5.4 C
London
Wednesday, April 17, 2024
Homeಕ್ರಿಕೆಟ್ಕ್ರಿಕೆಟ್ ಇತಿಹಾಸದ ಅತಿ ಚಿಕ್ಕ ಪಂದ್ಯವಿದು ಕೇವಲ 7 ರನ್‌ಗೆ ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್...

ಕ್ರಿಕೆಟ್ ಇತಿಹಾಸದ ಅತಿ ಚಿಕ್ಕ ಪಂದ್ಯವಿದು ಕೇವಲ 7 ರನ್‌ಗೆ ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ತಂಡ ಆಲ್ ಔಟ್….!!!

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
ಲಂಡನ್: ಟಿ20 ಕ್ರಿಕೆಟ್‌ ಅನ್ನು ವಿಶ್ವದಲ್ಲೇ ಕ್ರಿಕೆಟ್ ಮಾದರಿಗಳಲ್ಲಿ ಅತೀ ಚುಟುಕು ಕ್ರಿಕೆಟ್ ಮಾದರಿ ಎನ್ನಲಾಗುತ್ತಿದೆ. ಆದರೆ ಟಿ10 ಇನ್ನೂ ಚುಟುಕಾಗಿ ಪಂದ್ಯ  ಮುಗಿದು ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಅದರೆ ಇಂಗ್ಲೆಂಡ್ ನಲ್ಲಿ ನೆಡೆಯುತ್ತಿರುವ ಕ್ರಿಕೆಟ್ ನ ಪಂದ್ಯ ಒಂದರಲ್ಲಿ  ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಂದ್ಯಾಟ ಮುಗಿದು ಹೋಗಿದೆ.
ಈ ಪಂದ್ಯದ ಸಂಗತಿಗಳು ಮಾಧ್ಯಮಗಳಲ್ಲಿ ಇಂದು ಸದ್ದು ಮಾಡುತ್ತಿದೆ.
ಈ ಪಂದ್ಯ ನಡೆದಿದ್ದು ಇಂಗ್ಲೆಂಡ್‌ನಲ್ಲಿ. ಇಂಗ್ಲೆಂಡ್‌ನಲ್ಲಿ  ಈ ಋತುವಿನಲ್ಲಿ ನೆಡೆಯುತ್ತಿರುವ ಯಾರ್ಕ್‌ಶೈರ್ ಪ್ರೀಮಿಯರ್ ಲೀಗ್‌ನ ಡಿವಿಶನ್ ಫೋರ್ ಪಂದ್ಯದಲ್ಲಿ ಈಸ್ಟರ್ಟನ್ ಕ್ಲಬ್ ಮತ್ತು ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯ ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ ಎಂಬ ದಾಖಲೆಗೆ  ಕಾರಣವಾಗಿದೆ.
ಪಂದ್ಯದಲ್ಲಿ ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ಮೊದಲು ಬ್ಯಾಟಿಂಗ್‌ಗೆ ಇಳಿದಿತ್ತು. ಹಾಗೆ ಬ್ಯಾಟಿಂಗ್‌ಗೆ ಬಂದ ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ನ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲಲೇಯಿಲ್ಲ.  ಬ್ಯಾಟಿಂಗ್ ಮಾಡಲು ಬಂದವರೆಲ್ಲ ವಿಕೆಟ್ ಒಪ್ಪಿಸಿ ಒಬ್ಬರ ಹಿಂದೆ ಒಬ್ಬರಂತೆ ಫೇವಿಲಿಯನ್ ನಡೆಯತೊಡಗಿದರು.
ಅಸಲಿಗೆ ಪಂದ್ಯ 8 ಓವರ್‌ಗಳದ್ದಾಗಿತ್ತಾದರೂ ಯಾರೂ ಅಷ್ಟರವರೆಗೆ ನಿಲ್ಲಲಿಲ್ಲ.
ಎದುರಾಳಿ ತಂಡದ ಇಬ್ಬರೇ ಬೌಲರ್‌ಗಳು ಹಿಲಮ್ & ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್‌ನ 10 ವಿಕೆಟ್‌ಗಳನ್ನು ಕೆಡವಿ ದೈತ್ಯ ಬೌಲರ್ ಗಳಾಗಿ ವಿಜ್ರಂಭಿಸಿದರು. ಒಂದು ಹಂತದಲ್ಲಿ ಸ್ಕೋರ್‌ ಬೋರ್ಡ್‌ನಲ್ಲಿ 7 ರನ್‌ಗಳು ದಾಖಲಾಗಿದ್ದವು. ಇದರಲ್ಲಿ ಆರಂಭಿಕ ಇಬ್ಬರು ಬ್ಯಾಟ್ಸ್‌ಮನ್‌ಗಳು 2+2 ರನ್ ಗಳಿಸಿದ್ದರೆ, ಇನ್ನೂ 3 ರನ್ ಎಕ್ಸ್‌ಟ್ರಾ ಆಗಿತ್ತು. ಮುಂದೇನು ಕತೆ? ಈಸ್ಟರ್ಟನ್ ಕ್ಲಬ್ 1.2ನೇ ಓವರ್‌ಗೆ 8 ರನ್‌ಗಳಿಸಿ ಗೆಲುವನ್ನಾಚರಿಸಿತು. ಅಂದರೆ ಎದುರಾಳಿ ತಂಡವಾದ ಫ್ರೀಸ್ಟನ್ ಕ್ರಿಕೆಟ್ ಕ್ಲಬ್ ನ ಹತ್ತು ವಿಕೆಟ್ ಗಳನ್ನು ಕೇವಲ 7 ರನ್ ಗೆ ಕೆಡವಿದ್ದರು ಇದು ವಿಶ್ವಕ್ಕೆ ಕ್ರಿಕೆಟ್ ಕಲಿಸಿಕೊಟ್ಟಂತಹ ರಾಷ್ಟ್ರವಾದ ಇಂಗ್ಲೆಂಡಿನಲ್ಲಿಯೆ ಅತಿ ಚುಟುಕು ಪಂದ್ಯ ದಾಖಲಾಗಿರುವುದು ವಿಶೇಷವೇ ಹಾದು…..
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

eight + 17 =