ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ಕೆ.ಟಿ.ಪಿ.ಎಲ್ ನಿರ್ಣಾಯಕ ಹಂತದ 3 ಪಂದ್ಯಗಳು ಬಾಕಿ ಇರುವಾಗಲೇ ಭಾರಿ ಗಾಳಿ,ಮಳೆಗೆ ಪಂದ್ಯಾಟಕ್ಕೆ ಅಡ್ಡಿಯಾಗಿದ್ದು,ನಿರ್ಣಾಯಕ ಹಂತದ ಉಳಿದ ಪಂದ್ಯಗಳನ್ನು ಏಪ್ರಿಲ್ 24 ಕ್ಕೆ ಮುಂದೂಡಲಾಗಿದೆ.
ವರುಣನ ಅವಕೃಪೆಯ ನಡುವೆಯೂ ಒಂದು ವಾರಗಳ ಕಾಲ ಪಂದ್ಯಾಟ ಸಾಗಿತ್ತು.ಶುಕ್ರವಾರ ಮತ್ತು ಶನಿವಾರದಂದು ಆದಿತ್ಯ ಗ್ಲೋಬಲ್ ಹುಲ್ಲು ಹಾಸಿನ ಅಂಕಣದಲ್ಲಿಯೂ ಲೀಗ್ ಪಂದ್ಯಗಳನ್ನು ಆಯೋಜಿಸಿದ್ದರು.
ಕೆ.ಟಿ.ಪಿ.ಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ
ಮಟ್ಕಲ್ ತುಮಕೂರು,ಶಿವಮೊಗ್ಗದ ರಾಕರ್ಸ್
ರಾಗಿಗುಡ್ಡ ತಂಡವನ್ನು ಸೋಲಿಸಿ ಫೈನಲ್ ತಲುಪಿತು.
ತದ ನಂತರ ಸುರಿದ ಮಳೆ,ಗಾಳಿಗೆ ಪಂದ್ಯಾಟ ಸ್ಥಗಿತಗೊಂಡಿತು.
ಕೆ.ಟಿ.ಪಿ.ಎಲ್ ನ 1 ಎಲಿಮಿನೇಟರ್,ಕ್ವಾಲಿಫೈಯರ್ 2 ಮತ್ತು ಫೈನಲ್ ಬಾಕಿ ಉಳಿದರೆ, ಚಾಂಪಿಯನ್ಸ್ ಲೀಗ್ ನ ಕ್ವಾಲಿಫೈಯರ್ 2,ಫೈನಲ್ ಪಂದ್ಯ ಬಾಕಿ ಉಳಿದಿವೆ.ಈ ಎಲ್ಲಾ 5 ಪಂದ್ಯಗಳು ಏಪ್ರಿಲ್ 24 ರವಿವಾರದಂದು ನಡೆಸಲಾಗುವುದೆಂದು ಆಯೋಜಕರು ಪ್ರಕಟಿಸಿದ್ದಾರೆ.