2023ರ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಬಾಂಗ್ಲಾದೇಶ vs ಶ್ರೀಲಂಕಾ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದು ಪಂದ್ಯವು ವಿವಾದದ ಕೇಂದ್ರ ಬಿಂದುವಾಯಿತು, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಔಟ್‌ಗೆ ಕಾರಣವಾದ ಘಟನೆಯ ಇಲ್ಲಿ ನಡೆಯಿತು.
ಒಂದೂ ಎಸೆತ ಎದುರಿಸದೇ ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಆರಂಭಿಸುವ ಮುನ್ನವೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಏಂಜೆಲೊ ಮ್ಯಾಥ್ಯೂಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ‘ಟೈಮ್ ಔಟ್’ ಮೂಲಕ ಔಟಾದ ಮೊದಲ ಕ್ರಿಕೆಟಿಗರಾದರು.
ಈ ಮುಖಾಮುಖಿಯು ದೆಹಲಿಯಲ್ಲಿ ನವೆಂಬರ್ 6, 2023 ರಂದು ನಡೆಯಿತು . ಶ್ರೀಲಂಕಾದ ಆಟಗಾರ ಸದೀರ ಸಮರವಿಕ್ರಮ ಔಟ್ ಆದ ನಂತ ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ಗೆ ತೆರಳಿದರು. ಮ್ಯಾಥ್ಯೂಸ್ ಕ್ರೀಸ್‌ಗೆ ಹೋದಾಗ ತನ್ನ ಹೆಲ್ಮೆಟ್ ಅನ್ನು ಸರಿಹೊಂದಿಸುತ್ತಿರುವಾಗ, ಪಟ್ಟಿಯು ಮುರಿದುಹೋಯಿತು. ಹೆಲ್ಮೆಟ್‌ನ ಒಂದು ಬದಿಯ ಸ್ಟ್ರಿಪ್ ತೆರೆದ ಕಾರಣ ಅವರು ಮತ್ತೊಂದು ಹೆಲ್ಮೆಟ್ ಆರ್ಡರ್ ಮಾಡಿದ್ದರು.
12th ಮ್ಯಾನ್ ಹೊಸ ಹೆಲ್ಮೆಟ್ ಅನ್ನು ತರುತ್ತಿದ್ದಾಗ, ಬಾಂಗ್ಲಾದೇಶದ ಆಟಗಾರರು ಸಮಯ ಮೀರಿದೆ ಎಂದು ಅಂಪೈರ್‌ಗಳಿಗೆ ಮನವಿ ಮಾಡಿದರು. ಈ ಕಾರಣಕ್ಕಾಗಿ ಅವರಿಗೆ ಔಟ್ ನೀಡಲಾಯಿತು.
ಮುರಿದ ಪಟ್ಟಿಯನ್ನು ಅಂಪೈರ್‌ಗಳಿಗೆ ಮತ್ತು ಶಕೀಬ್ ಅಲ್ ಹಸನ್‌ಗೆ ತೋರಿಸಿ ಮ್ಯಾಥ್ಯೂಸ್ ತನ್ನ ಪ್ರಕರಣವನ್ನು ಸಮರ್ಥಿಸಿಕೊಂಡರು, ಆದರೆ ಬಾಂಗ್ಲಾದೇಶದ ನಾಯಕ ಶಕೀಬ್ ಒಪ್ಪಲಿಲ್ಲ. ಮನವಿಯನ್ನು ಹಿಂಪಡೆಯಲು ನಿರಾಕರಿಸಿದರು ಮ್ಯಾಥ್ಯೂಸ್ ಶಕೀಬ್ ಅಲ್ ಹಸನ್ ಮತ್ತು ಅಂಪೈರ್ ಜೊತೆ ಮಾತನಾಡಿದರೂ ಪ್ರಯೋಜನವಾಗಲಿಲ್ಲ. ಇದಾದ ನಂತರ ಅವರು ಮೈದಾನವನ್ನು ತೊರೆಯಬೇಕಾಯಿತು. ಬ್ಯಾಟ್ಸ್‌ಮನ್ ಔಟಾದ ನಂತರ ನಂತರ 2 ನಿಮಿಷಗಳಲ್ಲಿ ಆಡಲು ಸಿದ್ಧರಾಗಿರಬೇಕು ಎಂಬುದು ನಿಯಮ..
ಇದರೊಂದಿಗೆ ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಧಿ ಮೀರಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಐಸಿಸಿ ನಿಯಮಗಳ ಆರ್ಟಿಕಲ್ 40.1.1 ರ ಪ್ರಕಾರ, ಬ್ಯಾಟ್ಸ್‌ಮನ್ ಔಟಾದರೆ ಅಥವಾ ನಿವೃತ್ತಿಯಾದರೆ, ಹೊಸ ಬ್ಯಾಟ್ಸ್‌ಮನ್ 2 ನಿಮಿಷಗಳಲ್ಲಿ ಆಡಲು ಸಿದ್ಧರಾಗಬೇಕು. ಇದು ಸಂಭವಿಸದಿದ್ದರೆ, ಬ್ಯಾಟ್ಸ್‌ಮನ್ ಔಟ್ ಆಗುತ್ತಾರೆ. ವಿಶೇಷವೆಂದರೆ ಹೀಗೆ ಔಟಾದ ಮೇಲೆ ಬೌಲರ್ ಖಾತೆಗೆ ವಿಕೆಟ್ ಸೇರುವುದಿಲ್ಲ.
ಏಂಜೆಲೊ ಮ್ಯಾಥ್ಯೂಸ್ ಅವರನ್ನು ಟೈಮ್ಡ್ ಔಟ್ ಮಾಡಿದ್ದು ಸರಿಯಾದ ನಿರ್ಧಾರವೇ?
ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ. ಕಾಮ್