ರಾಜ್ಯ ಸರಕಾರದ ತೋಟಗಾರಿಕೆ ಮತ್ತುಯೋಜನೆ,ಕಾರ್ಯಕ್ರಮ ಸಂಯೋಜನೆ,ಸಾಂಖ್ಯಿಕ ಹಾಗೂ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ ಇವರ ನೇತೃತ್ವದಲ್ಲಿ,ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್,
ಜೆ.ಪಿ.ಪಾರ್ಕ್ ವಾರ್ಡ್ ನಂ 17 ಬಿ.ಜೆ.ಪಿ ಮುಖಂಡರಾದ ಶ್ರೀಮತಿ ಸುನಂದಾ ಬೋರೇಗೌಡ ಮತ್ತು ಮಲ್ಲೇಶ್ವರ ವಾರ್ಡ್ 45 ಮಾಜಿ ಸದಸ್ಯರಾದ ಶ್ರೀ.ಎನ್.ಜೈಪಾಲ್ ಇವರೆಲ್ಲರ ಸಹಕಾರ,ಸಹಯೋಗದೊಂದಿಗೆ,ಹಾಲಿಡೇ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ,ಅಗಲಿದ ಹಿರಿಯ ಆಟಗಾರರಾದ ಜಗದೀಶ್ ನಾಯ್ಡು,ನರಸಿಂಹ ಮೂರ್ತಿ, ಮೆರಿಯನ್ ಮತ್ತು ಗಿರೀಶ್ ಇವರ ಸ್ಮರಣಾರ್ಥ ಜೆ.ಎಂ.ಎಂ.ಮೆಮೋರಿಯಲ್ ಕಪ್-2022 ಆಯೋಜಿಸಲಾಗಿದೆ.
ಜನವರಿ 8 ಮತ್ತು 9 ರಂದು ಮತ್ತಿಕೆರೆಯ ಜೆ.ಪಿ.ಪಾರ್ಕ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿದೆ.
M Sports ಪಂದ್ಯಾವಳಿಯ ನೇರಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.