9.5 C
London
Thursday, November 14, 2024
Homeಕ್ರಿಕೆಟ್ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಆಗಲಿದ್ದಾರ "ಪೂಜಾರ"

ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಆಗಲಿದ್ದಾರ “ಪೂಜಾರ”

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕರ್ನಾಟಕದ ಹೆಮ್ಮೆಯ, ವಿಶ್ವ ಕ್ರಿಕೆಟ್ ನ ಅಗ್ರಮಾನ್ಯ  ಆಟಗಾರನೆಂದೆ ಖ್ಯಾತಿ ಪಡೆದಿರುವ, ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ತಾಳ್ಮೆಯ ಮತ್ತು ಸಮಯೋಜಿತ ಏಕಾಗ್ರತೆಯ ಆಟದಿಂದ *”ವಾಲ್”* ಎಂದೆ ಕರೆಸಿಕೊಳ್ಳುವ ಟೀಮ್ ಇಂಡಿಯಾದ ಮಾಜಿ ಆಟಗಾರ ವಿಶ್ವದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಸೇರಿರುವ ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮೆಲ್ಲರ ಪ್ರೀತಿಯ ಹಿರಿಯ ಆಟಗಾರ *ರಾಹುಲ್ ದ್ರಾವಿಡ್* ಅವರ ನೆನಪು ಮತ್ತೆ ಮರುಕಳಿಸುವಂತಾಗಿದೆ
ಹಾಲಿ ಟೀಮ್​​ ಇಂಡಿಯಾದ ಟೆಸ್ಟ್​​ಕ್ರಿಕೆಟ್ ನ ಆರಂಭಿಕ ಆಟಗಾರ ಚೇತೇಶ್ವರ್​​​ ಪೂಜಾರ ಟೆಸ್ಟ್ ಪಂದ್ಯದ ಬೆಸ್ಟ್​​​ ಆಟಗಾರ ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಎಂದು ವಿಶ್ವದ ಹಿರಿಯ ಅಗ್ರಮಾನ್ಯ ಆಟಗಾರರೆ ಹೇಳುವಂತೆ ಚೇತೇಶ್ವರ್ ಪೂಜಾರ ತಮ್ಮ ತಾಳ್ಮೆ ಏಕಾಗ್ರತೆಯ ಆಟದಿಂದ ಟೆಸ್ಟ್ ಪಂದ್ಯಗಳ ಸ್ಫೆಷಲೀಸ್ಟ್ ಎನ್ನುವ ಮಟ್ಟಕ್ಕೆ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿದ್ದಾರೆ  ಇದನ್ನು  ಇನ್ನಿಂಗ್ಸ್​ನಿಂದ ಇನ್ನಿಂಗ್ಸ್​ಗೆ ​​ಸೌರಾಷ್ಟ್ರ ಬ್ಯಾಟ್ಸ್​ಮನ್​​ ಸಮಯೋಜಿತ ಆಟದಿಂದ ನಿರೂಪಿಸುತ್ತಲೇ ಇದ್ದಾರೆ.
‘ಆಸ್ಟ್ರೇಲಿಯಾ ಬೌಲರ್ ಗಳ  ಕೈಯಲ್ಲಿ ಈತನನ್ನು ಔಟ್​​ ಮಾಡೋದೇ ಕಷ್ಟವಾಗಿ ಹೋಗಿತ್ತು ಪೂಜಾರಾರ ತಾಳ್ಮೆ ಮನಮೋಹಕ ಆಟವನ್ನು ನೋಡಿ ಈತ ಇನ್ನೋಬ್ಬ ವಿಶ್ವ ಕ್ರಿಕೆಟ್ ನ *ರಾಹುಲ್​​ ದ್ರಾವಿಡ್​* ಎಂದು  ಹಿರಿಯ ದಿಗ್ಗಜ ಕ್ರಿಕೆಟಿಗರು ಹೇಳಿದ್ದಾರೆ
. ಆಸಿಸ್​ ಮಾಜಿ ನಾಯಕ ಮೈಕಲ್ ಕ್ಲಾರ್ಕ್
‘ಪೂಜಿ, ನೀವೋಬ್ಬ ಯುದ್ಧವೀರನಾಗಿ ಎಂದಿಗೂ ಉಳಿಯಲಿದ್ದೀರಿ‘ ಎಂದು ಹೇಳಿದರೆ.
 ಟೀಮ್ ಇಂಡಿಯಾದ ಹಿರಿಯ ಆಟಗಾರ,
ಹಾಲಿ ಟೀಮ್​ ಇಂಡಿಯಾದ ಹೆಡ್​​ ಕೋಚ್​​ ರವಿ ಶಾಸ್ತ್ರಿ
‘ಪೂಜಾರ ಚಳಿಗಾಲದಂತೆ ನಿಂತುಬಿಟ್ಟರು. 11 ಬಾರಿ ತಲೆ, ಪಕ್ಕೆಲುಬು ಮತ್ತು ಕೈಗಳಿಗೆ ಬಲವಾದ ಪೆಟ್ಟು ಬಿದ್ದರು ಪೂಜಿ  ತಂಡದ ಆಸರೆಯಾಗಿ ಗೊಡೆಯಂತೆ ನಿಂತು ಬಿಟ್ಟರು ಎಂದು ಹೇಳಿದ್ದಾರೆ
 ಅಸ್ಟ್ರೇಲಿಯಾದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ *”ಡೈಲಿ ಟೆಲಿಗ್ರಾಫ್ “* ಪೂಜಾರರನ್ನ ಹಾಡಿ ಹೋಗಳಿದೆ
ಹೌದು ಇದಿಷ್ಟೇ ಅಲ್ಲ, ಇಡೀ ವಿಶ್ವದ ದಿಗ್ಗಜ ಕ್ರಿಕೆಟರ್ಸ್​​​, ಏಕ್ಸ್​​ಪರ್ಟ್ಸ್​​​​ ಪೂಜಾರ ಇನ್ನಿಂಗ್ಸ್​ಕಂಡು ನಿಬ್ಬೆರಗಾಗಿದ್ದಾರೆ.
ಈತ ದ್ರಾವಿಡ್ ಹಾದಿಯಲ್ಲೆ ಸಾಗುತಿದ್ದಾರೆ ಈತ ಬ್ರಿಸ್ಬೇನ್​ ಮೈದಾನದಲ್ಲಿ ನ್ಯೂ ವಾಲ್​​ ನಿರ್ಮಿಸಿದ ಇನ್ನಿಂಗ್ಸ್​​ ಹಾಗಿತ್ತು. ಇನಿಂಗ್ಸ್ ನಲ್ಲಿ ಪೂಜಾರಗಳಿಸಿದ್ದು 56 ರನ್​​. ಆದ್ರೆ ಸರಾಸರಿ 140ಕ್ಕಿಂತ ಹೆಚ್ಚು ವೇಗದಲ್ಲಿ ಬೌಲಿಂಗ್​​ ಮಾಡುವ ಅಸಿಸ್​​​ ನ ವೇಗದ ಬೌಲರ್ ಗಳ ಬೆಂಕಿಯ ಉಂಡೆಯಂತಹ  ಎಸೆತಗಳಿಂದ ಪೆಟ್ಟು  ತಿಂದದ್ದು ಬರೋಬ್ಬರಿ 11 ಬಾರಿ.ಪ್ರತಿಬಾರಿ ಹೊಡೆತ ಬಿದ್ದಾಗಲು ಅಂಜದೆ ಆಡಲೆ ಬೇಕೆಂಬ ಕಿಚ್ಚಿನೊಂದಿಗೆ ಸಿಡಿದೆದ್ದ ಪೂಜಾರರ ಕೇವಲ ಇದೊಂದು ಇನ್ನಿಂಗ್ಸ್​ನಿಂದ  ಇಡೀ ವಿಶ್ವ ಇತನನ್ನು ಕೊಂಡಾಡುತ್ತಿಲ್ಲ, ಕಳೆದ 3 ಪ್ರವಾಸದಲ್ಲೂ ಟೆಸ್ಟ್​​ ಪಂದ್ಯದಲ್ಲಿ ಪೂಜಿಯ ಆಟದ ಪ್ರದರ್ಶನ ಶ್ರೇಷ್ಠ ಮಟ್ಟದಾಗಿತ್ತು. ಪ್ರತಿ ಪಂದ್ಯದಲ್ಲೂ ತಾಳ್ಮೆಯ, ಜವಾಬ್ದಾರಿಯುತ ಇನ್ನಿಂಗ್ಸ್​​​ ಕಟ್ಟಲು ವೇಗದ ಬೌಲರ್ ಗಳ ಎಸೆತವನ್ನು ತಾಳ್ಮೆಯಿಂದ ಎದುರಿಸುತ್ತಲೆ ಉತ್ತರ ಕೊಟ್ಟ  ಪೂಜಾರ ಟೆಸ್ಟ್ ಕ್ರಿಕೆಟ್ ನ ಹೆಮ್ಮೆಯ ಆಟಗಾರನಾಗಿ ಬೆಳೆಯುತ್ತಿದ್ದಾರೆ ಉತ್ತಮ ಎಸತಕ್ಕೆ ತನ್ನ
ಬ್ಯಾಟ್ ನಿಂದ ತಾಳ್ಮೆಯ ಉತ್ತರ ಕೊಡುವುದನ್ನು ಕಂಡ ವಿಶ್ವದ ಅಗ್ರಮಾನ್ಯ ಆಟಗಾರರೆ ತಲೆ ದೂಗಿದ್ದಾರೆ ಈತನ ಸಮಯೋಜಿತ ಆಟಕ್ಕೆ ಆಸಿಸ್​​​ ಅಗ್ರಕ್ರಮಾಂಕದ ಬೌಲರ್ ಗಳು ಅಲ್ಲಿಯ ತಣ್ಣನೆಯ ವಾತವರಣದಲ್ಲು ಕೂಡ ಬೇವರಿ ಬೆಂಡಾಗಿ  ಹೋಗಿದ್ದರು
*ಕಳೆದ 3 ಪ್ರವಾಸದಲ್ಲಿ ಪೂಜಾರರ ಆಟ*
ಕಳೆದ *2014-15* ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲ್ಲಿ *4* ಟೆಸ್ಟ್​​ ಪಂದ್ಯಗಳಲ್ಲಿ *472* ಎಸೆತಗಳನ್ನು ಎದುರಿಸಿದ್ದರು ಪೂಜಾರ, *2018-19* ರ ಪ್ರವಾಸದಲ್ಲಿ *1258* ಎಸೆತಗಳನ್ನು ಎದುರಿಸಿದ್ದರು. ಈ ಬಾರಿಯ ಪ್ರವಾಸದಲ್ಲಿ *154.4* ಓವರ್​ಗಳು ಅಂದ್ರೆ ಬರೋಬ್ಬರಿ *928* ಎಸೆತಗಳನ್ನು ಪೂಜಾರ ಎದುರಿಸಿದ್ದಾರೆ. ಕೇವಲ ಬಾಲ್​​ ಎದುರಿಸೋದು ಮಾತ್ರವಲ್ಲ, ಆಸ್ಟ್ರೇಲಿಯಾ ಪ್ರವಾಸದ ಸಕ್ಸಸ್​ಫುಲ್​​ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಯೂ ಪೂಜಾರರದ್ದೇ. ಕಳೆದ *3* ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ *2657* ಎಸೆತಗಳನ್ನು ಎದುರಿಸಿರೋ ಪೂಜಾರ *47.28* ರ ಸರಾಸರಿಯಲ್ಲಿ *3* ಶತಕ, *5* ಅರ್ಧಶತಕ ಸಹಿತ *993* ರನ್​ ಸಿಡಿಸಿದ್ದಾರೆ.
*ಪ್ರತಿ ಪಂದ್ಯದಲ್ಲೂ ಅಸೀಸ್ ವೇಗಿಗಳ ಏಸೆತಗಳು ದೇಹದ ಹಲವು ಭಾಗದ ಮೇಲೆ ಬಿದ್ದಾಗಲೇಲ್ಲ ನಗುಮೊಗದಿಂದಲೆ ಸ್ವೀಕರಿಸಿ ತನ್ನ ಬ್ಯಾಟ್ ನಿಂದಲೆ ತಕ್ಕ ಉತ್ತರ ಕೊಟ್ಟ ಶ್ರೇಷ್ಠ ಆಟಗಾರ ಪೂಜಿ
ಹೌದು ಪೂಜಾರ ಎದುರಿಸಿದ *2657* ಎಸೆತಗಳಲ್ಲಿ *47.28* ರ ಸರಾಸರಿಯಲ್ಲಿ ರನ್​​ ಕಲೆ ಹಾಕಿ ತಂಡಕ್ಕೆ ನೆರವಾಗಿದ್ದಾರೆ. ಇದೇ ಸಂದರ್ಭದಲ್ಲಿ ಅಸೀಸ್ ವೇಗಿಗಳ ಬೆಂಕಿ ಉಂಡೆಯಂತಹ ಎಸೆತಗಳ ಪೆಟ್ಟನ್ನೂ ತಿಂದಿದ್ದಾರೆ. ಗಂಟೆಗೆ *145* ಕ್ಕೂ ಹೆಚ್ಚಿನ  ವೇಗದಲ್ಲಿ ಬರುವ ಎಸೆತಗಳಲ್ಲಿ ಕೇಲವು ನೇರವಾಗಿ ಟೆಸ್ಟ್​​​​ ಸ್ಪೆಷಲಿಸ್ಟ್​​ ನ ದೇಹಕ್ಕೆ ಬಡಿದಿವೆ. ಸಿಡ್ನಿ ಟೆಸ್ಟ್​​ನಲ್ಲಿ ಟೀಮ್​​ ಇಂಡಿಯಾ ವಿರೋಚಿತ ಡ್ರಾಗಳಿಸಿದ ಮೇಲೆ ಸೌರವ್​​ ಗಂಗೂಲಿ ಮಾಡಿದ್ದ ಟ್ವೀಟ್​​​ ನಿಮಗೆ ನೆನಪಿರಬಹುದು. ಅಂದು ಟ್ವೀಟ್​​ ಮಾಡಿದ್ದ ಬಿಸಿಸಿಐ ಅಧ್ಯಕ್ಷ ಪೂಜಾರ ಎಷ್ಟು ಪ್ರಮುಖ ಬ್ಯಾಟ್ಸ್​​ಮನ್​ ಅನ್ನೋದು ನಿಮಗೆ ಈಗ ಮನದಟ್ಟಾಗಿರ ಬಹುದು ಎಂದಿದ್ದರು. ಇದೀಗ ಭಾರತ ಅಸೀಸ್ ನೆಲದಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿದೆ, ಇದರಲ್ಲಿ ಸೌರಾಷ್ಟ್ರ ಸೇನಾನಿಯ ಆಟವನ್ನು ಎಲ್ಲರೂ ಕೊಂಡಾಡಿದ್ದಾರೆ
ನಾನು ಟೆಸ್ಟ್​​​ ತಂಡದ ಅವಿಭಾಜ್ಯ ಅಂಗ ಅನ್ನೋದನ್ನು ಸಾಬೀತು ಪಡಿಸುತ್ತಲೆ ಪಂದ್ಯದಿಂದ ಪಂದ್ಯಕ್ಕೆ  ತಮ್ಮ ಸಮಯೋಜಿತ ಆಟದಿಂದ ಪೂಜಾರ ಸಾಬೀತು ಪಡಿಸುತ್ತಲೆ ಬಂದಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಸರಣಿಯಲ್ಲಿನ ಆಟವೆ ಸಾರಿ ಸಾರಿ ಹೇಳುತ್ತಿದೆ ಟೆಸ್ಟ್ ಕ್ರಿಕೆಟ್ ನ ಶ್ರೇಷ್ಠ ಆಟಗಾನೆಂದು,  ತನ್ನ ಟೆಸ್ಟ್ ಕ್ರಿಕೆಟ್ ನ ಪಾದಾರ್ಪಣ ಪಂದ್ಯದಲ್ಲಿ ಆಸಿಸ್​ ವಿರುದ್ಧ ಅದ್ಭುತ ಸೆಂಚುರಿ ಸಿಡಿಸಿದ ಕ್ಷಣದಿಂದ ಇಲ್ಲಿಯ ತನಕ ಹಲವು ಅವಿಸ್ಮರಣೀಯ ಇನ್ನಿಂಗ್ಸ್​ಗಳು ಪೂಜಾರರ ಬ್ಯಾಟ್​ನಿಂದ ಸಿಡಿದಿವೆ. ಈತನ ತಾಳ್ಮೆಯ ಆಟದಿಂದ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಬೆಳೆದು ನಿಲ್ಲುವುದರಲ್ಲಿ ಯಾವುದೇ ಅನುಮಾನ ವಿಲ್ಲಾ
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

1 × 4 =