ಅಸಹಾಯಕ ಮನಗಳಿಗೆ ಆತ್ಮವಿಶ್ವಾಸ ತುಂಬುವ ಸ್ಪೂರ್ತಿಯ ಚಿಲುಮೆ-ಡಾ.ಗೋವಿಂದ ಬಾಬು ಪೂಜಾರಿ ಇವರಿಂದ 7 ನೇ ಮನೆ ಹಸ್ತಾಂತರ
ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಿ ನಿರುದ್ಯೋಗಿ ಗಳನ್ನು ಸ್ವಾವಲಂಬಿ ಜೀವನಕ್ಕೆ ಮುನ್ನುಗ್ಗಿಸುತ್ತಾ,ಕ್ರೀಡಾ ಪ್ರತಿಭೆಗಳಿಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮಿನುಗು ತಾರೆ.ಬಡ ಕುಟುಂಬಗಳಿಗೆ ಕಿಟ್ ಗಳನ್ನು ಹಂಚುತ್ತಿರುವ ಭರವಸೆಯ ಬೆಳಕು. ವಾಸಿಸಲು ಸೂರಿಲ್ಲದೆ ಒದ್ದಾಡುತ್ತಿದ್ದ ಅಸಹಾಯಕ ಕಣ್ಣುಗಳ ಕಂಬನಿ ಒರೆಸುವ ಸೇವಾ ರತ್ನ .ತಮ್ಮ ಶೈಕ್ಷಣಿಕ ,ಸಾಮಾಜಿಕ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಮುಖೇನ ಇದುವರೆಗೂ ಒಟ್ಟು 6 ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟು ಇದೀಗ “ಶ್ರೀ ವರಲಕ್ಷ್ಮೀ ನಿಲಯ” ಎಂಬ ತಮ್ಮ ಆಶಯದ 7 ನೇ ಮನೆಯ ಗೃಹ ಪ್ರವೇಶೋತ್ಸವವು ಮಾರ್ಚ್ 28 ಸಂಜೆ 4 ಗಂಟೆಗೆ ಬೈಂದೂರು ಆಭರಣ ಜ್ಯುವೆಲ್ಲರಿ ಬಳಿ ನಡೆಯಲಿದೆ.ಈ ಸೇವಾ ಕೈಂಕರ್ಯಕ್ಕೆ ಆರ್.ಎಸ್.ಎಸ್ ಧುರೀಣರು,
ಶ್ರೀ ರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) ಕಲ್ಲಡ್ಕ ಇದರ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಆಗಮಿಸಲಿದ್ದು,
ಮನೆಯ ಉದ್ಘಾಟನೆ ನೆರವೇರಿಸಲಿದ್ದಾರೆ.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ”* ಎಂಬ ಮಾತಿಗೆ ಉದಾಹರಣೆಯಾಗಿ ನಿಲ್ಲುವ ಡಾ.ಗೋವಿಂದ ಬಾಬು ಪೂಜಾರಿ ಇವರು ಸಮಾಜಮುಖಿ ಕೆಲಸದ ಕುರಿತು ತುಡಿತವನ್ನಿಟ್ಟುಕೊಂಡು ನಿತ್ಯವೂ ಪರರು ಏಳಿಗೆಯನ್ನೇ
ಧ್ಯೇಯವಾಗಿಸಿಕೊಂಡಿರುವ ಆದರ್ಶ ವ್ಯಕ್ತಿತ್ವ, ತಮ್ಮ ಕೆಲಸ ಕಾರ್ಯಗಳಿಂದಲೇ ಪ್ರತಿಷ್ಠಿತ ಭಾರತ ಗೌರವಕ್ಕೆ ಭಾಜನರಾಗಿರುವ ಡಾ. ಗೋವಿಂದ ಬಾಬು ಪೂಜಾರಿ ಸಮಾಜಕ್ಕೊಂದು ಸ್ಫೂರ್ತಿಯ ಕಿರಣ…