ವೇಟ್‍ಲಿಫ್ಟಿಂಗ್‌ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ ನಾಲ್ಕಕ್ಕೆ ಏರಿಕೆ ಕಂಡಿದೆ.
ಮಹಿಳೆಯರ 55 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ ಭಾರ ಎತ್ತಿದ ಬಿಂದ್ಯಾರಾಣಿ ದೇವಿ ರಜತ ಪದಕಕ್ಕೆ ಮುತ್ತಿಕ್ಕಿದರು. ಇದೇ ವಿಭಾದಲ್ಲಿ ಒಟ್ಟು 203 ಕೆ.ಜಿ ಭಾರ ಎತ್ತಿದ ನೈಜೀರಿಯಾದ ಒಲರಿನೊಯ್ ಚಿನ್ನದ ಪದಕ ಗೆದ್ದರು. ಬಿಂದ್ಯಾರಾಣಿ ಬೆಳ್ಳಿ ಪದಕ ಸಾಧನೆಯೊಂದಿಗೆ ಭಾರತ ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ವೇಟ್‍ಲಿಫ್ಟಿಂಗ್ ವಿಭಾಗ ಒಂದರಲ್ಲೇ 4 ಪದಕವನ್ನು ಭಾರತ ಗೆದ್ದಿದೆ. ನಿನ್ನೆ ಮಹಿಳೆಯರ 44 ಕೆಜಿ ವಿಭಾಗದ ವೇಟ್‍ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದರು.
ಪುರುಷರ ವಿಭಾಗದಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 55 ಕೆಜಿ ವಿಭಾಗದ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 248 ಕೆಜಿ ಭಾರ ಎತ್ತುವ ಮೂಲಕ 21 ವರ್ಷದ ಸಂಕೇತ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಭಾರತ ಒಂದೇ ದಿನ ನಾಲ್ಕು ಪದಕ ಗೆದ್ದು ಪದಕ ಬೇಟೆ ಮುಂದುವರಿಸಿದೆ. ಪದಕ ಗೆದ್ದ ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.