15 C
London
Thursday, April 11, 2024
Homeಕ್ರಿಕೆಟ್ಉತ್ತಮ ಫಾರ್ಮ್ ನಲ್ಲಿದ್ದರು ಆಯ್ಕೆ ಆಗುವ ಅದೃಷ್ಟವಿಲ್ಲ : ವಿಶ್ವಕಪ್‌ನಿಂದ ಹೊರಗುಳಿದ ಆರು ನತದೃಷ್ಟ ಆಟಗಾರರು...

ಉತ್ತಮ ಫಾರ್ಮ್ ನಲ್ಲಿದ್ದರು ಆಯ್ಕೆ ಆಗುವ ಅದೃಷ್ಟವಿಲ್ಲ : ವಿಶ್ವಕಪ್‌ನಿಂದ ಹೊರಗುಳಿದ ಆರು ನತದೃಷ್ಟ ಆಟಗಾರರು…

Date:

Related stories

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...

ಕ್ರೀಡೆಯಿಂದ ಸೌಹಾರ್ದಯುತ ಸಮಾಜ ನಿರ್ಮಾಣ-ಜನಾಬ್ ಅಬ್ದುಲ್ ಮದನಿ

ಕಾರ್ಕಳ-ಇಲ್ಲಿನ ಗಾಂಧಿ ಮೈದಾನದಲ್ಲಿ ಏಪ್ರಿಲ್ 29 ಶುಕ್ರವಾರದಂದು ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ)ಕಾರ್ಕಳ...
spot_imgspot_img
ಭಾರತ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಟಿ20 ಮಾದರಿಯ ತಂಡದಿಂದ ಹೊರಬಿದ್ದಿದ್ದಾರೆ.
*ಅನುಭವಿ  ಕ್ರಿಕೆಟಿಗ ಶಿಖರ್ ಧವನ್*
ಭಾರತ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಟಿ20 ಮಾದರಿಯ ತಂಡದಿಂದ ಹೊರಬಿದ್ದಿದ್ದಾರೆ. ಏಕದಿನ ತಂಡದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿರುವ ಶಿಖರ್ ಧವನ್ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಚುಟುಕು ಮಾದರಿಯಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಸ್ಥಾನ ಭದ್ರಪಡಿಸಿಕೊಂಡಿದ್ದು ಪರ್ಯಾಯ ಆರಂಭಿಕ ಆಟಗಾರನಾಗಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್‌ ಅವರನ್ನು ಕಣಕ್ಕಿಳಿಸುತ್ತಿದ್ದು ಧವನ್‌ಗೆ ಸ್ಥಾನವಿಲ್ಲದಂತಾಗಿದೆ. ಹೀಗಾಗಿ ಕಳೆದ ವರ್ಷದಂತೆ ಈ ವರ್ಷವೂ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಧವನ್ ಕಳೆದುಕೊಂಡಿದ್ದಾರೆ.
*ಕರಾರುವಾಕ್ಕಾಗಿ ಬೌಲ್ ಮಾಡುವ ಟಿ ನಟರಾಜನ್*
ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ  ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಟಿ ನಟರಾಜನ್ ರಾಷ್ಟ್ರೀಯ ತಂಡದ ಪರವಾಗಿಯೂ ಅಮೋಘ ಪ್ರದರ್ಶನ ನಿಡಿ ಮಿಂಚಿದ್ದರು. ಅದರಲ್ಲೂ ಟಿ20 ಮಾದರಿಯಲ್ಲಿ ಭಾರತದ ಪರವಾಗಿ ದೊಡ್ಡ ಅಸ್ತ್ರವಾಗುವ ನಿರೀಕ್ಷೆಯನ್ನು ಮೂಡಿಸಿದ್ದರು ಟಿ ನಟರಾಜನ್ ಆದರೆ ಗಾಯದ ಸಮಸ್ಯೆ ಟಿ ನಟರಾಜನ್ ಅವರಿಗೆ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡಿದ್ದು  ತನ್ನ ತಾಕತ್ತು ಪ್ರದರ್ಶಿಸುವ ಸಮಯದಲ್ಲೇ ಭಾರತ ತಂಡದಿಂದಲೇ ಹೊರಬೀಳುವಂತೆ ಮಾಡಿದೆ. ಭಾರತದ ವಿಶ್ವಕಪ್ ತಂಡದಲ್ಲಿ ನಟರಾಜನ್ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾದರು ಎಲ್ಲಾ ಸರಿ ಇದ್ದು ಇವರು ಆಯ್ಕೆ ಆಗಿದ್ದರೆ ಭಾರತ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಗೊಳ್ಳುತ್ತಿತ್ತು ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
*ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್*
ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ  ಅಂತಾರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ಆಲ್‌ರೌಂಡರ್‌ಗಳ ಪೈಕಿ ವಾಶಿಂಗ್ಟನ್ ಸುಂದರ್ ಕೂಡ ಒಬ್ಬರು ಅವರ ಆಟದ ಶ್ರೇಷ್ಠತೆಯನ್ನು ಈಗಾಗಲೇ ಪ್ರದರ್ಶಿಸಿದ್ದಾರೆ. ಈ ಹಿಂದಿನ ಕೆಲವು ಟಿ20 ಪಂದ್ಯದಲ್ಲಿನ   ಉತ್ತಮ ಬೌಲಿಂಗ್ ನಿಂದ ಸುಂದರ್ ಟಿ20 ಮಾದರಿಯಲ್ಲಿ ಭಾರತದ ಅಗ್ರ ಶ್ರೇಯಾಂಕದ ಬೌಲರ್ ಕೂಡ ಆಗಿದ್ದರು. ಆದರೆ ಟಿ ನಟರಾಜನ್ ಅವರಂತೆಯೇ ವಾಶಿಂಗ್ಟನ್ ಸುಂದರ್‌ಗೂ ಗಾಯದ ಸಮಸ್ಯೆ ಬೆನ್ನು ಬಿಡದೆ ಕಾಡಿತ್ತು ಈ ಕಾರಣದಿಂದಲೇ  ಕಳೆದ ಸಾಲಿನ ಮತ್ತು ಈ ಸಾಲಿನ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿ ಹೊರಗುಳಿಯುವಂತಾಗಿದೆ.
*ಆಟವಿದ್ದರು ಅದೃಷ್ಟವಿಲ್ಲದೆ ಮತ್ತೆ ಅವಕಾಶ ಕಳೆದುಕೊಂಡ ಸಂಜು ಸ್ಯಾಮ್ಸನ್*
ಕಳೆದ ಸಾಲಿನ ಮತ್ತು  ಈ  ಬಾರಿಯ ಭಾರತೀಯ ವಿಶ್ವಕಪ್ ತಂಡದಿಂದ ಹೊರಗುಳಿದ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು ಈತ ಪ್ರಮುಖ  ಆಟಗಾರನಾಗಿದ್ದು ಅದೃಷ್ಟ ಮಾತ್ರ ಇವನ ಜೋತೆಗಿಲ್ಲ. ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯದ ಬಗ್ಗೆ ಭಾರತದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರಿಗು ಅರಿವಿದೆ.ಪ್ರತಿ ಬಾರಿಯೂ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ ಸಂಜು. ಆದರೆ ಕೆಲವೊಂದು ಬಾರಿ ತಾಳ್ಮೆ ಕಳೆದುಕೊಂಡು ಸ್ಥಿರ ಪ್ರದರ್ಶನ ನೀಡುವಲ್ಲಿ ಸಂಜು ವಿಫಲರಾಗಿದ್ದರೆ. ಈ ಕಾರಣದಿಂದಲೇ ಸಂಜುಗೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ. ಈ ಬಾರಿಯ ತಂಡದಲ್ಲಿ ಅವಕಾಶ ಸಿಗಬಹುದು ಎಂದುಕೊಂಡಿದ್ದ ಇವರ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮಾತ್ರ ಮತ್ತೆ ರಿಷಬ್ ಪಂತ್ ಮೇಲೆ ತಮ್ಮ ನಿರೀಕ್ಷೆಯನ್ನು ಮುಂದುವರಿಸಿದ್ದಾರೆ. ಈ ಕಾರಣದಿಂದಲೇ ಸಂಜು ಸ್ಯಾಮ್ಸನ್ ಮತ್ತೆ ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ.
*ಪಂದ್ಯದ ಗತಿಯನ್ನೆ ಬದಲಿಸ ಬಲ್ಲ ಮಧ್ಯಮ ಕ್ರಮಾಂಕದ ಶ್ರೇಷ್ಠ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್*
 ಆಡುವ ಅರ್ಹತೆ ಇದ್ದರು  ಶ್ರೇಯಸ್ ಐಯ್ಯರ್ ಕಳೆದ ಬಾರಿಯೂ ಮತ್ತು  ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಪ್ರಮುಖ ಆಟಗಾರ.
2022ರಲ್ಲಿ ತವರಿನಲ್ಲಿ ನೆಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೇಯಸ್ ಐಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದರೂ ಈ ಬಾರಿಯ ಟಿ20 ವಿಶ್ವಕಪ್‌ನ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ ಎನ್ನುವುದು ಮಾತ್ರ ದುರಂತ.
ಶ್ರೇಯಸ್ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಮೀಸಲು ಆಟಗಾರನಾಗಿದ್ದರು  ಈ ಬಾರಿಯು ಮೀಸಲು ಆಟಗಾರನಾಗಿಯೇ ಉಳಿದುಕೊಂಡಿದ್ದು ಮಾತ್ರ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
*ಪಂದ್ಯದ ಗತಿಯನ್ನೆ ಬದಲಿಸಬಲ್ಲ ಶ್ರೇಷ್ಠ ಸ್ಪಿನ್ನರ್ ಕುಲ್‌ದೀಪ್ ಯಾದವ್*
ಕುಲದೀಪ್ ಎಡಗೈ ಚೈನಾಮನ್ ಸ್ಪಿನ್ನರ್ ಒಂದು ಕಾಲದಲ್ಲಿ ಭಾರತದ ಪ್ರಮುಖ ಸ್ಪಿನ್ ಬೌಲರ್ ಎನಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕುಲ್‌ದೀಪ್ ಯಾದವ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ ಐಪಿಎಲ್‌ನಲ್ಲೂ ಕುಲದೀಪ್  ಉತ್ತಮ ಪ್ರದರ್ಶನ ನೀಡಿದ್ದರು ಕೂಡ  ಕಳೆದ ಬಾರಿಯಂತೆಯೇ ಈ ಬಾರಿಯೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ.
ಸಾಕಷ್ಟು ಯುವ ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದರು ಆಯ್ಕೆಮಾಡಲು ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಗೆ ಸಾಧ್ಯವಾಗುತ್ತಿಲ್ಲ ಕಾರಣ ಉತ್ತಮರಲ್ಲೆ ಉತ್ತಮರನ್ನ ಆಯ್ಕೆ ಮಾಡುವಂತ ಪರಿಸ್ಥಿತಿ ಎದುರಾಗಿದೆ ಆ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ಬಾನೆತ್ತರಕ್ಕೆ ಬೆಳೆಯುತ್ತಿದೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಿಗೆ ಭಾರತೀಯ ತಂಡಕ್ಕೆ ಕೇವಲ ಹದಿನಾಲ್ಕು ಮಂದಿ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯ. ಭಾರತೀಯ ಆಯ್ಕೆ ಮಂಡಳಿ ಕೆಲವೊಂದು ತಪ್ಪು ಮಾಡಿರ ಬಹುದು ಆದರೆ ಎಲ್ಲರನ್ನೂ ಆಯ್ಕೆ ಮಾಡಲು ಸಾಧ್ಯವಿಲ್ಲ ಮತ್ತೆದೆ ಅವಕಾಶಕ್ಕಾಗಿ ಕಾಯಲೆ ಬೇಕು ಫಾರ್ಮ್ ಉಳಿಸಿಕೊಳ್ಳಬೇಕು…..
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

4 × one =