Categories
ಕ್ರಿಕೆಟ್

ಚೇತನ್ ಸಕಾರಿಯಾ ಯುವ ಕ್ರಿಕೆಟಿಗನ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್

ಒಬ್ಬ ಕ್ರಿಕೆಟಿಗನೆಂದರೆ ಸಿರಿವಂತನೆಂದೆ ಬಿಂಬಿತವಾಗಿದೆ ,ಆತನದು ಐಷಾರಾಮಿ ಜೀವನ, ಸುಂದರ ಬದುಕು, ಚಿಂತೆ ಇಲ್ಲದ ಜೀವನ ಎಂದೇ ಅದೆಷ್ಟೋ ಮಂದಿ ಊಹಿಸಿರುತ್ತಾರೆ.
ಆದರೆ ಒಬ್ಬ ಕ್ರಿಕೆಟಿಗನ ಬದುಕು ಆತನ ಹಿಂದಿನ ಅಸಲಿ ಸತ್ಯಗಳು ನಾವು ನೀವು ತಿಳಿದಿರುವ ಹಾಗೆ ಇರುವುದಿಲ್ಲ ಸಾಕಷ್ಟು ಕ್ರಿಕೆಟಿಗರ ಬದುಕು ಅಂದುಕೊಂಡಷ್ಟು ಸತ್ಯವಾಗಿರುವುದಿಲ್ಲ, ಸಾಕಷ್ಟು ಕ್ರಿಕೆಟಿಗರ ಕುಟುಂಬಗಳು ಮನೆ ಮಗನ,ತಮ್ಮನ  ಕ್ರಿಕೆಟ್‍ ಕಲಿಕೆಯ ಜೋತೆಗೆ ಯಶಸ್ಸು ಗಳಿಸಲು ತಮ್ಮ ಜೀವನದ ಕನಸುಗಳನ್ನು ಮೂಟೆಕಟ್ಟಿ  ಕುಟುಂಬದ   ಹಲವಾರು ಮಂದಿ ತ್ಯಾಗ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ನಿಮ್ಮೆಲ್ಲರ ಮುಂದೆಯೇ ಜೀವಂತ ಸಾಕ್ಷಿಯಾಗಿ ನಿಂತಿದೆ. ಕುಟುಂಬಸ್ಥರ ತ್ಯಾಗ ಮತ್ತು ಬದುಕಿನ ಕಷ್ಟಗಳನ್ನು ದಾಟಿ ಬಂದು ತನ್ನ ಗುರಿಯನ್ನು ಮುಟ್ಟಿದ ಮತ್ತೊಬ್ಬ ಕ್ರಿಕೆಟರ್ ಚೇತನ್ ಸಕಾರಿಯಾ,
ಇತ ಒಬ್ಬ ಟೆಂಪೋ ಚಾಲಕನ ಮಗ. ಟೆಂಪೋ ಚಾಲಕನ ಮಗನಾದರೂ ಸಹ ತನ್ನ ಮಗನನ್ನು ಒಬ್ಬ ಒಳ್ಳೆಯ ಕ್ರಿಕೆಟಿಗನಾಗಿ ಮಾಡ ಬೇಕೆಂದು ಚೇತನ್ ಸಕಾರಿಯಾ ತಂದೆ ಕನಸು ಕಂಡಿದ್ದರು.
 ಚೇತನ್ ಸಕಾರಿಯಾ 23 ವರ್ಷದ ಕ್ರಿಕೆಟಿಗ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಗುಜರಾತಿನ ಭಾವನಗರದಲ್ಲಿರುವ ಸ್ಲಮ್ ನ ಚಿಕ್ಕ ಮನೆಯೊಂದರಲ್ಲಿ . 2018ರಿಂದ ಸೌರಾಷ್ಟ್ರ ತಂಡದ ಪರ ಆಡುತ್ತಿರುವ ಈ ಯುವ ಪ್ರತಿಭೆ ಕಳೆದ ಸೋಮವಾರ ( ಏಪ್ರಿಲ್ 12 ) ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜೆರ್ಸಿ ತೊಟ್ಟು ತಮ್ಮ ಮೊದಲ ಐಪಿಎಲ್ ಪಂದ್ಯವನ್ನಾಡಿ ತನ್ನ ಸಾಮಾರ್ಥ್ಯವನ್ನು ತೋರಿಸಿದ್ದಾರೆ. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ದೈತ್ಯ ಆಟಗಾರರದ ಕೆ ಎಲ್ ರಾಹುಲ್, ಮಾಯಾಂಕ್ ಅಗರವಾಲ್,ರಿಚರ್ಡ್ ಸನ್ ರ ವಿಕೆಟ್ ಪಡೆಯುವ ಮೂಲಕ ಚೇತನ್ ಸಕಾರಿಯಾ ಎಲ್ಲರ ಗಮನವನ್ನು ಸೆಳೆದಿದ್ದಾರೆ.  ನಾಲ್ಕು ಓವರ್ ನಲ್ಲಿ ಮೂವತ್ತೊಂದು ರನ್‌ನೀಡಿ ಮೂರು ವಿಕೆಟ್‍ಗಳನ್ನು ಪಡೆದಿದ್ದಾರೆ.ಅದರಲ್ಲೂ ನಿಕೊಲಸ್ ಪೊರನ್ ರ ಬ್ಯಾಟಿನಿಂದ ಸಿಡಿದ ಒಂದು ಅದ್ಭುತವಾದ ಕ್ಯಾಚನ್ನು ಹಿಡಿಯುವುದರ ಮೂಲಕ ಚೇತನ್ ಸಕರಿಯಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿ ರಾತ್ರೊ ರಾತ್ರಿ ಕ್ರಿಕೆಟ್ ಲೋಕದ ಹೀರೋ ಅಗಿ ಕಂಗೊಳಿಸುತ್ತಿದ್ದಾರೆ.
 ಈ ಹಿಂದೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಯೂ ಸಹ ಚೇತನ್ ಸಕಾರಿಯಾ ಉತ್ತಮ ಬೌಲಿಂಗ್ ಮಾಡಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದರು.
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ಬಳಿಕ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಚೇತನ್ ಸಕಾರಿಯಾ ಅವರ ಕುಟುಂಬದ ದುರಂತ ಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಚೇತನ್ ಸಕಾರಿಯಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸಿದ್ದಾಗ ಅವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯವನ್ನು ಹತ್ತು ದಿನವಾದರೂ ಸಹ ಚೇತನ್ ಸಕಾರಿಯಾಗೆ ಅವರ ತಾಯಿ ಹೇಳಿರಲಿಲ್ಲ. ವಿಷಯ ತಿಳಿದರೆ ತನ್ನ ಮಗ ಚೆನ್ನಾಗಿ ಕ್ರಿಕೆಟ್ ಆಡುವುದಿಲ್ಲ ಎಂಬ ಕಾರಣಕ್ಕೆ ಚೇತನ್ ಸಕಾರಿಯಾ ಅವರ ತಾಯಿ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಕರೆ ಮಾಡಿದಾಗಲೂ ಸಹ ಚೇತನ್ ಸಕಾರಿಯಾ ತಾಯಿ ವಿಷಯವನ್ನು ಹೇಳದೆ ದುಃಖವನ್ನು ಮುಚ್ಚಿಟ್ಟುಕೊಂಡು ಮಾತನಾಡಿದ್ದರು.  ಚೇತನ್ ಅವರ ತಂದೆ ಎರಡನೇ ಮಗ ಸತ್ತ ವಿಷಯವನ್ನು ತಿಳಿಸಿಬಿಡುತ್ತಾರೇನೋ ಎಂಬ ಭಯದಿಂದ ಚೇತನ್ ತಾಯಿ ಅವರಿಗೂ ಸಹ ಚೇತನ್ ಜೊತೆ ಮಾತನಾಡಲು ಬಿಡದೇ ನಿಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿದ್ದರು. ಕರೆ ಮಾಡಿದಾಗಲೆಲ್ಲ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದರು ಚೇತನ್ ಸಕಾರಿಯಾ. ತಮ್ಮನ ಬಗ್ಗೆ ಕೇಳಿದಾಗಲೆಲ್ಲಾ ಚೇತನ್ ತಾಯಿ ಮಾತು ಮರೆಸಿ ಬೇರೆ ವಿಷಯದ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದರು.
ಒಂದೆಡೆ ಹಣಕಾಸಿನ ಸಮಸ್ಯೆ, ಮತ್ತೊಂದೆಡೆ ಎರಡನೇ ಮಗನನ್ನು ಕಳೆದುಕೊಂಡ ನೋವು ತಡೆಯಲಾರದೆ ಒಮ್ಮೆ ತಾವೇ ಚೇತನ್ ಸಕಾರಿಯಾಗೆ ಆತನ ತಮ್ಮ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಅವರ ತಾಯಿಯೇ ಹೇಳಿಬಿಡುತ್ತಾರೆ. ತಮ್ಮನ ಆತ್ಮಹತ್ಯೆ ವಿಷಯ ತಿಳಿದ ಚೇತನ್ ಸಕಾರಿಯಾ ಒಂದು ವಾರದ ಕಾಲ ಯಾರೊಂದಿಗೂ ಮಾತನಾಡದೆ, ಸರಿಯಾಗಿ ಊಟವನ್ನೂ ಮಾಡದೆ ಒಬ್ಬಂಟಿಯಾಗಿದ್ದು ಬಿಡುತ್ತಾರೆ. ಈ ಕಹಿ ಘಟನೆ ನಡೆದ ಒಂದು ತಿಂಗಳ ಬಳಿಕ ಚೇತನ್ ಸಕಾರಿಯಾ 2021ರ ಐಪಿಎಲ್ ಮಿನಿ ಹರಾಜಿನಲ್ಲಿ 1.20 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗುತ್ತಾರೆ. ಚೇತನ್ ಪಟ್ಟ ಕಷ್ಟಕ್ಕೂ ಮತ್ತು ಮಾಡಿದ ತ್ಯಾಗಕ್ಕೂ ಪ್ರತಿಫಲ ಸಿಕ್ಕಿತ್ತು ಚೇತನ್ ಸಕಾರಿಯಾ  ಅವರ ಜೀವನದಲ್ಲಿ ನಡೆದ ಈ ಕಹಿ ಘಟನೆಯನ್ನು ಸ್ವತಃ ಅವರ ತಾಯಿಯೇ ಹಂಚಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿರೇಂದ್ರ ಸೆಹ್ವಾಗ್. ಮಗನ  ಕ್ರಿಕೆಟ್‍ ಬದುಕಿಗೊಸ್ಕರ ಆ ಕುಟುಂಬ ಪಟ್ಟ ಕಷ್ಟ , ಶ್ರದ್ಧೆಯಿಂದ ಕ್ರಿಕೆಟ್ ಕಲಿತು  ಪಟ್ಟಕಷ್ಟಕ್ಕೆ  ಐಪಿಎಲ್ ಟೂರ್ನಿಯಲ್ಲಿ ಚೇತನ್ ಗೆ ಸಿಕ್ಕ ಪ್ರತಿಫಲವನ್ನು ತುಂಬು ಮನಸ್ಸಿನಿಂದ  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೇವ್ವಾಗ್ ಪ್ರಶಂಸಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬ ಕ್ರಿಕೆಟಿಗ ಒಂದು ಹಂತಕ್ಕೆ ತಲುಪಲು ಅವನೊಬ್ಬನೆ ಕಷ್ಟಪಡುವುದಿಲ್ಲ ಅತನಿಗಾಗಿ ಸಂಪೂರ್ಣ ಕುಟುಂಬವೆ ಹೆಗಲುಕೊಟ್ಟಿರುತ್ತದೆ ಎನ್ನುವುದಕ್ಕೆ ಚೇತನ್ ಸಕಾರಿಯಾನ ಕ್ರಿಕೆಟ್ ಜರ್ನಿಯೆ ಸಾರಿ ಸಾರಿ ಹೇಳುತ್ತಿದೆ, ಚೇತನ್ ದುರದೃಷ್ಟವಶಾತ್ ನೀನು ನಿನ್ನ ತಮ್ಮನನ್ನು ಕಳೆದು ಕೊಂಡಿರಬಹುದು ಅ ನೋವಿಗೆ ಕೊನೆ ಇಲ್ಲ ಅತ ಮತ್ತೆ ಬದುಕಿ ಬರಲು ಸಾಧ್ಯವಿಲ್ಲ ಅದರೆ ನಿನ್ನ  ಕ್ರಿಕೆಟ್ ನ ಯಶಸ್ಸಿನ ಹಾದಿಯಲ್ಲಿ ನೀನು ಸಾವಿರಾರು ಮಂದಿ ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರನಾಗಿದ್ದೀಯಾ ಇದು ಕ್ರಿಕೆಟ್ ಜರ್ನಿಯ ಆರಂಭ ಇನ್ನಷ್ಟೂ ಯಶಸ್ಸಿನ ಹಾದಿಯಲ್ಲಿ ನೀ ಪಯಣಿಸಿ ಭಾರತ ಕ್ರಿಕೆಟ್ ತಂಡದ ಬಲಿಷ್ಠ ಆಟಗಾರನಾಗಿ ನೀ ಗುರಿಮುಟ್ಟಿ ಹೆತ್ತವರ ಕನಸು ನನಸಾಗಿಸು ಶುಭವಾಗಲಿ ಚೇತನ್ ಸಕಾರಿಯಾ

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

one × two =