7.7 C
London
Saturday, November 9, 2024
Homeಸ್ಪೋರ್ಟ್ಸ್ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ‌ ಮುತ್ತಿಕ್ಕಿದ ಜೆರೆಮಿ, ಭಾರತದ ಮಡಿಲಿಗೆ ಎರಡನೆ ಚಿನ್ನದ ಪದಕ

ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ‌ ಮುತ್ತಿಕ್ಕಿದ ಜೆರೆಮಿ, ಭಾರತದ ಮಡಿಲಿಗೆ ಎರಡನೆ ಚಿನ್ನದ ಪದಕ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕೂಟದಲ್ಲಿ  ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪ್ರದರ್ಶನ ಶಕ್ತಿಯುತವಾಗಿ ಮುಂದುವರಿದಿದ್ದು ಯುವ ವೇಟ್‌ಲಿಫ್ಟರ್‌ ಜೆರೆಮಿ ಲಾಲ್‌ರಿನುಂಗಾ ಅವರು ಶನಿವಾರ ಚಿನ್ನದ ಪದಕ ಗೆದ್ದು ಭಾರತ ಮಡಿಲಿಗೆ ಎರಡನೇ ಚಿನ್ನ ತಂದು ಬೀಗಿದರು.
ಮಿಜೊರಾಂ ರಾಜ್ಯದ ಐಜ್ವಾಲ್‌ನ 19 ವರ್ಷದ ಜೆರೆಮಿ ಪುರುಷರ 67 ಕೆ.ಜಿ ವಿಭಾಗದಲ್ಲಿ ಅಸಾಧಾರಣ ಸಾಮರ್ಥ್ಯ ತೋರಿ, ಒಟ್ಟು 300 ಕೆ.ಜಿ ಭಾರ ಎತ್ತಿದ್ದಾರೆ ಮತ್ತು ಕಾಮನ್‌ವೆಲ್ತ್ ನಲ್ಲಿ ಎರಡು ಕೂಟ ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.
ಸ್ನ್ಯಾಚ್‌ನಲ್ಲಿ 140 ಕೆ.ಜಿ ಹಾಗೂ ಕ್ಲೀನ್‌ ಮತ್ತು ಜರ್ಕ್‌ನಲ್ಲಿ 160 ಕೆ.ಜಿ ಎತ್ತಿದ್ದಾರೆ. ಸ್ನ್ಯಾಚ್‌ ಮತ್ತು ಒಟ್ಟಾರೆ ವಿಭಾಗದಲ್ಲಿ ಅವರು ದಾಖಲೆ ಸ್ಥಾಪಿಸಿದರು. 2018ರ ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಜೆರೆಮಿ, ಈ ಸಾಧನೆಯ ಮೂಲಕ ಸೀನಿಯರ್‌ ವಿಭಾಗಕ್ಕೆ ಭರ್ಜರಿ ಪ್ರವೇಶ ಪಡೆದುಕೊಂಡಿದ್ದಾರೆ.
ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಭಾರ ಎತ್ತುವ ವೇಳೆ ಎರಡು ಸಲ ನೋವು ಅನುಭವಿಸಿದರೂ, ಛಲ ಬಿಡಲಿಲ್ಲ. ಸ್ನ್ಯಾಚ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 140 ಕೆ.ಜಿ ಎತ್ತಿದ ಅವರು ಎದುರಾಳಿಗಳನ್ನು ಹಿಂದಿಕ್ಕಿದರು. ಕೊನೆಯ ಪ್ರಯತ್ನದಲ್ಲಿ 143 ಕೆ.ಜಿ ಎತ್ತಲು ಪ್ರಯತ್ನಿಸಿದರೂ ವಿಫಲರಾದರು.
ಕ್ಲೀನ್‌ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ 154 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ 160 ಕೆ.ಜಿ. ಭಾರ ಎತ್ತಿದರು. ಮೂರನೇ ಅವಕಾಶದಲ್ಲಿ 165 ಕೆ.ಜಿ ಎತ್ತಲು ಪ್ರಯತ್ನಿಸಿ ವಿಫಲರಾದರು. ಆದರೆ ಎರಡನೇ ಪ್ರಯತ್ನದಲ್ಲೇ ಅವರು ಚಿನ್ನ ಖಚಿತಪಡಿಸಿಕೊಂಡಿದ್ದರು.
ಸಮೋವದ ವೈಪವ ನೆವೊ (127 ಕೆ.ಜಿ+ 166 ಕೆ.ಜಿ) ಅವರು ಬೆಳ್ಳಿ ಹಾಗೂ ನೈಜೀರಿಯಾದ ಜೋಸೆಫ್‌ ಉಮೊಫಿಯ (130 ಕೆ.ಜಿ+ 160 ಕೆ.ಜಿ) ಕಂಚು ಗೆದ್ದುಕೊಂಡರು.
ಭಾರತ ಒಟ್ಟು ಐದು ಪದಕ ಜಯಿಸಿದೆ. ಮೀರಾಬಾಯಿ ಚಾನು, ಸಂಕೇತ್‌ ಸರ್ಗರ್‌ ಮತ್ತು ಗುರುರಾಜ ಪೂಜಾರಿ ಅವರು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದಿದ್ದಾರೆ ಬಿಂದ್ಯಾರಾಣಿ ಬೆಳ್ಳಿಗೆದ್ದಿದ್ದಾರೆ
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

twenty + 3 =