ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ 6 ದಶಕಗಳ ಇತಿಹಾಸ ಬರೆದ ತಂಡ ಜೈ ಕರ್ನಾಟಕ ಬೆಂಗಳೂರು.
ಭಾರತ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಕನ್ನಡಿಗರಾದ ದೊಡ್ಡ ಗಣೇಶ್,ಡೇವಿಡ್ ಜಾನ್ಸನ್ ಮತ್ತು ಎಸ್.ಅರವಿಂದ್ ರವರು ಜೈ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ.

ಜೈ ಕರ್ನಾಟಕ ತಂಡ ಮೊದಲ ತಲೆಮಾರಿನ ಆಟಗಾರರಾದ ದಿಲೀಪ್ ಸಿಂಗ್,ಭರತ್ ಸಿಂಗ್,ಬೀಡಿ ನಾರಾಯಣ್,ಸುರೇಶ್ ರವರ ಒಗ್ಗೂಡುವಿಕೆಯಲ್ಲಿ ಯಶಸ್ಸನ್ನು ಸಾಧಿಸಿತ್ತು.ತದ ನಂತರದ ದಿನಗಳಲ್ಲಿ ಸೆಂಥಿಲ್ ಅಶ್ವತ್ ಕುಮಾರ್ ಸಾರಥ್ಯದಲ್ಲಿ, ಟೆನಿಸ್ಬಾಲ್ ಕ್ರಿಕೆಟ್ ನ ದಂತಕಥೆ ಎಂದೇ ಪ್ರಸಿದ್ಧರಾದ ಆರ್.ಮನೋಹರ್ ನಾಯಕತ್ವದಲ್ಲಿ,ತಂಡದ ಸಹ ಆಟಗಾರರ ಅತ್ಯಮೂಲ್ಯ ಪ್ರದರ್ಶನದಿಂದ 90 ರ ದಶಕದಲ್ಲಿ ರಾಜ್ಯದಾದ್ಯಂತ ಹಲವಾರು ಪ್ರಶಸ್ತಿಗಳನ್ನು ಬಾಚಿದ್ದರು.
ಜೈ ಕರ್ನಾಟಕದ ಇಂದಿನ ಪೀಳಿಗೆಯ ಆಟಗಾರರು,ಹಿರಿಯ ಆಟಗಾರರ ದಾರಿಯನ್ನು ಅನುಸರಿಸಿ,ಶಿಸ್ತಿನ ಪ್ರದರ್ಶನದ ಮೂಲಕ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ
