ಕ್ರಿಕೆಟ್ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

-

- Advertisment -spot_img

ರಾಹುಲ್ ಮೇಲಿನ ದ್ವೇಷದ ಮುಂದೆ ರೋಹಿತ್ ವೈಫಲ್ಯ ಕಾಣುತ್ತಿಲ್ಲವೇಕೆ?

ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್’ಗಳ ಹೀನಾಯ ಸೋಲು ಕಂಡಿದೆ.

ತವರು ನೆಲದಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ಆ ಸೋಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಹೊಣೆ ಮಾಡಲಾಗುತ್ತಿದೆ. ಭಾರತದ ಸೋಲಿಗೆ ರಾಹುಲ್ ಅವರೇ ಕಾರಣ ಎಂದು ದೂಷಿಸಲಾಗುತ್ತಿದೆ.

ಹೌದು, ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ರಾಹುಲ್ ಬಂಗಾರದಂಥಾ ಅವಕಾಶಗಳನ್ನು ತಮ್ಮ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್ ದ್ವಿತೀಯ ಇನ್ನಿಂಗ್ಸ್’ನಲ್ಲಿ 12 ರನ್ ಗಳಿಸಿ ಔಟಾಗಿದ್ದರು. ಈ ಮೂಲಕ ಮನೆಯಂಗಳದಲ್ಲಿ ಮಿಂಚುವ ಸುವರ್ಣಾವಕಾಶವನ್ನು ವ್ಯರ್ಥ ಮಾಡಿದ್ದರು.

ಹಾಗಂತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ನಿಜಕ್ಕೂ ರಾಹುಲ್ ಕಾರಣರೇ? ಖಂಡಿತಾ ಇಲ್ಲ.. ಇದು ನಾಯಕ ರೋಹಿತ್ ಶರ್ಮಾ ಪ್ರಮಾದದಿಂದ ಎದುರಾಗಿದ್ದ ಸೋಲು. ಚಿನ್ನಸ್ವಾಮಿ ಪಿಚ್ ವೇಗದ ಬೌಲರ್’ಗಳಿಗೆ ನೆರವು ನೀಡಲಿದೆ ಎಂಬುದನ್ನು ತಿಳಿದೂ ಪಂದ್ಯದ 2ನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡದ್ದೇ ದೊಡ್ಡ ಪ್ರಮಾದ. ಪರಿಣಾಮ ಭಾರತ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 46 ರನ್’ಗಳಿಗೆ ಆಲೌಟಾಗಿತ್ತು. ನಂತರ ನ್ಯೂಜಿಲೆಂಡ್’ನ ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್’ಗೆ 233 ರನ್ ಗಳಿಸಿದ್ದಾಗ 8ನೇ ವಿಕೆಟ್’ಗೆ ಜೊತೆಗೂಡಿದ್ದ ರಚಿನ್ ರವೀಂದ್ರ ಮತ್ತು ಟಿಮ್ ಸೌಥಿ ಶತಕದ ಜೊತೆಯಾಟವಾಡಿದ್ದರು. ಈ ಜೊತೆಯಾಟವನ್ನು ಬೇಗನೆ ಮುರಿಯಲು ವಿಫಲವಾಗಿದ್ದೇ ಭಾರತದ ಸೋಲಿಗೆ ಕಾರಣ. ಸ್ವತಃ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್’ನಲ್ಲಿ ಮೂರು ಕ್ಯಾಚ್’ಗಳನ್ನು ಕೈಚೆಲ್ಲಿದ್ದರು.

ಇನ್ನು ರಾಹುಲ್ ವೈಫಲ್ಯದ ಬಗ್ಗೆ ಮಾತನಾಡುವವರು ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಮೌನವಾಗಿರುವುದೇಕೆ?
10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ 339 ರನ್ ಕಲೆ ಹಾಕಿದ್ದರೆ, ನಾಯಕ ರೋಹಿತ್ ಶರ್ಮಾ ಕೇವಲ 275 ರನ್ ಗಳಿಸಿದ್ದಾರೆ. ರಾಹುಲ್’ರನ್ನು ಟೀಮ್ ಇಂಡಿಯಾದಿಂದ ಕೈಬಿಡಲೇಬೇಕು ಎಂದಾದರೆ ರೋಹಿತ್ ಶರ್ಮಾ ಸಾಧನೆಯೇನು? ಕೇವಲ ನಾಯಕನೆಂಬ ಕಾರಣಕ್ಕೆ ತಂಡದಲ್ಲಿ ಮುಂದುವರಿಯಬೇಕೇ?

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ ಗಳಿಸಿರುವ ರನ್: 101, 4, 8, 86, 22, 16, 22*, 68, 0, 12

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರೋಹಿತ್ ಶರ್ಮಾ ಗಳಿಸಿರುವ ರನ್: 19, 2, 55, 103, 6, 5, 23, 8, 2, 52

LEAVE A REPLY

Please enter your comment!
Please enter your name here

1 × 2 =

Latest news

HMC ಯುನೈಟೆಡ್ ಟ್ರೋಫಿ–2026: ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟ ; ಸೆಮಿಫೈನಲ್ ಹೋರಾಟಕ್ಕೂ ಸಜ್ಜು

  HMC ಯುನೈಟೆಡ್ ಟ್ರೋಫಿ–2026: ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟ ; ಸೆಮಿಫೈನಲ್ ಹೋರಾಟಕ್ಕೂ ಸಜ್ಜು HMC ಯುನೈಟೆಡ್ ಟ್ರೋಫಿ–2026 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳ...

CCLನಲ್ಲಿ ರಾಜೀವ್ ಹನು ಶತಕ – ತೆಲುಗು ವಾರಿಯರ್ಸ್ ವಿರುದ್ಧ ಸಾಧನೆ

CCLನಲ್ಲಿ ರಾಜೀವ್ ಹನು ಶತಕ – ತೆಲುಗು ವಾರಿಯರ್ಸ್ ವಿರುದ್ಧ ಸಾಧನೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಟೂರ್ನಿಯ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ...

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ ಶ್ರೀ ಕೃಷ್ಣ ಕ್ಷೇತ್ರ.

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ  ಶ್ರೀ ಕೃಷ್ಣ ಕ್ಷೇತ್ರ. ಧರ್ಮ ಕ್ರೀಡೆ ಸಾಹಿತ್ಯ ಸಂಸ್ಕೃತಿಯ ಮಹಾಪೋಷಕರಾಗಿದ್ದ ಶ್ರೀಶಿರೂರುಮಠದ ಪೀಠಾಧಿಪತಿ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಸ್ಮರಣಾರ್ಥ...

HMC ಯುನೈಟೆಡ್ ಟ್ರೋಫಿ–2026: ಪೂಲ್ ‘ಎ’ ಪಂದ್ಯಗಳ ವೇಳಾಪಟ್ಟಿ ಪ್ರಕಟ

HMC ಯುನೈಟೆಡ್ ಟ್ರೋಫಿ–2026: ಪೂಲ್ ‘ಎ’ ಪಂದ್ಯಗಳ ವೇಳಾಪಟ್ಟಿ ಪ್ರಕಟ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಮಹೋತ್ಸವವಾಗಿರುವ HMC ಯುನೈಟೆಡ್ ಟ್ರೋಫಿ–2026ಗೆ ಭರ್ಜರಿ ಚಾಲನೆ ದೊರೆತಿದ್ದು,...
- Advertisement -spot_imgspot_img

ಕಿದಿಯೂರಿನಲ್ಲಿ ಎಸ್‌ಎನ್‌ಜಿ ಪ್ರೀಮಿಯರ್ ಲೀಗ್ – ‘ಎಸ್‌ಎನ್‌ಜಿ ಟ್ರೋಫಿ 2026’ ಕ್ರಿಕೆಟ್ ಪಂದ್ಯಾವಳಿ

  ಕಿದಿಯೂರಿನಲ್ಲಿ ಎಸ್‌ಎನ್‌ಜಿ ಪ್ರೀಮಿಯರ್ ಲೀಗ್ – ‘ಎಸ್‌ಎನ್‌ಜಿ ಟ್ರೋಫಿ 2026’ ಕ್ರಿಕೆಟ್ ಪಂದ್ಯಾವಳಿ   ಕಿದಿಯೂರಿನ ಎಸ್‌ಎನ್‌ಜಿ ಸ್ಪೋರ್ಟ್ಸ್ ಕ್ಲಬ್ ತನ್ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ...

HMC ಯುನೈಟೆಡ್ ಟ್ರೋಫಿ 2026-ಅಂತರರಾಷ್ಟ್ರೀಯಸಾಫ್ಟ್ ಟೆನಿಸ್ಬಾಲ್ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭ.

HMC ಯುನೈಟೆಡ್ ಟ್ರೋಫಿ 2026-ಅಂತರರಾಷ್ಟ್ರೀಯಸಾಫ್ಟ್ ಟೆನಿಸ್ಬಾಲ್ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭ. HMC ಸಂಸ್ಥೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ HMC ಯುನೈಟೆಡ್ ಟ್ರೋಫಿ 2026 ಅಂತರರಾಷ್ಟ್ರೀಯ...

Must read

- Advertisement -spot_imgspot_img

You might also likeRELATED
Recommended to you