ಉನ್ನತ ಹುದ್ದೆಗಳು..ಅರ್ಹರನ್ನು ಹುಡುಕಿಕೊಂಡು ಬರುತ್ತದೆ ಎಂಬುವುದಕ್ಕೆ ಕುಂದಾಪುರ ದ ಶ್ರೀ ವಿಜಯ್ ಎಸ್ ಪೂಜಾರಿ ಯವರೇ ಸಾಕ್ಷಿಯಾಗಿದೆ..
ಶ್ರೀಯುತರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಉನ್ನತ ಶೇಣಿಯಲ್ಲಿ ಮುಗಿಸಿ ವೃತ್ತಿ ಜೀವನದಲ್ಲಿ ಶ್ರೀವತ್ಸ ಹೆಬ್ಬಾರ್ ಇವರ ಮಾರ್ಗದರ್ಶನ ದಲ್ಲಿ HDFC life, Birla Sunlife ಮುಂತಾದ ಮ್ಯೂಚುವಲ್ ಫಂಡ್ ಏಜೆಂಟರಾಗಿ ಕಾರ್ಯನಿರ್ವಹಿಸಿ ತದನಂತರ ಶ್ರೀಭಗವತಿಚಂದ್ರ ಹೆಬ್ಬಾರ್ ಇವರ ಮಾರ್ಗದರ್ಶನದಲ್ಲಿ ಮೆಡಿಕಲ್ ರೆಫ್ ಆಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಕ್ರೀಡಾರಂಗದಲ್ಲಿ
ಮೂಲತಃ ಕುಂದಾಪುರ ಸಿ.ಆರ್.ಎಫ್ ಕ್ರಿಕೆಟ್ ಕ್ಲಬ್ ಸ್ಥಾಪಕ ನಾಯಕರಾಗಿ ತದನಂತರ ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್ ನ ಸಕ್ರಿಯ ಸದಸ್ಯರಾಗಿ ತದನಂತರ ಚಕ್ರವರ್ತಿ ಕುಂದಾಪುರ ತಂಡದ ಸಕ್ರಿಯ ಸದಸ್ಯರಾಗಿಯೂ ಕ್ರಿಕೆಟ್ ಜೀವನದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ..
ಸತತ 2 ಬಾರಿ ಕುಂದಾಪುರ ಪುರಸಭಾ ಸದಸ್ಯರಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನಪ್ರಿಯರಾಗಿರುತ್ತಾರೆ.
ಅಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ತಕ್ಷಣವೇ ಸ್ಪಂದಿಸಿ ತಾವೇ ಸ್ವತಾ ಅಥವಾ ಪರದಾನಿಗಳ ಮನವೊಲಿಸಿ ಸಹಸ್ರಾರು ಜನರ ಪಾಲಿಗೆ ಮರೆಯಲಾಗದ ಕಣ್ಮಣಿ ಯಾಗಿದ್ದಾರೆ..ಇವರ ಸೇವೆಯನ್ನು ಗುರುತಿಸಿ ಅದೆಷ್ಟೋ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ..
ಇದೀಗ ಕುಂದಾಪುರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಆದುದು ಇವರ ಕರ್ತವ್ಯಕ್ಕೆ ಸಂದ ಹಿರಿಮೆಯಾಗಿದೆ.
ತಮ್ಮ ಹೃದಯ ,ಮನಸ್ಸು ಗಳೆರದರಲ್ಲೂ ಕುಂದಾಪುರ ದ ಎರಡು ಪ್ರತಿಷ್ಠಿತ ತಂಡಗಳಾದ ಟೊರ್ಪೆಡೋಸ್ ಹಾಗೂ ಚಕ್ರವರ್ತಿ ತಂಡಗಳ ಬಗ್ಗೆ ಉತ್ತಮ ಅಭಿಪ್ರಾಯ ಗಳನ್ನು ಹೊಂದಿರುವ ಇವರು ನಿಜವಾಗಿಯೂ ಒಬ್ಬ ಕ್ರಿಕೆಟ್ ಪ್ರೇಮಿ ಎಂದರೆ ತಪ್ಪಾಗಲಾರದು…..