ಕಾರ್ಕಳ-ಇಲ್ಲಿನ ಗಾಂಧಿ ಮೈದಾನದಲ್ಲಿ ಏಪ್ರಿಲ್ 29 ಶುಕ್ರವಾರದಂದು ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ)ಕಾರ್ಕಳ ಹೆಬ್ರಿ ವಲಯ ಇವರ ವತಿಯಿಂದ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ನಡುವೆ ಕ್ರಿಕೆಟ್ ಪಂದ್ಯಾಟ ಜರುಗಿತು.
ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕಾಬೆಟ್ಟು ಮಹಮ್ಮದೀಯ ಜುಮ್ಮಾ ಮಸ್ಜಿದ್ ನ ಖತೀಬರಾದ ಜನಾಬ್ ಅಬ್ದುಲ್ಲ ಮದನಿ “ಕ್ರೀಡೆ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತದೆ” ಎಂದರು.”ಈ ಸಂದರ್ಭ ಬಂಡಿಮಠ ಮೂಡುಮಹಾಗಣಪತಿ ದೇವಸ್ಥಾನ ಅರ್ಚಕರಾದ ಶ್ರೀ ಗಣೇಶ್ ಭಟ್, ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ ಆತ್ಮಿಕ ನಿರ್ದೇಶಕರಾದ ವಂ|ಫಾ|ಕ್ಲೆಮೆಂಟ್ ಮಸ್ಕರೇನ್ಹಸ್ ಮತ್ತು ಸಂಘದ ಗೌರವ ಅಧ್ಯಕ್ಷರು ಗೋಪಾಲ್ ಅಂಚನ್ ಹಾಗೂ ಅಧ್ಯಕ್ಷರು ಕೋಟ ದಾಮೋದರ ಆಚಾರ್ ಕಾರ್ಕಳ ಉಪಸ್ಥಿತರಿದ್ದರು.
ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥವಾಗಿ ನಡೆದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದು,
ಅಂತಿಮವಾಗಿ ಫೈನಲ್ ನಲ್ಲಿ R.C.C ಕಾರ್ಕಳ ತಂಡ-SKPA ಕಾರ್ಕಳ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ RCC ತಂಡದ ಸುಕೇಶ್,ಉತ್ತಮ ದಾಂಡಿಗ SKPA ತಂಡದ ಪ್ರಣಾಮ್,ಉತ್ತಮ ಬೌಲರ್ ವಿಜಯ್ SKPA,R.C.C ತಂಡದ ಮಹೇಶ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ
ಮಾತನಾಡಿದ RCC ಗುತ್ತಿಗೆದಾರರ ಸಂಘ(ರಿ)ಅಧ್ಯಕ್ಷರಾದ ಕೋಟ ದಾಮೋದರ ಆಚಾರ್ ಕಾರ್ಕಳ ಮಾತನಾಡಿ “ಸಂಘದ ಸರ್ವ ಸದಸ್ಯರ ಸಹಕಾರದಿಂದ ಪಂದ್ಯಾಟ ಯಶಸ್ವಿಯಾಗಿದೆ ಮುಂದಿನ ಎಲ್ಲಾ ಯೋಜನೆಗಳಲ್ಲೂ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.ಈ ಸಂದರ್ಭ RCC ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾದ ಗೋಪಾಲ್ ಅಂಚನ್,ಉಪಾಧ್ಯಕ್ಷ ವಿಕ್ರಮ್,ಕ್ರೀಡಾ ಕಾರ್ಯದರ್ಶಿ ಗಣೇಶ್,ಶ್ರೀನಿವಾಸ್ ಜಿ.ಕೆ ಪೈ ವಿನ್ಯಾಸ್ ಇಂಜಿನಿಯರಿಂಗ್,ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಯುವ ಉದ್ಯಮಿ ಮನೋಹರ್ ಪ್ರಭು ವಿನ್ಯಾಸ್,
ಅವಿನಾಶ್.ಜಿ.ಶೆಟ್ಟಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,SKPA ವಲಯ ಅಧ್ಯಕ್ಷರಾದ ಪದ್ಮಪ್ರಸಾದ್ ಹಾಗೂ ಸುಶೀಲ್ ಕುಮಾರ್,RCC ಸಂಘದ ಕಾರ್ಯದರ್ಶಿ ಚಂದ್ರ ಆಚಾರ್ ಹಾಗೂ ಪದಾಧಿಕಾರಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು.ಪ್ರಶಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ
ಶಿವನಾರಾಯಣ ಐತಾಳ್ ಕೋಟ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದರೆ,ಪಂದ್ಯಾಟದ ನೇರ ಪ್ರಸಾರ ಸ್ಪೋರ್ಟ್ಸ್ ಕನ್ನಡ ಟಿ.ವಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.ಮಂಗಳೂರಿನ ಆಕರ್ಷಕ ಗೊಂಬೆ ವೇಷ ನೆರೆದ ಕ್ರೀಡಾ ಪ್ರೇಕ್ಷಕರನ್ನು ರಂಜಿಸಿತು.