ಕ್ರೀಡಾ ಮತ್ತು ಶೈಕ್ಷಣಿಕ ಕ್ಷೇತ್ರದ ಹರಿಕಾರ ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ,ಐತಿಹಾಸಿಕ ಚಾಂಪಿಯನ್ಸ್ ಲೀಗ್- ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ಏಪ್ರಿಲ್ 11 ರಿಂದ 17 ರ ತನಕ ಬೆಂಗಳೂರು ಮಾದವಾರ ನೈಸ್ ಗ್ರೌಂಡ್ ನಲ್ಲಿ ನಡೆಯಲಿದ್ದು,ಚಾಂಪಿಯನ್ಸ್ ಲೀಗ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಇಂದು ಸಂಜೆ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ಎಸ್.ಆರ್.ವಿಶ್ವನಾಥ್ ರವರು ವಹಿಸಲಿದ್ದು,
ಟೂರ್ನಮೆಂಟ್ ನ ಪ್ರಾಯೋಜಕರಾದ ಬುಲೆಟ್ ಲಾಜಿಸ್ಟಿಕ್ ನ ಸಿ.ಇ.ಓ ಶ್ರೀ.ಬಿಜು ಜೇಕಬ್ ರವರು ಉದ್ಘಾಟಿಸಲಿದ್ದಾರೆ.
ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ದಾಸನಪುರ ಹೋಬಳಿಯ ಪ್ರತಿಷ್ಠಿತ 10 ಫ್ರಾಂಚೈಸಿಗಳು ಸೆಣಸಾಡಲಿದ್ದು, ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ನಾರಾಯಣ ಬಾಬು ಮಾಲೀಕತ್ವದ ಜೆ.ಬಿ.ಸಿ.ಸಿ
2)ಗೋವಿಂದರಾಜ್ ಮಾಲೀಕತ್ವದ ಗೋಕುಲ ಕ್ರಿಕೆಟರ್ಸ್
3)ಗಂಗಾಧರ್ ಮಾಲೀಕತ್ವದ ಹೆಚ್.ಜಿ.ಪಿ ವಾರಿಯರ್ಸ್
4)ಡಿ.ಸಿ.ಗೌಡ್ರು ಮಾಲೀಕತ್ವದ ಡಿ.ಸಿ.ಸೋಲ್ಜಿಯರ್ಸ್
5)ಚೇತನ್ ಮಾಲೀಕತ್ವದ ಶಾರದಾಂಬಾ ಸ್ಟ್ರೈಕರ್ಸ್
6)ಸೋಮಶೇಖರ್ ಮಾಲೀಕತ್ವದ ಎಮ್.ಬಿ.ಡಿ ವಿ.ಜಿ.ಜೆ ಜಾಗ್ವರ್ಸ್
7)ಜಿ.ಜೆ.ಮೂರ್ತಿ ಮಾಲೀಕತ್ವದ ಜಿ.ಜೆ.ಆರ್ಮಿ
8)ಭರತ್ ಮಾಲೀಕತ್ವದ ತ್ರಿಶೂಲ್ ಸೇನಾ
9)ಜಗದೀಶ್ ಮಾಲೀಕತ್ವದ ಮೆಮ್ಮಿ ಸ್ಪೋರ್ಟ್ಸ್ ಕ್ಲಬ್
10)ಮಂಜುನಾಥ್ ಮಾಲೀಕತ್ವದ ಕ್ರಿಕೆಟ್ ನಕ್ಷತ್ರ.