ಕುಂದಾಪುರ : ಒಬ್ಬ ವ್ಯಕ್ತಿಗೆ ವಿದ್ಯೆ ಇದ್ದರೆ ಸಾಲದು ವಿನಯವೂ ಇರಬೇಕು. ವಿದ್ಯೆ ಮಾತ್ರ ಇದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ವಿನಯದಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ ಮಹೇಂದ್ರ ಭಟ್ ಹೇಳಿದರು.
ಕುಂದಾಪುರ ಆರ್ಶೀವಾದ ಸಭಾಂಗಣದಲ್ಲಿ ನಡೆದ ಹಿರಿಯ ಕಿರಿಯರ ಸಮ್ಮಿಲನ ಟೆನ್ನಿಸ್‍ಬಾಲ್ ಕ್ರಿಕೆಟ್ ಸಮ್ಮೇಳನ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕೋಟೇಶ್ವರ ಚೇತನಾ ಕ್ರೀಡಾ ಮತ್ತು ಕಲಾರಂಗದ ಗೋಪಾಲಕೃಷ್ಣ ಶೆಟ್ಟಿ ಅವರು ಸ್ಪೋರ್ಟ್ಸ್ ಕನ್ನಡ ವೆಬ್‍ಸೈಟ್ ಲೋಕಾರ್ಪಣಾಗೈದು ಶುಭಾಹಾರೈಸಿದ್ದ.
ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಪೋಷಕ ಸೀತಾರಾಮ ಆಚಾರ್ಯ ತೆಕ್ಕಟ್ಟೆ, ನಿವೃತ್ತ ಶಿಕ್ಷಕ ವಿಶ್ವೇಶ್ವರ ಹಂದೆ, ಪ್ರಸಿದ್ಧ ಯೋಗ ಗುರು ರಾಜೇಂದ್ರ ಚಕ್ಕೇರ ಇವರಿಗೆ ಗುರುವಂದನಾ ಕಾರ್ಯ ನಡೆಯಿತು.
ಬನ್ನಂಜೆ ಪ್ಯಾರಡೈಸ್ ಡಾ ಮಂಜುನಾಥ ಮಯ್ಯ, ಬೆಂಗಳೂರು ಜೈ ಕರ್ನಾಟಕ ಆರ್ ಮನೋಹರನ್, ಬೆಂಗಳೂರು ಶ್ರೀ ಕ್ರಿಕೆಟರ್ಸ್ ಡಾ ಆರ್ ಪ್ರಸನ್ನ ಕುಮಾರ್, ಬೆಂಗಳೂರಿನ ಖ್ಯಾತ ಚಿತ್ರನಟ ಸಿ.ಸಿ.ಎಲ್. ರಾಜೀವ್ ಹನು, ದೊಡ್ಮನೆ ಆಕಾಶ್ ಗೌಡ, ಪಡುಬಿದ್ರೆ ಫ್ರೆಂಡ್ಸ್ ಶರತ್ ಶೆಟ್ಟಿ, ಟಾರ್ಪೊಡಸ್ ಕ್ರಿಕೆಟ್ ಕ್ಲಬ್‍ನ ಗೌತಮ್ ಶೆಟ್ಟಿ, ಬೆಂಗಳೂರು ಫ್ರೆಂಡ್ಸ್ ರೇಣು ಗೌಡ, ಕುಂದಾಪುರ ಚಕ್ರವರ್ತಿ ಕ್ರಿಕೆಟ್‍ನ ಶ್ರೀಪಾದ್ ಉಪಾಧ್ಯ, ಉಡುಪಿ ಕೆನರಾ ಮಿತ್ರ ಮಂಡಳಿಯ ಉದಯ್ ಕುಮಾರ್, ಶಿರ್ವ ಬ್ಲೂಸ್ಟಾರ್ ಸಫ್ತಾರ್ ಆಲಿ, ಕೋಟ-ಪಡುಕೆರೆ ವಾಹಿನಿಯ ರಾಜೇಂದ್ರ ಸುವರ್ಣ, ತುಮಕೂರು ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್ ಕೆ.ಸಿ, ಶ್ರೀಶ ಆಚಾರ್ಯ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪೋರ್ಟ್ಸ್ ಕನ್ನಡ ಮುಖ್ಯಸ್ಥ ರಾಮಕೃಷ್ಣ ಆಚಾರ್ಯ ಕೋಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚೈತ್ರಾ ಆಚಾರ್ಯ ಕೋಟ ಸನ್ಮಾನಿತರನ್ನು ಪರಿಚಯಿಸಿದರು. ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದ್ದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಅಂಬಿಕಾ ಗುರುರಾಜ್ ಆಚಾರ್ಯ ಮಂಗಳೂರು, ಮಹಿಳಾ ಐತಾಳ್, ಸಂಧ್ಯಾ ಬಂಗೇರ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ , ಕಟಕ ಚಲನಚಿತ್ರದ ಬಾಲ ನಟಿ ಶ್ಲಾಘ ಸಾಲಿಗ್ರಾಮ, ಸಹನಾ ರೈ ಹಾಗೂ ಸುಪ್ರೀತಾ ವೈದ್ಯ ಇವರಿಂದ ನೃತ್ಯ ವೈಭವ, ಮುಕ್ತವಾಹಿನಿಯ ಖ್ಯಾತಿಯ ಚೇತನ್ ನೈಲ್ಯಾಡಿ ಇವರಿಂದ “ಸ್ಟ್ಯಾಂಡ್ ಅಪ್ ಕಾಮಿಡಿ ಪ್ರದರ್ಶನ ನಡೆಯಿತು.