Categories
ಭರವಸೆಯ ಬೆಳಕು

ಕಂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂದಾಪುರ-ಇಲ್ಲಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ‌ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು.
ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್,ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ,ಶಿಕ್ಷಕ ವರ್ಗದ ರೇಖಾ,ವೀಣಾ,ಜ್ಯೋತಿ,ಜ್ಯೋತಿ ಗ್ಲಾಡಿಸ್,ರವಿ,ನಾಗರಾಜ್,ಸುನೀತಾ,ಲಲಿತಾ,ಚಂದ್ರ,ಬಸವ ನಾಯಕ್,ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Categories
ಭರವಸೆಯ ಬೆಳಕು

ಮಕ್ಕಳ ಭವಿಷ್ಯಕ್ಕೆ ಮೈದಾನ ಅತ್ಯಗತ್ಯ-ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸಿ-ಗೌತಮ್ ಶೆಟ್ಟಿ

ಬೈಂದೂರು-“ಪ್ರೀತಿ,ಸಹಬಾಳ್ವೆಯ ಪ್ರತೀಕ ಕ್ರೀಡೆ.ಇದರಿಂದ ಹಲವಾರು ಯುವಕರು ಬದುಕನ್ನು ಕಟ್ಟಿಕೊಂಡಿದ್ದಾರೆ.ಬೈಂದೂರಿನ ಗಾಂಧಿ ಮೈದಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದ್ದು ಹಲವಾರು ಕ್ರೀಡಾಪಟುಗಳನ್ನು ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ.ಈ ಭಾಗದಲ್ಲಿ ಯಥೇಚ್ಛ ಸರಕಾರಿ ಜಾಗಗಳಿದ್ದು,ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸಿ,ಗಾಂಧಿ ಮೈದಾನದಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಿಸಿ” ಎಂದು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕರೆ ನೀಡಿದರು.
ಇವರು ಗಿರೀಶ್ ಬೈಂದೂರು ನೇತೃತ್ವದಲ್ಲಿ ನಡೆಯುತ್ತಿರುವ “ಗಾಂಧಿ ಮೈದಾನ ಉಳಿಸಿ” ಬೃಹತ್ ಧರಣಿ ಮತ್ತು ಪ್ರತಿಭಟನಾ ಸಭೆಯಲ್ಲಿ ಗೌತಮ್ ಶೆಟ್ಟಿ ಟೊರ್ಪೆಡೋಸ್ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಗಿರೀಶ್ ಬೈಂದೂರು “ಮೊಗೇರಿ ಗೋಪಾಲಕೃಷ್ಣ ಅಡಿಗರ ಸ್ಮಾರಕ ಪುರಭವನಕ್ಕೆ ಯಾರ ವಿರೋಧವೂ ಇಲ್ಲ.ಅಡಿಗರ ಪುರಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ,ಆದರೆ ಅದನ್ನು ಆಟದ ಮೈದಾನದಲ್ಲಿ ನಿರ್ಮಾಣ ಮಾಡುವುದು ಸೂಕ್ತವಲ್ಲ‌.ಇದಕ್ಕೂ ಮೀರಿ ಗಾಂಧಿ ಮೈದಾನದ ಜಾಗದಲ್ಲಿ ಪುರಭವನ ನಿರ್ಮಾಣಕ್ಕೆ ಮುಂದಾದರೆ ನಮ್ಮ ಬಳಿ ದಾಖಲೆಗಳಿದ್ದು ಕೋರ್ಟಿನ‌ ಮೊರೆಹೋಗುತ್ತೇವೆ” ಎಂದರು.
ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್ “ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲೆಯಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಯ ಆಟಗಾರರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು,ಅವರೆಲ್ಲರನ್ನೂ ಈ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡುವುದಾಗಿ ತಿಳಿಸಿದರು.
Categories
ಭರವಸೆಯ ಬೆಳಕು

ದಾವಣಗೆರೆಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿಯವರಿಗೆ ಗೌರವ ಸನ್ಮಾನ

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ,ಟೆನಿಸ್ಬಾಲ್ ಕ್ರಿಕೆಟ್ ನ ವಿಶ್ವಕಪ್ ಖ್ಯಾತಿಯ 15 ನೇ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್-2022 ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರನ್ನು ಸನ್ಮಾನಿಸಲಾಯಿತು.
ಜೈ ಕರ್ನಾಟಕ ಮತ್ತು  ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಕ್ಕೂ ಮುನ್ನ ಪಂದ್ಯಾಟದ ಪ್ರಮುಖ ಆಯೋಜಕರಾದ ಉದ್ಯಮಿ ಶಿವಗಂಗಾ ಶ್ರೀನಿವಾಸ್ ಮತ್ತು ಜಯಪ್ರಕಾಶ್ ಗೌಡ(ಜೆ.ಪಿ) ಇವರು  ಗೌತಮ್ ಶೆಟ್ಟಿಯವರನ್ನು ಪಿಚ್ ನ‌ ಮಧ್ಯಭಾಗದಲ್ಲಿ  ಉಭಯ ತಂಡಗಳ‌ ಆಟಗಾರರ ಸಮ್ಮುಖದಲ್ಲಿ ಗೌರವಿಸಿದರು.
ಈ ಸಂದರ್ಭ ಚಲನಚಿತ್ರ ನಿರ್ಮಾಪಕ ಉದಯ್ ಶಿವಕುಮಾರ್ ಮತ್ತು ಪುತ್ರಿ,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್,ಜೈ ಕರ್ನಾಟಕ ಸಚಿನ್ ಮಹಾದೇವ್,ಫ್ರೆಂಡ್ಸ್ ನ ಸಾಗರ್ ಭಂಡಾರಿ ಮತ್ತು ಉಭಯ ತಂಡಗಳ ಆಟಗಾರರು ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ಸಣ್ಣದೊಂದು ಟೀ ಸ್ಟಾಲ್ ಮಾಲೀಕನ ಅದೃಷ್ಟ ಬದಲಾಯಿಸಿದ ತೆಂಡೂಲ್ಕರ್..!

ಬೆಳಗಾವಿ : ಅದೃಷ್ಟ ಒಮ್ಮೊಮ್ಮೆ ಯಾವ ರೂಪದಲ್ಲಿ ಬರುತ್ತದೆ ಅನ್ನೊದು ತಿಳಿಯುವುದೇ ಇಲ್ಲ. ಏನೇನು ಇಲ್ಲದವರು ಕ್ಷಣ ಮಾತ್ರದಲ್ಲಿ ಕೊಟ್ಯಧೀಶರಾಗುವುದೂ ಇದೆ,  ಸಣ್ಣ ಉದ್ಯಮ  ಆರಂಭಿಸಿದವ ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಆಸ್ತಿಗಳ ಒಡೆಯನಾಗಿರುವುದೂ  ನಮ್ಮ ಕಣ್ಣ ಮುಂದೆ ಇದೆ.
ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಅದೃಷ್ಟಕೂಡ  ರಾತ್ರಿ ಬೆಳಗಾಗುವುದರಲ್ಲಿ ತಿರುಗಿದೆ ಕಥೆ ಇದು..!?
ಸಣ್ಣ ಟೀ ಸ್ಟಾಲ್ ನಡೆಸುತ್ತಿದ್ದ ಬಡ ಯುವಕನ ಅದೃಷ್ಟ ಬದಲಾಗಿಬಿಟ್ಟಿದೆ. ಇದಕ್ಕೆ ಕಾರಣ ಕ್ರಿಕೆಟ್ ದಂತ ಕಥೆ ಕ್ರಿಕೆಟ್ ದೇವರೆಂದು  ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಬೆಳಗಾವಿಯ ಸಮೀಪದ ಮಚ್ಚೆಗ್ರಾಮದ   ಸಣ್ಣ ಟೀ ಸ್ಟಾಲ್ ನಲ್ಲಿ ಸಚಿನ್ ಪ್ರತ್ಯಕ್ಷರಾಗಿದ್ದರು..!
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀ ಸ್ಟಾಲ್ ಗೆ ಭೇಟಿ ನೀಡಿದ್ದರು
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಸಚಿನ್ ತೆಂಡೂಲ್ಕರ್ ಅಕ್ಟೋಬರ್ 31ರಂದು ಮುಂಜಾನೆ ಬೆಳಗಾವಿ ಸಮೀಪದ ಮಚ್ಚೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಫೌಜಿ ಎಂಬ ಸಣ್ಣ ಚಹಾ ಅಂಗಡಿ ಎದುರು ಕಾರು ನಿಲ್ಲಿಸಿ ಚಹಾ ಸೇವಿಸಿದ್ದರು
ಕುಟುಂಬ ಸಮೇತರಾಗಿ ಬಂದಿದ್ದ ಸಚಿನ್
ಅಂದು ಬೆಳಗ್ಗೆ ಅಂಗಡಿಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದೆ ಒಂದು ಕಾರ್ ಬಂದು ನಿಂತಿತು ಅದರಿಂದ ಕೆಳಗಿಳಿದು ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಒಳಗೆ ಕಾರಿನಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ ಎಂದಾಗ ನಂಬಲು ಸಾಧ್ಯವಾಗಿರಲಿಲ್ಲ, ಬಳಿಕ ಸಚಿನ್ ಅವರೇ ಕೆಳಗಿಳಿದು ಬಂದಾಗ ಹೆದರಿಹೊಗಿದ್ದೆ ಎಂದು ವೈಜು ಹೇಳಿದರು. ಸಚಿನ್ ತೆಂಡೂಲ್ಕರ್ ಜತೆಗೆ ಅವರ ತಾಯಿ, ಪತ್ನಿ, ಪುತ್ರ ಮತ್ತು ಕೆಲ ಸಹಾಯಕರು ಸಹ ಜೋತೆಯಲ್ಲಿದ್ದರು  ಎಂದು ವೈಜು ಹೇಳಿದರು.
ಸಚಿನ್ ಅವರು ತಮ್ಮ ಸಹಾಯಕನೊಬ್ಬನ ಕೈಯಿಂದ ತಾನು ಅಂಗಡಿಯಲ್ಲಿ ಚಹಾ ಸೇವಿಸುತ್ತಿರುವುದನ್ನು ಸಂಪೂರ್ಣ ವಿಡಿಯೋ ಮಾಡಿಸಿದ್ದರು. ಬಳಿಕ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ವಿಶ್ವದೆಲ್ಲೆಡೆ ಜನ ನನ್ನ ಅಂಗಡಿಯನ್ನು ಗುರುತಿಸುವಂತಾಗಿದೆ ಎಂದು ಅವರು ಸಂತಸಪಟ್ಟರು.
ಫೌಜಿ ಚಹಾ ಅಂಗಡಿಯಲ್ಲಿ ಚಹಾ ತಯಾರಿಕೆಗೆ  ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ಮಾತ್ರ ಬಳಸಲಾಗುತ್ತದೆ. ಇದಕ್ಕೆ ಸಚಿನ್ ಮೆಚ್ಚಿಗೆ ವ್ಯಕ್ತಪಡಿಸಿದರು. ಅಲ್ಲದೇ ಚಹಾದ ಸ್ವಾದ ಹಿಡಿಸಿದ ಕಾರಣ ಎರಡು ಕಪ್ ಚಹಾ ಕುಡಿದು ಬ್ರೆಡ್ ಟೋಸ್ಟ್ ಅನ್ನು ಸವಿದರು ಎಂದು ವೈಜು ಹೇಳಿದರು.
ಮೂಲತಃ ಖಾನಾಪುರ ತಾಲೂಕಿನವರಾದ ವೈಜು ನಿಟ್ಟೂರಕರ್ ಅವರಿಗೆ ತಾಯಿ ಮತ್ತು ಓರ್ವ ಸಹೋದರ ಇದ್ದಾರೆ. ಸಣ್ಣ ಜಮೀನಿದ್ದು ಕೃಷಿಯ ಆದಾಯ ಜೀವನ ನಿರ್ವಹಣೆಗೆ ಸಾಕಾಗದ ಕಾರಣ ಸುಮಾರು ಎಂಟು ತಿಂಗಳಿಂದ  ಮಚ್ಚೆ ಗ್ರಾಮದಲ್ಲಿ ಫೌಜಿ ಟೀ ಸ್ಟಾಲ್ ಆರಂಭಿಸಿದ್ದಾರೆ. ವ್ಯಾಪಾರ ಶುರು ಮಾಡಿದ ಎಂಟೇ ತಿಂಗಳಲ್ಲಿ ಸಚಿನ್ ತೆಂಡೂಲ್ಕರ್ ಅಂಥಹ ಮಹಾನ್ ವ್ಯಕ್ತಿ ನನ್ನ ಅಂಗಡಿಗೆ ಬರುತ್ತಾರೆ ಎಂದು ನನ್ನ ಕನಸನಲ್ಲೂ ಎಣಿಸಿರಲಿಲ್ಲ ಎಂದು ವೈಜು ತಮ್ಮ ಸಂತಸ ಹಂಚಿಕೊಂಡರು

ಪೌಜಿ ಟೀ ಸ್ಟಾಲ್ ಗೆ ಸಚಿನ್ ಬಂದು ಹೋದ ಬಳಿಕ  ವ್ಯಾಪಾರ ಒಂದೆ ಸಾರಿಗೆ ಹೆಚ್ಚಳವಾಗಿದೆ. ಮೊದಲು ಪ್ರತಿ ದಿನ ಸುಮಾರು 25 ಲೀ. ಹಾಲಿನ ಬಳಕೆ ಮಾಡಿ 400 ಕಪ್ ಚಹಾ ಮಾರಾಟ ಮಾಡುತ್ತಿದ್ದೆ. ಈಗ 700 ಕಪ್ ಚಹಾ ಮಾರಾಟವಾಗುತ್ತಿದೆ ಎಂದು ಫೌಜಿ ಚಹಾ ಅಂಗಡಿಯ ಮಾಲಿಕ ವೈಜು ಬಂದವರ ಎದುರು ಖುಷಿ ಹಂಚಿಕೊಳ್ಳುತ್ತಾರೆ.
Categories
ಭರವಸೆಯ ಬೆಳಕು

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ-ಸೇವಾರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರಿಂದ 9 ನೇ ಮನೆ ಹಸ್ತಾಂತರ ಕಾರ್ಯಕ್ರಮ

ಅಸಹಾಯಕ ಮನಗಳಿಗೆ ಆತ್ಮವಿಶ್ವಾಸ ತುಂಬುವ ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರಿಂದ 9 ನೇ ಮನೆಯ ಹಸ್ತಾಂತರ
ಸಮಾಜದ ಬಡ,ಅಶಕ್ತ ಕುಟುಂಬಗಳಿಗೆ ಸೂರು ಇನ್ನಿತರ ಮೂಲಭೂತ ಸೌಕರ್ಯಗಳನ್ನು  ಕಲ್ಪಿಸಿಕೊಡುವ ನಿಟ್ಟಿನಲ್ಲಿ,ಸೇವಾರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ತೀರಾ ಅಗತ್ಯವುಳ್ಳವರಿಗೆ ಶಾಶ್ವತ ಸೂರು ನಿರ್ಮಿಸಿಕೊಡುವ ಕೈಂಕರ್ಯವನ್ನು ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಬೈಂದೂರು ಗಂಗನಾಡು ನೀರೋಡಿ ಸೌಂತ್ ಮನೆ ರಾಮ ಮರಾಠಿ ಇವರ ಶಿಥಿಲಗೊಂಡ ಮನೆಯವರ ಸಂಕಷ್ಟವನ್ನು ಅರಿತು ನೀಡಿದ ಭರವಸೆಯಂತೆ ಟ್ರಸ್ಟ್ ಮೂಲಕ 9 ನೇ ಸುಸಜ್ಜಿತ ಮನೆ ನಿರ್ಮಿಸಲಾಗಿದ್ದು ಪ್ರವೇಶೋತ್ಸವಕ್ಕೆ ಸಜ್ಜಾಗಿದೆ.
ಸೆಪ್ಟೆಂಬರ್ 26 ಸೋಮವಾರ ಬೆಳಿಗ್ಗೆ 10 ಗಂಟೆಗೆ ,ಬೈಂದೂರು ಗಂಗನಾಡು ನೀರೋಡಿ ಯಲ್ಲಿ ನಡೆಯಲಿರುವ 9 ನೇ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮ ಬೆಳಗಾಂ ನಿಪ್ಪಾಣಿ ಮಹಾಕಾಳಿ ಸಂಸ್ಥಾನಂ ಸಧರ್ಮ ಓಂಶಕ್ತಿ ಮಠದ ರಸಾಯಿ ಶೇಂಡಾರು ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀಯುತ ಅಚ್ಯುತ್ ಕಲ್ಯಾಣ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
*”ಬಡವರಿಗೊಂದು  ಸೂರು” ನನ್ನ ಕನಸಿನ ಯೋಜನೆ ಪ್ರಗತಿ ಯಲ್ಲಿದ್ದು,ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ಒಂದೊಂದು ಮನೆಯ ಉದ್ಘಾಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದು ಸಾಕಷ್ಟು ಮನೆ ನಿರ್ಮಾಣ ಹಂತದಲ್ಲಿದೆ”ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ನ ಸಂಸ್ಥಾಪಕರು,ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿಯವರು ತಿಳಿಸಿದ್ದಾರೆ.*
Categories
ಭರವಸೆಯ ಬೆಳಕು

ಅಂಗನವಾಡಿಯ 45 ಮಕ್ಕಳಿಗೆ ಸ್ಪೋರ್ಟ್ಸ್ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂಭಾಶಿ- ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ,
ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿ ಮತ್ತು ಕುಂಭಾಶಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಅಂಬೇಡ್ಕರ್ ಭವನ ಕುಂಭಾಶಿ ಇಲ್ಲಿ ನಡೆದ ಅಮೃತಪ್ರಾಶನ(ಸ್ವರ್ಣ ಪ್ರಾಶನ)ಕಣ್ಣಿನ ತಪಾಸಣಾ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಇವರು ಅಂಗನವಾಡಿಯ 45 ಮಕ್ಕಳಿಗೆ ಬೆಲೆಬಾಳುವ BAS ಕಂಪೆನಿಯ ಸ್ಪೋರ್ಟ್ಸ್ ಶೂ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ವಹಿಸಿದರೆ,ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಶ್ರೀನಿಧಿ ಉಪಾಧ್ಯಾಯ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿ.ಜೆ‌.ಪಿ ಅಧ್ಯಕ್ಷರಾದ ಶಂಕರ ದೇವಾಡಿಗ ಅಂಕದಕಟ್ಟೆ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ‌ ಶೆಟ್ಟಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿ(ರಿ) ಕುಂದಾಪುರ ಅಧ್ಯಕ್ಷೆ ಶ್ರೀಮತಿ ರಾಧಾ ದಾಸ್,ಕುಂಭಾಶಿ ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ, ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎ.ಓ ಅಭಿನಂದನ್ ಶೆಟ್ಟಿ,ಎಮ್.ಎಸ್ ಡಾ ಸವಿತಾ.ಕೆ.ಭಟ್,ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿಯ ಅಧ್ಯಕ್ಷ ಸುನಿಲ್ ಮತ್ತು ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ವಿಶ್ವವನ್ನೇ ಗೆಲ್ಲಲು ಓಡುತ್ತಿರುವ ಆತನಿಗೆ ಕಾಲೇ ಇಲ್ಲ!

ಕಾಲುಗಳೇ ಇಲ್ಲದೆ ಹುಟ್ಟಿದ ಜಿಯೋನ್ ಕ್ಲಾರ್ಕ್ ಮಾಡಿದ್ದು ಎಲ್ಲವೂ ಅದ್ಭುತವೇ!
———————————————————-
ಅಮೆರಿಕಾದ ಓಹಿಯೋದಲ್ಲಿ ಆತನ ಅಮ್ಮ ಅವನಿಗೆ 1997ರಲ್ಲಿ ಜನ್ಮಕೊಟ್ಟಾಗ ಎರಡೂ ಕಾಲುಗಳು ಇರಲಿಲ್ಲ! ಡ್ರಗ್ ಸೇವನೆ ಮಾಡುತ್ತಿದ್ದ ಅವನ ಅಮ್ಮ ಈ ವಿಕಲಚೇತನ ಮಗುವಿಗೆ ಜನ್ಮ ನೀಡಿದಾಗ ಆಕೆಗೆ ಮಗುವಿನ ಮೇಲೆಯೇ ಜಿಗುಪ್ಸೆ ಬಂದು ಒಂದು ಅನಾಥಾಶ್ರಮದಲ್ಲಿ ಮಗುವನ್ನು ಬಿಟ್ಟು ಹೋದದ್ದು ದುರಂತ!
ಈ ಕಾಯಿಲೆಗೆ ವೈದ್ಯರು ಚಿತ್ರ ವಿಚಿತ್ರವಾದ ಹೆಸರನ್ನು ಬೇರೆ ಇಟ್ಟರು. ಮೆದುಳುಬಳ್ಳಿಯ ಕೆಳಗಿನ ಭಾಗವು ಶಕ್ತಿಯನ್ನು  ಕಳೆದುಕೊಳ್ಳುವ ವಿಚಿತ್ರವಾದ  ಖಾಯಿಲೆ ಅದು! ಅದಕ್ಕೆ ಬಲಿಪಶು ಆದದ್ದು ಮಾತ್ರ ಜಿಯೊನ್ ಕ್ಲಾರ್ಕ್!
ಮುಂದೆ ಏಳರಿಂದ ಎಂಟರಷ್ಟು ಅನಾಥಾಶ್ರಮಗಳಿಗೆ ಈ ಮಗು ಅಲೆಯಬೇಕಾಯಿತು. ಕಿರುಕುಳ, ಪೆಟ್ಟು, ನೋವು ಹಾಗೂ ಉಪವಾಸಗಳಿಂದ ಆ ಮಗುವು ತೀರಾ ಜರ್ಜರಿತ ಆಯಿತು. ಅದರ ಗೋಳನ್ನು ಯಾರೂ ಆಲಿಸುವವರೇ  ಇರಲಿಲ್ಲ. ನೆಲದ ಮೇಲೆ ತೆವಳುತ್ತಿದ್ದ ಆ ಬಾಲಕನ ಪಾಲಿಗೆ ದೇವರೇ ಕಳುಹಿಸಿಕೊಟ್ಟ ಹಾಗೆ ಓರ್ವರು ದತ್ತು ತಾಯಿಯು ದೊರಕಿದರು.
ಆ ಮಹಾ ತಾಯಿಯೇ ಕಿಂಬರ್ಲಿ ಹಾಕಿನ್!
ಆ ತಾಯಿಯ  ಮಡಿಲಲ್ಲಿ ಆಗಲೇ ಹಲವು ದತ್ತುಮಕ್ಕಳು ಇದ್ದರು.ಅದರ ಜೊತೆಗೆ ಆಕೆ ಈ ಅನಾಥ ಮಗುವನ್ನು ಕೂಡ ಎತ್ತಿಕೊಂಡು ಬಂದು ಮನೆಯಲ್ಲಿ ಪ್ರೀತಿಯಿಂದ ಲಾಲನೆ ಪಾಲನೆ ಮಾಡಿದರು. ಸ್ವಂತ ಮಗುವಿಗಿಂತ ತುಸು ಹೆಚ್ಚೇ  ಪ್ರೀತಿಯನ್ನು ಕೊಟ್ಟರು. ಇದು ಆ ತೆವಳುವ ಬಾಲಕನ ಜೀವನದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಆಯಿತು. ಮುಂದೆ ಗಿಲಬರ್ಟ್ ಡೋನಾಹ್ಯೂ ಎಂಬ ಕೋಚ್ ಆ ಬಾಲಕನನ್ನು ಉತ್ತಮ ಕ್ರೀಡಾಪಟು ಆಗಿ ರೂಪಿಸಿದರು.
ಜಿಯೋನ್ ಹಠವಾದಿ ಯುವಕ! ತಾನು ಏನಾದರೂ ಸಾಧನೆ ಮಾಡಬೇಕು ಎಂಬ ದೊಡ್ಡ ಕನಸು! ತಾನು ದುರ್ಬಲ ಅಲ್ಲ ಎಂದು ಪ್ರೂವ್ ಮಾಡುವ ಕಿಚ್ಚು! ಅದಕ್ಕೆ ಪೂರಕ ಆಗಿ NO EXCUSE ಎಂಬ ಕ್ಯಾಪ್ಶನ್ ಆರಿಸಿಕೊಂಡನು.ಅದನ್ನು ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಕೊಂಡನು. ಅಲ್ಲಿಂದ ಮುಂದೆ  ಸಾಧನೆಯ ತೀವ್ರವಾದ ಪ್ರಯತ್ನವು ಆರಂಭವಾಗಿಯೇ ಬಿಟ್ಟಿತು!
ಆತನಿಗೆ ಬಾಲ್ಯದಲ್ಲಿ  ತನ್ನ ಬೆನ್ನನ್ನು ನೆಟ್ಟಗೆ ಮಾಡಿಕೊಂಡು  ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ. ಆಗ ಹಲವು ಸಂಕೀರ್ಣ  ಶಸ್ತ್ರಚಿಕಿತ್ಸೆಗಳಿಗೆ ಅವನು ಒಳಗಾದನು. ಇಡೀ ದೇಹವನ್ನು ಎರಡು ಕೈಗಳ ಮೇಲೆ ಎತ್ತಿ ನಿಲ್ಲಿಸುವ ಕಾರಣ ಕೈಗಳ ಮಾಂಸಖಂಡಗಳು ಶಕ್ತಿಶಾಲಿ ಆಗಲು ಪಟ್ಟ ಕಷ್ಟಗಳು  ಸುಲಭದ್ದು ಆಗಿರಲಿಲ್ಲ! ಕುಸ್ತಿಗೆ ಅನುಕೂಲ ಆಗಲು ಹಲವು ಪಟ್ಟುಗಳನ್ನು ಕಲಿಯುವಾಗ ಜಿಯೊನ್ ಭಾರೀ ದೊಡ್ಡದಾದ  ಸವಾಲುಗಳನ್ನು ಎದುರಿಸಬೇಕಾಯಿತು! ಹಾಗೆಯೇ ವೀಲ್ ಚೇರ್ ರೇಸ್ ಅವನ ಇನ್ನೊಂದು ಇವೆಂಟ್ ಆದ ಕಾರಣ ಅವನು ಅದಕ್ಕೂ ಸಾಕಷ್ಟು ರಕ್ತ ಕರಗಿಸಿ ದುಡಿಯುತ್ತಿದ್ದಾನೆ!
ಕೇವಲ 96 ಸೆಂಟಿ ಮೀಟರ್ ಎತ್ತರ ಇರುವ, 56 ಕೆಜಿ ತೂಕ ಇರುವ, ತನ್ನ ಇಡೀ ದೇಹವನ್ನು ಬಲಿಷ್ಠವಾದ  ಕೈಗಳ ಮೇಲೆ ತೆಗೆದುಕೊಂಡು ನಡೆಯುವ, ಜಿಮ್ ಅಭ್ಯಾಸಗಳ ಮೂಲಕ ತನ್ನ ದೇಹವನ್ನು ತನಗೆ ಬೇಕಾದ ಹಾಗೆ ಹುರಿಗೊಳಿಸಿರುವ ಜಿಯೊನ್ ಮುಂದೆ ಕ್ರೀಡೆಯಲ್ಲಿ ಮಾಡಿದ್ದೆಲ್ಲವೂ ಅದ್ಭುತ  ಚಮತ್ಕಾರಗಳೇ ಆಗಿವೆ!
ರೆಸ್ಲಿಂಗ್ ಕ್ಷೇತ್ರದಲ್ಲಿ ಅವನು ಈಗಾಗಲೇ ರಿಂಗ್ಸಲ್ಲಿ ಹಲವು ಪಂದ್ಯ ಗೆದ್ದಾಗಿದೆ! ಅದಕ್ಕೆ ಪೂರಕವಾಗಿ ತನ್ನ ದೇಹವನ್ನು ಹುರಿಗೊಳಿಸುವ ಪ್ರಯತ್ನದಲ್ಲಿ ಅವನು ಸಾಕಷ್ಟು ಬೆವರು ಹರಿಸುತ್ತಿದ್ದಾನೆ. ರೆಸ್ಲಿಂಗ್ ರಿಂಗ್ಸಲ್ಲಿ ಅವನಿಗೆ ದೊಡ್ಡದಾದ  ಕನಸುಗಳು ಇವೆ ಎಂದು ಅವನು ಹೇಳಿದ್ದಾನೆ.
ಇತ್ತೀಚೆಗೆ ಜಿಯೊನ್ ಒಂದು ಗಿನ್ನೆಸ್ ದಾಖಲೆ ಕೂಡ ಪೂರ್ತಿ ಮಾಡಿದನು. ಎರಡೂ ಕೈಗಳ ಮೇಲೆ ದೇಹದ ಭಾರವನ್ನು ಎತ್ತಿ ಹಿಡಿದು ಇಪ್ಪತ್ತು ಮೀ. ದೂರವನ್ನು ಅವನು 4.78 ಸೆಕೆಂಡ್ಸಲ್ಲಿ ಓಡುವ ದಾಖಲೆ ಮಾಡಿದ್ದಾನೆ. ಈ ದೂರವನ್ನು ಇನ್ನೂ ಕಡಿಮೆಯ ಅವಧಿಯಲ್ಲಿ ಪೂರ್ತಿ ಮಾಡಿ ತನ್ನದೇ  ದಾಖಲೆ ಮುರಿಯಬೇಕು ಎನ್ನುವ ತುಡಿತ ಕೂಡ ಅವನ ಹತ್ತಿರ ಇದೆ.
ಇದುವರೆಗೆ ಜಗತ್ತಿನಲ್ಲಿ ಯಾರೂ ಮಾಡದ ಒಂದು ಅನನ್ಯ ಸಾಧನೆ ಮಾಡಲು ಅವನು ಈಗ ಯುದ್ದದ ರೀತಿಯಲ್ಲಿ ಸನ್ನದ್ಧನಾಗುತ್ತಿದ್ದಾನೆ! ಅದೆಂದರೆ 2024ರ ಪ್ಯಾರಿಸ್  ಒಲಿಂಪಿಕ್ಸಲ್ಲಿ ಒಂದಾದರೂ ಪದಕ ಗೆಲ್ಲುವುದು. ಅದರ ಜೊತೆಗೆ ಒಲಿಂಪಿಕ್ಸ್ ಬೆನ್ನಿಗೆ ನಡೆಯುವ ವಿಶೇಷ ಚೇತನ  ಕ್ರೀಡಾಪಟುಗಳ ಪಾರಾ ಒಲಿಂಪಿಕ್ಸನಲ್ಲಿ ಕೂಡ ಒಂದಲ್ಲ ಒಂದು ಪದಕವನ್ನು ಗೆಲ್ಲುವುದು! ಹಾಗೊಮ್ಮೆ ಅದು ಸಾಧ್ಯವಾಯಿತು ಅಂತಾದರೆ ಜಿಯೋನ್ ‘ವಿಶ್ವ ವಿಜಯೀ’  ಆಗುವುದು ಖಂಡಿತ!
ಇದಕ್ಕಾಗಿ ಅವನು ಪವರ್ ಲಿಫ್ಟಿಂಗ್, ವೀಲಚೇರ್ ಬಾಡಿ ಬಿಲ್ಡಿಂಗ್, ವೀಲ್ ಚೇರ್ ರೇಸ್,  ಬಾಕ್ಸಿಂಗ್, ರೆಸ್ಲಿಂಗ್…. ಹೀಗೆ ಹಲವು ವಿಭಾಗಗಳಲ್ಲಿ ಪ್ರಯತ್ನ ಮಾಡುತ್ತಿದ್ದಾನೆ! ದಿನಕ್ಕೆ ಕನಿಷ್ಠ 10 ಘಂಟೆಗಳ ಕಾಲ ಮೈದಾನದಲ್ಲಿಯೇ ಕಳೆಯುತ್ತಿದ್ದಾನೆ!
ಇವೆಲ್ಲವುಗಳ ಜೊತೆಗೆ ಅವನ ಇತರ ಹವ್ಯಾಸಗಳ ಬಗ್ಗೆ ತಿಳಿದರೆ ನೀವು ಖಂಡಿತ ಬೆರಗಾಗುತ್ತೀರಿ! ಗೆಳೆಯರನ್ನು ಸಂಪಾದನೆ ಮಾಡುವುದು ಅವನ ಬಹಳ ದೊಡ್ಡ ಪ್ಯಾಶನ್. ಅವನಿಗೆ ಈಗಲೆ ಇನ್ಸಟಗ್ರಾಂನಲ್ಲಿ  ಐದು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಗೆಳೆಯರಿದ್ದಾರೆ! ಅವನೊಬ್ಬ ಬಿಸಿನೆಸ್ ಮ್ಯಾನ್, ಆಕ್ಟರ್, ಮೋಟಿವೇಶನ್ ಸ್ಪೀಕರ್, ಲೇಖಕ, ಕ್ರೀಡಾಪಟು ಎಲ್ಲವೂ ಆಗಿದ್ದಾನೆ!
ತನ್ನ ಇಷ್ಟೊಂದು ಸಾಧನೆಗಳಿಗೆ ತನ್ನ ದತ್ತು ತಾಯಿಯ ಮಮತೆ ಮತ್ತು ವಾತ್ಸಲ್ಯವೆ ಮುಖ್ಯ ಕಾರಣ ಎಂದು ಆತ ನಂಬಿದ್ದಾನೆ. ಹೆತ್ತ ತಾಯಿ ಅನಾಥ ಮಕ್ಕಳ ನಡುವೆ ಕರುಣೆ ಇಲ್ಲದೆ ಬಿಟ್ಟು ಹೋದಾಗ ತನ್ನ ಸ್ವಂತ ಮಗುವಿಗಿಂತ ಹೆಚ್ಚು ಪ್ರೀತಿ ತೋರಿದ, ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಆ ಮಹಾ ತಾಯಿಯ ಬಗ್ಗೆ ಮಾತಾಡುವಾಗ ಅವನು ತುಂಬ ಭಾವುಕನಾಗಿ ಬಿಡುತ್ತಾನೆ.

ಇಬ್ಬರು ಕೋಚ್ ಅವರ ಸರಿಯಾದ ಮಾರ್ಗದರ್ಶನ ಮತ್ತು ಗೆಳೆಯರ ಪ್ರೋತ್ಸಾಹಗಳು ಕೂಡ ನನ್ನ ಸಾಧನೆಗೆ ಕಾರಣ ಎಂದು ಹೇಳುವ ಜಿಯೋನ್ ಒಂದೆರಡು ವರ್ಷಗಳಲ್ಲಿ ವಿಶ್ವವನ್ನು ಗೆಲ್ಲಲು ಹೊರಟಿದ್ದಾನೆ. ತನಗೆ ಕಾಲಿಲ್ಲ ಎಂದು ದೇವರಿಗೆ ತಾನು ಯಾವತ್ತೂ ಶಾಪವನ್ನು ಕೊಡುವುದಿಲ್ಲ. ಅನಾಥವಾಗಿ ತನ್ನನ್ನು ನಡುನೀರಿನಲ್ಲಿ  ಬಿಟ್ಟು ಹೋದ ತನ್ನ ಹೆತ್ತ ಅಮ್ಮನನ್ನು ಕೂಡ ಕ್ಷಮಿಸಿ ಬಿಟ್ಟಿದ್ದೇನೆ ಎನ್ನುವ ಆ ಮಹಾಸಾಧಕನಿಗೆ ನಿಮ್ಮದೊಂದು ಹಾರೈಕೆ ಇರಲಿ.

ರಾಜೇಂದ್ರ ಭಟ್ ಕೆ.

Categories
ಭರವಸೆಯ ಬೆಳಕು

ಸಮಾಜರತ್ನ ಡಾ.ಗೋವಿಂದಬಾಬು ಪೂಜಾರಿ ಯವರಿಗೆ ವಿಜಯರತ್ನ‌-2022 ಪ್ರಶಸ್ತಿ ಪ್ರದಾನ

ಬೈಂದೂರು-ವಿ.ಆರ್.ಎಲ್ ಸಮೂಹ ಸಂಸ್ಥೆಯಿಂದ ಉದ್ಯಮ,ಶಿಕ್ಷಣ, ಆರೋಗ್ಯ,ಪರಿಸರ ಕಾಳಜಿ,ಸಮಾಜ
ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ವಿಜಯರತ್ನ ಪ್ರಶಸ್ತಿ ಪ್ರಸಿದ್ಧ ಉದ್ಯಮಿ,ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರಿಗೆ ದೊರೆತಿದೆ.
ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಅಧ್ಯಕ್ಷರಾಗಿರುವ ಗೋವಿಂದ ಬಾಬು ಪೂಜಾರಿ ಚೆಫ್‌ಟಾಕ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.ಸಾವಿರಾರು ಜನರಿಗೆ ಉದ್ಯೋಗ, 25 ಕ್ಕೂ ಅಧಿಕ ಬಡ ಕುಟುಂಬ ಗಳಿಗೆ ಮನೆ ನಿರ್ಮಾಣ,ಸಾವಿರಾರು ಆಸಕ್ತರಿಗೆ ನೆರವು ಸೇರಿದಂತೆ ಯುವ ಉದ್ಯಮಿಯಾಗಿ ಬೈಂದೂರು ಕ್ಷೇತ್ರದ ಜನಮನ್ನಣೆ ಪಡೆದ ಯುವ ನಾಯಕರಾಗಿದ್ದಾರೆ.
ಧಾರ್ಮಿಕ,ಶೈಕ್ಷಣಿಕ,ಕ್ರೀಡೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಇವರು ಕೊಡುಗೈ ದಾನಿ
ಯಾಗಿದ್ದಾರೆ.ಡಾ.ಗೋವಿಂದ ಬಾಬು ಪೂಜಾರಿಯವರ ಸಾಧನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಇನ್ನಷ್ಟು ಸಮಾಜಸೇವೆಗೆ ಪ್ರೇರಣೆ ನೀಡಿದಂತಾಗಿದೆ.
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ನಿಮಗೆ ಅಭಿನಂದನೆಗಳು..
Categories
ಭರವಸೆಯ ಬೆಳಕು

ಜಯಪ್ರಕಾಶ್ ಆಚಾರ್ಯ ಕುತ್ಪಾಡಿ ರಾಮ್ ದೂತ್ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಆಯ್ಕೆ

ಉದ್ಯಾವರ-ರಾಮ್ ದೂತ್ ವ್ಯಾಯಾಮ ಶಾಲೆ ಕುತ್ಪಾಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಪ್ರಸನ್ನ.
ಡಿ.ಅಮೀನ್ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ 2022-23 ನೇ ಸಾಲಿನ ಅಧ್ಯಕ್ಷರಾಗಿ ಜಯಪ್ರಕಾಶ್ ಆಚಾರ್ಯ(ಜೆ.ಪಿ) ಕುತ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.
*ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ*
ಗೌರವಾಧ್ಯಕ್ಷರಾಗಿ ರಘುನಾಥ್ ಕೋಟ್ಯಾನ್,ವಾಮನ.
ಪಿ.ಬಂಗೇರ,ಆಯೂಬ್ ಸಾಹೇಬ್ ಕಟಪಾಡಿ,ಉಮೇಶ್
ಜತ್ತನ್ನ ಕುತ್ಪಾಡಿ,ಅಧ್ಯಕ್ಷರಾಗಿ ಜಯಪ್ರಕಾಶ್ ಕುತ್ಪಾಡಿ,
ಉಪಾಧ್ಯಕ್ಷರಾಗಿ ವಸಂತ್ ಕಡೆಕಾರ್,ಕಾರ್ಯದರ್ಶಿ
ಯಾಗಿ ಗುರು ಕುತ್ಪಾಡಿ,ಜೊತೆ ಕಾರ್ಯದರ್ಶಿಯಾಗಿ ಧೀರಜ್ ಕುತ್ಪಾಡಿ,ಕೋಶಾಧಿಕಾರಿಯಾಗಿ ಕಿಶನ್ ಕುತ್ಪಾಡಿ,ಕ್ರೀಡಾ ಕಾರ್ಯದರ್ಶಿಯಾಗಿ ರೋನಿಕ್ ಕುತ್ಪಾಡಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನೀಷ್ ಕುತ್ಪಾಡಿ,ಅಶಿತ್ ಕುತ್ಪಾಡಿ,ಸಂಘಟನಾ ಕಾರ್ಯದರ್ಶಿ
ಯಾಗಿ ರಾಜೇಶ್ ಕುತ್ಪಾಡಿ,ಶಿಕ್ಷಕರಾಗಿ ಅಶೋಕ್ ಸುವರ್ಣ ಕುತ್ಪಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಶರ್ಮಾ,ರಾಜೇಂದ್ರ ಬಾಬು,ಭೂಷಣ್ ಕುತ್ಪಾಡಿ,ಅಶೋಕ್ ಬಂಗೇರ,ವಸಂತ ಕಟಪಾಡಿ,ಪ್ರವೀಣ್ ಕುತ್ಪಾಡಿ,ಪ್ರವೀಣ್ ದೆಂದೂರ್ ಕುತ್ಪಾಡಿ,ಗಿರಿ ಕುತ್ಪಾಡಿ,ಶ್ರೀನಿವಾಸ್,ಪ್ರಸನ್ನ ಡಿ.ಅಮೀನ್ ಕುತ್ಪಾಡಿ, ರತ್ನಾಕರ ಕುತ್ಪಾಡಿ, ರೋಶನ್ ಕುತ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.
Categories
ಭರವಸೆಯ ಬೆಳಕು

ನವೀನ್ ಸಾಲ್ಯಾನ್ ಪಿತ್ರೋಡಿ ವೆಂಕಟರಮಣ ಸಂಸ್ಥೆಯ ಅಧ್ಯಕ್ಷರಾಗಿ ಪುನರಾಯ್ಕೆ

ಉದ್ಯಾವರ-ಸಮಾಜಸೇವೆಯನ್ನೇ ಮುಖ್ಯ ಧ್ಯೇಯ
ವಾಗಿರಿಸಿಕೊಂಡ ಮೂರುವರೆ ದಶಕಗಳ ಇತಿಹಾಸದ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗಷ್ಟೇ ನಡೆಯಿತು.
2022-23 ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಪಿತ್ರೋಡಿ ಪುನರಾಯ್ಕೆಗೊಂಡಿರುತ್ತಾರೆ.ಉಪಾಧ್ಯಕ್ಷರಾಗಿ
ವಿಜಯ್ ಕೋಟ್ಯಾನ್,ಕಾರ್ಯದರ್ಶಿ ಪ್ರವೀಣ್ ಕುಮಾರ್,ಕೋಶಾಧಿಕಾರಿ ಲೋಕೇಶ್ ಸುವರ್ಣ,ಜೊತೆ ಕಾರ್ಯದರ್ಶಿ ಅಭಿಜಿತ್ ಅಮೀನ್,ಕ್ರೀಡಾ ಕಾರ್ಯದರ್ಶಿ ಶಶಿಕಾಂತ್ ಪಿತ್ರೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ್ ಮೈಂದನ್ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ನ
ಪದಾಧಿಕಾರಿಗಳು,ಸರ್ವ ಸದಸ್ಯರೆಲ್ಲರಿಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹಾರ್ದಿಕ‌ ಅಭಿನಂದನೆ
ಗಳು.‌..