Categories
ಚಿರಸ್ಮರಣೆ ಸಂತಾಪ

ಸಾಮಾಜಿಕ ಕಾರ್ಯಕರ್ತ,ಮಾಜಿ ಕ್ರಿಕೆಟ್ ಪಟು ಸಾಯಿದತ್ತ ಭಟ್ ಬೈಂದೂರು ನಿಧನ

ಬೈಂದೂರು-ವಿಕ್ರಮ್ ಸ್ಪೋರ್ಟ್ಸ್ ಕ್ಲಬ್ ಬೈಂದೂರು ತಂಡದ ಪರವಾಗಿ 80 ರ ದಶಕದಲ್ಲಿ ಮಿಂಚಿದ್ದ ಆಲ್ ರೌಂಡರ್, ಉದ್ಯಾನ ನಗರಿ ಬೆಂಗಳೂರನ್ನು ಫ್ಲೆಕ್ಸ್ ಮುಕ್ತ ನಗರಿಯನ್ನಾಗಿಸುವಲ್ಲಿ ಹಾಗೂ ಕಾನೂನಾತ್ಮಕ ಹೋರಾಟದ ಮೂಲಕ ಬಿ‌.ಡಿ.ಎ ಗೆ ಕೋಟ್ಯಾಂತರ ಮೌಲ್ಯದ ಭೂಮಿಯನ್ನು ಉಳಿಸಿಕೊಟ್ಟ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಭಟ್ ಬೈಂದೂರು ಇಂದು ಹೃದಯಾಘಾತದಿಂದ ನಿಧನರಾದರು.
80 ರ ದಶಕದಲ್ಲಿ ಆಲ್ ರೌಂಡರ್ ಆಟಗಾರರ ರೂಪದಲ್ಲಿ ವಿಕ್ರಮ್ ತಂಡದಲ್ಲಿ ಕ್ರಿಕೆಟ್ ಜೀವನ ಪ್ರಾರಂಭಿಸಿದ್ದ ಸಾಯಿದತ್ತ ಭಟ್ ಗಂಗೊಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯವೊಂದರಲ್ಲಿ ರಾಯಲ್ ಗಂಗೊಳ್ಳಿ ತಂಡದೆದುರು ಹ್ಯಾಟ್ರಿಕ್ ವಿಕೆಟ್ ಗಳಿಸಿ ಮಿಂಚಿದ್ದರು.ಹಲವಾರು ಪಂದ್ಯಗಳಲ್ಲಿ ವಿಕ್ರಮ್ ಪರ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು‌.ಇದಲ್ಲದೇ ಕರಾವಳಿ ಕುಂದಾಪುರ ಹಾಗೂ ಶ್ರೀಲತಾ ಕುಂದಾಪುರ ತಂಡದ ಪರವಾಗಿ ನೇತಾಜಿ ಪರ್ಕಳ ಪಂದ್ಯದಲ್ಲಿ ಹಾಗೂ ಪಯೋನೀರ್ ಬೀಡಿನಗುಡ್ಡೆ ಪಂದ್ಯಾವಳಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು‌.
ಕುಂದಾಪುರದ ಮೈಲಾರೇಶ್ವರ ಯುವಕ ಸಂಘ ತಂಡವನ್ನು ಪ್ರತಿನಿಧಿಸಿ ಕೋಣಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯದಲ್ಲಿ ಸರಣಿಶ್ರೇಷ್ಟ ಪ್ರಶಸ್ತಿಯೂ ತನ್ನದಾಗಿಸಿಕೊಂಡಿದ್ದರು.
ಹಲವಾರು ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆಕಾರರಾಗಿ ಹಾಗೂ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.ವಿಕ್ರಮ್ ಬೈಂದೂರು ತಂಡದ ಜನರಲ್ ಸೆಕ್ರೆಟರಿಯಾಗಿ,ಪ್ರಸಿದ್ಧ “ಲಾವಣ್ಯ ಕಲಾವೃಂದದ ಪೋಷಕರಾಗಿ ಹಾಗೂ ಬೈಂದೂರು ಜೇಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ‌.ಕಾಲೇಜು ವ್ಯಾಸಂಗದ ವೇಳೆ ಹಲವಾರು ಡಿಬೇಟ್ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು.
1993 ರ ಬಳಿಕ ಹೊಟ್ಟೆಪಾಡಿಗಾಗಿ ಬೆಂಗಳೂರು ಪ್ರವೇಶಿಸಿದ ಇವರು ಸಾಮಾಜಿಕ ಕಾರ್ಯಕರ್ತರಾಗಿ ಹೈಕೋರ್ಟ್ ನಲ್ಲಿ 16 ಸಾರ್ವಜನಿಕ ದಾವೆಗಳಿಗಾಗಿ ಹೋರಾಟ, 25 ಕ್ಕೂ ಹೆಚ್ಚಿನ ಲೋಕಾಯುಕ್ತ ಸಂಬಂಧಿಸಿದಂತೆ ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಅಲ್ಲದೆ ACB ದೂರುಗಳ ಬಗ್ಗೆ ತನಿಖೆ ಮಾಡಿದವರು. ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತ ಮಾಡುವಲ್ಲಿ ಯಶಸ್ವಿಯಾದರು.ಜಾಗಕ್ಕೆ ಸಂಬಂಧಿಸಿದಂತೆ ಇರುವ ದೂರುಗಳ ವಿಚಾರಣೆ ಅಲ್ಲದೆ ಬಿಡಿಎ ಲ್ಯಾಂಡ್ ಗಳ ಬಗ್ಗೆ ತನಿಖೆ ನಡೆಸಲು ಯಶಸ್ವಿ ಹೋರಾಟ ನಡೆಸಿದ ಕಾರ್ಯಕರ್ತ ಎಂದು ಹೆಸರು ಮಾಡಿರುವ ಇವರು ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸೋರಾಂ ಬಾಪೂ ಆಶ್ರಮದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿ ಗೆದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಬಿ.ಡಿ.ಎ ಗೆ ಉಳಿಸಿಕೊಟ್ಟ ಆಪತ್ಬಾಂಧವ. ಅನೇಕ ಬಾರಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.ಇವರ ಸಾಮಾಜಿಕ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿದ್ದು ಇವುಗಳಲ್ಲಿ ಬಿ.ಬಿ.ಎಮ್.ಪಿ ಕೊಡಮಾಡಿದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಹಾಗೂ ಶಿರ್ಕೆ ಗ್ರೂಪ್ ಪ್ರಶಸ್ತಿಗಳು ಪ್ರಮುಖವಾದುದು…
ಅಗಲಿದ ಸಾಮಾಜಿಕ ಕಾರ್ಯಕರ್ತ ಹಾಗೂ ಮಾಜಿ ಕ್ರಿಕೆಟಿಗರಾದ ಸಾಯಿದತ್ತ ಭಟ್ ಬೈಂದೂರು ಇವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಪ್ರಾರ್ಥಿಸುತ್ತೇವೆ.
Categories
ಚಿರಸ್ಮರಣೆ

ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ, ಅದ್ಭುತ ನಿರೂಪಕ, ಪ್ರಕಾಶ್ ಶೆಟ್ಟಿ ಬೆಳಗೋಡು ಇನ್ನಿಲ್ಲ

ಕುಂದಾಪುರ: ಮೊಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ವಿಶ್ವ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಬೆಳಗೋಡು ಅನಾರೋಗ್ಯದಿಂದ ಸೋಮವಾರ ನಿಧನರಾದರು.
ತಾಲೂಕಿನಾದ್ಯಂತ ಕ್ರೀಡಾ ಕಮೆಂಟರಿಗಳ ಮೂಲಕ ಪ್ರಸಿದ್ಧರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಕ್ರೀಡೋತ್ಸವಗಳನ್ನೂ ಸಂಘಟಿಸಿ ಯಶಸ್ವಿಯಾಗಿದ್ದರು. ಸ್ವತಃ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನೂ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಪ್ರಸಿದ್ಧರಾಗಿದ್ದವರು.
ಏಕಪಾತ್ರಾಭಿನಯದ ಮೂಲಕವೇ ಜನಮನ ಗೆದ್ದಿದ್ದ ಪ್ರಕಾಶ್ ಮೇಸ್ಟ್ರು ವಾಲಿಬಾಲ್ ಆಟದ ಕಮೆಂಟರಿಗೆ ಕುಳಿತರೆಂದರೆ ಸ್ಟೇಡಿಯಂ ಸ್ಥಭ್ದವಾಗುತ್ತಿತ್ತು. ಗ್ರಾಮೀಣ ಭಾಗದ ಮೊಳಹಳ್ಳಿ ಸರ್ಕಾರೀ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ರಾಜ್ಯಮಟ್ಟದಲ್ಲಿ ಹೆಸರು ತಂದ ಪ್ರಕಾಶ್ ಶೆಟ್ಟಿ ಬೆಳಗೋಡು ಅವರು ಮೊಳಹಳ್ಳಿ ಪ್ರಕಾಶ್ ಮೇಸ್ಟ್ರು ಎಂದೇ ಪ್ರಸಿದ್ಧರಾದವರು. ಅವರ ನಿಧನಕ್ಕೆ ಶಿಕ್ಷಣ ಇಲಾಖೆ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
Categories
ಚಿರಸ್ಮರಣೆ

ಚಮಕ್ ಬೆಂಗಳೂರು ತಂಡದ ಮಾಜಿ ಆಟಗಾರ ಮೋಹನ್ ಸಿಂಗ್ ವಿಧಿವಶ

80 ರ ದಶಕದ ಟೆನ್ನಿಸ್ ಬಾಲ್ ಕ್ರಿಕೆಟ್ ನ ಹಿರಿಯ ತಂಡ
“ಚಮಕ್ ಬೆಂಗಳೂರು” ಪರವಾಗಿ  ಆಡಿದ್ದ ಹಿರಿಯ ಆಟಗಾರರಾದ ಮೋಹನ್ ಸಿಂಗ್ ರವರು ತೀವೃ ಮೆದುಳಿನ ರಕ್ತಸ್ರಾವದಿಂದ ಇಂದು ಬೆಳಿಗ್ಗೆ 1.30 ಗಂಟೆಗೆ ವಿಧಿವಶರಾದರು.
ಚಮಕ್ ತಂಡದ ಪರವಾಗಿ ಹಲವಾರು ಪಂದ್ಯಗಳನ್ನಾಡಿದ್ದ ಮೋಹನ್ ಸಿಂಗ್ ಮಧ್ಯಮ ಕ್ರಮಾಂಕದ ನಂಬಿಕಸ್ಥ ದಾಂಡಿಗ ಹಾಗೂ ಕವರ್ಸ್ ವಿಭಾಗದ ಶ್ರೇಷ್ಠ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಮಹತ್ವದ ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದು, ಮೈದಾನದಲ್ಲಿ ಅಜರುದ್ದೀನ್ ರಂತೆ ಚುರುಕಿನ ಕ್ಷೇತ್ರರಕ್ಷಣೆಗೆ ಹೆಸರುವಾಸಿಯಾಗಿದ್ದರು.
ಅಹ್ಮದಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಕ್ರಿಕೆಟ್  ಪಂದ್ಯಾವಳಿಗಳಲ್ಲಿ ಕರ್ನಾಟಕದ ಪರವಾಗಿ ಆಡಿ,
ರಾಜ್ಯದ ತಂಡಕ್ಕೆ ಚಾಂಪಿಯನ್‌ ಪಟ್ಟ ತೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಲೆದರ್ ಬಾಲ್ ನಲ್ಲಿ
ಪ್ರಸಿದ್ಧ BUCC ಕ್ಲಬ್ ನ ಪರವಾಗಿ ಮೊದಲನೇ ಡಿವಿಜನ್ ಲೀಗ್ ಪಂದ್ಯವನ್ನಾಡಿದ್ದರು.
ಸುಮಾರು 53 ವರ್ಷ ಪ್ರಾಯದ ಮೋಹನ್ ಸಿಂಗ್ ರವರು ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಆಪ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.