ಜಿ ಎಸ್ ಬಿ ಗಳ ಪ್ರಖ್ಯಾತ ಕ್ರಿಕೆಟ್ ಲೀಗ್ ಟೂರ್ನಿಯಾದ ಜಿ. ಎಸ್.ಬಿ ಪ್ರೀಮಿಯರ್ ಲೀಗ್ ಈ ಬಾರಿ 16 ತಂಡಗಳ ಸ್ಪರ್ಧೆಯಾಗಿರಲಿದೆ. ಮುಂಬರುವ 2024ರ ಆವೃತ್ತಿಯಲ್ಲಿ ಒಟ್ಟು 16 ತಂಡಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ.
ಈ ಬಗ್ಗೆ ಗುರುವಾರ KSA ಮಂಗಳೂರು ಖಚಿತಪಡಿಸಿದೆ. ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ 2017 ರಿಂದ ವಾರ್ಷಿಕವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ.
ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳೂರು ಪ್ರಸ್ತುತಪಡಿಸುವ GSB ಸಮುದಾಯದ ಪ್ರತಿಷ್ಠಿತ ಟ್ರೋಫಿ – GPL 2024 ಗಾಗಿ ಸ್ಪರ್ಧಿಸುವ ಎಲ್ಲಾ 16 ತಂಡಗಳ ತಂಡದ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.
GSB ಸಮುದಾಯದ ನಂ. 1 ಈವೆಂಟ್‌ನಲ್ಲಿ ಈ ಕೆಳಗಿನ ತಂಡಗಳು ಅತ್ಯಂತ ಅಪೇಕ್ಷಿತ GPL 2024 ಟ್ರೋಫಿಯನ್ನು ಎತ್ತಿ ಹಿಡಿಯಲು ಮುಖಾಮುಖಿಯಾಗುತ್ತವೆ!!
GPL 2024ರಲ್ಲಿ ಪಾಲ್ಗೊಳ್ಳುವ ತಂಡಗಳು:
ವೊಳಲಂಕೆ ಫೈಟರ್ಸ್ ಮೂಲ್ಕಿ
ಯುಕೆ ಏಕಾದಶ ಸಾರಸ್ವತ
ಉಡುಪಿ ಬ್ಲಾಸ್ಟರ್ಸ್
ಟೀಮ್ ಜೈಕಾರ್ ಸ್ಟ್ರೈಕರ್ಸ್
ಅಭರಣ ಡೈಮಂಡ್ಸ್
ಮಾಲ್ಸಿ ಸ್ಮಾಷರ್ಸ್
ಕೊಡಿಯಾಲ್ ಸೂಪರ್ ಕಿಂಗ್ಸ್
ರಾಯಲ್ ಚಾಲೆಂಜರ್ಸ್, ಬಳ್ಳಂಬೆಟ್ಟು
ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
GRS ಮೈಸೂರು ವಾರಿಯರ್ಸ್
ಮುಂಬೈ ಪಲ್ಟಾನ್ಸ್
ASKB ಕ್ರಿಕೆಟರ್ಸ್, ಬೆಂಗಳೂರು
ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್, ಮಣಿಪಾಲ
ಅಮ್ಚಿಗೆಲ್ ಚೆರ್ಕೆಸ್
ಮಲ್ಪೆ ಯುನೈಟೆಡ್
ರೈಸಿಂಗ್ ಸ್ಟಾರ್ಸ್, ಮಂಗಳೂರು
ಇದುವರೆಗೆ ಜಿ ಪಿ ಎಲ್ ನಡೆಯುತಿದ್ದ ಮಂಗಳೂರಿನ ಸಹ್ಯಾದ್ರಿ ಕ್ರೀಡಾಂಗಣ ನವೀಕರಣಕ್ಕೆ ಒಳಗಾಗಲಿದ್ದು, ಇದೇ ಫೆಬ್ರವರಿ 2024 ರಲ್ಲಿ ನಡೆಯಲಿರುವ ಜಿ ಪಿ ಎಲ್ ಪಂದ್ಯಾವಳಿಗೆ ಪಂದ್ಯಗಳನ್ನು ಆಯೋಜಿಸಲು ಸ್ಥಳವನ್ನು ಸಿದ್ಧಪಡಿಸಲಾಗುತ್ತಿದೆ. ಕೆಎಸ್ಎ ಇನ್ನೂ ಈ ಬಗ್ಗೆ ವಿವರಗಳನ್ನು ಖಚಿತಪಡಿಸಿಲ್ಲ. ಆದರೆ ಕೆಲವೇ ದಿನಗಳಲ್ಲಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ಈ ಟೂರ್ನಮೆಂಟ್ ಫೆಬ್ರವರಿ 2024 ರಲ್ಲಿ ಹೊಸ ಯೋಜನೆಗಳೊಂದಿಗೆ ನಡೆಯಲಿದೆ. ಜಿ ಪಿ ಎಲ್ ಈ ಋತುವಿನ ಮೂಲಕ 8ನೇ ವರ್ಷವನ್ನು ಆಚರಿಸುತ್ತಿದ್ದು ಜಿ ಎಸ್ ಬಿ ಕ್ರಿಕೆಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದು ತನ್ನ ಈ ನಿಲುವಿಗೆ ಯಾವಾಗಲೂ ಬದ್ಧವಾಗಿರುತ್ತದೆ ಮತ್ತು ಕ್ರೀಡೆಯನ್ನು ಮತ್ತಷ್ಟು ಜನಪ್ರಿಯ ಗೊಳಿಸಲು ಕೂಡ ಕೊಡುಗೆ ನೀಡಲಿದೆ.
ಸುರೇಶ್ ಭಟ್, ಮೂಲ್ಕಿ
ಜಿ ಪಿ ಎಲ್ ಕ್ರಿಕೆಟ್ ವಿಮರ್ಶಕ