ಕೋಟ ರಾಮಕೃಷ್ಣ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ
ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಟಗಾರರಿಗೆ ಹನುಮಂತೇಗೌಡ ಮುನೇಶ್ವರ ಪಾಳ್ಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-2021 ಪ್ರಶಸ್ತಿಯನ್ನು ಗಂಗೊಂಡನಹಳ್ಳಿ ರಘುನಾಥ್ ಮಾಲೀಕತ್ವದ ಆರ್.ಸಿ.ಜಿ ತಂಡ ಜಯಿಸಿದೆ.
8 ಪ್ರತಿಷ್ಠಿತ ಫ್ರಾಂಚೈಸಿಗಳ ಲೀಗ್ ಹಂತದ ರೋಚಕ ಹಣಾಹಣಿಯ ಬಳಿಕ ಅಂತಿಮವಾಗಿ ಫೈನಲ್ ನಲ್ಲಿ ಆರ್.ಸಿ.ಜಿ, ಬೈಲಪ್ಪನಪಾಳ್ಯ ಬುಲ್ಸ್ ತಂಡವನ್ನು ಸೋಲಿಸಿ 1.5 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಎಮ್.ಎಮ್.ಸೂಪರ್ ಕಿಂಗ್ಸ್ ತೃತೀಯ
ಮತ್ತು ರೆಡ್ ಬುಲ್ಸ್ ಮಾದಾವರ ಚತುರ್ಥ ಬಹುಮಾನಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಟೂರ್ನಮೆಂಟ್ ನ ಉತ್ತಮ ಬ್ಯಾಟ್ಸ್‌ಮನ್ ಎಮ್.ಎಮ್.ಸೂಪರ್ ಕಿಂಗ್ಸ್ ನ ಯಶು,ಆರ್.ಸಿ.ಜಿ ತಂಡದ ನಾಗರಾಜು ಉತ್ತಮ ಬೌಲರ್ ಉಡುಗೊರೆ ರೂಪದಲ್ಲಿ ಸ್ಮಾರ್ಟ್ ವಾಚ್
ಮತ್ತು ಸರಣಿಯುದ್ದಕ್ಕೂ ಶ್ರೇಷ್ಠ ಸರ್ವಾಂಗೀಣ ನಿರ್ವಹಣೆ ನೀಡಿದ ಬೈಲಪ್ಪನಪಾಳ್ಯ ಬುಲ್ಸ್ ತಂಡದ ಮನು ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ದುಬಾರಿ ಸೈಕಲ್ ಉಡುಗೊರೆಯಾಗಿ ಪಡೆದರು.
ರಾಜ್ಯ ಮಟ್ಟದ ಕಾಮೆಂಟೇಟರ್ ಗಳಾದ ರಾಘು ಮಟಪಾಡಿ,ಅಫ್ಜಲ್ ಕೊಪ್ಪ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದರೆ,M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರಪ್ರಸಾರ ಹಾಗೂ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿದರು.