ಅಜೇಯ ಕ್ರಿಕೆಟ್ ಕ್ಲಬ್ ಕುಂಜಿಗುಡಿ ಸಾಲಿಗ್ರಾಮತಂಡ 35 ನೇ ವಾರ್ಷಿಕೋತ್ಸವದ ಪ್ರಯುಕ್ತ,ಸಾಲಿಗ್ರಾಮನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಂಡಿದ್ದಾರೆ.
2023 ಜನವರಿ 20 ರಿಂದ 22 ರವರೆಗೆ ನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 1,11,111 ರೂ ನಗದು ಬಹುಮಾನ,ದ್ವಿತೀಯ ಸ್ಥಾನಿ 66,666 ರೂ ನಗದು ಬಹುಮಾನ ಸಹಿತ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ.ಟೂರ್ನಮೆಂಟ್ ನ ಬೆಸ್ಟ್ ಬ್ಯಾಟರ್ ಮತ್ತು ಬೆಸ್ಟ್ ಬೌಲರ್ ಬಹುಮಾನ ರೂಪದಲ್ಲಿ ಸ್ಮಾರ್ಟ್ ಫೋನ್ ಮತ್ತು ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾಗುವ ಆಟಗಾರ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.ಟೂರ್ನಮೆಂಟ್ ನ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಅಜೇಯ ಕುಂಜಿಗುಡಿ ಪಂದ್ಯಾಟದ ಸಮಿತಿಯ ಗೌರವಾಧ್ಯಕ್ಷರಾದ ದಿನೇಶ್ ಮೊಗವೀರ ಮತ್ತು ಅಧ್ಯಕ್ಷರಾದ ಮಹೇಶ್ ಭಂಡಾರಿ ಮತ್ತು ನಾಗೇಶ್ ಪೂಜಾರಿ ಇವರ ಸಾರಥ್ಯದಲ್ಲಿ ವ್ಯವಸ್ಥಿತವಾಗಿ ನಡೆಯಲಿದೆ ಎಂದು ಸ್ಪೋರ್ಟ್ಸ್ ಕನ್ನಡದೊಂದಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9380041966 ಮತ್ತು 9535941932 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.