ಸ್ಯಾಂಡಿ ಆರ್ಭಟ-ಮೈಟಿಗೆ ನ್ಯಾಶ್-2020 ಕಿರೀಟ
ನ್ಯಾಶ್ ಬೆಂಗಳೂರು ತಂಡದ ಆಶ್ರಯದಲ್ಲಿ ಮಲ್ಲೇಶ್ವರಂ 18 ನೇ ಕ್ರಾಸ್ ಮೈದಾನದಲ್ಲಿ
ಮೂರು ದಿನಗಳ ಕಾಲ ನಡೆದ ನ್ಯಾಶ್ ಟ್ರೋಫಿಯನ್ನು ಮೈಟಿ ಬೆಂಗಳೂರು ತಂಡ ಗೆದ್ದುಕೊಂಡಿದೆ.
ರಾಜ್ಯದ ಬಲಿಷ್ಠ 20 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ
ಲೀಗ್ ಹಂತದ ಹೋರಾಟಗಳ ಬಳಿಕ
2 ರೋಚಕ ಉಪಾಂತ್ಯ ಪಂದ್ಯಗಳಲ್ಲಿ
ಎಮ್.ಬಿ.ಸಿ.ಸಿ ತಂಡ ರಿಯಲ್ ಫೈಟರ್ಸ್ ಉಡುಪಿ ಯನ್ನು,
ಮೈಟಿ ಬೆಂಗಳೂರು ಎಮ್.ಎಲ್.ಸಿ ತಂಡವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಬಿ.ಸಿ.ಸಿ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತ್ತು.ಪೈಪೋಟಿಯ ಗುರಿಯನ್ನು ಬೆಂಬತ್ತುವ ಹಂತದಲ್ಲಿ ಸಿಡಿದ ಮೈಟಿಯ ಸ್ಯಾಂಡಿ ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕ 19 ಎಸೆತಗಳಲ್ಲಿ 41 ರನ್ ಸಿಡಿಸಿ
ಕೇವಲ 6 ಓವರ್ ಗಳಲ್ಲಿ ಗುರಿ ತಲುಪಿ ಎದುರಾಳಿಗಳ ಮೇಲೆ ಅಧಿಕಾರಯುತ ಗೆಲುವು ಸಾಧಿಸಿದರು.
ಪ್ರಥಮ ಪ್ರಶಸ್ತಿ ವಿಜೇತ ಮೈಟಿ ಬೆಂಗಳೂರು 2 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ತಂಡ ಎಮ್.ಬಿ.ಸಿ.ಸಿ1 ಲಕ್ಷ ನಗದು
ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಬಹುಮಾನವಾಗಿ
ಫೈನಲ್ ನ ಪಂದ್ಯಶ್ರೇಷ್ಟ,ಸರಣಿ ಶ್ರೇಷ್ಟ ಪ್ರಶಸ್ತಿಗಳೆರಡೂ ಮೈಟಿಯ ಸ್ಯಾಂಡಿ,ಬೆಸ್ಟ್ ಬ್ಯಾಟ್ಸ್‌ಮನ್ ಎಮ್.ಎಲ್.ಸಿ ತಂಡದ ಗೌರಿ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎಮ್.ಬಿ.ಸಿ.ಸಿ ಯ ವಿಮಲ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನ್ಯಾಶ್ ತಂಡದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು.
ಪಂದ್ಯಾವಳಿಯ ನೇರ ಪ್ರಸಾರವನ್ನು
M.Sports ಬಿತ್ತರಿಸಿದರೆ,
ವೀಕ್ಷಕ ವಿವರಣೆಯಲ್ಲಿ ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಪ್ರಶಾಂತ್ ಅಂಬಲಪಾಡಿ,ವಿನಯ್ ಉದ್ಯಾವರ ಹಾಗೂ ಗಿರಿಧರ್ ಕೆ.ಆರ್.ಪುರಂ ಸಹಕರಿಸಿದರು.
ಆರ್.ಕೆ.ಆಚಾರ್ಯ ಕೋಟ.