ಅಪೋಲೋ ಟಯರ್ಸ್ ವತಿಯಿಂದ ಮೈಸೂರಿನ ಎನ್.ಐ.ಐ.ಇ.ಟಿ ಕಾಲೇಜು ಕ್ರೀಡಾಂಗಣದಲ್ಲಿ ಅಕ್ಟೋಬರ್ 14,15 ಮತ್ತು 16 ರಂದು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಮೋದಿ ಕಪ್-2022” ಆಯೋಜಿಸಲಾಗಿದೆ.
ಪಂದ್ಯಾವಳಿಯ ಚಾಂಪಿಯನ್ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ಆಕರ್ಷಕ ಬಹುಮಾನಗಳನ್ನು ಹಾಗೂ ಸರಣಿ
ಶ್ರೇಷ್ಟ ಗೌರವಕ್ಕೆ ಪಾತ್ರರಾಗುವ ಆಟಗಾರನಿಗೆ ಓಪೋ ಮೊಬೈಲ್ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
ಪಂದ್ಯಾವಳಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು,14 ಜನ ಆಟಗಾರರು ತಂಡದಲ್ಲಿ ಇರತಕ್ಕದ್ದು ಹಾಗೂ ಎಲ್ಲಾ ಆಟಗಾರರಿಗೆ ಸಮವಸ್ತ್ರ ಆಯೋಜಕರೇ ನೀಡಲಿದ್ದಾರೆ ಮತ್ತು ಕೆ.ಎಸ್.ಸಿ.ಎ ಅಂಗೀಕೃತ ತೀರ್ಪುಗಾರರು ಭಾಗವಹಿಸಲಿದ್ದಾರೆ.
ಟೂರ್ನಮೆಂಟ್ ನ ಸ್ಪೆಷಲ್ ಪಾರ್ಟ್ನರ್ ರೂಪದಲ್ಲಿ
ಶ್ರೀ ಸಾಯಿರಾಮ್ ಅಸೋಸಿಯೇಟ್ಸ್ ಮೈಸೂರು,
ಸ್ಪೋರ್ಟ್ಸ್ ಪಾರ್ಟ್ನರ್ ರೂಪದಲ್ಲಿ ಡೆಕಾತ್ಲನ್ ಸ್ಪೋರ್ಟ್ಸ್,
ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸ್ಪೋರ್ಟ್ಸ್ ಕನ್ನಡ ಕಾರ್ಯ ನಿರ್ವಹಿಸಿದರೆ,M.ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ ತೇಜಸ್ 9611231126,
ಅಭಿ 98459 25868,ಪ್ರತಾಪ್ 8431698910,
ಆಕಾಶ್ 8618308467 ಮತ್ತು ಚಾಣಕ್ಯ 8971022873 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.