ಕೆ.ಟಿ.ಪಿ.ಎಲ್ 5 ನೇ ಪಂದ್ಯದಲ್ಲಿ ನಾಗಾ ಇಲೆವೆನ್,ಗುರು ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

ನಾಗಾ ಇಲೆವೆನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತ್ತು.ಮೊದಲು ಬ್ಯಾಟಿಂಗ್ ನಡೆಸಿದ
ಗುರು ಕ್ರಿಕೆಟರ್ಸ್ ನ ಸ್ಪೋಟಕ ಆರಂಭಿಕ ಆಟಗಾರರಾದ ಅಶೋಕ್ ಪಿಳ್ಳೆ 18,ವಿನೋದ್ 16 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 55 ರನ್ ಕಲೆಹಾಕಿತ್ತು.

ನಾಗಾ ಇಲೆವೆನ್ ತಂಡ ಕೇವಲ 5 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು.29 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್ ಗೆ ಆಗಮಿಸಿದ ಸೋನು ಪಡುಬಿದ್ರಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.ಕೊನೆಯ ಹಂತದಲ್ಲಿ 6 ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಗಳ ಸಹಿತ 21 ರನ್ ಸಿಡಿಸಿ ಸೋಲಿನ ಸುಳಿಯಲ್ಲಿ ಸಿಲುಕಿದ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ ಸೋನು ಪಡುಬಿದ್ರಿ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು.