Wega west end Arabia,Casa Arabia ಇವರ ಪ್ರಾಯೋಜಕತ್ವದಲ್ಲಿ,ಕ್ರೀಡಾ ಪ್ರೋತ್ಸಾಹಕರು,ಮಂಗಳೂರು ಮೂಲದ ನಿಹಾಲ್ ಮರ್ಫ್ಯುಖಾನ್,ಶಫಿ ಕಂಬಳಬೆಟ್ಟು,ಆಶಿಫ್ ಡೆರ್ಬಿ,ಅಶ್ರಫ್ ಕೊಳ್ಪೆ,ತೌಸೀಫ್,ನೌಫಾಲ್ ಚತುರ ಸಂಘಟನೆಯಲ್ಲಿ ಹಾಗೂ ರಿಯಾಜ್ ಬಿ.ಕೆ.,ಸಲಾಂ,ಶಮೀರ್ ಮೊಯ್ದೀನ್,ರಶೀದ್ ಇಡ್ರೀಸ್ ಇವರೆಲ್ಲರ ಮಾರ್ಗದರ್ಶನದಲ್ಲಿ ಡಿಸೆಂಬರ್ 18 ಹಾಗೂ 25 ರಂದು ಬಹ್ರೇನ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ಬಹ್ರೇನ್ ಚಾಂಪಿಯನ್ಸ್ ಲೀಗ್ B.B.L-2020 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಸೌಹಾರ್ದತೆಯ ಪ್ರತೀಕವಾಗಿ ನಡೆಯಲಿರುವ ಬಹ್ರೇನ್ ನ ಈ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಲಿದ್ದು ತಂಡಗಳ ವಿವರ ಈ ಕೆಳಗಿನಂತಿದೆ.
1)ಮಂಗಳೂರು ಬಾಯ್ಸ್
2)ಪಿಚ್ ಸ್ಮ್ಯಾಶರ್ಸ್
3)ಬಹ್ರೇನ್ ಬೌನ್ಸರ್ಸ್
4)ಡೆಸರ್ಟ್ ಸ್ಟ್ರೈಕರ್ಸ್
5)ರಿಫಾ ಕ್ರಿಕೆಟ್ ಕ್ಲಬ್
6)ಜಮಾನ್ ಬಾಯ್ಸ್ ಬಹ್ರೇನ್
ಬಿ.ಬಿ.ಎಲ್ ಚಾಂಪಿಯನ್ಸ್ ಲೀಗ್-2020 ಪಂದ್ಯಾವಳಿಯಲ್ಲಿ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದ್ದು,ಕ್ರಿಕ್ ಹೀರೋಸ್ ಸ್ಕೋರಿಂಗ್ ಪಾರ್ಟ್ನರ್,ವೆನ್ಯೂ ಪಾರ್ಟ್ನರ್ ಗೋಲ್ಡನ್ ಈಗಲ್ ಹೆಲ್ತ್ ಕ್ಲಬ್ ಹಾಗೂ B-Human ಸಂಸ್ಥೆ ಸಹಕಾರದೊಂದಿಗೆ ನಡೆಯಲಿದೆ.