ಸಣ್ಣದೊಂದು ಕನಸು ದೊಡ್ಡ ಯೋಚನೆ ಮೂಲಕ ಚಿಕ್ಕ ತಂಡದೊಂದಿಗೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ ಭರವಸೆಯ ಬೆಳಕಾಗಿ ಒಂದು ಸಂಘಟನೆ ಪ್ರಾರಂಭವಾಗುತ್ತಾ ಇದೆ.
ಇದರ ಉಧ್ಘಾಟನಾ ಸಮಾರಂಭ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಾಳೆಯ ದಿನ ತಾರೀಕು 6 ಆಗಸ್ಟ್ ಭಾನುವಾರದಂದು ಬೆಂಗಳೂರಿನ ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, N1&2,5ನೇ ವಾರ್ಡ್, 8ನೇ ಅಡ್ಡ ರಸ್ತೆ, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ದಲ್ಲಿರುವ ನಾರಾಯಣ ಗುರು ಸಭಾಭವನ ಇಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಶ್ರೀ ಮಹಾಲಕ್ಷ್ಮಿ ಟ್ರಸ್ಟ್ (ರಿ) ಉಪ್ಪುಂದ ಇದರ ಅಧ್ಯಕ್ಷರು ಮತ್ತು ಶೆಫ್ ಟಾಕ್ ಅಂಡ್ ಹಾಸ್ಪಿಟಾಲಿಟಿಸ್ ಸರ್ವಿಸಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರು ಆಗಿರುವಂತಹ ಶ್ರೀ ಗೋವಿಂದ ಬಾಬು ಪೂಜಾರಿ ಇವರು ಕರಾವಳಿ ಸಿರಿ ಕ್ಲಬ್ ಬೆಂಗಳೂರುನ ಉದ್ಘಾಟನೆ ಮಾಡಲಿರುವರು. ಇವರೊಂದಿಗೆ ಅನೇಕ ಚಲನ ಚಿತ್ರ ನಟರು, ಸಿನಿಮಾ ನಿರ್ಮಾಪಕರು, ಚಲನ ಚಿತ್ರ ನಿರ್ದೇಶಕರು ಮತ್ತು ಹೆಸರಾಂತ ನಿರೂಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ ಭಾಗವಹಿಸಲಿದ್ದಾರೆ. ಸ್ಪೋರ್ಟ್ಸ್ ಕನ್ನಡ ವೆಬ್ ಸೈಟ್ ನ ಪ್ರಧಾನ ಸಂಪಾದಕ ಕೋಟ ಶ್ರೀ ರಾಮಕೃಷ್ಣ ಆಚಾರ್ಯ ಇವರ ಗೌರವ ಉಪಸ್ಥಿತಿಯಲ್ಲಿ, ಪತ್ರಕರ್ತ ಮತ್ತು ಅಭಿಮತ ತಂಡದ ಸಂಸ್ಥಾಪಕ ವಸಂತ ಗಿಳಿಯಾರ್, ಬೆಂಗಳೂರಿನ ಹೋಟೆಲ್ ಉದ್ಯಮಿ ರಘುರಾಮ ಶೆಟ್ಟಿ ಮತ್ತು ಚಲನಚಿತ್ರ ನಟಿ ಅನುಷಾ ರೈ ಉಪಸ್ಥಿತರಿರುವರು. ಈ ಸಂದರ್ಭ ಸಮಾಜಸೇವೆ, ಸಂಗೀತ, ಯಕ್ಷಗಾನ ಕಲಾಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದಂತಹ ಕರಾವಳಿಯ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಗೌರವಾರ್ಪಣೆ ಕಾರ್ಯಕ್ರಮವು ಕೂಡ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದ ನಂತರ ನಂತರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೈಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಸಾರಥ್ಯದ ಕಲಾಶಕ್ತಿ ಕನ್ನುಕೆರೆ ತೆಕ್ಕಟ್ಟೆ ಇವರಿಂದ ‘ನಗೆ ಕೊಪ್ಪರಿಗೆ’ ಎಂಬ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಇದಾದ ಬಳಿಕ ‘ಯಕ್ಷಗಾನ ನಾಟ್ಯ ವೈಭವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕರಾವಳಿ ಸಿರಿ ಕ್ಲಬ್ ನ ಈ ಎಲ್ಲಾ ಕಾರ್ಯಕ್ರಮಗಳಿಗೆ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಲಿದ್ದು, ಸ್ಪೋರ್ಟ್ಸ್ ಕನ್ನಡ ಸಂಪೂರ್ಣ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.
ಜಾತಿ, ಧರ್ಮದ ಭೇದವಿಲ್ಲದೆ ಸಮಾಜಮುಖಿ ಕಾರ್ಯಗಳಿಗೆ ಸದಾ ಸಿದ್ಧರಾಗಿ, ಸಂಘಟನೆಯ ಮೂಲಕ ಸಮಾಜಸೇವೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಸಿರಿ ಕ್ಲಬ್ ನ ಎಲ್ಲಾ ಉದ್ದೇಶಗಳು, ಯೋಜನೆಗಳು ಈಡೇರಲಿ. ನಮ್ಮ ನುಡಿ, ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ ಮುಂದಿನ ಹೆಜ್ಜೆ ಇಡುವಂತಾಗಲಿ.