ಕರುನಾಡು ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ದಿ|ಗಣೇಶ್ ಸ್ಮರಣಾರ್ಥ, ಬೆಂಗಳೂರಿನ ಬಿ.ಟಿ.ಎಮ್ Layout 2nd ಸ್ಟೇಜ್ ನಲ್ಲಿರುವ ಉಡುಪಿ ಗಾರ್ಡನ್ ಅಂಗಣದಲ್ಲಿ 6ನೇ ಬಾರಿ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಗಣೇಶ್ ಮೆಮೋರಿಯಲ್ ಕಪ್-2019” ದಿನಾಂಕ 5,6 ಶನಿವಾರ ಹಾಗೂ ಭಾನುವಾರ ಹಗಲಿನಲ್ಲಿ ನಡೆಯಲಿದೆ.
ಉಡುಪಿ ಪರಿಸರದ ಬಲಿಷ್ಠ ತಂಡ ರಿಯಲ್ ಫೈಟರ್ಸ್ ಸೇರಿದಂತೆ,ರಾಜ್ಯದ 16 ಪ್ರತಿಷ್ಟಿತ ತಂಡಗಳು ಪಂದ್ಯಾಕೂಟದಲ್ಲಿ ಸೆಣಸಾಡಲಿದೆ.
ವಿಜೇತ ತಂಡ 1ಲಕ್ಷ ನಗದು,ರನ್ನರ್ಸ್ ತಂಡ 50 ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ಜೊತೆಯಾಗಿ ಆಕರ್ಷಕ ವೈಯಕ್ತಿಕ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಗುವುದು,ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ನೇತೃತ್ವದ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ವಿಶ್ವದಾದ್ಯಂತ ಬಿತ್ತರಿಸಲಿದೆ ಎಂದು ಪಂದ್ಯಾಕೂಟ ವ್ಯವಸ್ಥಾಪನಾ ಸಮಿತಿ “ಸ್ಪೋರ್ಟ್ಸ್ ಕನ್ನಡ” ಕ್ಕೆ ತಿಳಿಸಿದ್ದಾರೆ.
ಆರ್.ಕೆ.ಆಚಾರ್ಯ ಕೋಟ