ಗುರುರಾಜ್ ಕೊಡ್ಕಣಿ ಯಲ್ಲಾಪುರ, Author at SportsKannada ಸ್ಪೋರ್ಟ್ಸ್ ಕನ್ನಡ
ಲಿಂಗ ತಟಸ್ಥತೆಯ ಹುಚ್ಚು ಕ್ರೀಡೆಗೂ ಅಂಟಿಕೊಂಡಿತು ನೋಡಿ….!!!
ಒಲಿಂಪಿಕ್ಸ್ ನಲ್ಲಿ ಸಾಧನೆ, ಹೊಸ ಹೊಸ ದಾಖಲೆಗಳು ಬರೆಯಲ್ಪಡುತ್ತಿರುವ  ಹೊತ್ತಿಗೆ ಇಂಥದ್ದೊಂದು ದುರಂತ ಸಹ ನಡೆದು ಹೋಗಿದೆ. ಜೈವಿಕವಾಗಿ ಪುರುಷನಾಗಿದ್ದರೂ ತಾನು ‘ ಮಹಿಳೆ ‘ ಎಂದು ಗುರುತಿಸಿಕೊಳ್ಳುವ ಅಲ್ಜಿರಿಯನ್ ಬಾಕ್ಸರ್ ಇಮಾನೇ ಖಲೀಫ್, ಕೇವಲ 46 ಸೆಕೆಂಡುಗಳಲ್ಲಿ ಇಟಲಿಯ ಏಂಜೆಲಾ ಕೆರಿನಿಯನ್ನು ಸೋಲಿಸಿದನು.
ಸೋಲಿಸಿದ ಎನ್ನುವುದಕ್ಕಿಂತ ಕೆರಿನಿ ತಾನಾಗಿಯೇ ಸೋಲೊಪ್ಪಿಕೊಂಡಳು ಎನ್ನುವುದು ಸರಿಯಾದೀತು. ‘ತನ್ನ ವೃತ್ತಿ ಬದುಕಿನಲ್ಲಿ ತಾನೆಂದಿಗೂ ಇಷ್ಟು ಜೋರಾಗಿ ಏಟು ತಿಂದಿಲ್ಲ,  ನನ್ನ ಮೂಗು ಮುರಿದು ಹೋಗಿದೆ. ನಾನೊಬ್ಬ ವೃತ್ತಿಪರ ಬಾಕ್ಸರ್. ಆದರೆ ಇಲ್ಲಿ ಆಗುತ್ತಿರುವುದು ಅನ್ಯಾಯ ‘ ಎಂದು ಅರಚುತ್ತ ಬಾಕ್ಸಿಂಗ್ ಅಂಕಣದಿಂದ ಹೊರನಡೆದಳು ಕೆರಿನಿ. ಅದಾಗಲೇ ಒಮ್ಮೆ ದೆಹಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಸ್ಪರ್ಧೆಯ ಸಮಯಕ್ಕೆ  ಲಿಂಗ ಪರೀಕ್ಷೆಯಲ್ಲಿ ವಿಫಲನಾಗಿದ್ದ ಖಲಿಫ್ ನನ್ನು ಒಲಿಂಪಿಕ್ಸ್ ಆಯ್ಕೆ ಮಂಡಳಿ ಅನುಮತಿಸಿದ್ದೇಕೆ ಎನ್ನುವ ತಕರಾರುಗಳು ಜೋರಾಗಿ ಭುಗಿಲೆದ್ದಿವೆ.  ಲೇಖಕಿ ‘ಜೆಕೆ ರೋಲಿಂಗ್’, ಇಲಾನ್ ಮಸ್ಕ್ ನಂತಹ ಅನೇಕರು ಈ ಬೆಳವಣಿಗೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಅತಿಯಾದ ಸಮಾನತಾವಾದದಿಂದಲೇ ಶುರುವಾದ ಈ ‘ ಲಿಂಗ ಸಮಾನತೆ’,’ ಲಿಂಗ ಸರ್ವನಾಮ’ಗಳ ಹುಚ್ಚು ಈಗ ಈ ಹಂತಕ್ಕೆ ಬಂದು ನಿಂತಿದೆ. ಅತೀಯಾದ ಮಹಿಳಾವಾದವೂ ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಹೆಣ್ಣು ಗಂಡಿಗೆ ಸಮ ಎನ್ನುತ್ತಲೇ ಹೆಣ್ಣು ಮತ್ತು ಗಂಡು ಎನ್ನುವ ಜೈವಿಕ ವ್ಯಾಖ್ಯಾನಗಳು ದಾಟಿ ಹೋಗಿ ಕೊನೆಗೆ ‘ ಜೈವಿಕತೆಗೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗ ಎನ್ನುವುದು ನಮ್ಮನ್ನು ನಾವು  ಹೇಗೆ ಗುರುತಿಸಿಕೊಳ್ಳುತ್ತೇವೆ ಎನ್ನುವುದು ಆಧಾರದ ಮೇಲೆ ನಿರ್ಧರಿತ’ ಎನ್ನುವ ಮನುಕುಲದ ಅತ್ಯಂತ ದೊಡ್ಡ ಹುಚ್ಚಿನತ್ತ ಬಂದು ನಿಂತಿತು.ಭಾರತದಲ್ಲಿ ಈ ಹುಚ್ಚು ಅಲ್ಲಿಷ್ಟು ಇಲ್ಲಿಷ್ಟು ಈಗೀಗ ಕಾಣುತ್ತಿದೆಯಾದರೂ ಪಾಶ್ಚಾತ್ಯ ರಾಷ್ಟ್ರಗಳನ್ನು ಆವರಿಸಿಕೊಂಡಷ್ಟು ಆವರಿಸಿಕೊಂಡಿಲ್ಲ.
ಆದರೆ ಪಾಶ್ಚಾತ್ಯದಲ್ಲಿ ಈ ಹುಚ್ಚು ಎಬ್ಬಿಸಿರುವ ರಾಡಿ ಅಷ್ಟಿಷ್ಟಲ್ಲ. ಬ್ರಿಟನ್‌ನಂಥ so called ಬುದ್ದಿವಂತರ ದೇಶದಲ್ಲಿ ‘ ಲೆಡಿಸ್ ಎಂಡ್ ಜಂಟಲ್ಮೆನ್’ ಎಂದು ವಿಮಾನದಲ್ಲಿ ಘೋಷಿಸಿದರು ಎನ್ನುವ ಕಾರಣಕ್ಕೆ ‘ ಹಾಂ..!! ಏನು ಹಾಗಂದ್ರೆ, ಬರೀ ಲೇಡಿಸ್ ಮತ್ತು ಮೆನ್ ಮಾತ್ರವೇ ಇರೊದಾ..’ ಎಂದು ಜಗಳವಾಡಿ ಘೋಷಿಸಿದವನ ಕೆಲಸವನ್ನೇ ಕಿತ್ತುಕೊಳ್ಳಲಾಯಿತು ಎಂದರೆ ಹುಚ್ಚಾಟದ ಮಟ್ಟ ಊಹಿಸಿ. ಆರಂಭದಲ್ಲಿ ಅನೇಕ ಮಹಿಳಾವಾದಿಗಳೇ ಬೆಂಬಲಿಸಿದ್ದ ಈ ಅರ್ಥಹೀನ ವಾದ ಇಂದು ಮಹಿಳೆಯರ ಹಕ್ಕಿಗೆ ಕುತ್ತು ತಂದಿರುವುದು ದೊಡ್ಡ ವಿಪರ್ಯಾಸವೇ.
‘ವಿದ್ಯಾರ್ಹತೆ, ಬುದ್ದಿವಂತಿಕೆ ಯಂಥ ಸಾಮಾಜಿಕ ವಿಷಯಗಳಲ್ಲಿ ಮಹಿಳೆ ಪುರುಷನಿಗೆ ಸಮನಾಗಬಹುದೇ ಹೊರತು ದೈಹಿಕವಾಗಿ ಮಹಿಳೆ ಮತ್ತು ಪುರುಷರು ಯಾವತ್ತಿಗೂ ವಿಭಿನ್ನವೇ ಎನ್ನುವುದನ್ನು ಸಾಮಾಜಿಕವಾಗಿ  ದೊಡ್ಡ ಸ್ಥಾನದಲ್ಲಿರುವ  ಅರೆಬರೆ ಮಹಿಳಾವಾದಿಗಳು ಒಪ್ಪದೇ ಹೋದರೆ ಈ ಹುಚ್ಚಾಟಗಳು ಇನ್ನಷ್ಟು ಅದ್ವಾನವಾಗುವುದಂತೂ ಸತ್ಯ .
ಈ ಹುಚ್ಚು ಭಾರತವನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಮುನ್ನ  ನಾವೂ ಸಹ ಎಚ್ಚರಗೊಳ್ಳಬೇಕಿದೆ. ಈಗಾಗಲೇ ಸೀರೆ ಉಟ್ಟು ‘ಸಮಾನತೆ’ ಎನ್ನುತ್ತಿರುವ ಗಂಡಸರನ್ನು ಕಾಣುತ್ತಿದ್ದೇವೆ. ಹೀಗೆ ಮುಂದುವರೆದರೆ ‘ ನಾನು ಮಾನಸಿಕವಾಗಿ ಹೆಣ್ಣು, ನನಗೂ ಮಹಿಳೆಯರ ವಿಶ್ರಾಂತಿಗ್ರಹಗಳಿಗೆ ಪ್ರವೇಶ ಕೊಡಿ’ ಎನ್ನುವ ಕಾಮುಕ ಗಂಡಸರಿಗೂ ಕೊರತೆ ಇರದು ನೋಡಿ.
The post ಲಿಂಗ ತಟಸ್ಥತೆಯ ಹುಚ್ಚು ಕ್ರೀಡೆಗೂ ಅಂಟಿಕೊಂಡಿತು ನೋಡಿ….!!! appeared first on SportsKannada  ಸ್ಪೋರ್ಟ್ಸ್  ಕನ್ನಡ.
ಹಾಲ್ ಆಫ್ ಫೇಮ್ ಕಿರೀಟಕ್ಕೆ ಹೊಸ “ಪೇಸ್”
ತೊಂಬತ್ತರ ದಶಕದ ಚಂದದ ಬೆಳಗಿನ ಕಾಲವದು. ದಿನ ಶುರುವಾಗುತ್ತಿದ್ದದ್ದು ಬೆಳಗ್ಗೆ ಏಳರ ವಾರ್ತೆಗಳಿಂದ. ಯಾವುದೇ ಉದ್ರೇಕ ಉದ್ವೇಗಗಳಿಲ್ಲದೇ ವಾರ್ತೆಗಳನ್ನೋದುತ್ತಿದ್ದ ವಾಚಕರು ಮೊದಲು ಒಂದೆರಡು ನಿಮಿಷಗಳಲ್ಲಿ ವಾರ್ತೆಗಳ ಸಾರಾಂಶವನ್ನು ಹೇಳುತ್ತಿದ್ದರು. ಸಾರಾಂಶದ ಕೊನೆಯ ಸಾಲು ಕ್ರೀಡಾ ಸುದ್ದಿ. ಯಾವುದೋ ದೇಶದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುವ ಕಾಲ. ‘ಭಾರತ್ ಕೀ ಜೀತ್ ‘ ಎನ್ನುವುದು ಸಾರಾಂಶವಾದರೆ ವಾರ್ತೆಗಳನ್ನು ಪೂರ್ತಿ ನೋಡುವುದು, ‘ಹಾರ್ ‘ ಎನ್ನುವ ಕಹಿ ಸಾಲು ವಾರ್ತೆಯ ಸಾರಾಂಶದಲ್ಲಿ ಕೇಳಿಬಂದರೆ ಟಿವಿ ಆಫ್.
ಆದರೆ ಕ್ರಿಕೆಟ್ ಎನ್ನುವ ಆಟವನ್ನು ಮೀರಿಯೂ ಕ್ರೀಡಾ ಸುದ್ದಿ ಕೇಳಲು ಪ್ರೇರೆಪಿಸುತ್ತಿದ್ದದ್ದು ಟೆನ್ನಿಸ್ ಎನ್ನುವ ಸಿರಿವಂತ ಕ್ರೀಡೆ. ಗ್ರಾಂಡ ಸ್ಲಾಮ್ ಟೂರ್ನಿಗಳು ಆರಂಭವಾದರೆ ಸಾಕು, ಹದಿನೈದು ನಿಮಿಷಗಳ ದೂರದರ್ಶನದ ವಾರ್ತೆಗಳು ನಮಗೆ ಜೀವದ್ರವ್ಯ. ಮೊದಲ ಸುತ್ತು, ಎರಡನೇ ಸುತ್ತು, ಉಪಾಂತ್ಯ, ಅಂತಿಮ ಪಂದ್ಯವೆನ್ನುತ್ತ ಪ್ರತಿ ಪಂದ್ಯದ ಫಲಿತಾಂಶ ಕೇಳುತ್ತ ಹೋದರೆ ರೋಮಾಂಚನ. ಭಾರತೀಯತೆಯ ಹೆಮ್ಮೆ. ಹಾಗೆ ಭಾರತೀಯತೆಯ ಹೆಮ್ಮೆಗೆ ಕಾರಣನಾದವರ ಪೈಕಿ ಅಗ್ರಗಣ್ಯ ಈ ಲಿಯಾಂಡರ್ ಫೇಸ್.
ರಾಫಾ ನಡಾಲ್ ,ಫೆಡರರ್ ಎನ್ನುವ ಪದಗಳನ್ನು ನಾವು ತೊದಲುವ ಮುನ್ನವೇ ,ಟೆನ್ನಿಸ್ ಜಗತ್ತಿಗೆ ಭಾರತೀಯ ಹರೆಯದ ಹುಡುಗರನ್ನು ಆಕರ್ಷಿಸಿದವನೀತ. ಪತ್ರಿಕೆಯ ಕೊನೆಯ ಪುಟದಲ್ಲಿ ನಾವು ಹುಡುಕುತ್ತಿದ್ದದ್ದು’ ಲಿಹೇಶ ‘ ಜೋಡಿಯ ಹೆಸರು. ಬಹುಶಃ ಲಿಯಾಂಡರ್ ಹಿರಿಯ. ಮುಂದೊಮ್ಮೆ ಜೋಡಿಯ ನಡುವಿನ ವೈಮನಸ್ಸು ಭಾರತೀಯ ಜೋಡಿಯನ್ನು ಬೇರೆಯಾಗಿಸಿತು. ಅದಾದ ನಂತರವೂ ಲಿಯಾಂಡರ್ ನ ಗೆಲುವುಗಳಲ್ಲಿ ಕೊರತೆಯೇನಾಗಲಿಲ್ಲ.ಪರಿಣಾಮವಾಗಿ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನ ವಿಭಾಗದಲ್ಲಿ ನಾಲ್ಕೂ ಗ್ರಾಂಡ್ ಸ್ಲಾಮ್ ಗೆದ್ದ ಭಾರತದ ಏಕೈಕ ಮತ್ತು ವಿಶ್ವದ ಮೂರನೇ ಪುರುಷ ಆಟಗಾರನಾದ.
ದೇಶಕ್ಕಾಗಿ ಆಡುವ ಸಂದರ್ಭ ಬಂದಾಗ ಆತನ ಆಟ ಯಾವ ಮಹಾನ್ ಆಟಗಾರರಿಗೂ ಕಮ್ಮಿಯಿರಲಿಲ್ಲ. ನಿಮಗೆ ಗೊತ್ತಿರಲಿ, ಗ್ರಾಂಡ್ ಸ್ಲಾಮ್ ಗಳ ಹೊರತಾಗಿ ಟೆನ್ನಿಸ್ ನಲ್ಲಿ ದೇಶ ದೇಶಗಳ ನಡುವೆ ನಡೆಯುವ ಪಂದ್ಯಾಟವಿರುತ್ತದೆ. ಹಾಗಿರುವ ಟೂರ್ನಿಗಳ ಪೈಕಿ ಡೇವಿಸ್ ಕಪ್ ಅತ್ಯಂತ ಮಹತ್ವದ್ದು. ಒಂದರ್ಥದಲ್ಲಿ ಡೇವಿಸ್ ಕಪ್ ಎನ್ನುವುದು ಟೆನ್ನಿಸ್ ಜಗತ್ತಿನ ವಿಶ್ವಕಪ್ ಇದ್ದಂತೆ.ಇಂಥದ್ದೊಂದು ಟೂರ್ನಿಯಲ್ಲಿ ಲಿಯಾಂಡರ್ ನ ಸಾಧನೆ ವಿಶ್ವದ ಅಗ್ರಗಣ್ಯ ಆಟಗಾರರನ್ನೂ ಮೀರಿಸುವಂಥದ್ದು. ಆಡಿದ 58 ಪಂದ್ಯಗಳಲ್ಲಿ 45 ಡಬಲ್ಸ್ ಪಂದ್ಯಗಳನ್ನು ಗೆದ್ದಿರುವ ಆತ ಒಟ್ಟೂ ಪಂದ್ಯಗಳನ್ನು ಗೆದ್ದ ಅಗ್ರಸ್ಥಾನಿಗಳ ಪೈಕಿ ನಾಲ್ಕನೇ ಶ್ರೇಯಾಂಕದಲ್ಲಿ ನಿಂತಿರುವ ಆಟಗಾರ. ಒಟ್ಟೂ ಗೆಲುವುಗಳ ಲೆಕ್ಕಾಚಾರದಲ್ಲಿ ವಿಶ್ವ ಡೇವಿಸ್ ಕಪ್ ನ ಅತ್ಯಂತ ಯಶಸ್ವಿ ಆಟಗಾರ ಎನ್ನುವ ಹಣೆಪಟ್ಟಿ ಕೂಡ ಆತನದ್ದೇ ಎಂದರೆ ದೇಶಕ್ಕಾಗಿ ಆಡುವಾಗಿನ ಆತನ ಹುಮ್ಮಸ್ಸು ಎಂಥದ್ದಿರಬೇಕು ಊಹಿಸಿ. ಅಟ್ಲಾಂಟಾ ಓಲಿಂಪಿಕ್ಸ್ ನ ಕಂಚು, ಟೂರ್ನಿಯೊಂದರಲ್ಲಿ ವಿಶ್ವಶ್ರೇಷ್ಠ ಆಟಗಾರ ಸಾಂಪ್ರಾಸ್ ನ ಮೇಲಿನ ಗೆಲುವು ಅಭಿಮಾನಿಗಳಿಗೆ ತುಂಬ ನೆನಪಿನಲ್ಲುಳಿಯುವ ಗೆಲವುಗಳು.
ಹೀಗಿದ್ದ ಸಾಧಕನ ಸಾಧನೆಗೆ ಮೊನ್ನೆಯಷ್ಟೇ ಆತನನ್ನು ‘ಅಂತರಾಷ್ಟ್ರೀಯ ಹಾಲ್ ಆಫ್ ಫೇಮ್ ‘ನ ಸೇರಿಸಲಾಯಿತು. ಜೊತೆಗೆ ಮತ್ತೊಬ್ಬ ದಂತಕತೆ ವಿಜಯ್ ಅಮೃತರಾಜ್. ಅದರೆ ಅದ್ಯಾಕೊ ಟೆನ್ನಿಸಿಗಿಂತ ಹೆಚ್ಚು ಗ್ಲಾಮರ್ ನಿಂದ ಮಾಧ್ಯಮವನ್ನು ಆಕರ್ಷಿಸಿದ್ದ ಸಾನಿಯಾಳ ವಿದಾಯಕ್ಕೆ ಸಿಕ್ಕ ಪ್ರಚಾರ ಲಿಯಾಂಡರ್ ನ ಹಾಲ್ ಆಫ್ ಫೇಮ್ ನ ಸೇರ್ಪಡೆಗೆ ಸಿಗಲಿಲ್ಲ ನೋಡಿ. ಅಷ್ಟಾಗಿಯೂ ಈ ಕ್ರೀಡಾ ಮಾಂತ್ರಿಕನ ನಿಜವಾದ ಮೌಲ್ಯ ಅಭಿಮಾನಿಗಳ ಮನಸಿನಿಂದ ಮಾಯವಾಗಿಲ್ಲವೆನ್ನುವುದಂತೂ ಸತ್ಯ. ಸಿಕ್ಕ ಪ್ರಚಾರ ಈ ಮಹಾನ್ ಆಟಗಾರರ ‘ಹಾಲ್ ಆಫ್ ಫೇಮ್ ‘ನ ಸೇರ್ಪಡೆಗೆ ಸಿಗಲಿಲ್ಲ ನೋಡಿ. ಅಷ್ಟಾಗಿಯೂ ಲಿಯಾಂಡರ್ ಎನ್ನುವ ಕ್ರೀಡಾ ಮಾಂತ್ರಿಕನ ನಿಜವಾದ ಮೌಲ್ಯ ಅಭಿಮಾನಿಗಳ ಮನಸಿನಿಂದ ಮಾಯವಾಗಿಲ್ಲವೆನ್ನುವುದಂತೂ ಸತ್ಯ.
The post ಹಾಲ್ ಆಫ್ ಫೇಮ್ ಕಿರೀಟಕ್ಕೆ ಹೊಸ “ಪೇಸ್” appeared first on SportsKannada  ಸ್ಪೋರ್ಟ್ಸ್  ಕನ್ನಡ.
ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!!
ತುಂಬ ಸಲ ಹೀಗಾಗುತ್ತದೆ. ಕೆಲವೊಮ್ಮೆ ಯಾವುದಾದರೂ  ಸಾಧಕರ ಮೇಲೆ ನಮಗೆ ವಿನಾಕಾರಣದ ದ್ವೇಷ. ಕಾರಣವಿದ್ದರೂ ಅದು ಅಂಥ ಮಹತ್ವದ್ದೇನಲ್ಲ. ಸರಿಯಾಗಿ ಯೋಚಿಸಿದರೆ ಅದು ಕಾರಣವೂ ಆಗಿರುವುದಿಲ್ಲ. ಒಟ್ಟಾರೆ ಅಂತವರನ್ನು ಕಂಡರೆ ಅಸಹನೆ ಅಷ್ಟೇ.
ಆದರೆ ಆ ದ್ವೇಷ ಸದಾಕಾಲ ಇರುವುದಿಲ್ಲ. ನಾವು ಬೆಳೆಯುತ್ತ ಹೋದಂತೆ, ನಮ್ಮ ಮನಸು ಮಾಗುತ್ತ ಬಂದಂತೆ, ಅವರ ವ್ಯಕ್ತಿತ್ವ ಅರ್ಥವಾಗುತ್ತ ಹೋದಂತೆ ಅವರ ಮೇಲಿನ ದ್ವೇಷ ಸಣ್ಣಗೆ ಕರಗುತ್ತ ಸಾಗುತ್ತದೆ. ದ್ವೇಷ ಕರಗಿ ನೀರಾಗಿ ಸಣ್ಣದ್ದೊಂದು ಮೆಚ್ಚುಗೆ ಹುಟ್ಟಿಕೊಳ್ಳುತ್ತದೆ. ಅವರ ಕೆಚ್ಚೆದೆ, ಛಲ, ಗೆಲುವಿನ ತಾಕತ್ತಿಗೆ’ವಾಹ್, ಏನೇ ಆಗಲಿ ಹೋರಾಟಗಾರನಿವ ‘ ಎನ್ನುವ ಭಾವ ಹುಟ್ಟಿಕೊಳ್ಳುತ್ತದೆ.
ಹಾಗೆ ಹುಟ್ಟುವ ಭಾವಕ್ಕೆ ಅನ್ವರ್ಥಕ ನಾಮವೊಂದಿದ್ದರೆ ಅದಕ್ಕೆ ‘ ನೋವಾಕ್ ಜೋಕೊವಿಚ್ ‘ ಎಂದು ಹೆಸರು.
ಅಸಲಿಗೆ ಟೆನ್ನಿಸ್ ಪ್ರಿಯರ ಜಗತ್ತು ಅವನನ್ನು ಯಾಕೆ ದ್ವೇಷಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಹಾ ವಿಶ್ಲೇಷಣೆ ಏನೂ ಬೇಕಿಲ್ಲ. ಬಹುದೊಡ್ಡ ಅಭಿಮಾನಿಗಳ ಗುಂಪನ್ನೂ ಸಹ ಹೊಂದಿರುವ ಆತನನ್ನು ದ್ವೇಷಿಸುವವರಲ್ಲಿ ಮುಕ್ಕಾಲು ಪಾಲು ಜನರ ಫೆಡಾಲ್ ಅಭಿಮಾನಿಗಳು.
ಸಾಂಪ್ರಾಸ್, ಅಗಾಸ್ಸಿಯ ಹಣಾಹಣಿ ಮುಗಿದ ಕಾಲಕ್ಕೆ ಟೆನ್ನಿಸ್ ಲೋಕದಲ್ಲಿ ಸೃಷ್ಟಿಯಾಗಿದ್ದ ದೈತ್ಯರ ನಿರ್ವಾತವನ್ನು ತುಂಬಿದವನು ರೋಜರ್ ಫೆಡರರ್. ಆತನ ಆಟದ ರಭಸಕ್ಕೆ ತಡೆಯಿಲ್ಲ, ಆತನೇ ಮುಂದಿನ  ವಿಶ್ವಶ್ರೇಷ್ಠ ಎನ್ನುವ ಭಾವ ಹುಟ್ಟುವಷ್ಟರಲ್ಲಿ ‘ ಇಲ್ಲ ನಾನಿದ್ದೇನೆ’ ಎಂದು ಪುಟಿದು ನಿಂತವನು ರಾಫಾ ನಡಾಲ್. ಮುಂದೆ ಸುಮಾರು ಐದಾರು ವರ್ಷಗಳ ಕಾಲ  ಮೈದಾನದಲ್ಲಿ ಇವರಬ್ಬರದ್ದೇ ಪ್ರಾಬಲ್ಯ. ಪ್ರತಿ ಪಂದ್ಯಾವಳಿಯ ಅಂತ್ಯದಲ್ಲೂ ಇವರೇ,ಪ್ರತಿ ಪಂದ್ಯಾವಳಿ ಗೆದ್ದವರೂ ಇವರೇ.
ಆದರೆ ವಿಚಿತ್ರ ನೋಡಿ, ಜಿದ್ದಾಜಿದ್ದಿನ ಹಣಾಹಣಿಯಿದ್ದರೂ ಸಾಂಪ್ರಾಸ್ , ಅಗಾಸ್ಸಿಯ ನಡುವಿದ್ದಂತೆ  ಇವರಿಬ್ಬರ ನಡುವೆ ಶೀತಲಸಮರವೇನೂ ಇರಲಿಲ್ಲ. ರೋಜರ್ ,ನಡಾಲ್ ನೆಡೆಗೆ ಸದಾಕಾಲ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ನಡಾಲ್‌ನದ್ದು ಫೆಡರರ್ ನೆಡೆಗಿನ ಆರಾಧನಾ ಭಾವ. ಬಹುಶಃ  ಕ್ರೀಡಾ ಜಗತ್ತು ಕಾಣದ ಹೊಸಭಾವವದು. ಮೈದಾನದಲ್ಲಿ ಗುದ್ದಾಡುವ ,ಅಂಗಳದಾಚೆ ಸ್ನೇಹಿತರಾಗಿ ಮೆಚ್ಚಿಕೊಂಡೇ ಗೌರವಿಸುವ ಫೆಡಾಲ್ ರ  ಅಪರೂಪದ ಈ ಭಾವವನ್ನು ಕ್ರೀಡಾಭಿಮಾನಿಗಳ ಜಗತ್ತು ಹುಚ್ಚರಂತೆ ಆರಾಧಿಸಿತ್ತು. ಪ್ರತಿ ಪಂದ್ಯದಲ್ಲೂ ಅವರಿಬ್ಬರೇ ಇರಲಿ ಎಂದು ಬಯಸತೊಡಗಿತ್ತು. ಫೆಡರರ್ ನ ಅಭಿಮಾನಿಗಳು ನಡಾಲ್ ಗೂ ಅಭಿಮಾನಿಯಾಗಿದ್ದರು. ನಡಾಲ್ ಅಭಿಮಾನಿಗಳಿಗೆ ಫೆಡರರ್ ನ ಗೆಲುವು ಸಹ ಸಮ್ಮತವೇ. ಒಟ್ಟಾರೆಯಾಗಿ ಟೆನ್ನಿಸ್ ಅಭಿಮಾನಿಗಳಿಗದು ಉಟೋಪಿಯನ್ ಜಗತ್ತು. ಆದರ್ಶ ಆಟಲೋಕ
ಹೀಗಿರುವಾಗ ಬಂದವನು ನೋವಾಕ್ ಜೋಕೊವಿಚ್. ಅಕ್ಷರಶಃ ಫೆಡಾಲ್ ಪಾಲಿನ ಪ್ರತಿನಾಯಕ. ಅಭಿಮಾನಿಗಳ ಪಾಲಿನ ಸಿಂಹ ಸ್ವಪ್ನ. ಚಂದಕ್ಕೆ ಸಾಗುತ್ತಿದ್ದ ಜೋಡೆತ್ತಿನ ಗೆಲುವಿನ ಓಟಕ್ಕೆ  ಬ್ರೇಕ್ ಹಾಕಿದವನು. ಪ್ರತಿಭೆಯಲ್ಲಿ ಅವರಿಬ್ಬರಿಗೂ ಸರಿಸಮನಾದವನು ಜೋಕರ್, ತಾಕತ್ತಿನಲ್ಲಿ ಅವರಿಗಿಂತ ಒಂದು ಹೆಜ್ಜೆ ಮುಂದೆ. ರೋಜರ್‌ನ ಕ್ಲಾಸ್ ಆತನಿಗಿತ್ತು, ನಡಾಲ್ ನ ಕಸುವಿಗೂ ಸ್ಪರ್ಧಿ ಆತ. ಸಹಜವಾಗಿಯೇ ಆತ ಅವರಿಬ್ಬರನ್ನೂ ಮಣಿಸತೊಡಗಿದ.  ಮೊದಮೊದಲು ಅಲ್ಲೊಂದು ಇಲ್ಲೊಂದು ಜಯ ಕಾಣುತ್ತಿದ್ದ ಆತ ಆಟದಂಗಳವನ್ನು ಅದ್ಯಾವ ಪರಿ ಆವರಿಸಿಕೊಡುಬಿಟ್ಟನೆಂದರೆ ಒಂದು ತಾತ್ಕಾಲಿಕ ಹಂತಕ್ಕೆ ಫೆಡರರ್ ನಡಾಲ್ ನಂಥ ಮಹಾನ್ ಆಟಗಾರರೇ ಆತನ ಮುಂದೆ ಸಾಮಾನ್ಯ ಆಟಗಾರರಂತೆ ಭಾಸವಾಗಿಬಿಟ್ಟರು.
ಆಟವಾಗಿ ಟೆನ್ನಿಸ್ ಗೆ ಅದು ಧನಾತ್ಮಕ ಬದಲಾವಣೆಯೇ. ಏಕತಾನತೆಯನ್ನು  ದೂರಗೊಳಿಸಿದ ರೋಚಕ ತಿರುವು. ಆದರೆ ಅಭಿಮಾನಿಗಳಿಗೆ ಅದು ಸಹ್ಯವಾಗಲಿಲ್ಲ. ಆತನನ್ನ ಪ್ರೀತಿಸುವವರು ,ಅಭಿಮಾನಿಸುವವರು ಇದ್ದರೂ ಆತನನ್ನು ದ್ವೇಷಿಸುವರೇ ಹೆಚ್ಚು ಎನ್ನುವಷ್ಟಿದ್ದರು. ಎಷ್ಟೊ ಕಡೆಗಳಲ್ಲಿ ಅವನ ಗೆಲುವಿಗೆ ಸಿಗಬೇಕಾದ ಶ್ರೇಯ ಸಹ ಸಿಗದೇ ನಿರಾಸೆಯಿಂದ ಅಸಹನೀಯ ವರ್ತಸಿದ್ದು ಇದೆ ಆತ.
ಆದರೆ ಇದರಾಚೆಗೆ ನೋಡಿದ ಜೊಕೊವಿಚ್ ಎನ್ನುವ ಆಟಗಾರ ಯಾವ ಮಾಂತ್ರಿಕನಿಗೂ ಕಡಿಮೆಯೇನಿಲ್ಲ. ಆತ ಅಂಕಣಕ್ಕೆ ಬರುವಾಗ ನಡಾಲ್ ಫೆಡರರ್ ಎನ್ನುವ ಪ್ರತಿಭಾನ್ವಿತರು ಅದಾಗಲೇ ಮೈದಾನದ ದೈತ್ಯರಾಗಿದ್ದರು. ಹಾಗಿರುವ ದೈತ್ಯರಿಗೆ ನೀರುಣಿಸಿದವನು ಜೋಕರ್. ವಿಂಬಲ್ಡನ್ ಎನ್ನುವ ಕ್ರೀಡಾಶ್ರೇಷ್ಠ ಪಂದ್ಯಾವಳಿಯಲ್ಲಿ ಫೆಡರರ್‌ನನ್ನ ಕಾಡಿದವನು ಜೋಕರ್, ಆವೆಮಣ್ಣಿನಂಕಣದ ರಾಜ ಎಂಬ ಹೆಸರಿನ ರಾಫಾನನ್ನು  ಫ್ರೆಂಚ್ ಓಪನ್ ನ ಅದೇ ಮಣ್ಣಲ್ಲಿ ಎರಡು ಬಾರಿ ಸೋಲಿಸಿದ ಏಕೈಕ ಆಟಗಾರ ನೋವಾಕ್. ಅವರಿಬ್ಬರನ್ನೂ ಮಣಿಸಿ ಸಾರ್ವಕಾಲಿಕ ಶ್ರೇಷ್ಠನೆನ್ನಿಸಿಕೊಂಡವನು ಜೋಕರ್. ಇಷ್ಟಾಗಿ ಅವನು ಸುಸ್ತಾದನಾ..? ಊಹುಂ,  ಸಾವಿರಾರು ಕ್ರೀಡಾಭಿಮಾನಿಗಳ ದ್ವೇಷದ ನಡುವೆಯೇ ,’ಸುಮ್ನಿರ್ರಿ ಕಂಡಿದೀನಿ ಸಾಕು, ನಿಮಗಿಂತ ಕೆಟ್ಟ ಅಭಿಮಾನಿಗಳ ನಡುವೆ ಗೆಲುವು ಕಂಡಿದ್ದೇನೆ ನಾನು. ಶುಭರಾತ್ರಿ ನಿಮಗೆ’ ಎನ್ನುತ್ತಲೇ ಟೀಕಾಕಾರರ ಬಾಯಿಮುಚ್ಚಿಸಿ ಮೂವತ್ತೇಳನೇ ವಯಸ್ಸಿಗೂ ಹದಿಹರೆಯದ ಶಕ್ತಿಯ ಹುಡುಗರನ್ನು ಪಕ್ಕಕ್ಕೆ ಸರಿಸಿ ವಿಂಬಲ್ಡನ್ ಫೈನಲ್ಲಿಗೆ ತಲುಪಿಕೊಂಡವನು ಜೋಕರ್.
‘ಮೊದಲು ಜನ ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ನಿಮ್ಮ ವಿರುದ್ದ ಹೋರಾಡುತ್ತಾರೆ ,ಕೊನೆಗೆ ನೀವು ಗೆಲ್ಲುತ್ತೀರಿ’ ಎನ್ನುವ ಗಾಂಧೀಜಿಯವರ ಮಾತೊಂದಿದೆ. ಕೊಂಚ ಬದಲಾಯಿಸಿ ,’ ಜನ ಮೊದಲು ನಿಮ್ಮನ್ನು ದ್ವೇಷಿಸುತ್ತಾರೆ, ಹಂಗಿಸುತ್ತಾರೆ ,ಆದರೆ ಕೊನೆಯಲ್ಲಿ ನೀವು ಗೆಲ್ಲುತ್ತೀರಿ’ ಎಂಬುದನ್ನು ಬದುಕಿ ತೋರಿಸಿದವನು ನೋವಾಕ್. ದ್ವೇಷಿಗಳ ಮನಸ್ಸಿನಲ್ಲಿಯೂ ,’ ಬಡ್ಡಿಮಗ ಏನ್ ಆಟಗಾರ ರೀ’ ಎನ್ನುವ ಮೆಚ್ಚುಗೆ ಮೂಡಿಸಿದವನು. ನಿಸ್ಸಂಶಯವಾಗಿ ಟೆನ್ನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಎಂದರೆ ತಪ್ಪಿಲ್ಲ.
ನಾಳೆಗೆ ಇಪ್ಪತ್ತೈದನೇ ಗ್ರಾಂಡಸ್ಲಾಮ್ ನತ್ತ ಗುರಿಯಿಟ್ಟಿದ್ದಾನೆ ಜೋಕರ್. ಎದುರಾಳಿ ಈ ಕಾಲದ ಗಟ್ಟಿ ಯುವ ಪ್ರತಿಭೆ ಕಾರ್ಲೋಸ್ ಅಲ್ಕರಾಜ್. ಜೋಕರ್ ಗೆದ್ದರೆ ಆಟದ ಎರಡೂ ವಿಭಾಗಗಳನ್ನು ಸೇರಿಸಿ ಇಪ್ಪತ್ತೈದನೇ ಪ್ರಶಸ್ತಿ ಗೆದ್ದ ವಿಶ್ವದ ಏಕಮಾತ್ರ ಆಟಗಾರ.
ಸೋತರೆ ಅದು ಸೋಲೇನೂ ಅಲ್ಲ ಬಿಡಿ , ಯಾಕೆಂದರೆ….
ಎವರೆಸ್ಟ್ ನ ತುದಿ ತಲುಪಿದವನು ಎರಡು ಅಡಿ ಕೆಳಗೆ ಜಾರಿದರೂ ‘ ಶಿಖರದ ತುದಿ ‘ ಮುಟ್ಟಿರುವ ಆತನ ಹಿರಿಮೆಗೇನೂ ಧಕ್ಕೆಯಿಲ್ಲ..
The post ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!! appeared first on SportsKannada  ಸ್ಪೋರ್ಟ್ಸ್  ಕನ್ನಡ.
ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???
ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು ಗೆಲ್ಲುವ ಹೊತ್ತಿಗೆ ಈ ಹುಡುಗ ಇಪ್ಪತ್ತೊಂದನೇ ವಯಸ್ಸಿಗೆ ಮೂರು ಬೇರೆ ಬೇರೆ ಅಂಕಣಗಳಲ್ಲಿ ಗ್ರಾಂಡ್ ಸ್ಲಾಮ್ ಗೆದ್ದ ವಿಶ್ವದ ಅತ್ಯಂತ ಕಿರಿಯ ಆಟಗಾರನೆನ್ನಿಸಿದ.
ಆವೆಮಣ್ಣಿನಂಕಣದಲ್ಲಿ ಸ್ಪೇನ್ ಆಟಗಾರನ ಹಿಡಿತ ಮುಗಿಯಿತು ಎನ್ನಿಸಿದ್ದು ಮೊದಲ ಸುತ್ತಿನಲ್ಲೇ ರಾಫಾ ನಡಾಲ್ ,ಅಲೆಕ್ಸಾಂಡರ್ ಝ್ವರೇವ್ ನ ಕೈಯಲ್ಲಿ ಸೋಲು ಕಂಡಾಗ. ಇಲ್ಲ, ಮುಗಿಯಲಿಲ್ಲ ಎನ್ನುತ್ತ ಪುಟಿದು ಬಂದವನು ತನ್ನ ಗುರು ರಾಫಾನ ಸೋಲಿನ ಸೇಡು ತೀರಿಸಿಕೊಂಡ  ಈ ಹುಡುಗ ಕಾರ್ಲೊಸ್ ಅಲ್ಕರಾಜ್.  ಐದು ಸೆಟ್ ಗಳ ಧೀರ್ಘ ಹೋರಾಟ ಕಂಡ ಅತಿಮ ಪಂದ್ಯದಲ್ಲಿ 6-3 ,2- 6 ,5-7, 6-1, 6-2 ರಲ್ಲಿ ಜ್ವರೇವ್ ನೆದುರು  ಗೆಲುವು ಸಾಧಿಸಿದ್ದು ಅಭಿನಂದನಾರ್ಹ. ತುಂಬ ಕ್ಲಾಸಿಕ್ ಎನ್ನಿಸುವ ಪಂದ್ಯವಲ್ಲದಿದ್ದರೂ ಸಾಕಷ್ಟು ರೋಚಕತೆ ಕಂಡ ಪಂದ್ಯ. ದೊಡ್ಡ ಸರ್ವ್ ನ ಆಟಗಾರ ಜ್ವರೇವ ಸಾಕಷ್ಟು ಲಯ ಕಳೆದುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದೇ ಕಾರಣಕ್ಕೋ ಏನೋ, ಸರ್ವ್ ನ ನಡುವೆ ಅತಿಯಾದ ಸಮಯ, ಚೆಂಡು ಚೆನ್ನಾಗಿಲ್ಲ ಎನ್ನುವ ದೂರುಗಳಂಥ ಋಣಾತ್ಮಕ ತಂತ್ರಗಳನ್ನು ಆತ ಆಗಾಗ ಬಳಸಿದ್ದೂ ಸಹ ಕಂಡುಬಂದಿತ್ತು. ಅಪ್ರಯತ್ನಪೂರ್ವಕ ಪ್ರಮಾದಗಳು, ಸಾಲು ಸಾಲು ಡಬಲ್ ಫಾಲ್ಟ್ ಗಳು ಆತನ ಗೆಲುವಿನ ಓಟಕ್ಕೆ ಇನ್ನಷ್ಟು ಬ್ರೇಕ್ ಹಾಕಿದವು. ಅಲ್ಕರಾಜ್ ಕೂಡ ಅದ್ಬುತ ಲಯದಲ್ಲೇನೂ ಇರದಿದ್ದರೂ ಅಂತಿಮ ಕ್ಷಣದಲ್ಲಿ  ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡುಬಿಟ್ಟ. ಪರಿಣಾಮವಾಗಿ ತನ್ನ ವೃತ್ತಿ ಬದುಕಿನ ಮೂರನೇ ಗ್ರಾಂಡ್ ಸ್ಲಾಮ್ ಗೆಲುವು ಅವನದ್ದಾಯಿತು.
ಈ ಗೆಲುವಿನ ಮೂಲಕ ಹಲವಾರು ದಾಖಲೆ ನಿರ್ಮಿಸಿರುವ ಕಾರ್ಲೊಸ್, ಪುರುಷ ಟೆನ್ನಿಸ್ ಜಗತ್ತು ಆಸಕ್ತಿ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿರುವಾಗ ಅಭಿಮಾನಿಗಳ ಮನದಲ್ಲಿ ಹೊಸದೊಂದು ಆಶಾಕಿರಣ ಮೂಡಿಸಿದ್ದಾನೆ. ಬಹುಶಃ ತನ್ನ ಸಮಕಾಲೀನನಾದ ಇಟಲಿಯ ಯಾನಿಕ್ ಸಿನ್ನರ್ ಜೊತೆಗಿನ ಜಿದ್ದು ಮುಂದುವರೆದರೆ , ಗಾಯದ ಸಮಸ್ಯೆ ಇಬ್ಬರನ್ನೂ ಕಾಡದೇ ಹೋದರೆ ಬಹುಶಃ ಫೆಡರರ್ ನಡಾಲ್ ಕಂಡ ಪೈಪೊಟಿಯಂಥ ಪೈಪೋಟಿ ಈ ತಲೆಮಾರಿನ ಟೆನ್ನಿಸ್ ಅಭಿಮಾನಿಗಳಿಗೆ ಕಾಣಿಸಲಿಕ್ಕೂ ಸಾಕು.
ಇಷ್ಟಾಗಿ  ಅಂಗಳದಲ್ಲಿ ಆಟ ನೋಡುವಾಗ ಬಿಗ್ ತ್ರಿ ಯ ಪಂದ್ಯಗಳಲ್ಲಿದ್ದ ಕಲಾತ್ಮಕತೆ, ಶಾಸ್ತ್ರೀಯತೆ ಇವತ್ತಿನ ಪಂದ್ಯಗಳಲ್ಲಿ ಕಾಣುವುದು ತೀರ ಕಡಿಮೆ ಎನ್ನಿಸುತ್ತದೆ. ಉದ್ದದ ರ‌್ಯಾಲಿಗಳು, ಚಂದದ ಬೇಸ್ ಲೈನ್ ಹೊಡೆತಗಳು, ಅಂಗಳದ ಓಡಾಟಗಳಂಥಹ ಅಂಶಗಳು ಇತ್ತೀಚೆಗೆ ಕಾಣುವುದೇ ಇಲ್ಲವೇನೋ ಎನ್ನುವಂತಾಗಿ ರುಚಿಕರ ಅಡುಗೆಗೆ ಉಪ್ಪು ಕಡಿಮೆ ಎನ್ನುವಂತಾಗಿದೆ
ಏನೇ ಆದರೂ ಬದಲಾವಣೆಯೊಂದೇ ಶಾಶ್ವತ ಎನ್ನುವ ಫಿಲಾಸಫಿ ಕ್ರೀಡೆಗೂ ಸತ್ಯವೇ ಎನ್ನುವುದಂತೂ ಸತ್ಯ. ಈ ಹುಡುಗ ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್ ಗೆದ್ದುಬಿಟ್ಟರೆ  ಸರಿಸುಮಾರು ಇಪ್ಪತ್ತು ಚಿಲ್ಲರೇ ವರ್ಷಗಳ ನಂತರ ಕರಿಯರ್ ಗ್ರಾಂಡ್ ಸ್ಲಾಮ್ ಗೆದ್ದ ಮೊದಲ ಮತ್ತು ಮುಕ್ತ ಟೆನ್ನಿಸ್ ಯುಗದ ಆರನೇ  ಆಟಗಾರನಾಗುವ ಹೆಮ್ಮೆ ಇವನದ್ದಾಗುತ್ತದೆ.
Congratulations..!! Carlitos
The post ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….??? appeared first on SportsKannada  ಸ್ಪೋರ್ಟ್ಸ್  ಕನ್ನಡ.
ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ!
ನನಗಿನ್ನೂ ನೆನಪಿದೆ ಅವನೊಟ್ಟಿಗಿನ ಮೊಟ್ಟ ಮೊದಲ ಅಭ್ಯಾಸದ ಘಟನೆ.ಆವತ್ತಿಗೆ ಆತ ದೇಶದ ಅತ್ಯಂತ ಪ್ರತಿಭಾನ್ವಿತ ಆಟಗಾರರ ಪೈಕಿ ಒಬ್ಬನೆಂದು ಖ್ಯಾತನಾಗಿದ್ದ.
ಫೆಡರರ್‌ನ ಕ್ರೀಡಾ ಬದುಕಿನ ಈ ಬದಲಾವಣೆಯ ಕುರಿತು ಓದಿದಾಗಲೆಲ್ಲ ನನ್ನ ಮನಸು ಪದೇ ಪದೇ ತತ್ವಶಾಸ್ತ್ರಕ್ಕೆ ಶರಣಾಗುತ್ತದೆ.ಗೆಲುವು ಎಂದರೆ ಇನ್ನೇನಿಲ್ಲ ಅದು ಹಿಡಿತವೇ.  ಆಟ ಪಕ್ಕಕ್ಕಿಡಿ, ಸರಿಯಾಗಿ  ಯೋಚಿಸಿದರೆ ನಮ್ಮ ಬದುಕು ಸಹ ಹೀಗೆ ಅಲ್ಲವಾ..? ಬದುಕಿನ ಗೆಲುವಿಗೆ ಪರಿಶ್ರಮ ,ಗಟ್ಟಿ ನಿರ್ಧಾರಗಳ ಜೊತೆಗೆ ನಮಗೆ ಬೇಕಿರುವುದು ಸಹನೆ.ಸಹನೆ ಎಂದರೆ ಮತ್ತದೇ ಹಿಡಿತ. ನಮ್ಮ ಮೇಲಿನ ನಮ್ಮ ಹಿಡಿತ. ಕೋಪದ ಮೇಲಿನ ಹಿಡಿತ,ಹತಾಶೆಯ ಮೇಲಿನ ಹಿಡಿತ,ಅಸಹನೆ ರೋಷಗಳ ಮೇಲಿನ ಹಿಡಿತ.ಒಟ್ಟಾರೆಯಾಗಿ ಭಾವಗಳ ಮೇಲಿನ ಹಿಡಿತ.ನಮ್ಮ ಮೇಲೊಂದು ಸ್ವಯಂ ನಿಯಂತ್ರಣ.ಆ ನಿಯಂತ್ರಣವೊಂದಿದ್ದು ಬಿಟ್ಟರೇ ನಮ್ಮ ಬದುಕೆನ್ನುವ  ಟೆನ್ನಿಸ್ ಅಂಗಳಕ್ಕೆ ನಾವೇ ವಿಜಯಿ ಫೆಡರರ್.
The post ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ! appeared first on SportsKannada  ಸ್ಪೋರ್ಟ್ಸ್  ಕನ್ನಡ.
ಭಾರತದ ಯುವಕರನ್ನ ವಿಶ್ವಟೆನ್ನಿಸ್‌ರಂಗದತ್ತ ಸೆಳೆದ ಅಗ್ರಗಣ್ಯನೀತ…
ಬಹುಶಃ ನನ್ನ ತಲೆಮಾರಿನ ಹುಡುಗರಿಗೆ ಟೆನ್ನಿಸ್ ಲೋಕದತ್ತ ಸೆಳೆದ ಮೊದಲ ಆಟಗಾರ ಲಿಯಾಂಡರ್ ಪೇಸ್.1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಆತ ಕ್ವಾರ್ಟರ್ ಫೈನಲ್‌ನಲ್ಲಿ ಬಲಿಷ್ಟ ಥಾಮಸ್ ಎನಕ್ವಿಸ್ಟ್‌ರನ್ನು ಸೋಲಿಸಿ ಸೆಮಿಪೈನಲ್ ತಲುಪಿದಾಗ ಆತ ಪದಕ ಗೆಲ್ಲುವನೇನೋ ಎಂಬ ನಿರೀಕ್ಷೆಯಿತ್ತು.
ಆದರೆ ಎದುರಿಗಿದ್ದಿದ್ದು  ಆವತ್ತಿನ ಬಲಾಡ್ಯ ಅಗಾಸ್ಸಿ.ಸೆಮಿಪೈನಲ್ ಸೋತ ನಂತರವೂ ಲಿಯಾಂಡರ್ ‘ಕಂಚು ಪದಕ ತಂದೇ ತರುವೆ’ಎಂದಾಗ ಬಹುತೇಕ ಭಾರತೀಯರಿಗೆ ಸಂತಸವಾಗಿತ್ತು.ಮಾತಿಗೆ ತಕ್ಕಂತೆ ಕಂಚಿನ ಪದಕ ತಂದ ಲಿಯಾಂಡರ್ ದೇಶದ ಸಾರ್ವಕಾಲಿಕ ಶ್ರೇಷ್ಟ ಟೆನ್ನಿಸ್ ಆಟಗಾರನಾಗಿ ಮಿಂಚಿದ್ದು ಈಗ ಇತಿಹಾಸ.
ಆದರೆ ಅವನ ಶ್ರೇಷ್ಠತೆಗೆ ಜೊತೆಯಾಗಿದ್ದು ಮಹೇಶ್ ಭೂಪತಿ.ಆವತ್ತಿಗೆ ವಿಶ್ವ ಡಬಲ್ಸ್‌ನಲ್ಲಿ ಮಹೇಶ್ ಪೇಸ್ ಜೋಡಿ ವಿಶ್ವದ ಶ್ರೇಷ್ಠ ಡಬಲ್ಸ್ ಜೋಡಿಗಳಲ್ಲೊಂದು.ಒಂದೇ ವರ್ಷದಲ್ಲಿ ವರ್ಷದ ನಾಲ್ಕೂ ಗ್ರಾಂಡಸ್ಲಾಮ್‌ಗಳ ಫೈನಲ್ ತಲುಪಿಕೊಂಡ ಏಕೈಕ ಜೋಡಿಯಿದು.1999ರಲ್ಲಿ ಈ ಸಾಧನೆ ಮಾಡಿದ ಜೋಡಿ ಆ ವರ್ಷದ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗೆದ್ದುಕೊಂಡಿತ್ತು.ಜೋಡಿಯಾಗಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಿದ್ದು ಸಹ ಈ ಜೋಡಿಯ ಮತ್ತೊಂದು ಸಾಧನೆ.
ನಿಸ್ಸಂಶಯವಾಗಿ ನಮ್ಮನ್ನು ಟೆನ್ನಿಸ್ ಲೋಕದತ್ತ ಸೆಳೆದ ಜೋಡಿಯಿದು.ಆಗ ಮಧ್ಯಮವರ್ಗಿಯ ಮನೆಗಳಲ್ಲಿ ಟಿವಿ ಇರುತ್ತಿದ್ದದ್ದೇ ದೊಡ್ಡ ವಿಷಯ.ಇನ್ನು ದುಬಾರಿ ಕ್ರೀಡಾ ವಾಹಿನಿಗಳಂತೂ ಕನಸಿನ ಮಾತು.ಪ್ರತಿನಿತ್ಯ ಬೆಳಗೆದ್ದು ಏಳರ ದೂರದರ್ಶನ ವಾರ್ತೆ ನಮಗಿದ್ದ ಏಕೈಕ ಆಧಾರ.ಅಪ್ಪ ಟಿವಿ ಹಾಕುತ್ತಿದ್ದರು.ಹದಿನೈದು ನಿಮಿಷಗಳ ವಾರ್ತೆಗಳ ಮುಖ್ಯಾಂಶಗಳ ಪೈಕಿ ಕೊನೆಯಲ್ಲಿ ವಾರ್ತಾವಾಚಕಿ ‘ಲಿಯಾಂಡರ್ ಮಹೇಶ್ ಕೀ ಜೀತ್’ ಎಂದರೆ ವಾರ್ತೆಯನ್ನು ಪೂರ್ತಿ ಕೇಳಿಸಿಕೊಳ್ಳುವುದು,’ಹಾರ್’ ಎಂದರೆ ಮರುಕ್ಷಣವೇ ಟಿವಿ ಆಫ್. ನನ್ನ  ಸ್ವರ್ಣ ಬಾಲ್ಯದ ನೆನಪುಗಳಿಗೆ ಈ ಜೋಡಿಯ ಕೊಡುಗೆಯೂ ಕಡಿಮೆಯೇನಿಲ್ಲ ಬಿಡಿ.
ಆನಂತರ ತಮ್ಮದೇ ವೈಯಕ್ತಿಕ ಅಹಮಿಕೆಯಿಂದ ದೂರ ಸರಿದ ಈ ಆಟಗಾರರು ಹಲವು ಪ್ರಶಸ್ತಿಗಳನ್ನು ಗೆದ್ದರಾದರೂ ಅವರಿಬ್ಬರು ಜೊತೆಯಾಗಿ ಕಂಡ ಗೆಲುವಿನಷ್ಟು ಸಂತಸ  ಭಾರತೀಯರಿಗೆ ಅಭಿಮಾನಿಗಳಿಗೆ ಅವರ ವೈಯಕ್ತಿಕ  ಗೆಲುವು ಕೊಡಲಿಲ್ಲ ಎನ್ನುವುದು ಸತ್ಯ.
ಜೂನ್ ಏಳರಂದು ಮಹೇಶ್ ಭೂಪತಿಯವರಿಗೆ ನಲ್ವತ್ತೇಳರ ಹರೆಯ.ಜಪಾನಿನ ರಿಕಾ ಹಿರಾಕಿಯೊಂದಿಗೆ ಸೇರಿ ಮಿಶ್ರ ಡಬಲ್ಸ್‌ನ ಮೊದಲ ಪ್ರೆಂಚ್ ಓಪನ್ ಗೆದ್ದದ್ದು ಭಾರತೀಯ ಟೆನ್ನಿಸ್ ಲೋಕದ ಮೊದಲ ಗ್ರಾಂಡ್‌ಸ್ಪಾಮ್ ಸಾಧನೆ.ಅದಲ್ಲದೇ ಆತ 1999ರ ಹೊತ್ತಿಗೆ ವಿಶ್ವ ಡಬಲ್ಸ್ ಆಟಗಾರರ ಪೈಕಿ ನಂಬರ್ 1 ಆಟಗಾರನಾಗಿದ್ದನೆನ್ನುವುದು ಸಹ ಗಮನಾರ್ಹ.ಆ ಸಾಧನೆಯನ್ನು ಎರಡು ಬಾರಿ ಮಾಡಿದ ಏಕೈಕ ಭಾರತೀಯ ಆಟಗಾರನೀತ.
ಅಲ್ಲಿಷ್ಟು ಇಲ್ಲಿಷ್ಟು ಸಾಂಪ್ರಾಸ್ ಅಗಾಸ್ಸಿ ಎಂದು ತೊದಲುವ ಹೊತ್ತಿಗೆ ನಮಗೆ ವಿಶ್ವ ಟೆನ್ನಿಸ್ ಲೋಕದ ಹುಚ್ಚು ಹತ್ತಿಸಿ ಎಳೆದೊಯ್ದ ವಿಶ್ವಶ್ರೇಷ್ಠನಿಗೆ ಹುಟ್ಟುಹಬ್ಬದ ಶುಭಾಶಯಗಳು.
The post ಭಾರತದ ಯುವಕರನ್ನ ವಿಶ್ವಟೆನ್ನಿಸ್‌ರಂಗದತ್ತ ಸೆಳೆದ ಅಗ್ರಗಣ್ಯನೀತ… appeared first on SportsKannada  ಸ್ಪೋರ್ಟ್ಸ್  ಕನ್ನಡ.
ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು
ವಿಶ್ವ ಟೆನ್ನಿಸ್ ಲೋಕದಲ್ಲಿ ಬಾಬಿ ರಿಗ್ಗ್ ಎನ್ನುವ ಪ್ರತಿಭಾನ್ವಿತ ಆಟಗಾರನೊಬ್ಬನಿದ್ದ.ಮೂರು ಗ್ರಾಂಡ್‌ಸ್ಲಾಮ್ ಗೆದ್ದು ತನ್ನ ವೃತ್ತಿಕಾಲದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನಾಗಿ ಮೆರೆದವನು ರಿಗ್ಸ್.ಅದೇನಾಯಿತೋ ಗೊತ್ತಿಲ್ಲ,
ತಾನು ನಿವೃತ್ತನಾದ ಕಾಲಕ್ಕೆ ಒಂದು ವಿಲಕ್ಷಣ ಅಹಮಿಕೆ ಅವನ ನೆತ್ತಿಗೇರಿತ್ತು.ಏಕಾಏಕಿ ಆತ ಮಹಿಳಾ ಟೆನ್ನಿಸ್ ಲೋಕವನ್ನ ಟೀಕಿಸಲಾರಂಭಿಸಿದ್ದ.ಮಹಿಳೆಯರ ಟೆನ್ನಿಸ್ ಎನ್ನುವುದೇ ಒಂದು ಅರ್ಥಹೀನ ಕ್ರೀಡೆ,ಮಹಿಳೆಯರು ಟೆನ್ನಿಸ್ ಆಡುವುದಕ್ಕೆ ಅಯೋಗ್ಯರು ಎಂಬರ್ಥದಲ್ಲಿ ಮಾತುಗಳನ್ನಾಡುತ್ತಿದ್ದ ಅವನ ಮಾತುಗಳಿಗೆ ಆರಂಭಿಕ ನಿರ್ಲಕ್ಷ್ಯಗಳು ಎದುರಾಗಿದ್ದವು.ಆದರೆ ಅವನು ಸುಮ್ಮನಾಗಲಿಲ್ಲ.ತನ್ನೆಡೆಗಿನ ಉಪೇಕ್ಷೆಯಿಂದ ಇನ್ನಷ್ಟು ಕೆರಳಿದವನು ಮತ್ತೆ ಮತ್ತೆ ನಾಲಿಗೆಯನ್ನು ಹರಿಬಿಟ್ಟಿದ್ದ.’ತನಗೀಗ 55 ವರ್ಷ ವಯಸ್ಸು.ಆದರೆ ಅದನ್ನ ಪರಿಗಣನೆಗೆ ತೆಗೆದುಕೊಳ್ಳಬೇಡಿ.ತಾನು ಈ ವಯಸ್ಸಿನಲ್ಲಿಯೂ ಮಹಿಳಾ ಟೆನ್ನಿಸ್‌ನ ಅಗ್ರಶ್ರೇಯಾಂಕಿತರನ್ನ ಸುಲಭಕ್ಕೆ ಸೋತು ಸುಣ್ಣವಾಗಿಸುತ್ತೇನೆ,ಅವರು ನನಗಿಂತ ಚಿಕ್ಕವರಾಗಿರಲಿ ದೊಡ್ಡವರಿರಲಿ ನನಗೆ ಲೆಕ್ಕವಿಲ್ಲ’ಎಂದು ಅಬ್ಬರಿಸಿದ್ದ.ಆತ ಹಾಗೆ ಅಬ್ಬರಿಸಿ ಆಹ್ವಾನವಿತ್ತಿದ್ದು ಅಂದಿನ ಯುವ ಆಟಗಾರ್ತಿ ಬಿಲ್ ಜೀನ್ ಕಿಂಗ್‌ಳಿಗೆ.ಆದರೆ ಆಕೆಗೆ ಅವನೆಡೆಗೆ ದಿವ್ಯ ನಿರ್ಲಕ್ಷ್ಯ. ಹಾಗಾಗಿ ಆವತ್ತಿಗೆ ರಿಗ್ಸ್‌ನ ಎದುರಾಳಿಯಾಗಿದ್ದವಳು ಮಹಿಳಾ ಟೆನ್ನಿಸ್ ಲೋಕದ ದಂತ ಕತೆ ಮಾರ್ಗರೇಟ್ ಕೋರ್ಟ್.ಆಕೆ ಆವತ್ತಿಗೆ ಟೆನ್ನಿಸ್ ಲೋಕದ ಅಗ್ರಶ್ರೇಯಾಂಕಿತ ಆಟಗಾರ್ತಿ. ಸಾಲುಸಾಲು ಪ್ರಶಸ್ತಿಗಳು ಆಕೆಯ ಬೆನ್ನಿಗಿದ್ದವು.ಆದರೆ ಆಕೆಯ ಪ್ರತಿಭೆ ಆವತ್ತಿಗೇಕೊ  ಆಕೆಯ ಕೈ ಹಿಡಿಯಲಿಲ್ಲ.ಅವಳೆದರು ಅಕ್ಷರಶಃ ಆರ್ಭಟ ರಿಗ್ಸ್‌ನದ್ದು.  ತನ್ನ ಅಹಮಿಕೆಯ ತೃಪ್ತಿಗೆಂಬಂತೆ ಆಟವಾಡಿದ ರಿಗ್ಸ್ ಆಕೆಯನ್ನು ಚಿಕ್ಕ ಮಕ್ಕಳಂತೆ ಸೋಲಿಸಿದ್ದ.ಮೂರು ಸೆಟ್‌ಗಳ ಪಂದ್ಯವನ್ನು ಆತ 6-2,6-1 ರ ನೇರ ಅಂತರದಲ್ಲಿ ಜಯಿಸಿದ್ದ.
ಒಂದರ್ಥದಲ್ಲಿ ರಿಗ್ಸ್‌ನ ಗೆಲುವು ಆವತ್ತಿನ ಸಮಾಜದ ಪುರುಷಂಹಕಾರವನ್ನು ಮತ್ತೊಮ್ಮೆ ಕೆರಳಿಸಿತ್ತು. ಸಮಾನತೆಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಪಾಶ್ಚಿಮಾತ್ಯ ಸಮಾಜದ ಪತ್ರಿಕೆಗಳು ರಿಗ್ಸ್‌ನ ಚಿತ್ರವನ್ನು ಮುಖಪುಟದಲ್ಲಿ ಹಾಕಿ ಮೆರೆಸಿದ್ದವು.’ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ‘ ಮತ್ತು ‘ಟೈಮ್ ‘ನಂಥಹ ಪ್ರತಿಷ್ಠಿತ ಪತ್ರಿಕೆಗಳ ಮುಖಪುಟದಲ್ಲಿಯೂ ಬಾಬಿ ರಿಗ್ಸ್ ರಾರಾಜಿಸುತ್ತಿದ್ದ.
ಗೆಲುವಿನ ನಶೆ ನೆತ್ತಿಗೇರಿತ್ತು.ಮತ್ತೆ ಹುಚ್ಚುಚ್ಚಾಗಿ ಮಾತನಾಡಲಾರಂಭಿಸಿದ್ದ ಬಾಬಿ .ಈ ಬಾರಿ ಟೆನ್ನಿಸ್ ಟೀಕಾಕಾರ ಮತ್ತು ನಿರೂಪಕ ಜಾಕ್ ಕ್ರಾಮರ್ ಸಹ ರಿಗ್ಸ್‌ನ ಹುಚ್ಚಾಟಕ್ಕೆ ದನಿಗೂಡಿಸಿದ್ದ.ಇವರಿಬ್ಬರ ಹುಚ್ಚಾಟಕ್ಕೆ ಅನಗತ್ಯದ ಪುರುಷಹಂಕಾರದ ಮೆರೆದಾಟಕ್ಕೆ ಒಂದು ಉತ್ತರ ಬೇಕಿತ್ತು.ಒಂದು ಸವಾಲು ಬೇಕಿತ್ತು.ಆಗ ಸವಾಲಾಗಿ ನಿಂತವಳು ಬಿಲ್ಲಿ ಜೀನ್ ಕಿಂಗ್ .ಪಂದ್ಯಕ್ಕೆ ತಾನು ತಯಾರು ಎಂದಿದ್ದಳು.ತಕ್ಷಣವೇ ಆಯೋಜಕರು ಪಂದ್ಯಕ್ಕೊಂದು ವೇದಿಕೆ ಸಿದ್ದಪಡಿಸಿದ್ದರು.1973 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಈ ಪಂದ್ಯಕ್ಕೆ ಆವತ್ತಿಗೆ ಆಯೋಜಕರಿಟ್ಟ ಹೆಸರು
‘Battle of sexes’
ಪಂದ್ಯ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಶುರುವಾಗಿತ್ತು.ಆಗಷ್ಟೇ ನಂಬರ್ ಒನ್ ಸ್ಥಾನಕ್ಕೆ ಹೋಗಿ ಕುಳಿತಿದ್ದ ಬಿಲ್ ಜೀನ್ ಕಿಂಗ್ ಅಮೇರಿಕಾದ ಆಟಗಾರ್ತಿ. ಆಟಕ್ಕೂ ಮುನ್ನ ತೀರ ಗಂಭೀರವದನಳಾಗಿದ್ದ ಆಕೆಯೆಡೆಗೆ ರಿಗ್ಸ್‌ನದ್ದು ಯಾವತ್ತಿನ ಉಡಾಫೆ.ಮೊದಲ ಸೆಟ್ ಆರಂಭವಾದಾಗ 3 – 2 ರಿಂದ ಹಿಂದಿದ್ದ ಬಿಲ್ಲಿ ಜೀನ್‌ಳ ಸರ್ವ್ ಬ್ರೇಕ್ ಮಾಡಿದ್ದ ರಿಗ್ಸ್.ನೋಡುಗರಿಗೆ ಆ ಕ್ಷಣಕ್ಕೆ ಇದು ಸಹ ಮೊದಲ ಪಂದ್ಯದ ಕತೆಯೇ ಬಿಡಿ ಎಂದೆನ್ನಿಸಿರಲಿಕ್ಕೂ ಸಾಕು.ಆದರೆ ಬಿಲ್ಲಿ ಜೀನ್‌ಳಿಗೆ ಹಾಗನ್ನಿಸಿರಲಿಲ್ಲ.ಅವಳಿಗೆ ತನ್ನ ಶಕ್ತಿಯ ಮೇಲೆ ನಂಬಿಕೆಯಿತ್ತು.ಗಟ್ಟಿಯಾದ ಆತ್ಮವಿಶ್ವಾಸವಿತ್ತು.ರಿಗ್ಸ್‌ನ ಅಹಮಿಕೆ ಮುರಿಯಬೇಕೆನ್ನುವ ಹಠವಿತ್ತು.ಬಹುಶಃ ಆ ಹಠದಿಂದಲೇ ಎನ್ನುವಂತೆ ಆಕೆ ಪಂದ್ಯದ ಮೊದಲ ಸೆಟ್ 6 – 4 ರಿಂದ ಜಯಿಸಿದ್ದಳು.ಹಾಗೆ ಪಂದ್ಯದ ಮೊದಲ ಸೆಟ್ ಗೆದ್ದವಳಿಗೆ ಆತ್ಮವಿಶ್ವಾಸ ಮತ್ತಷ್ಟು ಗಟ್ಟಿಯಾಗಿತ್ತೇನೋ.ತನ್ನ ಆಟದ ಲಯಕ್ಕೆ ಮರಳಿದ್ದಳು ಬಿಲ್ಲಿ ಜೀನ್.ಮುಂದಿನದ್ದು ಇತಿಹಾಸ.ಪಂದ್ಯವನ್ನು ಆಕೆ ನೇರ ಸೆಟ್‌ಗಳಲ್ಲಿ 6–4, 6–3, 6–3ರಿಂದ ಪಂದ್ಯವನ್ನು ಜಯಿಸಿದ್ದಳು.ಮೊದಲ ಬಾರಿಗೆ ಟೆನ್ನಿಸ್ ಪಂದ್ಯವೊಂದರಲ್ಲಿ ಪುರುಷ ಸ್ಪರ್ಧಿಯನ್ನು ಸೋಲಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಆಕೆಯ ಮುಡಿಗೇರಿತ್ತು.
ಆಕೆಯ ವಿಜಯವನ್ನು ವಿಶ್ವದಾದ್ಯಂತ ಸರಿಸಮಾರು ಒಂಬತ್ತು ಕೊಟಿ ಜನ ಕಣ್ತುಂಬಿಕೊಂಡಿದ್ದರು. ಮೈದಾನದಲ್ಲಿಯೇ ಸುಮಾರು ಮೂವತ್ತು ಸಾವಿರ ಜನ ಪಂದ್ಯ ವೀಕ್ಷಿಸಿದ್ದರು.
ವಿಚಿತ್ರವೆಂದರೆ ಈ ಪಂದ್ಯದ ಆಕೆಯ ವಿಜಯ ರಿಗ್ಸ್‌ಗಿಂತ ಹೆಚ್ಚಾಗಿ ನಿರೂಪಕ ಕ್ರಾಮರ್‌ನ ಅಹಮಿಕೆಗೆ ಪೆಟ್ಟುಕೊಟ್ಟಿತ್ತು.ವಯಸ್ಸಿನ ಅಂತರವೆನ್ನುವುದು ಲೆಕ್ಕಕ್ಕಿಲ್ಲ ಎಂಬಂತೆ ಮಾತನಾಡಿದ್ದ ರಿಗ್ಸ್ ಸೋತಾಕ್ಷಣ ಅವನ ವಕೀಲನಂತೆ ಮಾತನಾಡಿದ ಕ್ರಾಮರ್,’ಇದು ಬಿಲ್ಲಿ ಜೀನ್‌ಳ ಸಂಪೂರ್ಣ ಜಯವೆಂದು ನನಗನ್ನಿಸದು.ಆಕೆಗೂ ಅವನಿಗೂ ಸಾಕಷ್ಟು ವಯಸ್ಸಿನ ಅಂತರವಿದೆ.ಇದನ್ನು battle of sexes ಎನ್ನುವುದಕ್ಕಿಂತ battle of ages ಎನ್ನಬಹುದಷ್ಟೇ’ ಎಂದು ಉಡಾಫೆಯ ಮಾತಾಡಿದ್ದ.ಅವನ ಬಗ್ಗೆ ಮಾತನಾಡಿದ್ದ ಬಿಲ್ಲಿ ಜೀನ್,’ಅವನಿಗೆ ಈ ಪಂದ್ಯವೇ ಅರ್ಥಹೀನವೆನ್ನಿಸಿತ್ತು.ಹಾಗಾಗಿ ಅವನ ಅಭಿಪ್ರಾಯವೇ ಅರ್ಥಹೀನ’ ಎಂದು ತಿರುಗೇಟು ಕೊಟ್ಟಿದ್ದಳು.
‘ನಾನು ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು.ನನಗೆ ಮಾತ್ರವಲ್ಲದೇ ಮಹಿಳಾ ಟೆನ್ನಿಸ್‌ಗೂ ಈ ಪಂದ್ಯದ ಗೆಲುವಿನ ಅಗತ್ಯವಿತ್ತು.ನಾನು ಸೋತಿದ್ದರೆ ಮಹಿಳಾ ಟೆನ್ನಿಸ್‌ನೆಡೆಗೆ ನೋಡುಗರ ಭಾವವೇ ಬದಲಾಗುತ್ತಿತ್ತು.ಬಹುಶಃ ಮಹಿಳಾ ಟೆನ್ನಿಸ್ ಎನ್ನುವುದು ಐವತ್ತು ವರ್ಷ ಹಿಂದಕ್ಕೆ ಹೋಗಿರುತ್ತಿತ್ತು’ ಎಂದಿದ್ದ ಬಿಲ್ಲಿ ಜೀನ್‌ಳ ಮಾತುಗಳಲ್ಲಿ ಸತ್ಯವಿತ್ತು.ಆಕೆಯ ಗೆಲುವು ಅದೆಷ್ಟೋ ಹೆಣ್ಣುಮಕ್ಕಳಿಗೆ ಟೆನ್ನಿಸನತ್ತ ಆಸಕ್ತಿ ಮೂಡಿಸಿತ್ತು.ಒಂದರ್ಥದಲ್ಲಿ ಮಹಿಳಾ ಟೆನ್ನಿಸ್ ಕುರಿತು   ಟೆನ್ನಿಸ್ ಲೋಕದ ಆಲೊಚನಾ ಲಹರಿಯೂ ಇತ್ಯಾತ್ಮಕವಾಗಿ ಬದಲಾಗಿತ್ತು ಎಂದರೆ ತಪ್ಪಾಗಲಾರದು.ಮುಂದೆ ಬಹುಕಾಲ ಟೆನ್ನಿಸ್ ಲೋಕವನ್ನು ಆಳಿದ್ದಳು ಬಿಲ್ಲಿ ಜೀನ್ ಕಿಂಗ್.ನಿವೃತ್ತಿಯ ಹೊತ್ತಿಗೆ ಹನ್ನೆರಡು ಸಿಂಗಲ್ಸ್ ,ಹದಿನಾರು ಡಬಲ್ಸ್ ಮತ್ತು ಹನ್ನೊಂದು ಮಿಕ್ಸಡ್ ಡಬಲ್ಸ್ ಗೆದ್ದಿದ್ದ ಆಕೆ ಇಂದಿಗೂ ಟೆನ್ನಿಸ್ ಲೋಕದ ದಂತ ಕತೆಗಳ ಪೈಕಿ ಒಬ್ಬಾಕೆ.
ಇತ್ತೀಚೆಗೆ ಬಿಡುಗಡೆಯಾದ ‘ಯುವರತ್ನ ‘ಸಿನಿಮಾದಲ್ಲಿ  ಪುರುಷ ಕ್ರಿಕೆಟ್ ತಂಡದೆದುರು ಮಹಿಳಾ ಕ್ರಿಕೆಟ್ ತಂಡವನ್ನು ತಂದು ನಿಲ್ಲಿಸುವ ದೃಶ್ಯವೊಂದನ್ನು ನೋಡಿದಾಗ ನನಗೆ ಈ ಕತೆ ನೆನಪಾಯಿತು.
The post ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು appeared first on SportsKannada  ಸ್ಪೋರ್ಟ್ಸ್  ಕನ್ನಡ.
ತೆಂಡೂಲ್ಕರ್ ಮಗ ಎಂಬ ಒಂದೇ ಕಾರಣಕ್ಕೆ ಟೀಕಿಸುವ ಮುನ್ನ…
ಅದು ಮುಂಬಯಿಯ ಪ್ರಸಿದ್ದ ಕ್ರಿಕೆಟ್ ಪಂದ್ಯ ಭಂಡಾರಿ ಕಪ್‌ನ ಸಂದರ್ಭ.ಆರ್ಯಾ ಗುರುಕುಲ್ ಶಿಕ್ಷಣ ಸಂಸ್ಥೆಯ ಹದಿನಾರರ ವಯೋಮಿತಿಯ ಕ್ರಿಕೆಟ್ ತಂಡಕ್ಕೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಇಕ್ಕಟ್ಟಿನ ಪರಿಸ್ಥಿತಿ.
ಸಂಸ್ಥೆಯ ಆ ವಯಸ್ಸಿನ ಹುಡುಗರಿಗೆ ಪರೀಕ್ಷೆಗಳ ಸಂದರ್ಭ.ಹಾಗೆಂದು ಪಂದ್ಯಾವಳಿಗಳಲ್ಲಿ ಭಾಗವಹಿಸದೇ ಹೋದರೇ ಪಂದ್ಯಾಟಕ್ಕೆ ಭವಿಷ್ಯದಲ್ಲಿ ಸಂಸ್ಥೆಯ ಭಾಗವಹಿಸುವಿಕೆಯ ಬಗ್ಗೆ ನಿರ್ಭಂದಗಳ ಹೇರುವಿಕೆಯ ಸಾಧ್ಯತೆ.ಹಾಗಾಗಿ ತಕ್ಷಣಕ್ಕೆ ನಿರ್ಧರಿಸಿದ ಶಿಕ್ಷಣ ಮಂಡಳಿ,ಹದಿನಾರರ ಬದಲು ಹನ್ನೆರಡರ ಪೋರರ ತಂಡವೊಂದನ್ನು ಟೂರ್ನಿಗೆ ಕಳುಹಿಸಲು ನಿರ್ಧರಿಸುತ್ತದೆ.ಟೆನ್ನಿಸ್ ಬಾಲ್‌ನಲ್ಲಿ ಮಾತ್ರವೇ ಆಡಿ ಅಭ್ಯಾಸವಿದ್ದ ತಂಡದ ಬಹುಪಾಲು ಗುರುಕುಲ್ ಆಟಗಾರರಿಗೆ ಅದು ಮೊದಲ ಲೆದರ್ ಬಾಲ್ ಪಂದ್ಯ.
ಎದುರಿಗಿದ್ದದ್ದು ಕೆ.ಸಿ ಗಾಂಧಿ ಪ್ರೌಢಶಾಲೆಯ ಬಲಿಷ್ಠ ತಂಡ.ತಮ್ಮೆದುರಿಗೆ ಕಂಡ ಪುಟ್ಟ ಬಾಲಕರ ತಂಡ ಕಂಡಾಗಲೇ ಅವರಿಗೆ ಮಾನಸಿಕ ಜಯ.ನಿರೀಕ್ಷೆಯಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಅನನುಭವಿ ಆರ್ಯ ಗುರುಕುಲ್ ಕೇವಲ ಮೂವತ್ತು ಚಿಲ್ಲರೆ ರನ್ನುಗಳಿಗೆ ಆಲೌಟ್. ನಂತರ ಶುರುವಾಗಿದ್ದು ಕೆ.ಸಿ ಗಾಂಧಿಯ ಆಟಗಾರರ ಆರ್ಭಟ.
ಕೆ ಸಿ ಗಾಂಧಿಯ ಸಂಸ್ಥೆಯ ಆರಂಭಿಕ ಹುಡುಗನೊಬ್ಬ ಎದುರಾಳಿ ತಂಡದ ಹುಡುಗರ ಮೇಲೆ ಅಟ್ಟಹಾಸ ಮೆರೆದುಬಿಟ್ಟಿದ್ದ.ಕೇವಲ ಮೂನ್ನುರು ಚಿಲ್ಲರೇ ಎಸೆತಗಳಲ್ಲಿ 59 ಸಿಕ್ಸರ್‌ಗಳು ಮತ್ತು 128 ಬೌಂಡರಿಗಳ ನೆರವಿನಿಂದ ಸಾವಿರ ರನ್ನುಗಳನ್ನು ಬಡಿದು ಸಾರ್ವಕಾಲಿಕ ಅತಿಹೆಚ್ಚು ರನ್ನಿನ ಇನ್ನಿಂಗ್ಸ್ ಎನ್ನುವ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ.
ನಿಜಕ್ಕೂ ಸಾವಿರ ರನ್ನುಗಳನ್ನು ಹೊಡೆಯುವುದು ಅದ್ಭುತ ದಾಖಲೆಯೆನ್ನುವುದರಲ್ಲಿ ಸುಳ್ಳೇನೂ ಇಲ್ಲ.ಆದರೆ ಈ ದಾಖಲೆಗೆ ಎದುರಾಳಿ ತಂಡದ ಕೊಡುಗೆಯೂ ಕಡಿಮೆಯೆನೂ ಇರಲಿಲ್ಲ.ಅತಿ ದುರ್ಬಲ ಎದುರಾಳಿ ತಂಡ ಸಾವಿರ ರನ್ನುಗಳ ಸರದಾರನ ಒಟ್ಟು ಇಪ್ಪತ್ತೆರಡು ಕ್ಯಾಚುಗಳನ್ನು ಕೈಚೆಲ್ಲಿದ್ದರೆ,ಮೂರು ಸ್ಟಂಪಿಂಗ್ ಅವಕಾಶಗಳನ್ನು ತಪ್ಪಿಸಿಕೊಂಡಿದ್ದರು. ಅದರ ಹೊರತಾಗಿ ಮೈದಾನದ ಒಂದು ಪಕ್ಕದ ಬೌಂಡರಿ ಸಹ ಕೇವಲ ಮೂವತ್ತು ಯಾರ್ಡ್‌ಗಳಷ್ಟಿದ್ದಿದ್ದು ಸಹಸ್ರವೀರನಿಗೆ ಇನ್ನಷ್ಟು ಸಹಾಯಕವಾಗಿತ್ತು.ಗುರುಕುಲ್ ತಂಡದ
ಹನ್ನೆರಡರ ವಯೋಮಿತಿಯ  ಮುಕ್ಕಾಲು ಪಾಲು ಹುಡುಗರಿಗೆ ಒಂಬತ್ತು ಓವರ್‌ಗಳಿಗಿಂತ ಹೆಚ್ಚು ಓವರ್‌ಗಳಷ್ಟು ಬೌಲಿಂಗ್ ಮಾಡಿ ಅಭ್ಯಾಸವಿರಲಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಹದಿನಾರು ಯಾರ್ಡ್‌ನ ಪಿಚ್‌ನಲ್ಲಿ ಚೆಂಡೆಸೆದು ಮಾತ್ರವೇ ಅಭ್ಯಾಸವಿದ್ದ ಹುಡುಗರು ಮೊದಲ ಬಾರಿಗೆ ಇಪ್ಪತ್ತೆರಡು ಗಜದ ಪಿಚ್‌ನಲ್ಲಿ ಚೆಂಡೆಸೆದಿದ್ದರು…!!
ಇಷ್ಟಾಗಿ ಆತನ ಸಾಧನೆಯೇನೂ ಕಡಿಮೆಯದಲ್ಲ ಎನ್ನುವುದು ಸತ್ಯ.ಆವತ್ತಿನ ಮಹಾರಾಷ್ಟ್ರ ದ ಕ್ರೀಡಾ ಮಂತ್ರಿ ವಿನೋದ್ ತಾವ್ಡೆ,ಆ ಹುಡುಗನ ಭವಿಷ್ಯದ ಕೋಚಿಂಗ್ ಮತ್ತು ಶಾಲಾ ಖರ್ಚುವೆಚ್ಚಗಳನ್ನು  ರಾಜ್ಯ ಸರಕಾರವೇ ಭರಿಸುವುದಾಗಿ ಭರವಸೆ ನೀಡಿದ್ದರು.ಸಚಿನ್ ತೆಂಡೂಲ್ಕರ್ ,ಧೋನಿಯಂಥಹ ಆಟಗಾರರು ಅವನ ಆಟವನ್ನು ಕೊಂಡಾಡಿದ್ದರು.
ಅದಾದ ನಂತರ ಏನಾಯಿತು..? ಬಹುಶಃ ಬಹುತೇಕರಿಗೆ ಗೊತ್ತಿಲ್ಲ.ಆತ ಮುಂದೆ ತುಂಬ ಅದ್ಭುತವಾದ ಆಟವೇನೂ ಆಡಲಿಲ್ಲ.ತೀರ ಸಾವಿರ ಅಲ್ಲದಿದ್ದರೂ ಸಾಲು ಸಾಲು ಶತಕಗಳು ,ಪಂದ್ಯ ಗೆಲ್ಲಿಸುವ ಪ್ರದರ್ಶನಗಳು ಆತನಿಂದ ಕಂಡುಬರಲಿಲ್ಲ.‌ಮಹಾರಾಷ್ಟ್ರ ಸರಕಾರದ ಮಾಸಿಕ ಹತ್ತು ತಿಂಗಳ ಪ್ರೋತ್ಸಾಹ ಧನದ ಹೊರತಾಗಿಯೂ ಆತನ ಆಟದಲ್ಲಿ ವಿಶೇಷ ಬೆಳವಣಿಗೆ ಏನೂ ಕಂಡು ಬರಲಿಲ್ಲ. ಸತ್ಯಾಸತ್ಯತೆಗಳ ಅರಿವಿಲ್ಲವಾದರೂ ಪ್ರಣವ್ ಧನಾವಡೆ ಎನ್ನುವ ಸಾವಿರ ರನ್ನುಗಳ ಸರದಾರ  ತೀರ ಇತ್ತೀಚೆಗೆ ಆತ ಕ್ರಿಕೆಟ್ ಬಿಟ್ಟುಬಿಟ್ಟ ಎಂಬ ಸುದ್ದಿಗಳೂ ಬಂದಿದ್ದವು.
ನಮ್ಮಲ್ಲಿ ಬಹುತೇಕರಿಗೆ ಈ ಹುಡುಗನ ನೆನಪಾಗುವುದು ಅರ್ಜುನ್ ತೆಂಡೂಲ್ಕರ್‌ನ ಹೆಸರು ಕೇಳಿಬಂದಾಗ ಮಾತ್ರವೇ.ಅರ್ಜುನ್ ತೆಂಡೂಲ್ಕರ್ ಯಾವುದಾದರೂ ಪಂದ್ಯಾವಳಿಗೆ ಆಯ್ಕೆಯಾದರೆ ಸಾಕು ,ತಕ್ಷಣವೇ ಮೀಮ್‌ಗಳು ಪ್ರತ್ಯಕ್ಷ.ಆಟೊ ಚಾಲಕನ ಮಗ ಸಾವಿರ ರನ್ನು ಹೊಡೆದರೂ ಆಯ್ಕೆಯಾಗಲಿಲ್ಲ,ಆದರೆ ‘ತೆಂಡೂಲ್ಕರ್’ ಎನ್ನುವ ಹೆಸರಿನಿಂದ ಆಯ್ಕೆ ಎನ್ನುವ ಭಾವುಕ, ರೋಷಾವೇಶದ ಮಾತುಗಳು.ತೆಂಡೂಲ್ಕರ್ ಮಗನ ಆಯ್ಕೆ ಕೇವಲ ತೆಂಡೂಲ್ಕರ್ ಎನ್ನುವ ಕಾರಣಕ್ಕೆ ಆಗುವುದು ಎಷ್ಟು ತಪ್ಪೋ ,ಹಾಗೆ ಸಾವಿರ ರನ್ನುಗಳ ಒಂದು
ಹೈಸ್ಕೂಲ್ ಮಟ್ಟದ ಇನ್ನಿಂಗ್ಸ್‌ನ ಕಾರಣಕ್ಕೆ ಹುಡುಗನೊಬ್ಬನ ಆಯ್ಕೆಯೂ ತಪ್ಪೆ ಎನ್ನುವುದು ನನ್ನ ತರ್ಕವಾದರೂ ,’ಆಟೋ ಚಾಲಕ’ ಎನ್ನುವ ‘ಬಡವರ’ಮಗನನ್ನು ಟೀಕಿಸಿದ ಮಹಾಪರಾಧಕ್ಕೆ ನನಗೆ ಶಿಕ್ಷೆಯಾದೀತು ಎಂದು ಸುಮ್ಮನಾಗಿದ್ದೇನಷ್ಟೇ
ಇವತ್ತು ಮುಂಬೈ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್  ಎಂಬ ಸುದ್ದಿ ನೋಡಿ ನನಗೆ ಇದೆಲ್ಲ ನೆನಪಾಯಿತು.
The post ತೆಂಡೂಲ್ಕರ್ ಮಗ ಎಂಬ ಒಂದೇ ಕಾರಣಕ್ಕೆ ಟೀಕಿಸುವ ಮುನ್ನ… appeared first on SportsKannada  ಸ್ಪೋರ್ಟ್ಸ್  ಕನ್ನಡ.
ಕಡೆಯವರೆಗೂ ಆತ್ಮವಿಶ್ವಾಸವಿರಬೇಕು ಅವನ ಮೇಲೆ ಅವನಿಗಿದ್ದಂತೆ…..
ಈ ವರ್ಷದ ಫ್ರೆಂಚ್ ಓಪನ್ ಪಂದ್ಯಾವಳಿ ಆರಂಭವಾಗುವ ಮುನ್ನ, ನಡಾಲ್‌ನ  ಓಟವನ್ನು ಜೋಕೊವಿಚ್ ನಿಲ್ಲಿಸಲಿದ್ದಾನೆ ಎನ್ನುವುದು ಟೆನ್ನಿಸ್ ಪಂಡಿತರ ಲೆಕ್ಕಾಚಾರವಾಗಿತ್ತು.
ವರ್ಷದುದ್ದಕ್<wbr />ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಜೋಕೊವಿಚ್‌ ಮತ್ತು  ರೋಮ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯಗಳಲ್ಲಿಯೇ ಹೊರಬಿದ್ದಿದ್ದ ನಡಾಲ್‌ ನಡುವಣದ ಜಿದ್ದಾಜಿದ್ದಿಯಲ್ಲಿ ಈ ಬಾರಿ ಜೋಕೊವಿಚ್‌ನದ್ದೇ ಮೇಲುಗೈ ಎಂದು ಎಲ್ಲರೂ ಭಾವಿಸಿದ್ದರು.ಆಡಿದ್ದ  ಇಪ್ಪತ್ತೊಂಬತ್ತು ಪಂದ್ಯಗಳ ಪೈಕಿ ಕೇವಲ ಒಂದೇ  ಪಂದ್ಯಗಳನ್ನು ಸೋತಿದ್ದ ಜೋಕೊ.ಸೋತ ಪಂದ್ಯವೂ ಸಹ ಸೋಲಿನಂತಿರದೇ ಟೆನ್ನಿಸ್ ನಿಯಮಾವಳಿಗಳಿ ಉಲ್ಲಂಘನೆಗೆ ಶಿಕ್ಷೆಯೆನ್ನುವಂತಿದ್ದಿದ್ದರಿಂದ ಅದು ಕೇವಲ ಲೆಕ್ಕಾಚಾರದ ಸೋಲಾಗಿತ್ತಷ್ಟೇ
.ಹಾಗಾಗಿ ಆತ ಅಲ್ಲಿಯವರೆಗೆ ಅಜೇಯನೇ ಎನ್ನಬಹುದು.ಸಹಜವಾಗಿಯೇ ಆಗ ಆಡಿದ ಹತ್ತೊಂಬತ್ತು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳನ್ನು ಸೋತಿದ್ದ ನಡಾಲ್‌ಗಿಂತ ಸಾಕಷ್ಟು ಬಲಶಾಲಿಯಾಗಿ ಗೋಚರಿಸುತ್ತಿದ್ದ.ಅದೇ ಕಾರಣಕ್ಕೆ ಟೆನ್ನಿಸ್ ಲೋಕದ ಪಂಡಿತರ ಕಣ್ಣುಗಳು ಫ್ರೆಂಚ್ ಓಪನ್ ಫೈನಲ್ಲಿನ ಮೇಲೆ ನೆಟ್ಟಿದ್ದವು.ಹನ್ನೆರಡು ಬಾರಿ ಪಂದ್ಯಾವಳಿಯನ್ನು ಗೆದ್ದು ದಾಖಲೆ ನಿರ್ಮಿಸಿದ ನಡಾಲ್‌‌ನ ಮೇಲೆ ಸ್ಥಿರತೆಯ ನಿರೀಕ್ಷೆಯ ಒತ್ತಡವಿತ್ತು.ಫ್ರೆಂಚ್ ಓಪನ್ ಅಂಕಣ ಅವನದ್ದೇ ಎನ್ನುವಷ್ಟು ಆಪ್ತವಾಗಿದ್ದರೂ ಅವನ ತಂಡಕ್ಕೆ ದುಗುಡ.ಜೋಕೊವಿಚ್‌ನೆದುರು ಅದೇಕೋ ಪ್ರತಿಬಾರಿಯೂ ತಿಣುಕಾಡುವ ನಡಾಲ್‌ ಬಗ್ಗೆ ಅವರಿಗೇನೋ ಸಣ್ಣ ಆತಂಕದ ಲೆಕ್ಕಾಚಾರವಿದ್ದಿರಲಿಕ್ಕೂ ಸಾಕು.ಹಾಗಿರುವಾಗಲೇ ಫೈನಲ್ಲಿನಲ್ಲಿ ಮತ್ತೆ ಜೋಕೊವಿಚ್‌ನನ್ನು ಎದುರಿಸಬೇಕಾದ ಅನಿವಾರ್ಯತೆ ನಡಾಲ್‌ನದ್ದು,ತನ್ನ ಪಾಡಿಗೆ ತಾನೆಂಬಂತೆ ಆತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಫೈನಲ್ ಪಂದ್ಯದ ಅಂತಿಮ ಹದಿನೈದು ನಿಮಿಷಗಳಿರುವಾಗ ಆಯೋಜಕರು ಕೊಟ್ಟ ಸುದ್ದಿಗೆ ಅಳುಕಿಬಿಟ್ಟಿದ್ದರು ನಡಾಲ್‌ನ ತಂಡದವರು.
’ವಾತಾವರಣ ಸಮಸ್ಯೆ ಇರುವುದರಿಂದ ಈ ಬಾರಿಯ ಅಂತಿಮ ಪಂದ್ಯದ ಮೇಲ್ಚಾವಣಿಯನ್ನು ಮುಚ್ಚಲಾಗುತ್ತದೆ.ಇದು ಮೊದಲ ಒಳಾಂಗಣ ಫೈನಲ್ ಪಂದ್ಯವಾಗಲಿದೆ..’
’I dont care,It doesnt change anything,I AM GOING TO WIN THIS MATCH…’
ಮುಂದಿನದ್ದು ಇತಿಹಾಸ.ಪಂದ್ಯವನ್ನು 6 – 0,6-2,7-5 ರ ನೇರ ಸೆಟ್‌ಗಳಲ್ಲಿ ಗೆದ್ದಿದ್ದ ಆವೇಮಣ್ಣಿನಂಕಣದ ರಾಜ.  ಬಹುಶ: ಜೊಕೊವಿಚ್ ನಂತಹ ಮಹಾನ್ ಆಟಗಾರ ತನ್ನ ವೃತ್ತಿ ಬದುಕಿನಲ್ಲಿ ಕಂಡ ಅತ್ಯಂತ ಕಳಪೆ ಸೋಲುಗಳಲ್ಲಿ ಒಂದು 2020ರ ಫ್ರೆಂಚ್ ಓಪನ್ನಿನ ಅಂತಿಮ ಪಂದ್ಯ.ಅವನಿಗೆ ಆ ವರ್ಷದ ಮೊದಲ ಅಧಿಕೃತ ಸೋಲು ಸಹ ಅದೇ .’ಪಂದ್ಯಾವಳಿಯ ಆರಂಭಕ್ಕೂ ಮುನ್ನ,ಈ ಬಾರಿಯ ಫ್ರೆಂಚ್ ಓಪನ್ ಪಂದ್ಯಾವಳಿಯ ಪರಿಸ್ಥಿತಿಗಳು ನನಗೆ ವರವಾಗಲಿದೆ ಎಂದುಕೊಂಡಿದ್ದೆ.ಸೇಮಿಫೈನಲ್ಲಿನವರೆ<wbr />ಗೂ ಚಂದವೇ ಆಡಿದ್ದೆ.
ಆದರೆ ಅಂತಿಮ ಪಂದ್ಯವೇ ಬೇರೆ.ಆತ ಇಂದಿನ ಪಂದ್ಯದ ಎಲ್ಲ ವಿಭಾಗಗಳಲ್ಲಿಯೂ ನನ್ನ ಮೇಲೆ ಸ್ಪಷ್ಟ ಮೇಲುಗೈ ಸಾಧಿಸಿಬಿಟ್ಟ.ಹದಿಮೂರು ಬಾರಿ ಫ್ರೆಂಚ್ ಓಪನ್ ಗೆಲ್ಲುವುದು ಅತಿಮಾನುಷ ಸಾಧನೆ.ಸಾಧನೆಯ ಪರಾಕಾಷ್ಠೆ ಎನ್ನಬಹುದೇನೊ.ಹತ್ತಾರು ಗಾಯದ ಸಮಸ್ಯೆಗಳ ನಂತರವೂ ಆತ ಮತ್ತೆ ಮತ್ತೆ ಎದ್ದು ಬರುತ್ತಾನೆ.ಬಹುಶ: ನನ್ನ ಕೆಟ್ಟ ಸೋಲಿನಿಂದ ನಾನು ಕಲಿಯಬೇಕಾಗಿದ್ದು ಇದೇ’ಎಂದು ನುಡಿದ ಜೋಕೊವಿಚ್ ನಡಾಲ್‌ನನ್ನು ಪ್ರಶಂಸಿಸಿದ್ದ.
ಈ ಘಟನೆಯ ಕುರಿತು ಕೇಳಿದಾಗಲೆಲ್ಲ ಅನ್ನಿಸುವುದೊಂದೇ.ಬದುಕಲ್ಲಿ ರಾಶಿ ರಾಶಿ ಸಮಸ್ಯೆಗಳಿವೆ ನಿಜ.ಆದರೆ ಎಲ್ಲ ದುಗುಡ ದುಮ್ಮಾನಗಳ ನಡುವೆ ನಮ್ಮ ಸಹಾಯಕ್ಕೆ ನಿಲ್ಲುವುದು ನಮ್ಮ ಮನಸ್ಥಿತಿಯೇ.ಸೋಲಿನ ಭೀತಿ ಎದುರಾದಾಗ  ಅನಗತ್ಯದ  ಆತಂಕಗಳನ್ನು ಪಕ್ಕಕ್ಕಿಟ್ಟು ನಡಾಲ್‌ನಂತೆ ’I AM GOING TO WIN TODAY’ ಎನ್ನುತ ಆತ್ಮವಿಶ್ವಾಸದಿಂದ ಎದ್ದು  ಹೊರಟರೆ ಬದುಕು ಇನ್ನಷ್ಟು ಸಲೀಸಾದೀತೇನೋ ಅಲ್ಲವಾ..??
The post ಕಡೆಯವರೆಗೂ ಆತ್ಮವಿಶ್ವಾಸವಿರಬೇಕು ಅವನ ಮೇಲೆ ಅವನಿಗಿದ್ದಂತೆ….. appeared first on SportsKannada  ಸ್ಪೋರ್ಟ್ಸ್  ಕನ್ನಡ.
“‘ಅಪ್ಪನ ಒತ್ತಾಯಕ್ಕೆ ಮೈದಾನಕ್ಕೆ ಇಳಿದವಳು ಜಗತ್ತು ಗೆದ್ದಳು “
ಹಾಗೆಂದವಳು ಸ್ಟೆಫಿ ಗ್ರಾಫ್‌.ಜರ್ಮನಿಯ ಟೆನ್ನಿಸ್ ಸುಂದರಿ.ಗೆದ್ದ ಟೂರ್ನಿಗಳಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದಾದರೂ ನಿಸ್ಸಂಶಯವಾಗಿ ಮಹಿಳಾ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಕ್ರೀಡಾಳು.
ಬದುಕಿನ ತುಂಬ ಚಿಕ್ಕವಯಸ್ಸಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದವಳು ಸ್ಟೆಫಿ.ಉಳಿದ ಅನೇಕ ಟೆನ್ನಿಸ್ ಕ್ರೀಡಾಪಟುಗಳಿಗೆ ಹೋಲಿಸಿದರೆ ಈಕೆಯ ಕತೆ ಕೊಂಚ ಭಿನ್ನ.ಇವತ್ತಿನ ಟೆನ್ನಿಸ್ ಲೋಕದ ದಂತೆಕತೆಗಳಾಗಿರುವ ನಡಾಲ್ ಜೋಕೊವಿಚ್‌ರಂಥವರಿಗೆ ಟೆನ್ನಿಸ್ ಎನ್ನುವ ಚೆಂಡಾಟ ಬಾಲ್ಯದ ಮೊದಲ ಆಕರ್ಷಣೆ.ಸಹಜವಾಗಿ ಟೆನ್ನಿಸ್ ಕೋರ್ಟ್‌ನ ಸೆಳೆತವುಳ್ಳವರು ಅವರೆಲ್ಲ.ಆದರೆ ಗ್ರಾಫ್ ಹಾಗಲ್ಲ.ಆಕೆಯ ಬಾಲ್ಯಕ್ಕೆ ಟೆನ್ನಿಸ್ ಮೊದಲ ಆಯ್ಕೆಯೇನೂ ಆಗಿರಲಿಲ್ಲ.ಆದರೆ ಅಪ್ಪ ಪೀಟರ್‌ನಿಗೆ ಮಗಳು ಟೆನ್ನಿಸ್ ತಾರೆಯಾಗಬೇಕೆನ್ನುವ ಕನಸು.ಹಾಗಾಗಿ ಮೂರನೇ ವಯಸ್ಸಿಗಾಗಲೇ ಆಕೆಯ ಕೈಗೆ ಟೆನ್ನಿಸ್ ರಾಕೆಟ್ ಕೊಟ್ಟುಬಿಟ್ಟಿದ್ದ ಅಪ್ಪ.ಮನೆಯ ಹಜಾರದಲ್ಲಿಯೇ ಆಟವಾಡುವ ಮಗಳಿಗೆ ಅಪ್ಪ ಹೇಳುತ್ತಿದ್ದದ್ದು ಒಂದೇ ಮಾತು .ಗೋಡೆಗೆ ಬಡಿದು ಮರುಪುಟಿಯುವ ಚೆಂಡನ್ನು ಕನಿಷ್ಟ ಇಪ್ಪತ್ತೈದು ಬಾರಿ ನೀನು ಗೋಡೆಗೆ ಹೊಡೆಯುವಂತಾದರೆ ನಿನಗೆ ಸಂಜೆಗೊಂದು ಐಸ್‌ಕ್ರೀಮ್ ಗ್ಯಾರಂಟಿ..!!
ಐಸ್ ಕ್ರೀಮ್ ಆಸೆಗೆ ಆಟ ಶುರುವಿಟ್ಟುಕೊಂಡ ಸ್ಟೇಫಿಗೆ ನಿಧಾನಕ್ಕೆ ಆಟದ ಮೇಲೆ ಆಸಕ್ತಿ ಮೂಡಲಾರಂಭಿಸಿತ್ತು.ಚಿಕ್ಕವಯಸ್ಸಿನಿಂ<wbr />ದಲೇ ಭಯಂಕರ ಅಂಕೆಯಲ್ಲಿಟ್ಟು ಬೆಳೆಸಿದವನು ಅಪ್ಪ.ಆಕೆಯ ಟೆನ್ನಿಸ್ ವೃತ್ತಿ ಜೀವನ ಶುರುವಾಗುತ್ತಲೇ ಆಕೆಯ ಪ್ರತಿಯೊಂದರ ಮೇಲೂ ಅಪ್ಪನ ನಿಗಾ ಇತ್ತು.ಆಕೆಯ ಗೆಳೆಯರು,ಆಕೆಯ ಹಣಕಾಸಿನ ವಿಷಯ,ದಿನದ ಶೆಡೂಲ್ಯ ಎನ್ನವೂ ಅಪ್ಪನದ್ದೇ ಲೆಕ್ಕಾಚಾರ.ಕೊನೆಗೆ ಪಾರ್ಟಿಗೆಂದು ಹೊರಗೆ ಹೋಗುವುದಾದರೆ ರಾತ್ರಿ ಒಂಭತ್ತಕ್ಕೆ ಮನೆಯಲ್ಲಿರಬೇಕು ಎನ್ನುವುದು ಸಹ ಅಪ್ಪನ ನಿಯಮ..!!
ತನ್ನ ಹದಿಮೂರನೇ ವಯಸ್ಸಿಗಾಗಲೇ ವೃತ್ತಿ ಜೀವನ ಆರಂಭಿಸಿದವಳಿಗೆ ಆಟದೆಡೆಗೆ ಭಯಂಕರ ಸಮರ್ಪಣಾ ಭಾವ.ವೃತ್ತಿ ಜೀವನವಾರಂಭಿಸಿದ ಒಂದೆರಡು ವರ್ಷಗಳ ಕಾಲದಲ್ಲಿಯೇ ಆಕೆಯ ಆಟದ ಶೈಲಿಯನ್ನು ಗಮನಿಸಲಾರಂಭಿಸಿದ್ದರು ಟೆನ್ನಿಸ್ ಪಂಡಿತರು.1985 – 86ರ ಹೊತ್ತಿಗಾಗಲೇ ಗ್ರಾಂಡ್‌ಸ್ಲಾಮ್ ಟೂರ್ನಿಗಳ ಸೆಮಿಫೈನಲ್‌ ಹಂತಕ್ಕೆ ತಲುಪಿಕೊಳ್ಳುತ್ತಿದ್ದ ಗ್ರಾಫ್‌ನ ಸಾಮರ್ಥ್ಯ ನಿಧಾನಕ್ಕೆ ಅಭಿಮಾನಿಗಳಿಗೂ ಅರಿವಾಗಲಾರಂಭಿಸಿತ್ತು.
ಆದರೆ ಅದು ನವ್ರಾಟಿಲೋವಾ ಮತ್ತು ಕ್ರಿಸ್ ಎವರ್ಟ್‌ರಂಥಹ ಘಟಾನುಘಟಿಗಳಿದ್ದ ಕಾಲ.ಅವರನ್ನು ಎದುರಿಸುವಲ್ಲಿ ಆಕೆಗೆ ಆರಂಭಿಕ ಅನುಭವದ ಕೊರತೆ.ಹಾಗಾಗಿಯೇ ಏನೋ,85-86ರ ಕಾಲಕ್ಕೆ ಒಂಬತ್ತು ಪಂದ್ಯಗಳನ್ನು ಈ ಟೆನ್ನಿಸ್‌ದ್ವಯರೆದುರು ಸೋತುಬಿಟ್ಟಳು ಸ್ಟೆಫಿ.ಅಷ್ಟಾಗಿಯೂ ಆಕೆ ನಿರಾಶಳಾಗಿರಲಿಲ್ಲ.ಪ್ರತಿಬಾರಿಯ ಸೋಲು ಹೊಸದೇನೊ ಕಲಿಸುತ್ತದೆ ಎನ್ನು ಮನೋಭಾವ ಆಕೆಗೆ.ಸಣ್ಣದ್ದೊಂದು ತಿರುವಿಗಾಗಿ ಕಾಯುತ್ತಿದ್ದಳಾಕೆ.ಹಾಗೆ ಆಕೆ ಕಾಯುತ್ತಿದ್ದ ತಿರುವು ಆಕೆಗೆ 1987ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸಿಕ್ಕುಬಿಟ್ಟಿತ್ತು.ತೀವ್ರ ಸೆಣಸಾಟದ ಫೈನಲ್ ಪಂದ್ಯದಲ್ಲಿ ಆವತ್ತಿನ ಅಗ್ರಶ್ರೇಯಾಂಕಿತ ಆಟಗಾರ್ತಿ ನವ್ರಾಟಿಲೋವಾಳನ್ನು ಬಗ್ಗು ಬಡಿದಿದ್ದಳು ಗ್ರಾಫ್.ಆವತ್ತಿಗೆ ಮೊದಲ ಬಾರಿ ತಾನು ಅಗ್ರಶ್ರೇಯಾಂಕಿತ ಆಟಗಾರ್ತಿಯರನ್ನು ಸೋಲಿಸಬಲ್ಲೆನೆನ್ನುವ ವಿಶ್ವಾಸ ಆಕೆಯಲ್ಲಿ ಮೂಡಿತ್ತು.ಮಾನಸಿಕ ಅಡ್ಡಿಯೊಂದು ತೊಲಗಿತ್ತು.ಮುಂದಿನದು ಈಗ ಇತಿಹಾಸ.
80ರ ದಶಕದ ನಡುವಿನ ಕಾಲದಿಂದ ಹಿಡಿದು 90ರ ಉತ್ತರಾರ್ಧದ ಟೆನ್ನಿಸ್ ಜಗವನ್ನು ಅಕ್ಷರಶಃ ಸಾಮ್ರಾಜ್ಞಿಯಂತೆ ಆಳಿಬಿಟ್ಟಳು ಸ್ಟೇಫಿ.ಒಂದಾದ ನಂತರ ಒಂದರಂತೆ ಗ್ರಾಂಡ್‌ಸ್ಲಾಮ್ ಗೆಲ್ಲುತ್ತ ಹೊರಟ ಗ್ರಾಫ್‌ಳನ್ನು ಟೆನ್ನಿಸ್ ಲೋಕದಲ್ಲಿ ತಡೆಯುವವರೇ ಇಲ್ಲದಂತಾಗಿತ್ತು.1988ರ ವರ್ಷವನ್ನಂತೂ ಆಕೆ ಆಪೋಶನ ತೆಗೆದುಕೊಂಡುಬಿಟ್ಟಳೆಂದರೆ ತಪ್ಪಾಗಲಾರದು.ವರ್ಷದ ನಾಲ್ಕೂ ಗ್ರಾಂಡ್ ಸ್ಲಾಮ್ ಗೆಲ್ಲುವ ಮೂಲಕ ಆ ಸಾಧನೆಗೈದ ಮೂರನೇ ಮಹಿಳಾ ಟೆನ್ನಿಸ್ ಪಟುವಾಗಿ ಹೊರಹೊಮ್ಮಿದಳು.ಆದರೆ ಅದು ಅಷ್ಟಕ್ಕೆ ನಿಲ್ಲಲಿಲ್ಲ.ಆ ವರ್ಷದ ಓಲಿಂಪಿಕ್ಸ್ ಚಿನ್ನದ ಪದಕವನ್ನೂ ಸಹ ಗೆಲ್ಲುವ ಮೂಲಕ ಆಕೆ ‘ಗೊಲ್ಡನ್ ಗ್ರಾಂಡ್‌ಸ್ಲಾಮ್’ಗೆದ್ದ ಏಕೈಕ ಟೆನ್ನಿಸ್ ಪಟು ಎಂದು ಇತಿಹಾಸ ಬರೆದಳು.ಆ ವರ್ಷದ ಆಕೆಯ ಪ್ರಾಬಲ್ಯ ಹೇಗಿತ್ತೆಂದರೆ ಫ್ರೆಂಚ್ ಓಪನ್ ಫೈನಲ್ ಗೆಲ್ಲಲು ಆಕೆ ತೆಗೆದುಕೊಂಡಿದ್ದ ಸಮಯ ಕೇವಲ 32 ನಿಮಿಷಗಳು.ಎದುರಾಳಿಯಾಗಿದ್ದ ನತಾಶಾ ಜ್ವರೆವಾಳನ್ನು ಆಕೆ 6 -0 6 -0 ದ ನೇರ ಸೆಟ್‌ಗಳಲ್ಲಿ ಅಕ್ಷರಶಃ ಧೂಳಿಪಟ ಮಾಡಿದ್ದಳು ಸ್ಟೆಫಿ.
ವೃತ್ತಿ ಜೀವನದಲ್ಲಿ ಒಟ್ಟೂ ಇಪ್ಪತ್ತೆರಡು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದ ಗ್ರಾಫ್ ಹಲವಾರು ದಾಖಲೆಗಳ ಒಡತಿ.ಪ್ರತಿ ಪಂದ್ಯಾವಳಿಯನ್ನೂ ನಾಲ್ಕು ಬಾರ ಗೆದ್ದಿರುವ ಏಕೈಕ ಆಟಗಾರ್ತಿ. 377ವಾರಗಳ ಕಾಲ ರ್ಯಾಂಕಿಗ್ ಪಟ್ಟಿಯಲ್ಲಿ ಅಗ್ರಶ್ರೇಯಾಂಕಿತಳಾಗಿ ಮೆರೆದ ಗ್ರಾಫ್‌ಳದ್ದು ಅತಿ ಹೆಚ್ಚು ಕಾಲ ಅಗ್ರಶ್ರೆಯಾಂಕರ ಪಟ್ಟಿಯಲ್ಲಿದ್ದ ಆಟಗಾರರ (ಪುರುಷ ಮತ್ತು ಮಹಿಳಾ ಪಟುಗಳು ಸೇರಿದಂತೆ)ಪಟ್ಟಿಯಲ್ಲಿಯೂ ಅಗ್ರಸ್ಥಾನ.
ಇಷ್ಟಾಗಿ ಎಲ್ಲವೂ ಸರಾಗಿವಾಗಿಯೇನೂ ಇರಲಿಲ್ಲ ಆಕೆಗೆ.ವೃತ್ತಿ ಬದುಕಿನಲ್ಲಿ ಐವತ್ತಕ್ಕೂ ಹೆಚ್ಚುಬಾರಿ ಗಾಯ್ ಸಮಸ್ಯೆಯನ್ನು ಕಂಡಳಾಕೆ.ತನ್ನ ವಿಶಿಷ್ಟ ಆಟದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಆಕೆಗೆ ಒಂದು ಹಂತಕ್ಕೆ ಅಭಿಮಾನಿಗಳೇ ಮುಳುವಾಗಲಾರಂಭಿಸಿದ್ದರು.ಒಮ್ಮೆ ಆಕೆ ನೆಟ್ ಪ್ರಾಕ್ಟಿಸ್ ಮಾಡುತ್ತಿದ್ದ ಸಮಯಕ್ಕೆ ಹುಚ್ಚು ಅಭಿಮಾನಿಯೊಬ್ಬ ತನ್ನನ್ನು ಮದುವೆಯಾಗದಿದ್ದರೆ ಸತ್ತೇ ಹೋಗುತ್ತೇನೆಂದು ಕೈ ಕತ್ತರಿಸಿಕೊಂಡಾಗ ತೀರ ವಿಚಲಿತಳಾಗಿದ್ದಳಾಕೆ.ಹೋದಲ್ಲಿ ಬಂದಲ್ಲಿ ಅಭಿಮಾನಿಗಳ ಕಾಟ ತೀವ್ರವಾಗಿತ್ತು ಆಕೆಗೆ.1993ರಲ್ಲಿ ಆಕೆಯ ಹುಚ್ಚು ಅಭಿಮಾನಿಯೊಬ್ಬ ಆಕೆಯ ಮೇಲಿನ ಅಭಿಮಾನಕ್ಕೆ ಮೊನಿಕಾ ಸೆಲೆಸ್‌ಳನ್ನು ಚೂರಿಯಿಂದ ಇರಿದಾಗ ಬಿಕ್ಕಿಬಿಕ್ಕಿ ಅತ್ತಿದ್ದಳಂತೆ ಸ್ಟೇಫಿ.ಅಭಿಮಾನಿಯ ವರ್ತನೆ ಆಕೆಗೆ ನೋವು ತಂದಿದ್ದರೂ ಟೆನ್ನಿಸ್ ಪ್ರಿಯರ ಸಿಟ್ಟು ವಿನಾಕಾರಣ ಸ್ಟೆಫಿಯ ಮೇಲೆ ತಿರುಗಿತ್ತು.1993ರ ವಿಂಬಲ್ಡನ್ ಪಂದ್ಯಾವಳಿಗಳಲ್ಲಿ ,’ಇದೆಲ್ಲ ನಿನ್ನಿಂದಾಗಿಯೇ ಆಗಿದ್ದು ಸ್ಟೆಫಿ’ ಎನ್ನುವ ಬೋರ್ಡುಗಳು ಆಕೆಯ ಮನೋಸ್ಥೈರ್ಯವನ್ನು ಕುಗ್ಗಿಸಿದ್ದಂತೂ ಸುಳ್ಳಲ್ಲ.ಅಷ್ಟಾಗಿ ಆಕೆ ಗಟ್ಟಿಗಿತ್ತಿ.ಜನರ ಅರ್ಥಹೀನ ವಿರೋಧದ ನಡುವೆಯೂ ವರ್ಷದ ವಿಂಬಲ್ಡನ್ ಗೆಲ್ಲುವ ಮೂಲಕ ಜನರ ಮನಸನ್ನು ಮತ್ತೆ ಗೆಲ್ಲುವಲ್ಲಿ ಸಫಲಳಾಗಿದ್ದಳು.
ಆಕೆಯ ಆಟವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.ನೋಡಿ ಗೊತ್ತಿದ್ದವರಿಗೆ ಅದರ ಭಾವವೇ ಬೇರೆ ತೆರನಾದದ್ದು.ರೋಜರ್ ಫೆಡರರ್ ಆಟವೆನ್ನುವುದು ಕ್ರೀಡಾ ಕಾವ್ಯದಂತೆನ್ನಿಸಿದರೆ ,ಸ್ಟೆಫಿಯ ಆಟವೆನ್ನುವುದು ಬ್ಯಾಲೆಯಂಥದ್ದು.ಅದೇ ಕಾರಣಕ್ಕೋ ಏನೋ
ಸಾವಿರ ಟೆನ್ನಿಸ್ ಆಟಗಾರರು ಬರಬಹುದು,ಟೆನ್ನಿಸ್ ಜಗತ್ತಿಗೆ ಮತ್ತೊಬ್ಬ ಸ್ಟೆಫಿ ಗ್ರಾಫ್ ಬರುವುದು ಸಾಧ್ಯವಿಲ್ಲ ಎನ್ನುವುದು ಅಭಿಮಾನಿಗಳ ಮಾತು.ಒಪ್ಪಬಹುದೇನೋ ಅಲ್ಲವಾ..??
The post “‘ಅಪ್ಪನ ಒತ್ತಾಯಕ್ಕೆ ಮೈದಾನಕ್ಕೆ ಇಳಿದವಳು ಜಗತ್ತು ಗೆದ್ದಳು “ appeared first on SportsKannada  ಸ್ಪೋರ್ಟ್ಸ್  ಕನ್ನಡ.