11 C
London
Sunday, December 1, 2024
Homeಕ್ರಿಕೆಟ್ಬೆಂಗಳೂರು-ದಾಸರಹಳ್ಳಿ ಪ್ರೀಮಿಯರ್ ಲೀಗ್-2021 ಫೆಬ್ರವರಿ 12,13 ಮತ್ತು 14 ರಂದು

ಬೆಂಗಳೂರು-ದಾಸರಹಳ್ಳಿ ಪ್ರೀಮಿಯರ್ ಲೀಗ್-2021 ಫೆಬ್ರವರಿ 12,13 ಮತ್ತು 14 ರಂದು

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕೆಂಪೇಗೌಡ ಯುವಕರ ಸಂಘ ಹಾಗೂ ಜಯ ಕರ್ನಾಟಕದ ವತಿಯಿಂದ ದಾಸರಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ “ದಾಸರಹಳ್ಳಿ ಪ್ರೀಮಿಯರ್ ಲೀಗ್-2021” ಪಂದ್ಯಾಕೂಟ ಆಯೋಜಿಸಲಾಗಿದೆ.
ಫೆಬ್ರವರಿ 12,13 ಮತ್ತು 14 ರಂದು ಬಾಗಲಗುಂಟೆಯ ಎಂ.ಇ.ಐ ಆಟದ ಮೈದಾನದಲ್ಲಿ ಈ ಪಂದ್ಯಾಕೂಟ ನಡೆಯಲಿದ್ದು ದಾಸರಹಳ್ಳಿ ಪರಿಸರದ ಆಟಗಾರರನ್ನೊಳಗೊಂಡ 10 ತಂಡಗಳು ಭಾಗವಹಿಸಲಿದೆ.
ತಂಡಗಳ ವಿವರ ಈ ಕೆಳಗಿನಂತಿದೆ.
1)ಕೆ.ಪಿ.ಸಿ‌.ಸಿ ಸದಸ್ಯರು,ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಪಿ.ಎನ್.ಕೃಷ್ಣಮೂರ್ತಿ(ಕಿಟ್ಟಿ)ಯವರ ಸಾರಥ್ಯದ ಪಿ.ಎನ್‌.ಕೆ‌ ಇಲೆವೆನ್.
2)ರಂಗಣ್ಣ ಸವಿನೆನಪಿನ “ರಂಗ ಇಲೆವೆನ್”
3)ಚೇತು ಇಲೆವೆನ್
4)ಆ್ಯಾಕ್ಟಿವ್ ಫಿಟ್ನೆಸ್
5)ಸ್ನೇಹಜೀವಿ ಕ್ರಿಕೆಟರ್ಸ್
6)ಚಿನ್ನು ಇಲೆವೆನ್
7)ಸಿಂಪಲ್ ಸ್ಟ್ರೈಕರ್ಸ್
8)ಸೂಪರ್ ಸಿಕ್ಸರ್ಸ್
9)ಗುರು ಇಲೆವೆನ್.
10)ಸತೀಶ್ & ಜೆ.ಪಿ‌ ಇಲೆವೆನ್.
ದಾಸರಹಳ್ಳಿ ಪ್ರೀಮಿಯರ್ ಲೀಗ್ ಪ್ರಶಸ್ತಿ ವಿಜೇತ ತಂಡ 3,33,333 ನಗದು,ದ್ವಿತೀಯ ಸ್ಥಾನಿ 2,22,222 ನಗದು ಹಾಗೂ ತೃತೀಯ ಸ್ಥಾನಿ 66,666 ನಗದು ಬಹುಮಾನದ ಜೊತೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಬಹುಮಾನಗಳ ಜೊತೆಗೆ ಸರಣಿಶ್ರೇಷ್ಟ ಪ್ರಶಸ್ತಿ ಪಡೆದ ಆಟಗಾರ ದುಬಾರಿ ಬೆಲೆಯ ದ್ವಿಚಕ್ರ ವಾಹನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ಪಂದ್ಯಾಕೂಟದ ಉದ್ಘಾಟನಾ ಸಮಾರಂಭಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕರಾದ ಸಿಂಪಲ್ ಸುನಿ ಹಾಗೂ ಜಯಕರ್ನಾಟಕ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎನ್.ಜಗದೀಶ್ ರವರು ಆಗಮಿಸಲಿದ್ದು,ಪ್ರಸಿದ್ಧ ಚಲನಚಿತ್ರ ನಟರಾದ ಡಾಲಿ ಧನಂಜಯ್ ಗೋಲ್ಡನ್ ಸ್ಟಾರ್ ಗಣೇಶ್,ನಟಿ ಆಶಿಕಾ ರಂಗನಾಥ್ ಉಪಸ್ಥಿತಿ ಪಂದ್ಯಾಕೂಟದ ಮೆರುಗನ್ನು ಹೆಚ್ಚಿಸಲಿದೆ.
M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ,ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಅಂಬಲಪಾಡಿ ಹಾಗೂ ಹಿರಿಯ ಕಾಮೆಂಟೇಟರ್ ವಿನಯ್ ಉದ್ಯಾವರ ಇವರು ವೀಕ್ಷಕ ವಿವರಣೆಯಲ್ಲಿ ಸಹಕರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

10 − five =