ಗುಬ್ಬಿಯ ಸಿ.ಐ.ಟಿ ಕಾಲೇಜು ಮೈದಾನದಲ್ಲಿ ನಡೆದ ತುಮಕೂರು ವಲಯದ ಮೊದಲ ಡಿವಿಜನ್ ಲೀಗ್ ಪಂದ್ಯದಲ್ಲಿ ಫೀನಿಕ್ಸ್ ಕ್ರಿಕೆಟ್ ಕ್ಲಬ್ ನ ಪರವಾಗಿ ಆಡಿದ ಮಲ್ಲಿಕಾರ್ಜುನರವರ ಸಮಯೋಚಿತ ಹ್ಯಾಟ್ರಿಕ್ ನೆರವಿನಿಂದ 28 ರನ್ ಗಳ ರೋಚಕ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಫೀನಿಕ್ಸ್ ತಂಡ ಸಂತೋಷ್ ಕೃಷ್ಣ 40,ಕಾರ್ತಿಕ್ 34 ಹಾಗೂ ಪೃಥ್ವಿರಾಜ್ 23 ರನ್ ಗಳ ನೆರವಿನಿಂದ 154 ರನ್ ಗಳ ಸವಾಲಿನ ಮೊತ್ತ ಗಳಿಸಿತ್ತು.
ಗೆಲುವಿನ ಗುರಿಯನ್ನು ಬೆನ್ನತ್ತಿದ್ದ ಅಕೇಷನಲ್ಸ್ ತಂಡ ಮಲ್ಲಿಕಾರ್ಜುನ 3 ಚೇತನ್ ಹಾಗೂ ನಿಶ್ಚಿತ್ (ತಲಾ 2)ರವರ ಉತ್ತಮ ದಾಳಿಗೆ ಕುಸಿದು 126 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಇದರೊಂದಿಗೆ ಫೀನಿಕ್ಸ್ ಕ್ರಿಕೆಟ್ ಕ್ಲಬ್ ಸತತ 8ನೇ ಜಯ ದಾಖಲಿಸಿತು.
ತುಮಕೂರು ಅಕೇಷನಲ್ಸ್ ಪರ ಶ್ರೇಯಸ್ 42,ಪವನ್ ಕುಮಾರ್ 36,ವೀರೇಶ್ ಕುಮಾರ್ ಹಾಗೂ ದಿಲೀಪ್ ತಲಾ 4 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
ಮಲ್ಲಿಕಾರ್ಜುನ(ಮಲ್ಲಿ) ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ
ಹಲವು ವರ್ಷಗಳಿಂದ ಪ್ರಕಾಶ್ ಟಿ.ಸಿ ಯವರ ನೇತೃತ್ವದ ಚಕ್ರವರ್ತಿ ಗೆಳೆಯರ ಬಳಗದಲ್ಲಿ ಆಲ್ ರೌಂಡರ್ ಆಟಗಾರನಾಗಿ ಗುರುತಿಸಿಕೊಂಡಿದ್ದು,
ಇತ್ತೀಚಿನ ದಿನಗಳಲ್ಲಿ ಕಪ್ತಾನನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರ್.ಕೆ.ಆಚಾರ್ಯ ಕೋಟ…