75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತನುಶ್ರೀ ಪಿತ್ರೋಡಿ ಕೇವಲ 43.18 ನಿಮಿಷದಲ್ಲಿ 245 ಯೋಗ ಭಂಗಿಗಳ ಪ್ರದರ್ಶನ ನೀಡಿ 7 ನೇ ವಿಶ್ವದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ತನುಶ್ರೀ ವಿಶ್ವದಾಖಲೆಯ ಬಳಿಕ ಮಾತನಾಡಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ನಿರ್ಣಾಯಕರಾದ ಮನೀಷ್ ಬಿಷ್ಣೋಯಿ “ನ ಭೂತೋ ನ ಭವಿಷ್ಯತಿ”ತನುಶ್ರೀ ಇಂದು ನಂಬಲಸಾಧ್ಯವಾದ ದಾಖಲೆಯೊಂದನ್ನು ಬರೆದಿದ್ದಾಳೆ.ನಾನು ಈವರೆಗೆ ನಿರ್ಣಯಿಸಿದ 2000 ಕ್ಕೂ ಹೆಚ್ಚಿನ ವಿಶ್ವದಾಖಲೆಯಲ್ಲಿ ಇದು ಅವರ್ಣನೀಯ ನಿಜವಾಗಿಯೂ ತನುಶ್ರೀ ಗೋಲ್ಡನ್ ಗರ್ಲ್ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧರು,ಕೊರೋನಾ ವಾರಿಯರ್ಸ್ ಇನ್ನಿತರ ಸಾಧಕರನ್ನು ಸನ್ಮಾನಿಸಲಾಯಿತು.
ಅದಮಾರು ಮಠದ ಈಶಪ್ರಿಯ ತೀರ್ಥರು ಆಶೀರ್ವದಿಸಿದರು.ಉಡುಪಿಯ ಶಾಸಕ ರಘುಪತಿ ಭಟ್,ಕಾಪು ಶಾಸಕ ಲಾಲಾಜಿ ಮೆಂಡನ್,ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,ರಶ್ಮಿ ಚಿತ್ತರಂಜನ್ ಭಟ್,ಗೀತಾಂಜಲಿ ಸುವರ್ಣ,ಲಕ್ಷ್ಮೀ ಮಂಜುನಾಥ್ ಕೊಳ,ಪತಂಜಲಿ ಯೋಗ ಗುರು ರಾಜೇಂದ್ರ ಚಕ್ಕೇರ ಇನ್ನಿತರರು ಉಪಸ್ಥಿತರಿದ್ದರು.