ಸಾಲಿಗ್ರಾಮ-ಇಲ್ಲಿನ ಪರಿಸರದ ಹಿರಿಯ ಸಂಸ್ಥೆ ಅಜೇಯ್ ಕ್ರಿಕೆಟ್ ಕ್ಲಬ್ ಕುಂಜಿಗುಡಿ 35 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಇಂದಿನಿಂದ ಜನವರಿ 20,21 ಮತ್ತು 22 ಈ 3 ದಿನಗಳ ಕಾಲ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ.
ನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ಇಂದು ಜನವರಿ 20 ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯಾಟ ಪ್ರಾರಂಭವಾಗಲಿದ್ದು,ರಾತ್ರಿ 7 ಗಂಟೆಗೆ ಸರಿಯಾಗಿ ಗಣ್ಯಾತಿಗಣ್ಯ ಅತಿಥಿಗಳು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯದ ಬಲಿಷ್ಠ 16 ತಂಡಗಳು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸೆಣಸಾಡಲಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡ 1,33,333 ರೂ ನಗದು,ದ್ವಿತೀಯ ಸ್ಥಾನಿ 83,333 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ಮತ್ತು ಪಂದ್ಯಾಟದ ಬೆಸ್ಟ್ ಬ್ಯಾಟರ್ ಮತ್ತು ಬೆಸ್ಟ್ ಬೌಲರ್ ಸ್ಮಾರ್ಟ್ ಮೊಬೈಲ್ ಹಾಗೂ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದ ಆಟಗಾರ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.