5 C
London
Wednesday, April 24, 2024
Homeಕ್ರಿಕೆಟ್1998 ರ ಮಹತ್ವದ ರಣಜಿ ಸೆಮಿಫೈನಲ್-ಕರ್ನಾಟಕಕ್ಕೆ ವರವಾದ ದೊಡ್ಡಗಣೇಶ್

1998 ರ ಮಹತ್ವದ ರಣಜಿ ಸೆಮಿಫೈನಲ್-ಕರ್ನಾಟಕಕ್ಕೆ ವರವಾದ ದೊಡ್ಡಗಣೇಶ್

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

1998 ರ ಮಹತ್ವದ ರಣಜಿ ಸೆಮಿಫೈನಲ್-ಕರ್ನಾಟಕಕ್ಕೆ ವರವಾದ ದೊಡ್ಡಗಣೇಶ್

86ನೇ ರಣಜಿ ಋತುವು ಕರ್ನಾಟಕದ ಪಾಲಿಗೆ ಮರೆಯಲಾಗದ ಹಲವು ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕರ್ನಾಟಕ ಮತ್ತು ಹೈದರಾಬಾದ್ ಬದ್ದ ವೈರಿಗಳಾಗಿದ್ದ ಕಾಲವದು. ರಾಹುಲ್ ದ್ರಾವಿಡ್ ಅವರನ್ನು ಕೂಡಿದಂತೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು 1998ರ ರಣಜಿ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಿದ್ದರು. ಯಾರೂ ಊಹಿಸದಂತಹ ಆಟಗಾರನೊಬ್ಬ ಕೊನೆಯ ಕ್ಷಣದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿದ ರೋಚಕ ಆಟವದು. ಸ್ಕೋರ್ ಪಟ್ಟಿಯನ್ನು ಹೊರತುಪಡಿಸಿ ವ್ಯಕ್ತಿಯೊಬ್ಬ ಚಿತ್ರೀಕರಿಸಿದ ವಿಡಿಯೋವೊಂದೇ ಈ ಅಮೂಲ್ಯ ಕ್ಷಣದ ದಾಖಲೆಯಾಗಿ ಉಳಿದಿದೆ. ಕೊನೆಯ ಒಂದು ವಿಕೆಟ್ ಇರುವಾಗ ಕರ್ನಾಟಕ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿತ್ತು. ಸ್ವಲ್ಪ ಮಸುಕು ಮಸುಕಾಗಿರುವ ಈ ವಿಡಿಯೋ ಕೊನೆಯ ಎರಡು ಬಾಲ್ ಗಳನ್ನು ಹೊಂದಿದೆ. ಅದು ಕೂಡ ಬ್ಯಾಟ್ಸ್ ಮ್ಯಾನ್ ಹಿಂದಿನಿಂದ ಶೂಟ್ ಮಾಡಿದ್ದು. ವೆಂಕಟಪತಿ ರಾಜು ಮೊದಲ ಎಸೆತವನ್ನು ರೌಂಡ್ ದಿ ವಿಕೆಟ್ ಹಾಕಿದ್ದನ್ನು ಪಾಯಿಂಟ್ ಹಿಂದೆ ಕಟ್ ಶಾಟ್ ಮೂಲಕ ಬೌಂಡರಿ ಗೆರೆ ದಾಟಿ ಸಿದಾಗ ಪೆವಿಲಿಯನ್ ನಲ್ಲಿ ಇದ್ದ ನಾಯಕರಾದ ರಾಹುಲ್ ದ್ರಾವಿಡ್ ಸ್ಪೂರ್ತಿ ತುಂಬುವಂತೆ ಏನೋ ಒಂದು ಸನ್ನೆ ಮಾಡಿದರು. ಮುಂದಿನ ಎಸೆತವನ್ನು ಆತ್ಮವಿಶ್ವಾಸದಿಂದ ಫ್ರಂಟ್ ಫೂಟ್ ನಲ್ಲಿ ಮಿಡ್ ಆಫ್ ಕಡೆ ಡ್ರೈವ್ ಮಾಡಿ ಹಿಂದೆ ನೋಡಿ ಗೆಲುವಿನ ನಗೆ ಬೀರುವ ಕ್ಷಣವನ್ನು ಆ ವಿಡಿಯೋದಲ್ಲಿ ನಾವು ನೋಡಬಹುದು ವಿಡಿಯೋದಲ್ಲಿರುವ ವ್ಯಕ್ತಿ ಯೇ ನಮ್ಮ ದೊಡ್ಡ ಗಣೇಶ್. ಸೌರವ್ ಗಂಗೂಲಿ ಲಾರ್ಡ್ಸ್ ಮೈದಾನದಲ್ಲಿ ಸಂಭ್ರಮ ಪಟ್ಟಂತೆ ಆದರೆ ಟೀಶರ್ಟ್ ಬಿಚ್ಚದೆ ರಾಹುಲ್ ದ್ರಾವಿಡ್ ಗೆಲುವಿನ ಸಂಭ್ರಮ ಪಟ್ಟಿದ್ದರು.

ಬಿರುಬಿಸಿಲಿನ ಹೈದರಾಬಾದ್ನಲ್ಲಿ ಬಂದಿಳಿದ ಆಟಗಾರರಿಗೆ ಕುಲುಮೆಗೆ ನೂಕಿದಂತಹ ಅನುಭವವಾಗಿತ್ತು. ಅವರ ಶರ್ಟ್ಗಳು ಬೆವರಿನಿಂದ ಒದ್ದೆಯಾಗಿದ್ದವು. ಬಿಸಿಲಿನ ಜಳಕ್ಕೆ ಕಣ್ಣುಗಳು ಉರಿಯುತ್ತಿದ್ದವು. “ಯಾರೂ ಊಹಿಸಿರದಂತಹ ಬಿಸಿಲು ನನಗೆ ತಂಡದ ವೇಗಿಗಳಿಗೆ ಚಿಂತೆಯಾಗಿತ್ತು ” ಎಂದು ದ್ರಾವಿಡ್ ನೆನಪಿಸುತ್ತಾರೆ. ಒಂದು ವಾರದ ನಂತರ ಬಿಸಿಲ ಕಾರಣದಿಂದಾಗಿ ಆಯೋಜಕರು ಲಾಲ್ಬಹದ್ದೂರ್ಶಾಸ್ತ್ರಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸುತ್ತ ಮರಗಳಿಂದ ಕೂಡಿದ ಜಿಮ್ ಖಾನ ಸ್ಟೇಡಿಯಂಗೆ ವರ್ಗಾಯಿಸಿದ್ದರು. ಈ ಬಿಸಿಲು ಹೈದರಾಬಾದ್ ಪಾಲಿಗೆ ವರದಾನವಾಗಲಿದೆ ಎಂದು ದ್ರಾವಿಡ್ ಅರಿತಿದ್ದರು. ” ಅನಿಲ್ ಕುಂಬ್ಳೆ ಭಾರತ ತಂಡದ ಸೇವೆಯಲ್ಲಿರುವುದರಿಂದ ಸುನೀಲ್ ಜೋಶಿ ಈಗಷ್ಟೇ ನಮ್ಮ ತಂಡಕ್ಕೆ ಮರಳಿದ್ದಾರೆ. ಕುಂಬ್ಳೆಯವರ ಅನುಪಸ್ಥಿತಿಯಿಂದಾಗಿ ಬೌಲಿಂಗ್ ವಿಭಾಗದ ಭಾರ ವೇಗಿಗಳಾದ ದೊಡ್ಡ ಗಣೇಶ್ ಮತ್ತು ಮನ್ಸೂರ್ ಅಲಿಖಾನ್ ಹೆಗಲಮೇಲಿದೆ. ಹೈದರಾಬಾದ್ ತಂಡದ ಪರಿಣತ ಸ್ಪಿನ್ನರ್ ಗಳಾದ ವೆಂಕಟಪತಿ ರಾಜು ಮತ್ತು ಕನ್ವಲ್ಜಿತ್ ಸಿಂಗ್ ಎದುರು ನಮ್ಮ ತಂಡ ದುರ್ಬಲವಾಗಿ ಕಾಣಿಸುತ್ತಿದೆ” ಎಂದು ದ್ರಾವಿಡ್ ಅಭಿಪ್ರಾಯಪಟ್ಟರು. ಹೈದರಾಬಾದ್ನ ಸ್ಪಿನ್ ದ್ವಯರ ಹೊಂದಾಣಿಕೆ ಹೇಗಿತ್ತೆಂದರೆ ಒಬ್ಬನ ಆಕ್ರಮಣಕ್ಕೆ ಇನ್ನೊಬ್ಬ ಉತ್ತಮ ಸಾಥ್ ನೀಡುತ್ತಿದ್ದ. ಅವರ ಜೋಡಿ ಸರಣಿ ಇಡೀ ಕಮಾಲ್ ಮಾಡಿತ್ತು.


ಪಿಚ್ಚನ್ನು ನೋಡುತ್ತಿದ್ದಂತೆ ಮುಂದಾಗಬಹುದಾದ ತಂಡದ ಕರಾಳ ಪರಿಸ್ಥಿತಿಯನ್ನು ದ್ರಾವಿಡ್ ಅವಲೋಕಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಿದ್ದು ಕೊನೆಯಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿತ್ತು ಏಕೆಂದರೆ ಮೈದಾನದಲ್ಲಿ ಹುಲ್ಲಿನ ಪ್ರಮಾಣ ಕಡಿಮೆ ಇತ್ತು. ಒಂದು ವೇಳೆ ಟಾಸ್ ಸೋತರೆ ಖಂಡಿತವಾಗಿ ಪಂದ್ಯದ ಗೆಲುವಿನಿಂದ ಒಂದು ಹೆಜ್ಜೆ ಹಿಂದೆ ಇಟ್ಟಂತೆ ಆಗುತ್ತಿತ್ತು.

ಆದರೆ ಹೈದರಾಬಾದ್ ಪಾಳಯದ ಆತಂಕವೇ ಬೇರೆಯಾಗಿತ್ತು ತಂಡದ ಪ್ರಮುಖ ಆಟಗಾರರಾದ ಮೊಹಮ್ಮದ್ ಅಜರುದ್ದಿನ್ ಹಾಗೂ ವಿವಿಎಸ್ ಲಕ್ಷ್ಮಣ್ ಶಾರ್ಜಾದಲ್ಲಿ ನಡೆಯುತ್ತಿದ್ದ ಕೋಕಾಕೋಲಾ ಕಪ್ (ಸಚಿನ್ ತೆಂಡೂಲ್ಕರ್ ರವರ ಡೆಸರ್ಟ್ ಸ್ಟೋರ್ಮ್ ಖ್ಯಾತಿಯ 1997-98ರ ಕಪ್)ಗೆ ಭಾರತ ತಂಡವನ್ನು ಸೇರಿಕೊಂಡಿದ್ದರು. ಈಗಾಗಲೇ ಅವರು 611 ರನ್ಗಳನ್ನು 203ರ ಸರಾಸರಿಯಲ್ಲಿ ಒಂದು ತ್ರೀ ಶತಕದ ನೆರವಿನಿಂದ ಗಳಿಸಿದ್ದರು. ಇವರಿಬ್ಬರು ತಂಡದಲ್ಲಿ ಇದ್ದಿದ್ದರೆ ನಮ್ಮ ತಂಡವೇ ಪ್ರಶಸ್ತಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿತ್ತು ಎಂಬುವುದು ರಾಜು ಅವರ ಅನಿಸಿಕೆಯಾಗಿತ್ತು. ಆದರೆ ಕರ್ನಾಟಕ ತಂಡದಲ್ಲಿ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯವಿತ್ತು. ಏಕೆಂದರೆ ಕುಂಬ್ಳೆ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಕೂಡ ಕರ್ನಾಟಕ ತಂಡದಲ್ಲಿ ಇರಲಿಲ್ಲ. ಆದರೆ ಎರಡು ತಂಡವನ್ನು ಅಳೆದು ತೂಗಿ ನೋಡಿದಾಗ ಎರಡು ತಂಡಗಳು ಸರಿಸಮಾನವಾಗಿ ಕಂಡುಬರುತ್ತವೆ.

ವಿಧಿಯಾಟ ವೆಂಬಂತೆ ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ದುಕೊಂಡಿತ್ತು . ಮೊದಲನೇ ದಿನದ ಸುಧೀರ್ಘ ಆಟದ ಅಂತ್ಯದಲ್ಲಿ ಆತಿಥೇಯರು 200 ರನ್ ಗಳಿಗೆ 3ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದರು. ಚಹಾ ವಿರಾಮದ ವೇಳೆಗೆ ನಾನು ಎಷ್ಟು ದಣಿದಿದ್ದೆ ಎಂದರೆ ಎರಡು ದಿನಗಳು ಬೌಲಿಂಗ್ ಮಾಡಿದಷ್ಟು ಸುಸ್ತಾಗಿದ್ದೆ. ನಾವು ಬಹಳಷ್ಟು ದುರ್ಬಲ ಎಸೆತಗಳನ್ನು ಎಸೆದಿದ್ದರಿಂದ ಅವರ ಮೇಲೆ ಒತ್ತಡ ಹೇರಲು ಆಗಿರಲಿಲ್ಲ ಎಂದು ದೊಡ್ಡ ಗಣೇಶ್ ಅವರು ಹೇಳಿದ್ದರು.

ಅಷ್ಟರಲ್ಲಾಗಲೇ ದೊಡ್ಡ ಗಣೇಶ್ ಅವರು ಭಾರತ ತಂಡದ ಪರವಾಗಿ ನಾಲ್ಕು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯವನ್ನು ಆಡಿದ್ದರು.ಆದರೆ ದೊಡ್ಡ ಗಣೇಶ್ ಅವರು ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಹೊತ್ತಿದ್ದರು.ಆದರೆ ಇಂತಹ ಕಠಿಣ ಪರಿಸ್ಥಿತಿಗಳನ್ನು ಪರಿಪೂರ್ಣ ನನ್ನಾಗಿಸುತ್ತದೆ.”ಇಂತಹ ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರೆ ನಾನು ಭಾರತ ತಂಡಕ್ಕೆ ಮರಳಬಹುದು, ನನ್ನ ಬೌಲಿಂಗನ್ನು ನಾನೇ ಅವಲೋಕಿಸಿ ನೋಡಿದಾಗ ತಿಳಿದು ಬಂದಂತಹ ವಿಚಾರವೇನೆಂದರೆ ನಾನು ಔಟ್ ಸೈಡ್ ದಿ ಆಫ್ ಸ್ಟಂಪ್
ಎಸೆತಗಳನ್ನು ಜಾಸ್ತಿ ಎಸೆಯುತ್ತಿದ್ದೆ, ನಾನು ನೇರ ಎಸೆತಗಳನ್ನು ಎಸೆಯಬೇಕಿತ್ತು ಏಕೆಂದರೆ ಕೆಲವೊಂದು ಎಸೆತಗಳು ಪುಟಿತ ಕಾಣುತ್ತಿರಲಿಲ್ಲ.ಹಾಗೂ ಒಂದೇ ಸ್ಪೆಲ್ ನಲ್ಲಿ 8-9 ಓವರುಗಳನ್ನು ಎಸೆಯುವುದರ ಬದಲಾಗಿ ಪರಿಣಾಮಕಾರಿಯಾದ 4-5 ಓವರ್ ಗಳ ಸ್ಪೆಲ್ ಗಳನ್ನು ಎಸೆಯುವುದು ಉತ್ತಮವಾಗಿತ್ತು.
ರಾಹುಲ್ ದ್ರಾವಿಡ್ ಅವರ ದೊಡ್ಡಗಣೇಶ ಅವರಲ್ಲಿ ದೊಡ್ಡ ಛಲವಾದಿಯನ್ನು ನೋಡಿದ್ದರು.

ಎರಡನೇ ದಿನ ಬೌಲಿಂಗ್ ದಾಳಿಯನ್ನು ಆರಂಭಿಸಿದ ದೊಡ್ಡ ಗಣೇಶ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬನ್ನು ಮುರಿದರು.231 ಕ್ಕೆ 3 ವಿಕೆಟ್ ಕಳೆದುಕೊಂಡು ಸ್ಥಿತಿಯಲ್ಲಿದ್ದ ಹೈದರಾಬಾದ್ ತಂಡ,ಇನ್ನೂ ಎರಡು ರನ್ ಗಳಿಸುವಷ್ಟರಲ್ಲಿ ತನ್ನ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತ್ತು. ಆದರೆ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ನರೇಂದ್ರ ಸಿಂಗ್ 28 ರನ್ ಬಾರಿಸಿ ತಂಡದ ಮೊತ್ತವನ್ನು 283 ರ‌ ಗಡಿ ತಲುಪಿಸಿದರು.ತಂಡದ ಪ್ರದರ್ಶನವು ರಾಹುಲ್ ದ್ರಾವಿಡ್ ಅವರ ಪಾಲಿಗೆ ತೃಪ್ತಿದಾಯಕವಾಗಿತ್ತು.

ದೊಡ್ಡ ಗಣೇಶ್ ಹೀರೋ ಆಗಿ ಡ್ರೆಸ್ಸಿಂಗ್ ರೂಮಿಗೆ ಬರುವುದು ಇದೇ ಮೊದಲಲ್ಲ.ಟೀಕೆಗಳಿಗೆ ಪ್ರತ್ಯುತ್ತರ ನೀಡುವ ಪ್ರವೃತ್ತಿ ದೊಡ್ಡಗಣೇಶ ರಲ್ಲಿ ಮೊದಲಿಂದಲೂ ಇತ್ತು. ನಮ್ಮ ತಂಡ ಇನ್ನೂ 100-120 ರನ್ನುಗಳ ಮುನ್ನಡೆಯನ್ನು ಸಾಧಿಸಿದರೆ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದು ರಾಹುಲ್ ದ್ರಾವಿಡ್ ನಂಬಿದ್ದರು.

ನಾಯಕನ ಭರವಸೆಯಂತೆ ತಂಡದ ಆರಂಭಿಕ ಆಟಗಾರರಾದ ಸುಜಿತ್ ಸೋಮಸುಂದರ್ ಮತ್ತು ಜೆ.ಅರುಣ್ ಕುಮಾರ್ ಅವರು ಉತ್ತಮ ಆರಂಭವನ್ನು ಒದಗಿಸಿದರು. ಅಲ್ಲಿಯವರೆಗೆ ಎದುರಾಳಿಯ ಕಳಪೆ ಎಸೆತಗಳನ್ನು ದಂಡಿಸುತ್ತಿದ್ದ ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಗಳು ಕನ್ವಲ್ ಜಿತ್ ಅವರು ಲಯ ಕಂಡುಕೊಂಡ ನಂತರ ತಮ್ಮ ವಿಕೆಟ್ ಗಳನ್ನು ಒಂದೊಂದಾಗಿ ಒಪ್ಪಿಸಲು ಪ್ರಾರಂಭಿಸಿದರು. ಅವರು ಗಳಿಸಿದ 3 ವಿಕೆಟ್ ಗಳು ಪಂದ್ಯದ ಮೇಲೆ ಹೈದರಾಬಾದ್ ಮರುಹಿಡಿತವನ್ನು ಸಾಧಿಸಲು ಸಾಧ್ಯವಾಯಿತು.

ಆ ದಿನ ರಾತ್ರಿ ರಾಹುಲ್ ದ್ರಾವಿಡ್ ಮರುದಿನ ಹೇಗೆ ಆಡಬೇಕೆಂದು ಸಂಪೂರ್ಣ ಸಜ್ಜಾಗಿದ್ದರು, ಅದರಂತೆ ಮರುದಿನ ಬ್ಯಾಟಿಂಗ್ ಆರಂಭಿಸಿದ ಅವರು ಇನ್ನೊಂದೆಡೆಯಲ್ಲಿ ವಿಕೆಟ್ ಗಳು ಉರುಳುತ್ತಿದ್ದರೂ ಸುನಿಲ್ ಜೋಶಿ ಅವರೊಂದಿಗೆ ಕನ್ವಲ್ ಜಿತ್ ಅವರ ಎಸೆತವನ್ನು ಸಮರ್ಥವಾಗಿ ಎದುರಿಸುತ್ತಿದ್ದರು, ಕನ್ವಲ್ ಜಿತ್ ಅವರು ಸರಿಸುಮಾರು 40 ಓವರ್ ಗಳನ್ನು ಎಸೆದಿದ್ದರೂ ಅದರಲ್ಲಿ ಒಂದೆರಡು ಬಾರಿ ರಾಹುಲ್ ದ್ರಾವಿಡ್ ಅವರ ಏಕಾಗ್ರತೆಯನ್ನು ತಪ್ಪಿಸುವುದರಲ್ಲಿ ಯಶಸ್ವಿಯಾಗಿದ್ದರು ಆದರೂ ವಿಕೆಟ್ ಗಳಿಸಲು ಸಾಧ್ಯವಾಗಿರಲಿಲ್ಲ.ಹೈದ್ರಾಬಾದ್ ತಂಡದ ಒಟ್ಟು ಮೊತ್ತಕ್ಕಿಂತ ಕೇವಲ ಐವತ್ತು ರನ್ ಗಳು ಕಡಿಮೆ ಇರುವಾಗ ರಾಹುಲ್ ದ್ರಾವಿಡ್ ಅವರು ತನ್ನ ಸಣ್ಣ ಪ್ರಮಾದದಿಂದಾಗಿ ವಿಕೆಟನ್ನು ಕೈಚೆಲ್ಲುವಂತಾಯಿತು, ಆಫ್-ಸ್ಪಿನ್ನರ್ ಆಗಿ ದಾಳಿಗಿಳಿದ ಡೇನಿಯಲ್ ಮನೋಹರ್ ಅವರ ಎಸೆತವನ್ನು ಸ್ಕ್ವ್ಯಾರ್ ಲೆಗ್ ನತ್ತ ಪುಲ್ ಶಾಟ್ ಹೊಡೆಯುವ ಸಂದರ್ಭದಲ್ಲಿ ನಂದಕಿಶೋರ್ ಹಿಡಿದ ಉತ್ತಮ ಕ್ಯಾಚ್ ಗೆ ಬಲಿಯಾದರು.ರಾಹುಲ್ ದ್ರಾವಿಡ್ ಅವರು ಶತಕ ವಂಚಿತರಾಗಿದ್ದರು ಹಾಗೂ ಆಯ್ದುಕೊಂಡ ಶಾಟ್ ನ ಬಗ್ಗೆ ಅವರು ಪರಿತಪಿಸಿದರು.ದ್ರಾವಿಡ್ ಅವರು ನಿರ್ಗಮಿಸಿದ ನಂತರ ಕನ್ವಲ್ ಜಿತ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡವು 26 ರನ್ ಗಳ ಮುನ್ನಡೆ ಗಳಿಸಿ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಈ ಸಂದರ್ಭದಲ್ಲಿ ದ್ರಾವಿಡ್ ಅವರು ನಾಲ್ಕನೇ ಇನ್ನಿಂಗ್ಸ್ ನಲ್ಲಿ ನಾವು ಬ್ಯಾಟಿಂಗ್ ವಿಭಾಗವನ್ನು ಹೇಗೆ ಬಲಿಷ್ಟ ಗೊಳಿಸುವುದು ಎಂಬ ಬಗ್ಗೆ ಅವಲೋಕಿಸುತ್ತಿದ್ದರು.

ಮೂರನೇ ದಿನದ ಆರಂಭಕ್ಕೆ ಪಿಚ್ ಸ್ಪಿನ್ ಬೌಲರ್ ಗೆ ನೆರವಾಗಲು ಪ್ರಾರಂಭಿಸಿತ್ತು ತತ್ಪರಿಣಾಮವಾಗಿ ಸುನಿಲ್ ಜೋಶಿ ಅವರನ್ನು ಆರಂಭಿಕ ದಾಳಿಗೆ ಇಳಿಸಿದರು,ಆದರೂ ಈ ಇನ್ನಿಂಗ್ಸ್ ನಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದ‌ ದೊಡ್ಡ ಗಣೇಶ್ ತಂಡದ ಪಾಲಿಗೆ ಮೊದಲ ಯಶಸ್ಸನ್ನು ತಂದುಕೊಟ್ಟರು. ದ್ರಾವಿಡ್ ಅವರು ಮೊದಲು ಇಬ್ಬರು ಸ್ಪಿನ್ನರ್ ನೊಂದಿಗೆ ದಾಳಿ ಆರಂಭಿಸಲು ಬಯಸಿದ್ದರೂ ಅವರೊಂದಿಗೆ‌ ಚರ್ಚಿಸಿ ನಾನು ದಾಳಿಗಿಳಿದಿದ್ದೆ. ಅಂತಹಾ ಬಿರು ಬಿಸಿಲಿನ ನಡುವೆಯೂ ನಾನು ಉತ್ತಮ ಪ್ರದರ್ಶನವನ್ನು ನೀಡಿದ್ದೆ ಎಂದು ಗಣೇಶ್ ನೆನೆದರು.

ಹೈದರಾಬಾದ್ ನ ಅಗ್ರಕ್ರಮಾಂಕದ ಆರು ಆಟಗಾರರು ಉತ್ತಮ ಆರಂಭವನ್ನು ಒದಗಿಸಿದರೂ ವೈಯಕ್ತಿಕ 39 ರನ್ ಗಳ ಗಡಿ ದಾಟಲಿಲ್ಲ.179 ರನ್‌ಗಳಿಗೆ ಗಂಟು ಮೂಟೆ ಕಟ್ಟಿದ ಹೈದರಾಬಾದ್ ತಂಡ ಕರ್ನಾಟಕಕ್ಕೆ 154 ರನ್ ಗಳ ಗುರಿ ನೀಡಿತು. ಈ ಮೊತ್ತ ನೋಡಲು ಚಿಕ್ಕದೆನಿಸಿದರೂ ಕೂಡ ಎದುರಾಳಿಯನ್ನು ನಿಯಂತ್ರಿಸುವುದು ಅಸಾಧ್ಯವೇನಾಗಿರಲಿಲ್ಲ.ಕನ್ವಲ್ ಸಿಂಗ್ ಅವರು ಬೌಲಿಂಗ್ ಮಾಡುತ್ತಿರುವ ರೀತಿಯನ್ನು ನೋಡಿದರೆ ಈ ಪಂದ್ಯವನ್ನು ಹೈದರಾಬಾದ್ ಸುಲಭವಾಗಿ ಕೈವಶ ಮಾಡಿಕೊಳ್ಳಬಹುದಾಗಿತ್ತು ಆದರೆ ದ್ರಾವಿಡ್ ಇರುವ ಫಾರ್ಮ್ ಅವರಿಗೆ ತಲೆನೋವಾಗಿತ್ತು.

ದಿನದಾಟ ಮುಗಿದ ನಂತರ ಕಣ್ವಲ್ಜಿಟ್ ಮತ್ತು ರಾಜು ಸಂಪೂರ್ಣ ರಾತ್ರಿಯನ್ನು ದ್ರಾವಿಡರ ವಿಕೆಟ್ ಗಳಿಸುವ ಉಪಾಯದ ಬಗ್ಗೆ ಚರ್ಚಿಸುತ್ತಿದ್ದರು. ಕೊನೆಗೆ ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದರು. ಪಿಚ್ ಅಲ್ಲಿ ಕೆಲವೊಂದು ಎಸೆತಗಳು ಅನಿರೀಕ್ಷಿತ ಪುಟಿತ ಕಾಣುತ್ತಿದ್ದರಿಂದ ಹೆಚ್ಚಿನ ಎಸೆತಗಳನ್ನು ಆಫ್ ಸ್ಟಂಪ್ ಬಳಿ ಎಸೆದು, ಮುಂದೆ ಬಂದು ಆಡಲು ಪ್ರಚೋದಿಸುವಂತೆ ಬಾಲ್ ಹಾಕಲು ನಿರ್ಧರಿಸಿದರು. ಈ ಉಪಾಯ ವ್ಯರ್ಥವಾಗಲಿಲ್ಲ. 43 ರನ್ ಗಳ ಆರಂಭಿಕ ಜೊತೆಯಾಟದ ಹೊರತಾಗಿಯೂ ದ್ರಾವಿಡ್ ವಿಕೆಟ್ ಪತನದ ನಂತರ ಉಳಿದ ಆಟಗಾರರು ಪವಿಲಿಯನ್ ಪೆರೇಡ್ ನಡೆಸಲು ಪ್ರಾರಂಭಿಸಿದರು. ತಂಡದ ಕೊನೆಯ ಆಶಾಕಿರಣವಾಗಿದ್ದ ಜೋಶಿ ಅವರು ಅರೆಕಾಲಿಕ ಬೌಲರ್ ಸಂತೋಷ್ ಯಾದವ್ ಎಸೆತಕ್ಕೆ ಬಲಿಯಾಗುವುದರೊಂದಿಗೆ ಕರ್ನಾಟಕದ ಗೆಲುವಿನ ಆಸೆ ಮರೆಮಾಚಿತ್ತು. ವಿಜಯಕ್ಕೆ ಇನ್ನೂ 37 ರನ್ ಬೇಕಿದ್ದರೂ ಅದಾಗಲೇ 7 ವಿಕೆಟ್ ಪತನಗೊಂಡಿದ್ದರಿಂದ ದ್ರಾವಿಡ್ ಗೆಲುವಿನ ಆಸೆ ಬಿಟ್ಟಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದ್ದ ಗಣೇಶ್ ಮರಳಿ ಭಾರತೀಯ ತಂಡ ಸೇರುವ ಕನಸು ಹೊತ್ತಿದ್ದರು. ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯದಂತೆ ಅವರಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಭೆ ಇತ್ತು. ಆದರೆ ಈ ಪಟ್ಟಿಯಲ್ಲಿ ಇನ್ನೂ ಕೆಲವು ಆಟಗಾರರು ಇದ್ದರು ದ್ರಾವಿಡ್ ಏಕದಿನ ತಂಡವನ್ನು ಸೇರುವ ಆಸೆ ಹೊಂದಿದ್ದರು. ಸಚಿನ್ ವಿಂಡೀಸ್ ವಿರುದ್ಧದ ಸರಣಿಗೆ ಕನ್ವಲ್ಜಿತ್ ರನ್ನು ಕೇಳಿದ್ದರೂ ಆಯ್ಕೆಸಮಿತಿ ಅವರು ಒಪ್ಪಿರಲಿಲ್ಲ. ವೆಂಕಟಪತಿ ರಾಜು ಕೂಡ ಈ ಪಟ್ಟಿಯಿಂದ ಹೊರತಾಗಿರಲಿಲ್ಲ . ಈ ಎಲ್ಲಾ ಆಟಗಾರರು ಅತ್ಯುತ್ತಮ ಆಟ ಪ್ರದರ್ಶಿಸುವ ಗುರಿ ಹೊಂದಿದ್ದರಿಂದ ಪಂದ್ಯದ ಅಂತಿಮ ಘಟ್ಟ ರೋಮಾಂಚಕ ಸ್ಥಾನಕ್ಕೆ ಬಂದಿತ್ತು.

ಕರ್ನಾಟಕದ ಮತ್ತ 127ಕ್ಕೆ 8. ಈ ಸಂದರ್ಭದಲ್ಲಿ ಗಣೇಶ್ ತಲೆಯಲ್ಲಿ ಓಡುತ್ತಿದ್ದ ವಿಚಾರವೇ ಬೇರೆ. ಪಾದಾರ್ಪಣೆಯ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡದೇ ತಂಡದ ಗೆಲುವಿಗೆ ಬೇಕಿದ್ದ ರನ್ನ್ಗಳನ್ನು ತನ್ನ ಬ್ಯಾಟ್ ನಿಂದಲೇ ಗಳಿಸುವ ನಿರ್ಧಾರಕ್ಕೆ ಬಂದರು. ಮೊದಮೊದಲು ಒಂದೊಂದು ರನ್ ಗಳಿಸಿ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದ ಪಿ ಶ್ರೀನಿವಾಸಮೂರ್ತಿ ಅವರಿಗೆ ಸ್ಟ್ರೈಕ್ ನೀಡುತ್ತಿದ್ದರು. ಆದರೆ ಕಣ್ವಲ್ಜಿಟ್ ಅವರ ಮಾರಕ ಎಸೆತಗಳ ಎದುರು ಇದು ಸಾಧ್ಯವಿರಲಿಲ್ಲ ಆದ್ದರಿಂದ ಗಣೇಶ್ ಮತ್ತು ಮೂರ್ತಿ ತಮ್ಮ ಕೆಲಸ ಬದಲಿಸುವ ನಿರ್ಧಾರಕ್ಕೆ ಬಂದರು.ಅದರಂತೆ ಗಣೇಶ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸುವುದು ಮತ್ತು ಓವರ್ ನ ಕೊನೆಯ ಎಸೆತದಲ್ಲಿ 1ರನ್ ಓಡಿ ಮುಂದಿನ ಓವರ್ ಕೂಡ ಸ್ಟ್ರೈಕ್ ಉಳಿಸಿಕೊಳ್ಳುವುದು ಎಂದು ತೀರ್ಮಾನಿಸಿದರು ಅದರಂತೆ ಮುಂದಿನ ಮೂರು ಓವರ್ ಕಳೆಯಿತು. ಆದರೆ ಒಂದು ಓವರ್ ನ ಕೊನೆಯ ಎಸೆತದಲ್ಲಿ ರಾಜು ಅವರ ಉತ್ತಮ ಕ್ಷೇತ್ರರಕ್ಷಣೆ ಇಂದ 1ರನ್ ಓಡಲಾಗಲಿಲ್.ಲ ವಿಪರ್ಯಾಸವೆಂಬಂತೆ ಮುಂದಿನ ಓವರಿನಲ್ಲಿ ಮೂರ್ತಿ ವಿಕೆಟ್ ಕೂಡ ಪತನವಾಯಿತು.

ಕೊನೆಯ ಕ್ರಮಾಂಕದಲ್ಲಿ ಬಂದ ಮನ್ಸೂರ್ ಅಲಿ ಖಾನ್ ಅವರು ಕೇವಲ ನಾಲ್ಕರ ಬ್ಯಾಟಿಂಗ್ ಸರಾಸರಿ ಹೊಂದಿದ್ದರು. ಕರ್ನಾಟಕದ ಗೆಲುವಿಗೆ ಇನ್ನೂ 17ರನ್ ಬಾಕಿ ಇತ್ತು. ಈ ಸಂದರ್ಭದಲ್ಲಿ ಗೆಲುವಿನ ಸಂಪೂರ್ಣ ಜವಾಬ್ದಾರಿ ಗಣೇಶ್ ಹೆಗಲ ಮೇಲೆ ಬಿದ್ದಿತ್ತು ಆದರೆ ಪ್ರತಿ ಓವರಿನ ಕೊನೆಯ ಎರಡು ಎಸೆತಗಳು ಬಾಕಿ ಇರುವಾಗ ಉಳಿದ 9 ಫಿಲ್ಡರ್ ಗಳು 1ರನ್ ಓಡಲು ಸಾಧ್ಯವಾಗದಂತೆ ಬ್ಯಾಟ್ಸ್ ಮ್ಯಾನ್ ಹತ್ತಿರದಲ್ಲಿಯೇ ನಿಲ್ಲುತ್ತಿದ್ದರು. ಒಂದು ಓವರ್ ನ ಕಡೆಯ ಎಸೆತವನ್ನು ಕೀಪರ್ ಮತ್ತು ಸ್ಲಿಪ್ ಮಧ್ಯದಲ್ಲಿ ಹೊಡೆದು 3ರನ್ ಓಡಬೇಕೆಂದಿದ್ದರೆ ಆ ಬಾಲ್ ಬೌಂಡರಿ ಗೆರೆ ದಾಟಿತ್ತು. ಮುಂದಿನ 6 ಎಸೆತಗಳು ಗಣೇಶ್ ಪಾಲಿಗೆ ಅತ್ಯಂತ ಸುದೀರ್ಘವೆನಿಸಿತ್ತು. ಮೊದಲ ಎಸೆತವನ್ನು ಅಲಿ ಆತ್ಮವಿಶ್ವಾಸದಿಂದ ಎದುರಿಸಿದರು. ಆದರೆ ಕಣ್ವಲ್ಜಿಟ್ ಅವರ ಎರಡು ಮತ್ತು ಮೂರನೇ ಎಸೆತಗಳು ಪರಿಣಾಮಕಾರಿಯಾಗಿತ್ತು ಆದರೆ ನಾಲ್ಕನೇ ಎಸೆತದಲ್ಲಿ ಪ್ರಮಾದವೆಸಗಿದ ಅಲಿ ಅವರ ಗ್ಲೌಸ್ ಗೆ ತಾಕಿದ ಚೆಂಡು ಶಾರ್ಟ್ ಲೆಗ್ ನಲ್ಲಿ ಇದ್ದ ಕ್ಷೇತ್ರರಕ್ಷಕ ನತ್ತ ಸಾಗಿತ್ತು. ಆದರೆ ವಿಧಿಯಾಟ ವೆಂಬಂತೆ ಆ ಅವಕಾಶವನ್ನು ಮನೋಹರ್ ಸದುಪಯೋಗಪಡಿಸಿಕೊಳ್ಳಲಿಲ್ಲ. ಹೀಗೆ ವಿಜಯಲಕ್ಷ್ಮಿ ಯಾರ ಪಾಲಿಗೆ ಎಂಬ ಕುತೂಹಲ ಎಲ್ಲರ ಮನದಲ್ಲಿ ಇತ್ತು. ಆಗ ಗೆಲ್ಲಲು ಏಳು ರನ್ ಗಳ ಅವಶ್ಯಕತೆ ಇತ್ತು. ಆರು ರನ್ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಫೈನಲ್ಸ್ ಪ್ರವೇಶಿಸುತ್ತಿತ್ತು.
ಆದರೆ ರಾಜು ಪಂದ್ಯದ ಮೇಲೆ ನಂಬಿಕೆ ಇಟ್ಟಿದ್ದರು ಕೇವಲ ಒಂದು ಎಸೆತ ಹೈದರಾಬಾದ್ ಪಾಲಿಗೆ ಗೆಲುವು ತರುತ್ತಿತ್ತು ಅವರು ತಮ್ಮ ಎಸೆತದಲ್ಲಿ ಅಲಿ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಲು ಯತ್ನಿಸಿದರು ಆದರೆ ಫಲ ಕಾಣಲಿಲ್ಲ ಮತ್ತೊಮ್ಮೆ ಅಲಿ ಹೊಡೆದ ಚೆಂಡು ಬಾನಂಗಳದಲ್ಲಿತ್ತು. ಆದರೆ ಈ ಅವಕಾಶವನ್ನೂ ಕೈಚೆಲ್ಲಿದ ಮನೋಹರ್ ತಂಡದ ಪಾಲಿನ ಖಳನಾಯಕನಂತೆ ಭಾಸವಾಗಿದ್ದರು‌.

ಇನ್ನೊಂದು ಕಡೆ ತಂಡದ ಗೆಲುವಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲಮೇಲೆ ಹೊತ್ತಿದ್ದ ಗಣೇಶ್ ಇನ್ನೊಂದು ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಸಮೀಪ ತಂದು ನಿಲ್ಲಿಸುವ ಇಚ್ಛೆ ಹೊಂದಿದ್ದರು. ಒಂದು ಬಾರಿ ಎಲ್ಲಾ ಕ್ಷೇತ್ರ ರಕ್ಷಕರ ಸ್ಥಾನವನ್ನು ನೋಡಿದ ಗಣೇಶ್ಗೆ ಪಾಯಿಂಟ್ ಹಿಂದಿನ ಜಾಗ ಖಾಲಿ ಎನಿಸಿತು. ಸಾಮಾನ್ಯವಾಗಿ ಕೆಳ ಕ್ರಮಾಂಕದ ಆಟಗಾರರು ಲೇಟ್ ಕಟ್ ಶಾಟ್ ಆಡುವುದು ವಿರಳ. ಆದರೆ ರಾಹುಲ್ ದ್ರಾವಿಡ್ ಆಟವನ್ನು ನೋಡಿ ಇದನ್ನು ಅರಿತಿದ್ದ ಗಣೇಶ್ ಪಂದ್ಯದಲ್ಲಿ ಮೊದಲ ಬಾರಿ ಈ ಶಾಟ್ ಹೊಡೆಯಲು ಮುಂದಾದರು.

51 ಸೆಕೆಂಡ್ಗಳ ವಿಡಿಯೋದ ಮೊದಲ ಎಸೆತವೇ ಈ ಬಾಲ್ ಆಗಿತ್ತು ಈ ಬಾಲ್ ನಲ್ಲಿ ಬೌಂಡರಿ ಗಳಿಸುವುದರೊಂದಿಗೆ ಎರಡು ತಂಡಗಳ ಮೊತ್ತ ಸರಿಸಮಗೊಂಡಿತು. ಅದಾಗಲೇ ಕೆಲವೊಂದು ಪ್ರೇಕ್ಷಕರು ಪಂದ್ಯ ಮುಕ್ತಾಯಗೊಂಡಿದೆ ಎಂದು ಭಾವಿಸಿ ಪಿಚ್ಚಿನತ್ತ ಧಾವಿಸಿದ್ದರು. ಆಗ ದ್ರಾವಿಡ್ “ಕೇವಲ ಒಂದು ರನ್” ಎಂದು ಪೆವಿಲಿಯನ್ ನಿಂದ ಕೂಗಿದರು. ,ಆದರೆ ಗಣೇಶ್ ಅವರು 1ರನ್ ಓಡುವುದು ತಮ್ಮ ಶೈಲಿ ಅಲ್ಲವೆಂದು ದೃಢವಾಗಿ ನಂಬಿದ್ದರು. ಮುಂದಿನ ಎಸೆತವನ್ನು ಆಫ್ ಡ್ರೈವ್ ಮಾಡಿದ ಗಣೇಶ್ ಸೋಲಿನ ದವಡೆಗೆ ಸಿಲುಕಿದ್ದ ಕರ್ನಾಟಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಮನಸ್ಸಿನಲ್ಲಿ ಮುಂದೇನು ಮಾಡುವುದು ಎಂದು ತೋಚಿರಲಿಲ್ಲ. ಎಲ್ಲರ ಕಣ್ಣಂಚಲ್ಲೂ ವಿಜಯದ ನಗು ಕಾಣುತ್ತಿತ್ತು.

ಈ ಆಟಗಾರರಲ್ಲಿ ಕೇವಲ ರಾಹುಲ್ ದ್ರಾವಿಡ್ ಭಾರತ ತಂಡದ ಅವಿಭಾಜ್ಯ ಅಂಗವಾಗಿ ಮುಂದುವರೆದರು.ಕುಂಬ್ಳೆ ಮತ್ತು ಹರ್ಭಜನ್ ಗಾಯಗೊಂಡ ಸಮಯದಲ್ಲಿ ಮಾತ್ರ ರಾಜು ಮತ್ತು ಜೋಶಿ ಅವರಿಗೆ ಅವಕಾಶ ನೀಡಲಾಗಿತ್ತು. 2001ರಲ್ಲಿ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾರ್ಕ್ ವಾ ಅವರ ವಿಕೆಟ್ ಉರುಳಿಸಿದ ಶ್ರೇಯ ರಾಜು ಪಾಲಿಗೆ ಸೇರುತ್ತದೆ. ರಾಜು ಅವರು ಮ್ಯಾನೇಜರ್ ಚೇತನ್ ಚೌಹಾಣ್ ಮತ್ತು ಲಕ್ಷ್ಮಣ್ ಜೊತೆ ಡೆಸ್ಸಿಂಗ್ ರೂಮ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು. ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಕನ್ವಲ್ಜಿತ್ ಸಿಂಗ್ ಭಾರತ ತಂಡವನ್ನು ಮುಂದೆಂದೂ ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಈ ಬೇಸರದಲ್ಲಿಯೇ ಅವರು ತಮ್ಮ ಜೀವನ ಮುಂದೂಡುವಂತಾಯಿತು. ಮನೋಹರ್ ಅಂತಾರಾಷ್ಟ್ರೀಯ ಪಂದ್ಯಗಳ ರೆಫ್ರಿ ಯಾದರೆ ನಂದಕಿಶೋರ್ ಅಂಪೈರ್ ಆಗಿ ವೃತ್ತಿ ಜೀವನದ ಮುಂದಿನ ಇನಿಂಗ್ಸ್ ಆರಂಭಿಸಿದರು. ವಿಜಯ್ ಭಾರದ್ವಾಜ್ ಗೆ ಕೆಲವು ಅವಕಾಶಗಳು ಒದಗಿ ಬಂದಿದ್ದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಅಸಫಲರಾದರು.

 

ದೊಡ್ಡ ಗಣೇಶ್ ತಮ್ಮ ಅತ್ಯುತ್ತಮ ಆಟದ ಹೊರತಾಗಿಯೂ ಭಾರತ ತಂಡವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಾದಾಗಲೆಲ್ಲಾ 51 ಸೆಕೆಂಡುಗಳ ವಿಡಿಯೋ ಕ್ಲಿಪ್ ಮೇಲೆ ಇಂದಿಗೂ ಬೆರಳಾಡಿಸುತ್ತಾರೆ.
ಅಭಿಲಾಷ್ ಆಚಾರ್ಯ
ಸೈಬರಕಟ್ಟೆ…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

14 − 6 =