ಕೆ.ಟಿ.ಪಿ.ಎಲ್ 10 ನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು, ಗುರು ಕ್ರಿಕೆಟರ್ಸ್ ವಿರುದ್ದ 9 ರನ್ ಗಳ ಗೆಲುವು ಸಾಧಿಸಿದೆ.
ಮಟ್ಕಲ್ ತುಮಕೂರು ಮೊದಲು ಬ್ಯಾಟಿಂಗ್ ನಡೆಸಿ,ರಾಜಾ ಸಾಲಿಗ್ರಾಮ 25 ಮತ್ತು ಫಹಾದ್ 15 ರನ್ ಗಳ ನೆರವಿನಿಂದ ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 58 ರನ್ ಪೇರಿಸಿತ್ತು.
ಗುರು ಕ್ರಿಕೆಟರ್ಸ್ ತಂಡದ ಪರವಾಗಿ ಸ್ಯಾಂಡಿ ಮತ್ತು ಸಂದೀಪ ಪುಂಜಾಲಿ ತೀವ್ರ ಪ್ರತಿರೋಧದ ಹೋರಾಟ ನೀಡಿದರೂ,ಮಟ್ಕಲ್ ಆಲ್ರೌಂಡರ್ ವಿತೇಶ್ ಅತ್ಯುತ್ತಮ ಬೌಲಿಂಗ್ ಸಂಘಟಿಸಿ ಗುರು ಕ್ರಿಕೆಟರ್ಸ್ ನ ಅಮೂಲ್ಯ 3 ವಿಕೆಟ್ ಉರುಳಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು.
ವಿತೇಶ್ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.