ಉಡುಪಿಯ ಪ್ರಸಿದ್ಧ ತಂಡ ರಾಜಾ ಅಲೆವೂರು ಸಾರಥ್ಯದ ಅಲೆವೂರು ಫ್ರೆಂಡ್ಸ್ ವತಿಯಿಂದ ಅಕ್ಟೋಬರ್ 16 ಮತ್ತು 17 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ “ವಿಪ್ರ ಕಪ್-ಆಕಾಶ್ ಟ್ರೋಫಿ-2021” ಪಂದ್ಯಾವಳಿ ಆಯೋಜಿಸಲಾಗಿದೆ.
ವಿಶೇಷವಾಗಿ ಶನಿವಾರದಂದು ಇನ್ನಿತರ ಸಮುದಾಯದ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು,ರವಿವಾರ ವಿಪ್ರ ಬ್ರಾಹ್ಮಣರ ತಂಡಗಳು ಸ್ಪರ್ಧಾಕಣಕ್ಕಿಳಿಯಲಿದ್ದಾರೆ.
ಪ್ರಥಮ ಬಹುಮಾನ ರೂಪದಲ್ಲಿ 40 ಸಹಸ್ರ ಹಾಗೂ ದ್ವಿತೀಯ 20 ಸಹಸ್ರ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ರಾಜಾ ಅಲೆವೂರು 9448169458 ಮತ್ತು ವೆಂಕಟ್ 9591280462 ಈ ನಂಬರ್ ಗಳನ್ನು ಸಂಪರ್ಕಿಸಬಹುದು.