ಹಳೆಯಂಗಡಿ : ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಸಂಯೋಜನೆಯಲ್ಲಿ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ ಶಾಲಾ ಮಟ್ಟದ ಶಟ್ಲ ಬಾಡ್ಮಿಂಟನ್ ಸ್ಪರ್ಧೆಯ ಸಮಾರೋಪ ನಡೆಯಿತು.
ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಶಂಕರನಾರಾಯಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಿಂದ ಮನೋಬಲ ಹೆಚ್ಚಾಗಿದ್ದು, ಸೂಕ್ತ ವಯೋಮಾನದವರೆಗೂ ಕ್ರೀಡೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿರಿ. ದೇಹದ ಅಲಸ್ಯವನ್ನು ಕ್ರೀಡೆಯಿಂದ ನಿಯಂತ್ರಿಸಬಹುವುದು ಎಂದರು.
ಎನ್.ಎಂ.ಪಿ.ಟಿ.ಯ ವಾಲಿಬಾಲ್ ಕ್ರೀಡಾಪಟು ಭರತ್ ಅವರ ಕ್ರೀಡಾ ಜೀವನದ ಅನುಭವಗಳನ್ನು ಮಕ್ಕಳ ಜೊತೆಗೆ ಹಂಚಿಕೊಂಡದರು.
ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಸ್ಪರ್ಧೆಯಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ರಿವಸ್ರ್ಸ್ ಸಿಂಗಲ್ಸ್ ವಿಭಾಗದಲ್ಲಿ ಒಟ್ಟು 16 ವಿವಿಧ ಶಾಲೆಯ 235 ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಾಮೋದರ, ಎ.ಎನ್.ಎಂ.ಪಿ.ಟಿ, ಟಾರ್ಪೋಡೇಸ್ ಸ್ಪೋಟ್ರ್ಸ್ ಕ್ಲಬ್‍ನ ನಿರ್ದೇಶಕ ನಾಗಭೂಷಣ್ ಮತ್ತು ರೆಡ್ಡಿ, ಚಂದ್ರಶೇಖರ ಸಜ್ಚಾ, ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬಾಡ್ಮಿಂಟನ್ ತರಬೇತಿದಾರ ಸಂತೋಷ್ ಖಾರ್ವಿ, ಟೇಬಲ್ ಟೆನ್ನಿಸ್ ತರಬೇತಿದಾರ ಅಶ್ವಿನ್ ಪಡುಕೋಣೆ, ಕೆ.ಪಿ. ಸತೀಶ್, ದೀಪಕ್ ಕೋಟ್ಯಾನ್, ಭಾಗ್ಯರಾಜ್, ನವನೀತ್, ಕಾರ್ತಿಕ್ ಹಾಗೂ ಮೊದಲಾದವರು ಇದ್ದರು.
ಟಾರ್ಪೋಡಸ್ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಫಲಿತಾಂಶ
ಬಾಲಕರ ವಿಭಾಗ – ಮಿಲಾಗ್ರಸ್ ಕಲ್ಯಾಣಪುರ ಉಡುಪಿ ಪ್ರಥಮ ಸ್ಥಾನ , ಸೈ ಅಲೋಶಿಯಸ್ ಮಂಗಳೂರು ದ್ವಿತೀಯ ಸ್ಥಾನ, ವಿದ್ಯಾದಯ ಪಬ್ಲಿಕ್ ಸ್ಕೂಲ್ ಹಾಗೂ ಅಮೃತಾ ವಿದ್ಯಾಲಯ ಮಂಗಳೂರು ತೃತೀಯಾ ಸ್ಥಾನ.
ಬಾಲಕಿಯರ ವಿಭಾಗ : ಹೋಲಿ ರೋಜಾರಿಯೋ ಕುಂದಾಪುರ ಪ್ರಥಮ ಸ್ಥಾನ, ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು, ತಪೋವನ ದ್ವಿತೀಯ ಸ್ಥಾನ, ಮಣಿಪಾಲ ಸ್ಕೂಲ್ ಅತ್ತಾವರ, ಮೇರಿವೆಲ್ ಪ್ರೌಢಶಾಲೆ ಕಿನ್ನಿಗೊಳಿ ತೃತೀಯ ಸ್ಥಾನ