ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ(ರಿ)ಬೈಂದೂರು ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ “ಕ್ರೀಡೆ ಮತ್ತು ಸಾಂಸ್ಕೃತಿಕ ಚಿಲುಮೆ” ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 20 ಶನಿವಾರ ಮತ್ತು 21 ರವಿವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆಟಗಾರರ ನಾಕೌಟ್ ಮಾದರಿಯ 60 ಗಜಗಳ ಕ್ರಿಕೆಟ್ ಪಂದ್ಯಾಟ “ಶ್ರೀ ಸೇನೇಶ್ವರ ಟ್ರೋಫಿ-2021” ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ವಿಜೇತ ತಂಡ 50,555 ನಗದು,ದ್ವಿತೀಯ ಸ್ಥಾನಿ 25,555 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ ಹಾಗೂ ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
21 ರವಿವಾರ ಸಂಜೆ 6-00 ರಿಂದ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಚಿಲುಮೆ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9611918422,7019244476, 9535285935 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು…