ಕೆ.ಟಿ.ಪಿ.ಎಲ್ ನ 12 ನೇ ಪಂದ್ಯದಲ್ಲಿ ನದೀಮ್ ಅಖ್ತರ್ ಸಾರಥ್ಯದ ಎಮ್.ಕೆ.ಎಸ್ ಕೋಲಾರ,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸಿ ಸತತ 3 ನೇ ಜಯ ದಾಖಲಿಸಿ ಕೆ.ಟಿ.ಪಿ.ಎಲ್ ನ ಬಲಿಷ್ಠ ತಂಡವಾಗಿ ಮುನ್ನುಗ್ಗುತ್ತಿದೆ.
ತ್ರಿಶೂಲ್ ಸೇನಾ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಗಿಲ್ಲಿ 15,ಮೊಹ್ಸಿನ್ 11 ರನ್ ನೆರವಿನಿಂದ ನಿಗದಿತ 8 ಓವರ್ ಗಳಲ್ಲಿ 48 ರನ್ ಕಲೆ ಹಾಕಿತ್ತು.
ಗುರಿ ಬೆನ್ನತ್ತುವ ಭರದಲ್ಲಿ ಎಮ್.ಕೆ.ಎಸ್ ಆರಂಭಿಕ ಕ್ರಮಾಂಕದ ಆಟಗಾರರ ವಿಕೆಟ್ ಲಗುಬಗನೆ ಕಳೆದುಕೊಂಡ ಬಳಿಕ,ಅಂತಿಮ ಹಂತದಲ್ಲಿ
ಕ್ರೀಸ್ ಗೆ ಆಗಮಿಸಿದ ಮಹೇಶ್ ಭರ್ಜರಿ 2 ಸಿಕ್ಸರ್ ಗಳ ನೆರವಿನಿಂದ 18 ರನ್ ಸಿಡಿಸಿದ ಪರಿಣಾಮ
ಎಮ್.ಕೆ.ಎಸ್ ಕೋಲಾರ 5 ವಿಕೆಟ್ ಗಳ ಗೆಲುವು ಸಾಧಿಸಿದೆ.
ಮಹೇಶ್ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.