ಕೆ.ಟಿ.ಪಿ.ಎಲ್ 11 ನೇ ಪಂದ್ಯದಲ್ಲಿ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್,ಕ್ರಿಕೆಟ್ ನಕ್ಷತ್ರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಕ್ರಿಕೆಟ್ ನಕ್ಷತ್ರ ಮೊದಲು ಬ್ಯಾಟಿಂಗ್ ನಡೆಸಿ,ಧೀರಜ್ ಅಲೆವೂರು 10,ಹಾಲಪ್ಪ 9 ರನ್ ನೆರವಿನಿಂದ 8 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 43 ರನ್ ಪೇರಿಸಿತ್ತು.
ಸುಲಭದ ಗುರಿಯನ್ನು ಬೆನ್ನತ್ತಿದ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ನ ಆರಂಭಿಕ ಆಟಗಾರ ಅಜಿತ್ ಗಾಣಿಗ ಪವರ್ ಫುಲ್ ಹೊಡೆತಗಳ ಮೂಲಕ 13 ಎಸೆತಗಳಲ್ಲಿ 29 ರನ್ ಸಿಡಿಸಿದ ಫಲವಾಗಿ 4.4 ಓವರ್ ಗಳಲ್ಲಿ ಗುರಿಯನ್ನು ತಲುಪಿತ್ತು.
ಅರ್ಹವಾಗಿ ಅಜಿತ್ ಗಾಣಿಗ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.