾಯಾಸವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್‌ ಲಿಫ್ಟ್‌ ಮಾಡುವ ಸ್ಯಾಚ್‌ ಲಿಫ್ಟ್‌ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಒಲಿಂಪಿಕ್ಸ್‌ ದಾಖಲೆ ಬರೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ ಮೀರಾಬಾಯಿ ಚಾನು 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.
ಇನ್ನು ಕ್ಲೀನ್‌& ಜೆರ್ಕ್‌ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು 110  ಎರಡನೇ ಪ್ರಯತ್ನದಲ್ಲಿ 115 ಕೆ.ಜಿ ವೇಟ್‌ಲಿಫ್ಟ್‌ ಮಾಡುವ ಮೂಲಕ ಪದಕವನ್ನು ಗೆಲ್ಲುವ ಹಾದಿ ಸುಗಮಮಾಡಿಕೊಂಡರು
Categories
ಅಥ್ಲೆಟಿಕ್ಸ್

ಸಂಧ್ಯೋದಯ ಪಿತ್ರೋಡಿ-ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸರಳ ಯೋಗಾಸನ‌ ಸ್ಪರ್ಧೆ

ಸಂಧ್ಯೋದಯ ಪಿತ್ರೋಡಿ,ಉಡುಪಿ ಇವರ ಸಹಯೋಗದಲ್ಲಿ  ವಿಶ್ವಯೋಗ ದಿನಾಚರಣೆಯಂದು 1 ರಿಂದ 7 ನೇ ತರಗತಿಯವರೆಗಿನ ಮಕ್ಕಳಿಗೆ ಸರಳ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಿಗಳು ಯೋಗರತ್ನ ತನುಶ್ರೀ ಪಿತ್ರೋಡಿ ಇವರು ಮಾಡಿದ ಯೋಗಾಸನ ಭಂಗಿಗಳಲ್ಲಿ ದಿನಕ್ಕೆ 2 ಆಸನಗಳಂತೆ 7 ದಿನ ನಿಮ್ಮ ಯೋಗಾಸನ ಫೋಟೋ ಕಳುಹಿಸಿಕೊಡಬೇಕು.ಆಸನದ ಭಂಗಿಗಳು ಆಯೋಜಕರು ಕೊಟ್ಟ 2 ಆಸನಗಳನ್ನು
ಮಾಡಿ ಕಳುಹಿಸಿಕೊಡಬೇಕು.ಒಟ್ಟು 7 ದಿನಗಳಲ್ಲಿ ಇಲ್ಲಿರುವ 14 ಆಸನಗಳ ಫೋಟೋ ಕಳುಹಿಸಿಕೊಡಬೇಕು.
ಸ್ಪರ್ಧೆಯು 14/6/2021 ರಂದು ಆರಂಭಗೊಂಡು 20/6/2021 ರಂದು ಮುಕ್ತಾಯಗೊಳ್ಳುತ್ತದೆ. ದಿನಾಂಕ 21/6/2021 ಸಂಜೆ ಬಿಡುಗಡೆ ಮಾಡಲಾಗುವುದು.ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತಿದೆ.‌ನಿಮ್ಮ ಫೋಟೋ ಈ ಕೆಳಗಿನ ವಾಟ್ಸಪ್ ಸಂಖ್ಯೆಗೆ ಕಳುಹಿಸ ಬಹುದು.
ನಿಯಮಗಳು-1)ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವಕಾಶ.2)ಕಾರ್ಯಕ್ರಮದ ಉದ್ದೇಶ ಯೋಗ ಕಲಿಕೆಗೆ ಪ್ರೋತ್ಸಾಹ. 3)ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ.
4)ಸ್ಪರ್ಧಿಗಳು ತಮ್ಮ‌ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ 12/6/2021
5)ನಿರ್ಣಾಯಕರು ಹಾಗೂ ಸಂಘಟಕರ ತೀರ್ಮಾನವೇ ಅಂತಿಮ.
ಈ ಯೋಗ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಯೋಗ ನಿರ್ಣಾಯಕರಾದ ನರೇಂದ್ರ ಕಾಮತ್ ಹಾಗೂ  ಅಂತರಾಷ್ಟ್ರೀಯ ಯೋಗ ಪಟು ಹರಿರಾಜ್ ಕಿನ್ನಿಗೋಳಿ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.
ಬಹುಮಾನದ ಪ್ರಾಯೋಜಕರಾಗಿ
ಯು‌.ಆರ್‌.ಸ್ಪೋರ್ಟ್ಸ್ ಮಣಿಪಾಲ ಮತ್ತು ಲಕ್ಷ್ಮೀ ಆಂಜನೇಯ ಇಲೆಕ್ಟ್ರಿಕಲ್ಸ್ ಇವರು ಸಹಕರಿಸಲಿದ್ದಾರೆ.
ಹೆಚ್ಚಿ‌ನ ಮಾಹಿತಿಗಾಗಿ  9740922916 ಮತ್ತು 8217646547  ನಂಬರನ್ನು ಸಂಪರ್ಕಿಸಬಹುದು…
Categories
ಅಥ್ಲೆಟಿಕ್ಸ್

ಸೂರ್ಯ ನಮಸ್ಕಾರದ ಮೂಲಕ ದಾಖಲೆ ಮುರಿದ ರೇಣುಕಾ ಗೋಪಾಲಕೃಷ್ಣ

ಉಡುಪಿ : ಅಸ್ಸಾಮಿನ ಪುಷ್ಪಾಂಜಲಿ ಸೇನಾಪತಿ ಅವರು 1 ಗಂಟೆ 15 ನಿಮಿಷ  48ಸೆಕೆಂಡ್ಸ್ ನಲ್ಲಿ ಹೊಂದಿದ್ದ 132 ಸೂರ್ಯ ನಮಸ್ಕಾರದ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ.
ಮಲ್ಪೆ ಸಿಎಸ್ಪಿ ನಿವೃತ ಪಿಎಸ್‍ಐ ಬಿ. ಮನಮೋಹನ್ ರಾವ್ ನಿರೂಪಿಸಿ ವಂದಿಸಿದರು.
ಉಡುಪಿ ಸಮೀಪದ ಪೆರಂಪಳ್ಳಿ ಬೊಬ್ಬರ್ಯಕಟ್ಟೆಯ ರೇಣುಕಾ ಗೋಪಾಲಕೃಷ್ಣ 17 ನಿಮಿಷ 49 ಸೆಕೆಂಡ್‍ಗಳಲ್ಲಿ170 ಸೂರ್ಯ ನಮಸ್ಕಾರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.
ಆಭರಣ ಜ್ಯುವೆಲ್ಲರ್ಸ್ ಸಹಯೋಗದಲ್ಲಿ ಕರಾವಳಿ ಬೈಪಾಸ್ ಬಳಿಯ ಹೋಟೆಲ್ ಮಣಿಪಾಲ್ ಇನ್ ಇದರ ಗ್ರ್ಯಾಂಡ್ ಮಿಲೇನಿಯಂ ಕನ್ವೆನನ್ ಸೆಂಟರ್‍ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ15 ನಿಮಿಷದಲ್ಲಿ 140 ಸೂರ್ಯ ನಮಸ್ಕಾರದ ಗುರಿಯನ್ನು ಮೀರಿ ಸಾಧನೆ ಮಾಡಿದ ರೇಣುಕಾ ಅವರಿಗೆ ಪತ್ರ ಹಸ್ತಾಂತರಿಸಲಾಯಿತು.
ಅಸ್ಸಾಮಿನ ಪುಷ್ಪಾಂಜಲಿ‌ ಸೇನಾಪತಿ‌ ಅವರು 1ಗಂಟೆ 15ನಿಮಿಷ 48ಸೆಕೆಂಡ್ಸ್ ಗಳಲ್ಲಿ ಹೊಂದಿದ್ದ 132 ಸೂರ್ಯ ನಮಸ್ಕಾರದ‌ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ.
ಸಮಾರಂಭದಲ್ಲಿ ಉಡುಪಿ‌ ಭ್ರಷ್ಟಾಚಾರ ನಿಗ್ರಹ‌ ದಳ್ ಪೊಲೀಸ್‌ ನಿರೀಕ್ಷಕ ಸತೀಶ್, ಇಂಡಿಯಾ ಬುಕ್ ಆಫ್‌ ರೆಕಾಡ್ಸ್೯ ಎಡ್ಜುಡಿಕೇಟರ್ ಹರೀಶ್ ಆರ್., ಉಡುಪಿ‌ ನಗರ‌ ಠಾಣೆ‌ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಮಲ್ಪೆ‌ ಸಿಎಸ್ಪಿ‌ ಶಾಖಾಧೀಕ್ಷಕ‌ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಮಲ್ಪೆ‌ ಸಿಎಸ್ಪಿ ನಿವೃತ್ತ ಪಿಎಸ್ಐ ಬಿ.  ಮನಮೋಹನ ರಾವ್ ನಿರೂಪಿಸಿ‌ ವಂದಿಸಿದರು.
Categories
ಅಥ್ಲೆಟಿಕ್ಸ್

ಕರ್ನಾಟಕ ಕ್ರೀಡಾಲೋಕದಲ್ಲೇ ಐತಿಹಾಸಿಕ ಕ್ರೀಡಾಕೂಟ- ಟೊರ್ಪೆಡೋಸ್ ಸ್ಪೋರ್ಟ್ಸ್ ಫೆಸ್ಟಿವಲ್-2021

ಕ್ರೀಡಾ ಲೋಕದಲ್ಲಿ ತೂಫಾನಿ ಮೈಲುಗಲ್ಲನ್ನು ಸ್ಥಾಪಿಸಿದ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ(ರಿ)ಇದರ ಸಂಸ್ಥಾಪಕರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಸಮಾಜರತ್ನ ಗೌತಮ್ ಶೆಟ್ಟಿ ಯವರ ಸಾರಥ್ಯದಲ್ಲಿ ಮೇ 1 ರಿಂದ 10 ದಿನಗಳ ಕಾಲ ಹೊನಲು ಬೆಳಕಿನ ಅದ್ಧೂರಿಯ ಕ್ರೀಡಾಜಾತ್ರೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಫೆಸ್ಟಿವಲ್-2021” ಹಮ್ಮಿಕೊಳ್ಳಲಾಗಿದೆ.
ಉಡುಪಿ-ಮಂಗಳೂರು ಉಭಯ ಜಿಲ್ಲೆಗಳ 4 ವಿವಿಧ ಸ್ಥಳಗಳಲ್ಲಿ ನಡೆಯುವ ಈ ಕ್ರೀಡಾ ಜಾತ್ರೆಯಲ್ಲಿ ಲೆದರ್ ಬಾಲ್,ಟೆನ್ನಿಸ್ಬಾಲ್,ಬಾಕ್ಸ್ ಕ್ರಿಕೆಟ್,ಫುಟ್ಬಾಲ್, ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್,ಚೆಸ್ ಪಂದ್ಯಾಟಗಳು ನಡೆಯಲಿದ್ದು,ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಕುಂದಾಪುರ ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.