ಉಡುಪಿ-1978-79 ರಲ್ಲಿ ಶಿರ್ವದಲ್ಲಿ ಸ್ಥಾಪನೆಯಾದ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನ ಸಕ್ರಿಯ, ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಸುಮಾರು 40 ವರ್ಷದ ಸುಧೀರ್ಘ ಅವಧಿಗೆ, ಉಡುಪಿಯ ಸೈಂಟ್ ಮೇರೀಸ್ ಕನ್ನಡ ಮೀಡಿಯಂ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜನಪ್ರಿಯರಾಗಿದ್ದ ಡೇವಿಡ್ ಮಥಾಯಸ್ ರವರು ನಿನ್ನೆ ನಮ್ಮನ್ನು ಅಗಲಿದ್ದಾರೆ.
1979 ರಿಂದ ಸರಿ ಸುಮಾರು 13,14 ವರುಷ, ಶಿರ್ವ ಬ್ಲೂ ಸ್ಟಾರ್ ತಂಡದ ಆಡುವ ಬಳಗದಲ್ಲಿ, ಸದಾ ಗುರುತಿಸಿಕೊಂಡಿದ್ದ ,ಒಬ್ಬ ಉತ್ತಮ ಸವ್ಯಸಾಚಿ ಡೇವಿಡ್. ಒಂದೇ ಶೈಲಿಯಲ್ಲಿ ಆಫ್ ಮತ್ತು ಲೆಗ್ ಸ್ಪಿನ್ನರ್ ಬೌಲರ್ ಆಗಿದ್ದ ಡೇವಿಡ್, ಎರಡೂ ಕೈಗಳಿಂದ ಏಕ ರೀತಿಯಲ್ಲಿ ಬೌಲಿಂಗ್ ನಡೆಸುವ, ಅಪರೂಪದ ಪ್ರಾವಿಣ್ಯತೆ ಅವರು ಹೊಂದಿದ್ದರು.ಉತ್ತಮ ಬ್ಯಾಟಿಂಗ್ ನಿಂದ, ತಂಡದಲ್ಲಿ ಆಲ್ ರೌಂಡರ್ ಆಗಿಯೂ ಗುರುತಿಸಿ ಕೊಂಡಿದ್ದರು. ದಿನಾ 7-8 ಕಿಲೋಮೀಟರ್ ಸೈಕಲ್ ತುಳಿದು ಪ್ರಾಕ್ಟೀಸ್ ಗೆ ಬರುತ್ತಿದ್ದ, ಒಬ್ಬ ಅಪ್ಪಟ ಕ್ರಿಕೆಟ್ ಪಟು, ಪ್ರೇಮಿ.
ದೈಹಿಕ ಶಿಕ್ಷಕರಾಗಿಯೂ ಅವರು ಉಡುಪಿ ಪರಿಸರದಲ್ಲಿ ಜನಪ್ರಿಯತೆ ಗಳಿಸಿದ್ದರು.

ಪಾರ್ಥಿವ ಶರೀರದ ಅಂತಿಮ ಯಾತ್ರೆ ಮೃತರ ಕುತ್ಯಾರ್ ನಿವಾಸದಿಂದ ಮಧ್ಯಾಹ್ನ 3:30 ಗಂಟೆಗೆ ಪ್ರಾರಂಭವಾಗಿ ಲೇಡಿ ಆಫ್ ಹೆಲ್ತ್ ಚರ್ಚ್ ಶಿರ್ವಕ್ಕೆ ಅಂತ್ಯಕ್ರಿಯೆ ಗಾಗಿ ತೆರಳುತ್ತದೆ.

ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಪ್ರಾರ್ಥಿಸುತ್ತೇವೆ.

ಮಾಹಿತಿ ಕೃಪೆ-ಸದಾನಂದ ಶಿರ್ವ(ಬ್ಲೂಸ್ಟಾರ್ ಶಿರ್ವ