ವರ್ಷಿಣಿ ಯೋಗ ಎಜ್ಯುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಯೂತ್ ಸರ್ವಿಸ್ ಇವರು ಏಪ್ರಿಲ್ 15 ರಂದು ಗೋವಾದಲ್ಲಿ ಆಯೋಜಿಸಿದ 8 ನೇ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 10 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸುಳ್ಯದ ಅವನಿ.ಎಂ.ಎಸ್ ಪ್ರಥಮ ಸ್ಥಾನ ಗಳಿಸುವ ಮೂಲಕ ಜೂನ್ ನಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರು ರೇಶ್ಮಾ ಕೆ.ಎಸ್ ಮತ್ತು ಶಶಿಧರ್ ಎಂ.ಜೆ ಇವರ ಸುಪುತ್ರಿಯಾಗಿದ್ದು,ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿ.ಅವನಿ ಪ್ರಾರಂಭದ ದಿನಗಳಲ್ಲಿ ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆಯವರ ಮಾರ್ಗದರ್ಶನ ಪಡೆದಿದ್ದು,ಪ್ರಸ್ತುತ
ಯೋಗ ಶಿಕ್ಷಕರಾದ ಆನಂದ್ ಮತ್ತು ಶರತ್ ಮರ್ಗಿಲಡ್ಕ ಇವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಪಡೆಯುತ್ತಿದ್ದಾರೆ.