ಉಡುಪಿ-ನಾವು ಭಾರತೀಯರು ಕ್ರಿಕೆಟ್ ಆಟವನ್ನು ಧರ್ಮದಂತೆ ಆಚರಿಸುತ್ತೇವೆ, ಏಕೆಂದರೆ ಕ್ರಿಕೆಟ್‌ಗೆ ಹೆಚ್ಚಿದ ಗೌರವ ಮತ್ತು ಪ್ರೋತ್ಸಾಹದಿಂದಾಗಿ. ಇತ್ತೀಚೆಗೆ ದೇಶದಾದ್ಯಂತ ಕ್ರಿಕೆಟ್ ಪರ ಜೋರಾದ ಗಾಳಿ ಬೀಸುತ್ತಿದೆ.










ಉಡುಪಿ-ನಾವು ಭಾರತೀಯರು ಕ್ರಿಕೆಟ್ ಆಟವನ್ನು ಧರ್ಮದಂತೆ ಆಚರಿಸುತ್ತೇವೆ, ಏಕೆಂದರೆ ಕ್ರಿಕೆಟ್‌ಗೆ ಹೆಚ್ಚಿದ ಗೌರವ ಮತ್ತು ಪ್ರೋತ್ಸಾಹದಿಂದಾಗಿ. ಇತ್ತೀಚೆಗೆ ದೇಶದಾದ್ಯಂತ ಕ್ರಿಕೆಟ್ ಪರ ಜೋರಾದ ಗಾಳಿ ಬೀಸುತ್ತಿದೆ.
ಕಾರ್ಕಳ ಸಮೀಪದ ರಂಗನಪಲ್ಕೆ ಕೌಡೂರು ಸ್ಟೇಡಿಯಂ ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್ ೧೪ ಕ್ರಿಕೆಟ್ ಪಂದ್ಯಾಟಕ್ಕೆ ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಹಿರಿಯ ಆಟಗಾರರಾದ ಸದಾನಂದ ಶಿರ್ವ ಚಾಲನೆ ನೀಡಿದರು.
ಉಡುಪಿ-ಯಶಸ್ವಿ ಸ್ಪೋರ್ಟ್ಸ್ ಕ್ಲಬ್ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಏಪ್ರಿಲ್ 2 ರವಿವಾರದಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ನಡೆದ ಮೂಡುಬೆಳ್ಳೆ ಪ್ರೀಮಿಯರ್ ಲೀಗ್ 2023-ಸೀಸನ್ 4 ರ ಪ್ರಶಸ್ತಿಯನ್ನು ಎಮ್.ಜೆ.ಸಿ ಮೂಡುಬೆಳ್ಳೆ ತಂಡ ಜಯಿಸಿದೆ.
ಬೈಂದೂರು-ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ ಬೇಸಿಗೆ ರಜೆಯ ಪ್ರಯುಕ್ತ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಬೈಂದೂರಿನಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವು ಜರುಗಲಿರುವುದು. 7 ರಿಂದ 16 ವರ್ಷದ ಬಾಲಕ ಬಾಲಕಿಯರಿಗೆ ತರಬೇತಿ ಪಡೆಯುವ ಅವಕಾಶವಿದ್ದು ಏಪ್ರೀಲ್ 7 ರಿಂದ ಪ್ರಥಮ ಹಂತದ ಶಿಬಿರ ಆರಂಭಗೊಳ್ಳಲಿದೆ.
ಮಂಗಳೂರು-ಅಂಡರ್ ಆರ್ಮ್ ಟೆನಿಸ್ ಬಾಲ್ ಕ್ರಿಕೆಟ್ ಮಂಗಳೂರು ಮತ್ತು ಕಾರ್ಕಳ ಆಟಗಾರರಿಗೆ ವಿಭಿನ್ನ ರೀತಿಯ ಸಂತೋಷವನ್ನು ನೀಡುತ್ತದೆ. ಇದು ತನ್ನ ಅರ್ಹ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಹೊಂದಿದೆ. ಋತುವಿನ GSB ಯ ಅತಿ ದೊಡ್ಡ ಅಂಡರ್ ಆರ್ಮ್ ಫ್ಲಡ್ ಲೈಟ್ ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು. ಈ ಪ್ರತಿಷ್ಠಿತ ಪಂದ್ಯಾಕೂಟದಲ್ಲಿ ಹತ್ತು ಫ್ರ್ಯಾಂಚೈಸ್ ತಂಡಗಳು ಭಾಗವಹಿಸಿದ್ದವು. ಡೆಡ್ಲಿ ಪ್ಯಾಂಥರ್ಸ್ ವಿರುದ್ಧ ನಡೆದ ಫೈನಲ್ ಸೆಣಸಾಟದಲ್ಲಿ ಕ್ಲಾಸಿಕ್ ಸಾಲ್ಮಾರ್ ಕಾರ್ಕಳ 6 ವಿಕೆಟ್ ಗಳ ಭರ್ಜರಿ ಗೆಲುವು ಪಡೆದು ಪ್ರಶಸ್ತಿ ಗೆದ್ದಿದೆ.
ಕುಂದಾಪುರ-ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ನಡೆಯುವ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ.ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿರುವ ವಾರ್ಷಿಕ ತರಬೇತಿ ಶಿಬಿರ.
80-90 ರ ಧಶಕದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ನಲ್ಲಿ ಚಕ್ರಾದಿಪಥ್ಯ ಸಾಧಿಸಿ ಮೆರೆದ ಸಂಸ್ಥೆ ಅದು ನಮ್ಮೂರಿನ ಹೆಮ್ಮೆಯ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್. ಶ್ರೀಪಾದ ಉಪಾಧ್ಯಾಯ, ಸತೀಶ್ ಕೋಟ್ಯಾನ್, ಮನೋಜ್ ನಾಯರ್, ಕೆ ಪಿ ಸತೀಶ್, ಪ್ರದೀಪ್ ವಾಜ್, ರಾಜ, ಶಾಹೀದ್,ರಾಘವೇಂದ್ರ ಚರಣ್ ನಾವಡ, ರಂಜಿತ್ ಶೆಟ್ಟಿ ಹೀಗೇ ಇನ್ನಿತರ ಆಟಗಾರರು ಸೇರಿ ಕರ್ನಾಟಕ ರಾಜ್ಯದಲ್ಲೇ ಪ್ರಾಬಲ್ಯವನ್ನು ಮೆರೆದಿತ್ತು.
ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದಾರರೂ ಕ್ರಿಕೆಟ್ ಮೇಲೆ ಇರುವ ಇವರ ಪ್ರೀತಿ ಎಂದಿಗೂ ನಿಲ್ಲಲಿಲ್ಲ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಷ್ಠಿತ ಚಕ್ರವರ್ತಿ ಕ್ರಿಕೆಟ್ ಕ್ಲಬ್. ವಾರ್ಷಿಕ ತರಬೇತಿ ಶಿಬಿರವನ್ನು ನಡೆಸುತ್ತಾ ಬಂದಿದೆ.
ಕುಂದಾಪುರ ನಗರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಏಪ್ರಿಲ್ 1 ರಿಂದ ಪ್ರಾರಂಭಗೊಳ್ಳಲಿದೆ, ಗಾಂಧಿ ಮೈದಾನದಲ್ಲಿ ಶಿಬಿರ ನಡೆಸಿ ತರಬೇತಿ ನೀಡಲಿದೆ. ಅಂಡರ್ 13 ಮತ್ತು 14 ವರ್ಷ ಮಿಗಿಲಾದ ಮಕ್ಕಳಿಗಾಗಿ ( Both Boys & Girls ) ಇಲ್ಲಿ ಲೆದರ್ ಬಾಲ್ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಭಾಗಿತ್ವದಲ್ಲಿ ಈ ತರಬೇತಿ ಶಿಬಿರ ನಡೆಯಲಿದೆ.
ಕಳೆದ ಹಲವಾರು ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ ಚಕ್ರವರ್ತಿ ಕ್ರಿಕೆಟ್ ಕ್ಲಬ್, ಒಂದು ತಿಂಗಳ ಕಾಲ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಲಿದೆ. ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ ಎಂದು ಕ್ಲಬ್ ನ ಕ್ರಿಕೆಟ್ ಕೋಚ್ ಪ್ರದೀಪ್ ವಾಜ್ ತಿಳಿಸಿದ್ದಾರೆ. ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.
ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್ಗೆ ಪೂರಕವಾಗಿ ತಯಾರಿ ಮಾಡಲಾಗುವುದು. ಪ್ರಸ್ತುತ ಕುಂದಾಪುರದ ಗಾಂಧಿ ಮೈದಾನದಲ್ಲಿ ವಾರ್ಷಿಕ ತರಬೇತಿ ನೀಡಲಾಗುತ್ತಿದ್ದು ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ಇವರ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ವಾಜ್ 9448252649 ಅಥವಾ ಅರ್ಮಾನ್ 8792444376, ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಚಕ್ರವರ್ತಿ ಕ್ರಿಕೆಟ್ ಕ್ಲಬ್ನ ಸೇವೆಯನ್ನು ಸ್ಪೋರ್ಟ್ಸ್ ಕನ್ನಡ ಶ್ಲಾಘಿಸುತ್ತಿದೆ. ರಾಜ್ಯಕ್ಕೆ ಪ್ರತಿಭಾವಂತ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತಿದೆ. ಭವಿಷ್ಯದಲ್ಲೂ ಕ್ಲಬ್ ನ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ಸ್ಪೋರ್ಟ್ಸ್ ಕನ್ನಡ ನೀಡಲಿದೆ.
ಏಪ್ರಿಲ್ 1 ರಿಂದ ಏಪ್ರಿಲ್ 30 ರವರೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುವ ಬೇಸಿಗೆ ತರಬೇತಿ ಕ್ರಿಕೆಟ್ ಶಿಬಿರ ಯಶಸ್ವಿಯಾಗಿ ಮುಕ್ತಾಯವಾಗಲಿ.
ಪಡುಕೋಣೆಯ *ಗ್ರೆಗರಿ ಪ್ರೌಢಶಾಲಾ* ಮೈದಾನ ನಾಳೆಯಿಂದ ಮೂರು ದಿನ *(ಮಾರ್ಚ್ 24 ಶುಕ್ರವಾರ – 26 ಭಾನುವಾರ*)ಒಂದು ಅಪರೂಪದ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ.
ಕಾರ್ಕಳ-ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ಶ್ರೀಯುತ ಲಾರೆನ್ಸ್ ಸಲ್ದಾನ ಕೌಡೂರು ರವರ ಕನಸಿನ ಕ್ರೀಡಾಂಗಣ, ಕಾರ್ಕಳ ತಾಲೂಕಿನ ರಂಗನಪಲ್ಕೆ ಗ್ಲಾರಿಡಾ ಎಸ್ಟೇಟ್ ಎಲ್ಯಾಳದ“ಕೌಡೂರು ಸ್ಟೇಡಿಯಂ” ನಲ್ಲಿ , ಸಲ್ದಾನ್ಹರವರ ಪ್ರಾಯೋಜಕತ್ವ ದ *ಸನ್ ರೈಸ್ ಕ್ರಿಕೆಟ್ ಅಕಾಡೆಮಿ* ವತಿಯಿಂದ, ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಶುಬಾರಂಭಗೊಳ್ಳಲಿದೆ.
ಪಡುಕೋಣೆ-ಕಳೆದ 15 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಕ್ರೀಡಾ ಸೇವೆಯಲ್ಲಿ ತೊಡಗಿಸಿಕೊಂಡ ಪಡುಕೋಣೆ ಎಜ್ಯುಕೇಶನ್ & ಸ್ಪೋರ್ಟ್ಸ್ ಪ್ರಮೋಟರ್ಸ್ ಇವರ ವತಿಯಿಂದ ಅಗಲಿದ ಹಿರಿಯ ಕ್ರೀಡಾಪ್ರೋತ್ಸಾಹಕರಾದ ದಿ.ಸುರೇಶ್.ಡಿ. ಪಡುಕೋಣೆ ಮತ್ತು ದಿ.ಪ್ರಭು ಅರ್ಥರ್ ಪಿರೇರಾ ಇವರ ಸ್ಮರಣಾರ್ಥ ನಾಡ ಪಡುಕೋಣೆಯ ಗ್ರೆಗರಿ ಪ್ರೌಢಶಾಲಾ ಮೈದಾನದಲ್ಲಿ ಮಾರ್ಚ್ 24 ರಿಂದ 26 ರ ವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರರನ್ನೊಳಗೊಂಡ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಕುಂದಾಪುರ: ಈಗಾಗಲೇ ತಮ್ಮ ಮೂಲಕ ಗುರುತಿಸಿಕೊಂಡ ಚಾಲೆಂಜ್ ಕ್ರಿಕೆಟ್ ಸಂಸ್ಥೆಯು ಕ್ರೀಡೆಯ ಜೊತೆಗೆ ಅಶಕ್ತರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಕುಂದಾಪುರ ಪುರಸಭಾ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಹೇಳಿದರು.